Wednesday, 11 November 2020

ಹರಿಕಥಾಮೃತಸಾರ ಸಂಧಿ 03 ankita jagannatha vittala ವ್ಯಾಪ್ತಿ ಸಂಧಿ HARIKATHAMRUTASARA SANDHI 3 VYAPTI SANDHI



ರಾಗ ನಾಟ
Audio by Mrs. Nandini Sripad


ರಚನೆ : ಶ್ರೀ ಜಗನ್ನಾಥ ದಾಸರು 
for saahitya click   ಹರಿಕಥಾಮೃತಸಾರ ಸಂಧಿ 1 to 32  

RESTART MOBILE IF AUDIO IS NOT PLAYING  CLICK-> HOME

or just scroll down for other devaranama 


ಶ್ರೀ ಜಗನ್ನಾಥದಾಸಾರ್ಯ ವಿರಚಿತ ಹರಿಕಥಾಮೃತಸಾರ , 
 ವ್ಯಾಪ್ತಿ ಸಂಧಿ ( ವ್ಯಾಪ್ತಿ ಸಂಧಿ 3)

ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ
ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು||

ಪುರುಷರೂಪತ್ರಯ ಪುರಾಣ ಪುರುಷ ಪುರುಷೋತ್ತಮ
ಕ್ಷರಾಕ್ಷರ ಪುರುಷ ಪೂಜಿತ ಪಾದ ಪೂರ್ಣಾನಂದ ಜ್ಞಾನಮಯ
ಪುರುಷಸೂಕ್ತ ಸುಮೇಯ ತತ್ತತ್ ಪುರುಷ ಹೃತ್ಪುಷ್ಕರ ನಿಲಯ
ಮಹಾಪುರುಷ ಅಜಾಂಡ ಅಂತರದಿ ಬಹಿರದಿ ವ್ಯಾಪ್ತ ನಿರ್ಲಿಪ್ತ||1||

ಸ್ತ್ರೀ ನಪುಂಸಕ ಪುರುಷ ಭೂ ಸಲಿಲ ಅನಲ ಗಗನ ಮನ ಶಶಿ
ಭಾನು ಕಾಲ ಗುಣ ಪ್ರಕೃತಿಯೊಳಗೆ ಒಂದು ತಾನಲ್ಲ
ಏನು ಇವನ ಮಹಾಮಹಿಮೆ ಕಡೆಗಾಣರು ಅಜಭವ ಶಕ್ರ ಮುಖರು
ನಿಧಾನಿಸಲು ಮಾನವರಿಗೆ ಅಳವಡುವುದೇ ವಿಚಾರಿಸಲು||2||

ಗಂಧ ರಸರೂಪ ಸ್ಪರ್ಶ ಶಬ್ದ ಒಂದು ತಾನಲ್ಲ
ಅದರದರ ಪೆಸರಿಂದ ಕರೆಸುತ ಜೀವರಿಗೆ ತರ್ಪಕನು ತಾನಾಗಿ
ಪೊಂದಿಕೊಂಡಿಹ ಪರಮ ಕರುಣಾಸಿಂಧು ಶಾಶ್ವತ
ಮನವೆ ಮೊದಲಾದ ಇಂದ್ರಿಯಗಳೊಳಗೆ ಇದ್ದು ಭೋಗಿಸುತಿಹನು ವಿಷಯಗಳ||3||

ಶ್ರವಣ ನಯನ ಘ್ರಾಣ ತ್ವಗ್ರಸನ ಇವುಗಳೊಳು
ವಾಕ್ಪಾಣಿ ಪಾದಾದಿ ಅವಯವಗಳೊಳು ತದ್ಗುಣಗಳೊಳು ತತ್ಪತಿಗಳೊಳಗೆ
ಪ್ರವಿತತನು ತಾನಾಗಿ ಕೃತಿಪತಿ ವಿವಿಧ ಕರ್ಮವ ಮಾಡಿ ಮಾಡಿಸಿ
ಭವಕೆ ಕಾರಣನಾಗಿ ತಿರುಗಿಸುತಿಹನು ತಿಳಿಸದಲೆ||4||

ಗುಣಿಗುಣಗಳೊಳಗೆ ಇದ್ದು ಗುಣಿಗುಣನು ಎನಿಸುವನು ಗುಣಬದ್ಧನಾಗದೆ
ಗುಣಜ ಪುಣ್ಯಾಪುಣ್ಯ ಫಲ ಬ್ರಹ್ಮಾದಿಚೇತನಕೆ ಉಣಿಸುತ ಅವರೊಳಗಿದ್ದು
ವೃಜಿನ ಅರ್ದನ ಚಿದಾನಂದೈಕ ದೇಹವನು
ಕೊನೆಗೆ ಸಚರಾಚಾರ ಜಗದ್ಭುಕುವೆನಿಪನು ಅವ್ಯಯನು||5||

ವಿದ್ಯೆ ತಾನೆನೆಸಿಕೊಂಬ ಅನಿರುದ್ಧದೇವನು
ಸರ್ವಜೀವರ ಬುದ್ಧಿಯಲಿ ತಾನಿದ್ದು ಕೃತಿಪತಿ ಬುದ್ಧಿಯೆನಿಸುವನು
ಸಿದ್ಧಿಯೆನಿಸುವ ಸಂಕರುಷನ ಪ್ರಸಿದ್ಧನಾಮಕ ವಾಸುದೇವ
ಅನವದ್ಯ ರೂಪ ಚತುಷ್ಟಯಗಳ ಅರಿತವನೆ ಪಂಡಿತನು||6||

ತನುಚತುಷ್ಟಯಗಳೊಳು ನಾರಾಯಣನು ಹೃತ್ಕಮಲಾಖ್ಯ ಸಿಂಹಾಸನದೊಳು
ಅನಿರುದ್ಧಾದಿ ರೂಪಗಳಿಂದ ಶೋಭಿಸುತ
ತನಗೆ ತಾನೇ ಸೇವ್ಯ ಸೇವಕನೆನೆಸಿ ಸೇವಾಸಕ್ತ ಸುರರೊಳಗೆ
ಅನವರತ ನೆಲೆಸಿದ್ದು ಸೇವೆಯ ಕೊಂಬನವರಂತೆ||7||

ಜಾಗರ ಸ್ವಪ್ನಂಗಳೊಳು ವರಭೋಗೀಶಯನನು ಬಹು ಪ್ರಕಾರ ವಿಭಾಗಗೈಸಿ
ನಿರಂಶಜೀವರ ಚಿತ್ಶರೀರವನು ಭೋಗವಿತ್ತು
ಸುಷುಪ್ತಿಕಾಲದಿ ಸಾಗರವ ನದಿ ಕೂಡುವಂತೆ
ವಿಯೋಗರಹಿತನು ಅಂಶಗಳನು ಏಕತ್ರವೈದಿಸುವ||8||

ಭಾರ್ಯರಿಂದೊಡಗೂಡಿ ಕಾರಣಕಾರ್ಯ ವಸ್ತುಗಳಲ್ಲಿ
ಪ್ರೆರಕಪ್ರೇರ್ಯ ರೂಪಗಳಿಂದ ಪಟತಂತುಗಳವೊಳಿದ್ದು
ಸೂರ್ಯ ಕಿರಣಗಳಂತೆ ತನ್ನಯ ವೀರ್ಯದಿಂದಲಿ ಕೊಡುತ ಕೊಳುತಿಹ
ಅನಾರ್ಯರಿಗೆ ಈತನ ವಿಹಾರವು ಗೋಚರಿಪುದೇನೋ||9||

ಜನಕ ತನ್ನ ಆತ್ಮಜಗೆ ವರ ಭೂಷಣದುಕೂಲವ ತೊಡಿಸಿ
ತಾ ವಂದನೆಯ ಕೈಕೊಳುತ ಹರಸುತ ಹರುಷಬಡುವಂತೆ
ವನರುಹೇಕ್ಷಣ ಪೂಜ್ಯ ಪೂಜಕನು ಎನಿಸಿ ಪೂಜಾಸಾಧನ
ಪದಾರ್ಥವನು ತನಗೆ ತಾನಾಗಿ ಫಲಗಳನೀವ ಭಜಕರಿಗೆ||10||

ತಂದೆ ಬಹು ಸಂಭ್ರಮದಿ ತನ್ನಯ ಬಂಧು ಬಳಗವ ನೆರಹಿ
ಮದುವೆಯ ನಂದನಗೆ ತಾ ಮಾಡಿ ಮನೆಯೊಳಗಿಡುವ ತೆರದಂತೆ
ಇಂದಿರಾಧವ ತನ್ನ ಇಚ್ಚಯಲಿಂದ ಗುಣಗಳ ಚೇತನಕೆ ಸಂಬಂಧಗೈಸಿ
ಸುಖಾಸುಖಾತ್ಮಕ ಸಂಸೃತಿಯೊಳು ಇಡುವ||11||

ತೃಣ ಕೃತ ಆಲಯದೊಳಗೆ ಪೋಗೆ ಸಂದಣಿಸಿ ಪ್ರತಿ ಛಿದ್ರದಲಿ ಪೊರಮಟ್ಟು
ಅನಳ ನಿರವನು ತೋರಿ ತೋರದಲಿಪ್ಪ ತೆರದಂತೆ
ವನಜಾಂಡದೊಳು ಅಖಿಳ ಜೀವರ ತನುವಿನ ಒಳ ಹೊರಗೆ ಇದ್ದು
ಕಾಣಿಸದೆ ಅನಿಮಿಶೇಷನು ಸಕಲ ಕರ್ಮವ ಮಾಳ್ಪನು ಅವರಂತೆ||12||

ಪಾದಪಗಳ ಅಡಿಗೆ ಎರೆಯೆ ಸಲಿಲವು ತೋದು ಕಂಬಿಗಳು ಉಬ್ಬಿ
ಪುಷ್ಪ ಸ್ವಾದು ಫಲವ ಈವಂದದಲಿ ಸರ್ವೇಶ್ವರನು
ಜನರ ಆರಾಧನೆಯ ಕೈಕೊಂಡು ಬ್ರಹ್ಮ ಭವಾದಿಗಳ ನಾಮದಲಿ ಫಲವಿತ್ತು
ಆದರಿಸುವನು ತನ್ನ ಮಹಿಮೆಯ ತೋರಗೊಡ ಜನಕೆ||13||

ಶೃತಿತತಿಗಳಿಗೆ ಗೋಚರಿಸದ ಅಪ್ರತಿಮ ಅಜಾನಂದಾತ್ಮನು ಅಚ್ಯುತ ವಿತತ
ವಿಶ್ವಾಧಾರ ವಿದ್ಯಾಧೀಶ ವಿಧಿ ಜನಕ
ಪ್ರತಿದಿವಸ ಚೇತನರೊಳಗೆ ಪ್ರಾಕೃತ ಪುರುಷನಂದದಲಿ ಸಂಚರಿಸುತ
ನಿಯಮ್ಯ ನಿಯಾಮಕನು ತಾನಾಗಿ ಸಂತೈಪ||14||

ಮನ ವಿಷಯದೊಳಗೆ ಇರಿಸಿ ವಿಷಯವ ಮನದೊಳಗೆ ನೆಲೆಗೊಳಿಸಿ
ಬಲು ನೂತನವು ಸುಸಮೀಚೀನವಿದು ಉಪಾದೇಯವೆಂದೆನಿಸಿ
ಕನಸಿಲಾದರು ತನ್ನ ಪಾದದ ನೆನೆವನು ಈಯದೆ
ಸರ್ವರೊಳಗಿದ್ದು ಅನುಭವಿಸುವನು ಸ್ಥೂಲ ವಿಷಯವ ವಿಶ್ವನೆಂದೆನಿಸಿ||15||

ತೋದಕನು ತಾನಾಗಿ ಮನ ಮೊದಲಾದ ಕರಣದೊಳು ಇದ್ದು ವಿಷಯವ ನೈದುವನು
ನಿಜಪೂರ್ಣ ಸುಖಮಯ ಗ್ರಾಹ್ಯ ಗ್ರಾಹಕನು
ವೇದ ವೇದ್ಯನು ತಿಳಿಯದವನೋಪಾದಿ ಭುಂಜಿಸುತ
ಎಲ್ಲರೊಳಗೆ ಆಹ್ಲಾದ ಪಡುವನು ಭಕ್ತವತ್ಸಲ ಭಾಗ್ಯಸಂಪನ್ನ||16||

ನಿತ್ಯನಿಗಮಾತೀತ ನಿರ್ಗುಣ ಭೃತ್ಯವತ್ಸಲ ಭಯವಿನಾಶನ
ಸತ್ಯಕಾಮ ಶರಣ್ಯ ಶ್ಯಾಮಲ ಕೋಮಲಾಂಗ ಸುಖಿ
ಮತ್ತನಂದದಿ ಮರ್ತ್ಯರ ಒಳ ಹೊರಗೆ ಎತ್ತ ನೋಡಲು ಸುತ್ತುತ ಇಪ್ಪನು
ಅತ್ಯಧಿಕ ಸಂತೃಪ್ತ ತ್ರಿಜಗದ್ವ್ಯಾಪ್ತ ಪರಮಾಪ್ತ||17||

ಪವಿ ಹರಿನ್ಮಣಿ ವಿದ್ರುಮದ ಸಚ್ಛವಿಗಳ ಅಂದದಿ
ರಾಜಿಸುತ ಮಾಧವ ನಿರಂತರ ಮಾನವ ದಾನವರೊಳು ಇದ್ದು
ತ್ರಿವಿಧ ಗುಣ ಕರ್ಮ ಸ್ವಭಾವವ ಪವನಮುಖ ದೇವಾಂತರಾತ್ಮಕ
ದಿವಸ ದಿವಸದಿ ವ್ಯಕ್ತಮಾಡುತಲಿ ಅವರೊಳಿದ್ದು ಉಣಿಪ||18||

ಅಣು ಮಹತ್ತಿನೊಳು ಇಪ್ಪ ಘನ ಪರಮಣುವಿನೊಳು ಅಡಗಿಸುವ
ಸೂಕ್ಷ್ಮವ ಮುಣುಗಿಸುವ ತೇಲಿಸುವ ಸ್ಥೂಲಗಳ ಅವನ ಮಾಯವಿದು
ದನುಜ ರಾಕ್ಷಸರು ಎಲ್ಲರು ಇವನೊಳು ಮುನಿದು ಮಾಡುವುದೇನು
ಉಲೂಖಲ ಒನಕೆಗಳು ಧಾನ್ಯಗಳ ಹಣಿವಂದದಲಿ ಸಂಹರಿಪ||19||

ದೇವ ಮಾನವ ದಾನವರು ಎಂದು ಈ ವಿಧದಲಿ ಆವಾಗಲಿ ಇಪ್ಪರು
ಮೂವರೊಳಗೆ ಇವಗೆ ಇಲ್ಲ ಸ್ನೇಹ ಉದಾಸೀನ ದ್ವೇಷ
ಜೀವರ ಅಧಿಕಾರ ಅನುಸಾರದಲಿ ಈವ ಸುಖ ಸಂಸಾರ ದುಃಖವ
ತಾ ಉಣದಲೆ ಅವರವರಿಗೆ ಉಣಿಸುವ ನಿರ್ಗತಾಶನನು||20||

ಎಲ್ಲಿ ಕೇಳಿದರೆ ಎಲ್ಲಿ ನೋಡಿದರೆ ಎಲ್ಲಿ ಬೇಡಿದರೆ ಎಲ್ಲಿ ನೀಡಿದರೆ
ಎಲ್ಲಿ ಓಡಿದರೆ ಎಲ್ಲಿ ಆಡಿದರೆ ಅಲ್ಲೇ ಇರುತಿಹನು
ಬಲ್ಲಿದರಿಗೆ ಅತಿ ಬಲ್ಲಿದನು ಸರಿಯಿಲ್ಲ ಇವಗೆ ಅಲ್ಲಿ ನೋಡಲು
ಖುಲ್ಲಮಾನವರೊಲ್ಲನು ಅಪ್ರತಿಮಲ್ಲ ಜಗಕೆಲ್ಲ||21||

ತಪ್ತ ಲೋಹವು ನೋಳ್ಪ ಜನರಿಗೆ ಸಪ್ತ ಜಿಹ್ವವ ತೆರದಿ ತೋರ್ಪದು
ಲುಪ್ತ ಪಾವಕ ಲೋಹ ಕಾಂಬುದು ಪೂರ್ವದೋಪಾದಿ
ಸಪ್ತವಾಹನ ನಿಖಿಳ ಜನರೊಳು ವ್ಯಾಪ್ತನು ಆದುದರಿಂದ
ಸರ್ವರೂ ಆಪ್ತರು ಆಗಿಹರು ಎಲ್ಲ ಕಾಲದಿ ಕೈಕೊಂಡು||22||

ವಾರಿದನು ಮಳೆಗರೆಯೆ ಬೆಳೆದಿಹ ಭೂರುಹಂಗಳು ಚಿತ್ರ ಫಲರಸ
ಬೇರೆ ಬೇರೆ ಇಪ್ಪಂತೆ ಬಹುವಿಧ ಜೀವರೊಳಗೆ ಇದ್ದು ಮಾರಮಣನು
ಅವರವರ ಯೋಗ್ಯತೆ ಮೀರದಲೆ ಗುಣಕರ್ಮಗಳ ಅನುಸಾರ ನಡೆಸುವ
ದೇವನಿಗೆ ವೈಷಮ್ಯವೆಲ್ಲಿಹುದೋ||23||

ವಾರಿಜಾಪ್ತನ ಕಿರಣ ಮಣಿಗಳ ಸೇರಿ ತತ್ತತ್ ವರ್ಣಗಳನು
ವಿಕಾರಗೈಸದೆ ನೋಳ್ಪರಿಗೆ ಕಂಗೊಳಿಸುವಂದದಲಿ
ಮಾರಮಣ ಲೋಕತ್ರಯದೊಳು ಇಹ ಮೂರುವಿಧ ಜೀವರೊಳಗೆ
ಇದ್ದು ವಿಹಾರಮಾಡುವನು ಅವರ ಯೋಗ್ಯತೆ ಕರ್ಮವ ಅನುಸರಿಸಿ||24||

ಜಲವನು ಅಪಹರಿಸುವ ಘಳಿಗೆ ಬಟ್ಟಲನು ಉಳಿದು
ಜಯಘಂಟೆ ಕೈಪಿಡಿದು ಎಳೆದು ಹೊಡೆವಂದದಲಿ
ಸಂತತ ಕರ್ತೃ ತಾನಾಗಿ ಹಲಧರಾನುಜ ಪುಣ್ಯ ಪಾಪದ ಫಲಗಳನು
ದೇವಾಸುರರ ಗಣದೊಳು ವಿಭಾಗವ ಮಾಡಿ ಉಣಿಸುತ ಸಾಕ್ಷಿಯಾಗಿಪ್ಪ||25||

ಪೊಂದಿಕೊಂಡಿಹ ಸರ್ವರೊಳು ಸಂಬಂಧವಾಗದೆ
ಸಕಲಕರ್ಮವ ಅರಂದದಲಿ ತಾ ಮಾಡಿಮಾಡಿಪ ತತ್ಫಲಗಳುಣದೆ
ಕುಂದದೆ ಅಣುಮಾಹತ್ತು ಎನಿಪ ಘಟಮಂದಿರದಿ ಸರ್ವತ್ರ ತುಂಬಿಹ
ಬಾಂದಳದ ತೆರೆದಂತೆ ಇರುತಿಪ್ಪನು ರಮಾರಮಣ||26||

ಕಾದ ಕಬ್ಬಿಣ ಹಿಡಿದು ಬಡಿಯಲು ವೇದನೆಯು ಲೋಹಗಳಿಗೆ ಅಲ್ಲವೆ
ಆದುದೇನೈ ಅನಳಗಾ ವ್ಯಥೆ ಏನು ಮಾಡಿದರು
ಆದಿದೇವನು ಸರ್ವ ಜೀವರ ಕಾದುಕೊಂಡಿಹನು ಒಳಹೊರಗೆ
ದುಃಖಾದಿಗಳು ಸಂಬಂಧವಾಗುವವೇನೋ ಚಿನ್ಮಯಗೆ||27||

ಮಳಲ ಮನೆಗಳ ಮಾಡಿ ಮಕ್ಕಳು ಕಾಲದಲಾಡಿ ಮೋದದಿ ತುಳಿದು ಕೆಡಿಸುವ ತೆರದಿ
ಲಕ್ಷ್ಮೀರಮಣ ಲೋಕಗಳ ಹಲವು ಬಗೆಯಲಿ ನಿರ್ಮಿಸುವ
ನಿಶ್ಚಲನು ತಾನಾಗಿದ್ದು ಸಲಹುವ
ಎಲರುಣಿಯವೋಳ್ ನುಂಗುವಗೆ ಎಲ್ಲಿಹುದೋ ಸುಖ ದುಃಖ||28||

ವೇಷಭಾಷೆಗಳಿಂದ ಜನರ ಪ್ರಮೋಷಗೈಸುವ ನಟಪುರುಷನೋಳ್
ದೋಷದೂರನು ಲೋಕದೊಳು ಬಹುರೂಪ ಮಾತಿನಲಿ ತೋಷಿಸುವನು
ಅವರವರ ಮನದ ಅಭಿಲಾಷೆಗಳ ಪೂರೈಸುತ ಅನುದಿನ ಪೋಷಿಸುವ
ಪೂತಾತ್ಮ ಪೂರ್ಣ ಆನಂದ ಜ್ಞಾನಮಯ||29||

ಅಧಮ ಮಾನವನು ಓರ್ವ ಮಂತ್ರೌಷಧಗಳನು ತಾನರಿತು
ಪಾವಕೋದಕಗಳ ಸಂಬಂಧವಿಲ್ಲದಲಿಪ್ಪನು ಅದರೊಳಗೆ
ಪದುಮಜ ಅಂಡ ಉದರನು ಸರ್ವರ ಹೃದಯದೊಳಗೆ ಇರೆ
ಕಾಲಗುಣಕರ್ಮದ ಕಲುಷ ಸಂಬಂಧವಾಗುವುದೇ ನಿರಂಜನಗೆ||30||

ಒಂದು ಗುಣದೊಳು ಅನಂತ ಗುಣಗಳು ಒಂದು ರೂಪದೊಳು ಇಹವು
ಲೋಕಗಳ ಒಂದೇ ರೂಪದಿ ಧರಿಸಿ ತದ್ಗತ ಪದಾರ್ಥದ ಒಳ ಹೊರಗೆ
ಬಾಂದಳದೊಳಿದ್ದು ಬಹು ಪೆಸರಿಂದ ಕರೆಸುತ
ಪೂರ್ಣ ಜ್ನಾನಾನಂದಮಯ ಪರಿಪರಿ ವಿಹಾರವ ಮಾಡಿ ಮಾಡಿಸುವ||31||

ಎಲ್ಲರೊಳು ತಾನಿಪ್ಪ ತನ್ನೊಳಗೆ ಎಲ್ಲರನು ಧರಿಸಿಹನು
ಅಪ್ರತಿಮಲ್ಲ ಮನ್ಮಥಜನಕ ಜಗದ ಆದಿ ಅಂತ ಮಧ್ಯಗಳ ಬಲ್ಲ
ಬಹುಗುಣ ಭರಿತ ದಾನವ ದಲ್ಲಣ ಜಗನ್ನಾಥ ವಿಠಲ
ಸೊಲ್ಲು ಲಾಲಿಸಿ ಸ್ತಂಭದಿಂದಲಿ ಬಂದ ಭಕುತನಿಗೆ||32||
***

1.
Purusharūpatraya purāṇa purusha purushōttama |
Ksharākshara purusha pūjita pāda pūrṇānanda jñānamaya ||
Purushasūkta sumēya tattat purusha hrutpushkara nilaya |
Mahāpurusha ajāṇḍa antaradi bahiradi vyāpta nirlipta ||

2.
Strī napunsaka purusha bhū salila anala gagana mana shashi |
Bhānu kāla guṇa prakrutiyoḷage ondu tānalla ||
Ēnu ivana mahāmahimē kaḍegāṇaru ajabhava shakra mukharu |
Nidhānisalu mānavarige aḷavaḍuvudē vicārisalu ||

3.
Gandha rasarūpa sparsha shabda ondu tānalla |
Adaradara pesarinda kare-suta jīvarige tarpakanu tānāgi ||
Pondikoṇḍiha parama karuṇāsindhu shāshvata |
Manave modalāda indriyangaloḷage iddu bhōgisutihanu vishayagala ||

4.
Shravaṇa nayana ghrāṇa tvagrasana ivagaloḷu |
Vākpāṇi pādādi avayavagaloḷu tadguṇagaloḷu tatpatigaḷoḷage ||
Pravitatanu tānāgi krutipati vividha karmava māḍi māḍisi |
Bhavake kāraṇanāgi tirugisutihanu tiḷisadale ||

5.
Guṇiguṇagaloḷage iddu guṇiguṇanu enisanu guṇabaddhanāgade |
Guṇaja puṇyāpuṇya phala brahmādichētanake uṇisuta avar oḷagiddu ||
Vrujina ardana cidānandaika dēhavanu |
Koṇege sacharāchara jagadbhukuvenipanu avyayanu ||

6.
Vidyē tānenesikoḷba aniruddhadevanu |
Sarvajīvara buddhiyali tāniddu krutipati buddhiyennisuanu ||
Siddhiyennisuva sankarushana prasiddhanāmaka vāsudēva |
Anavadhya rūpa chatushtayagala aritavane paṇḍitanu ||

7.
Tanuchatushtayagaloḷu nārāyaṇanu hrutkamalākhya simhāsanadoḷu |
Aniruddhādi rūpagaḷinda shōbhisuta ||
Tanage tānē sēvya sēvakanenesi sēvāsakta suraroḷage |
Anavarata nelesiddu sēveyakomba navarantē ||

8.
Jāgara svapnangaḷoḷu varabhōgīshayananu bahu prakāra vibhāgagaisi |
Niramshajīvara chitsharīravanu bhōgavittu ||
Sushuptikāladi sāgarava nadi kūḍuvantē |
Viyōgarahitanu amshagalanu ēkatravaidisuv ||

9.
Bhāryarind oḍagūḍi kāraṇakārya vastugaḷalli |
Prērakaprērya rūpagaḷinda paṭatantu gaḷavoḷidduddu ||
Sūrya kiraṇagaḷantē tannaya vīryadindali koḍuta koḷutiha |
Anāryarige ītana vihāravu gōcharipudēnō ||

10.
Janaka tanna ātmajage vara bhūshaṇadukūlava toḍisi |
Tā vandaneya kaikōḷuta harasuta harushabaḍuvantē ||
Vanaruhēkshaṇa pūjya pūjakanu enisi pūjāsādhana |
Padārthavanu tanage tānāgi phalagaḷanīva bhajakarige ||

11.
Tande bahu sambhramadi tannaya bandhu baḷagava nerahi |
Maduveya nandanage tā māḍi maneyoḷagiḍuva teradantē ||
Indirādhava tanna icchyalinda guṇagaḷa chētanake sambandhagaisi |
Sukhāsukhātmaka samsrutiyoḷu iḍuva ||

12.
Truṇa kruta ālayadoḷage pōge sandanisi prati chidradali poramattu |
Anaḷa niravanu tōri tōradalippa teradantē ||
Vanajāṇḍadoḷu akhila jīvara tanuvina oḷa horage iddu |
Kāṇisade animishēshanu sakala karmava māḷpanu avar antē ||

13.
Pādapagala aḍige eraye salilavu tōdu kambigaḷu ubbi |
Pushpa svādu phalava īvandadali sarvēshvaranu ||
Janara ārādhaneya kaikōṇḍu brahma bhavādigaḷa nāmadali phalavittu |
Ādarisanu tanna mahimeya tōragoḍa janakē ||

14.
Shrutitatigaḷige gōcharisada apratima ajānandātmanu achyuta vitata |
Vishvādhāra vidyādhīsha vidhi janaka ||
Pratidivasa chētanaroḷage prākruta purushanandadali sancharisuta |
Niyamya niyāmakanu tānāgi santipa ||

15.
Mana vishayadoḷage irisi vishayava manadoḷage nelegoḷisi |
Balu nūtanavu susamīchīnavidu upādēyavendensisi ||
Kanasilādoru tanna pādada nenevanu īyade |
Sarvaroḷagiddu anubhavisuvanu sthūla vishayava vishvanendensisi ||

16.
Tōdakanu tānāgi mana modalāda karaṇadoḷu iddu vishayava naiduvanu |
Nijapūrṇa sukhamaya grāhya grāhakanu ||
Vēda vēdyanu tiḷiyadavanaōpādi bhuñjisuta |
Ellaroḷage āhlāda paḍuvanu bhaktavatsala bhāgyasampanna ||

17.
Nityanigamātīta nirguṇa bhṛtyavatsala bhayavināshana |
Satyakāma sharaṇya shyāmala kōmalāṅga sukhi ||
Mattanandadi martyara oḷa horage etta nōḍalu suttuta ippanu |
Atyadhika santrupta trijagadvyāpta paramāpta ||

18.
Pavi harinmaṇi vidrumada sacchavigaḷa andadi |
Rājisuta mādhava nirantara mānava dānavaroḷu iddu ||
Trividha guṇa karma svabhāva pavanamukha dēvāntarātmakada |
Divasa divasadi vyaktamāḍutali avar oḷagiddu uṇipa ||

19.
Aṇu mahattinoḷu ippa ghana paramāṇuvinoḷu aḍagisuva |
Sūkshmava muṇugisuva tēlisua sthūlagaḷa avana māyavidu ||
Danuja rākshasaru ellaru ivanoḷu munidu māḍuvadēnu |
Ulūkhala oṇakegaḷu dhānyagaḷa haṇivandadali samharipa ||

20.
Dēva mānava dānavaru endu ī vidhadali āvāgali ipparu |
Mūvaroḷage ivage illa snēha udāsīna dvēsha ||
Jīvara adhikāra anusāradali īva sukha samsāra duḥkhava |
Tā uṇadale avaravarige uṇisuva nirgatāshananu ||

21.
Elli kēḷidare elli nōḍidare elli bēḍidare elli nīdidare |
Elli ōḍidare elli āḍidare allē irutihanu ||
Ballidarige ati ballidanu sariyilla ivage alli nōḍalu |
Khullamānavaroḷlanu apratimalla jagakella ||

22.
Tapta lōhavu nōḷpa janarige sapta jihvava teradi tōrpadu |
Lupta pāvaka lōha kāmbudu pūrva-dōpādi ||
Saptavāhana nikhila janaroḷu vyāptanu ādudarinda |
Sarvarū āptaru āgiharu ella kāladi kaikōṇḍu ||

23.
Vāridanu maḷegareye beḷedihabhūruhaṅgaḷu citra phalarasa |
Bērē bērē ippantē bahuvidha jīvaroḷage iddu māramaṇanu ||
Avaravara yōgyate mīradale guṇakarmagaḷa anusāra naḍesuva |
Dēvanige vaishamya-yellihuḍō ||

24.
Vārijāptana kiraṇa maṇigaḷa sēri tattat varṇagaḷanu |
Vikāragaisade nōḷparige kaṅgoḷisuvandadali ||
Māramaṇalu lōkatrayadoḷu iha mūruvidha jīvaroḷage |
Iddu vihāramāḍuvanu avar yōgyate karmava anusarisi ||

25.
Jalavanu apaharisuvaghaḷige baṭṭalanu uḷidu |
Jayaghaṇṭe kaipidiḍu eḷedu hoḍevandadali ||
Santata kartru tānāgi haladharānuja puṇya pāpada phalagaḷanu |
Dēvāsurara gaṇadoḷu vibhāgava māḍi uṇisuta sākshiyāgippa ||

26.
Pondikoṇḍiha sarvaroḷu sambandhavāgade |
Sakalakarmava arandadali tā māḍimāḍipa tatphalagaḷuṇade ||
Kundade aṇumāhattu enipa ghaṭamandiradi sarvatra tumbiha |
Bāndaḷada teradante irutippanu ramāramaṇanu ||

27.
Kāda kabbiṇa hiḍidu baḍiyalu vēdaneyu lōhagaḷige allave |
Ādudēnai anaḷagā vyathe ēnu māḍidaru ||
Ādidēvanu sarva jīvara kādukoṇḍihanu oḷahorage |
Duḥkhādigaḷu sambandhavāguvavēnō cinmayage ||

28.
Maḷala manegaḷa māḍi makkaḷu kāladalāḍi mōdadi tuḷidu keḍisuva teradi |
Lakshmīramaṇa lōkagaḷa halavu bageyali nirmisuva ||
Nishchalanu tānāgiddusalahuva |
Elaruṇiyavoḷ nuṅguvage ellihuḍō sukha duḥkha ||

29.
Vēshabhāshegaḷinda janara pramōshagaisuva naṭapurushanōḷ |
Dōshadūranu lōkadoḷu bahurūpa mātinalli tōshisuvanu ||
Avaravara manada abhilāshegaḷa pūraisuṭa anudina pōshisuva |
Pūtātma pūrṇa ānanda jñānamaya ||

30.
Adhama mānavanu ōrva mantrauṣadhagaḷanu tānaritu |
Pāvakōdakagaḷa sambandhavilladal ippanu adaroḷage ||
Padumaja aṇḍa udaranu sarvara hṛdayadoḷage ire |
Kālaguṇakarmada kalusha sambandhavāguvadē nirañjanage ||

31.
Ondu guṇadoḷu ananta guṇagaḷu ondu rūpadoḷu ihavu |
Lōkagaḷa ondē rūpadi dharisi tadgata padārthada oḷa horage ||
Bāndaḷadoḷiddubahu pesarinda karesuta |
Pūrṇa jñānānandamaya paripari vihārava māḍi māḍisuva ||

32.
Ellaroḷu tān ippa tann oḷage ellaranu dharisihanu |
Apratimalla manmathajanaka jagada ādi anta madhyagaḷa balla ||
Bahuguṇa bharita dānava dallaṇa jagannātha viṭhala |
Soḷlu lālisi stambhadindali banda bhakutanige ||
***

Pronunciation Guide
Purpose: pron.guide is a simple, community-driven resource for hearing and learning how to pronounce names correctly.

How it Works: Users can search for specific names, listen to crowdsourced audio recordings, and view written pronunciation guides.

Contribution: It allows individuals to record and upload their own names to ensure others know how to say them accurately.

Accessibility: The site serves as a vital tool for fostering inclusivity and reducing mispronunciation in professional and social settings.

Usage: It is widely used by educators, recruiters, and anyone looking to show respect by addressing others by their correct names.
***


ಶ್ರೀ ಜಗನ್ನಾಥದಾಸಾರ್ಯ ವಿರಚಿತ 'ಹರಿಕಥಾಮೃತಸಾರ'ದ 3ನೇ ಸಂಧಿಯಾದ 'ವ್ಯಾಪ್ತಿ ಸಂಧಿ'ಯ ಸಂಕ್ಷಿಪ್ತ ಸಾರಾಂಶ:

ಈ ಸಂಧಿಯು ಭಗವಂತನ (ಶ್ರೀಹರಿಯ) 'ಸರ್ವವ್ಯಾಪಕತೆ' (ಎಲ್ಲೆಡೆಯೂ ಇರುವಿಕೆ) ಮತ್ತು 'ನಿರ್ಲಿಪ್ತತೆ'ಯನ್ನು (ಯಾವುದಕ್ಕೂ ಅಂಟಿಕೊಳ್ಳದ ಸ್ವಭಾವ) ಅತ್ಯಂತ ಸುಂದರವಾಗಿ ವಿವರಿಸುತ್ತದೆ.

ಸಂಧಿಯ ಪ್ರಮುಖಾಂಶಗಳು:

ಸರ್ವವ್ಯಾಪಕತೆ ಮತ್ತು ನಿರ್ಲಿಪ್ತತೆ: ಭಗವಂತನು ಈ ಬ್ರಹ್ಮಾಂಡದ ಕಣಕಣದಲ್ಲಿಯೂ (ಸ್ತ್ರೀ-ಪುರುಷ, ಪಂಚಭೂತಗಳು, ಕಾಲ, ಪ್ರಕೃತಿ ಎಲ್ಲದರಲ್ಲೂ) ಒಳ-ಹೊರಗೆ ಹಾಸುಹೊಕ್ಕಾಗಿದ್ದಾನೆ. ನೂಲಿನೊಳಗೆ ಬಟ್ಟೆ ಇರುವಂತೆ ಅವನು ಎಲ್ಲೆಡೆ ಇದ್ದರೂ, ಆಕಾಶದಂತೆ ಅವನು ಯಾವುದಕ್ಕೂ ಅಂಟಿಕೊಳ್ಳದೆ ಸಂಪೂರ್ಣ ನಿರ್ಲಿಪ್ತನಾಗಿದ್ದಾನೆ.

ಇಂದ್ರಿಯಗಳ ಪ್ರೇರಕ ಮತ್ತು ಭೋಕ್ತೃ: ನಮ್ಮ ಕಣ್ಣು, ಕಿವಿ, ಮೂಗು, ನಾಲಿಗೆ ಮುಂತಾದ ಪಂಚ ಜ್ಞಾನೇಂದ್ರಿಯಗಳು ಮತ್ತು ಕರ್ಮೇಂದ್ರಿಯಗಳಲ್ಲಿ ಪರಮಾತ್ಮನೇ ಬಿಂಬರೂಪಿಯಾಗಿ ಕುಳಿತು, ನಮಗರಿವಿಲ್ಲದಂತೆ ಎಲ್ಲ ಕರ್ಮಗಳನ್ನು ತಾನೇ ಮಾಡಿಸುತ್ತಾನೆ. ಸ್ಥೂಲ ವಿಷಯಗಳನ್ನು ಅನುಭವಿಸಿದರೂ ಅವನು ಸದಾ ಆನಂದಮಯ.

ಪಕ್ಷಪಾತವಿಲ್ಲದ ಕರ್ಮಫಲ ಪ್ರದಾತ: ಒಂದೇ ಮಳೆನೀರು ಬಿದ್ದರೂ ಬೇರೆ ಬೇರೆ ಮರಗಳು ತಮ್ಮ ಗುಣಕ್ಕೆ ತಕ್ಕಂತೆ ಬೇರೆ ಬೇರೆ ಹಣ್ಣುಗಳನ್ನು (ಸಿಹಿ, ಹುಳಿ) ಕೊಡುವಂತೆ, ಭಗವಂತನು ಜೀವರ ಯೋಗ್ಯತೆ ಮತ್ತು ಕರ್ಮಗಳಿಗೆ ಅನುಗುಣವಾಗಿ ಮಾತ್ರ ಸುಖ-ದುಃಖಗಳನ್ನು ನೀಡುತ್ತಾನೆ. ಅವನಲ್ಲಿ ಯಾವುದೇ ದ್ವೇಷಾಗಲಿ, ಪಕ್ಷಪಾತವಾಗಲಿ ಇಲ್ಲ.

ಅದ್ಭುತ ದೃಷ್ಟಾಂತಗಳು: ಭಗವಂತನ ವ್ಯಾಪ್ತಿ ಮತ್ತು ನಿರ್ಲಿಪ್ತತೆಯನ್ನು ವಿವರಿಸಲು ದಾಸರು ಅನೇಕ ಉದಾಹರಣೆಗಳನ್ನು ನೀಡಿದ್ದಾರೆ. ಕಾದ ಕಬ್ಬಿಣದಲ್ಲಿ ಬೆಂಕಿ ಇದ್ದರೂ, ಏಟು ಬಿದ್ದಾಗ ಕಬ್ಬಿಣಕ್ಕೆ ತೊಂದರೆಯೇ ಹೊರತು ಬೆಂಕಿಗಲ್ಲ. ಹಾಗೆಯೇ ನಮ್ಮೊಳಗಿರುವ ಪರಮಾತ್ಮನಿಗೆ ನಮ್ಮ ಕಷ್ಟಗಳ ಲೇಪವಿಲ್ಲ. ಸೂರ್ಯನ ಬೆಳಕು ವಿವಿಧ ಬಣ್ಣದ ಹರಳುಗಳ ಮೂಲಕ ಹಾಯ್ದರೂ ಹೇಗೆ ತನ್ನ ಬಣ್ಣ ಬದಲಿಸುವುದಿಲ್ಲವೋ, ಹಾಗೆ ಭಗವಂತ ನಿರ್ವಿಕಾರ.

ಜಗತ್ತು ಅವನಿಗೆ ಕೇವಲ ಲೀಲೆ: ಮಕ್ಕಳು ಮರಳಿನ ಮನೆ ಕಟ್ಟಿ, ಆಟವಾಡಿ, ಮೋದದಿಂದ ಅದನ್ನು ಕೆಡಿಸಿ ಆನಂದಿಸುವಂತೆ, ಈ ಜಗತ್ತಿನ ಸೃಷ್ಟಿ, ಸ್ಥಿತಿ ಮತ್ತು ಲಯಗಳು ಆ ಪರಮಾತ್ಮನಿಗೆ ಕೇವಲ ಒಂದು ಆಟವಿದ್ದಂತೆ.

ಸಾರಾಂಶ:
ನಾವು ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ, ನೋಡುವ ಪ್ರತಿಯೊಂದು ವಸ್ತುವಿನಲ್ಲಿಯೂ ಭಗವಂತನು ವ್ಯಾಪಿಸಿದ್ದಾನೆ ಎಂಬುದನ್ನು ಅರಿತುಕೊಳ್ಳುವುದೇ 'ವ್ಯಾಪ್ತಿ ಸಂಧಿ'ಯ ಮುಖ್ಯ ಉದ್ದೇಶ. ಪರಮಾತ್ಮನನ್ನು ಎಲ್ಲೆಡೆ ಕಾಣುತ್ತಾ, ನಾವೇ ಮಾಡುತ್ತಿದ್ದೇವೆ ಎಂಬ ಅಹಂಕಾರವನ್ನು ಬಿಟ್ಟು, ಅವನೇ ನಮ್ಮಿಂದ ಮಾಡಿಸುತ್ತಿದ್ದಾನೆ ಎಂಬ ಎಚ್ಚರದಿಂದ ಜೀವಿಸುವುದೇ ನಿಜವಾದ ಜ್ಞಾನ.

Meaning

1. ಪದ್ಯ:
ಪುರುಷರೂಪತ್ರಯ ಪುರಾಣ ಪುರುಷ ಪುರುಷೋತ್ತಮ |
ಕ್ಷರಾಕ್ಷರ ಪುರುಷ ಪೂಜಿತ ಪಾದ ಪೂರ್ಣಾನಂದ ಜ್ಞಾನಮಯ ||
ಪುರುಷಸೂಕ್ತ ಸುಮೇಯ ತತ್ತತ್ ಪುರುಷ ಹೃತ್ಪುಷ್ಕರ ನಿಲಯ |
ಮಹಾಪುರುಷ ಅಜಾಂಡ ಅಂತರದಿ ಬಹಿರದಿ ವ್ಯಾಪ್ತ ನಿರ್ಲಿಪ್ತ ||
ಅರ್ಥ: ಮೂರು ರೂಪದವನೂ, ಅನಾದಿಯಾದ ಪುರುಷೋತ್ತಮನೂ ಆದ ಹರಿಯು ಜ್ಞಾನಾನಂದಮಯನಾಗಿದ್ದಾನೆ. ಅಜಾಂಡದ ಒಳಗೆ ಮತ್ತು ಹೊರಗೆ ಸರ್ವವ್ಯಾಪಿಯಾಗಿದ್ದರೂ ಅವನು ಯಾವುದಕ್ಕೂ ಅಂಟದ ನಿರ್ಲಿಪ್ತನಾಗಿದ್ದಾನೆ.

2. ಪದ್ಯ:
ಸ್ತ್ರೀ ನಪುಂಸಕ ಪುರುಷ ಭೂ ಸಲಿಲ ಅನಲ ಗಗನ ಮನ ಶಶಿ |
ಭಾನು ಕಾಲ ಗುಣ ಪ್ರಕೃತಿಯೊಳಗೆ ಒಂದು ತಾನಲ್ಲ ||
ಏನು ಇವನ ಮಹಾಮಹಿಮೆ ಕಡೆಗಾಣರು ಅಜಭವ ಶಕ್ರ ಮುಖರು |
ನಿಧಾನಿಸಲು ಮಾನವರಿಗೆ ಅಳವಡುವುದೇ ವಿಚಾರಿಸಲು ||
ಅರ್ಥ: ಸ್ತ್ರೀ-ಪುರುಷರು, ಪಂಚಭೂತಗಳು, ಮನಸ್ಸು, ಸೂರ್ಯ-ಚಂದ್ರರು ಇವುಗಳಲ್ಲೆಲ್ಲಾ ಹರಿ ಇದ್ದರೂ ಅವನು ಅವುಗಳಿಗಿಂತ ಭಿನ್ನ. ಬ್ರಹ್ಮ, ರುದ್ರ, ಇಂದ್ರಾದಿಗಳಿಗೂ ಅವನ ಮಹಿಮೆ ತಿಳಿಯದು, ಇನ್ನು ಮನುಷ್ಯರಿಗೆ ತಿಳಿಯುವುದು ಹೇಗೆ?

3. ಪದ್ಯ:
ಗಂಧ ರಸರೂಪ ಸ್ಪರ್ಶ ಶಬ್ದ ಒಂದು ತಾನಲ್ಲ |
ಅದರದರ ಪೆಸರಿಂದ ಕರೆಸುತ ಜೀವರಿಗೆ ತರ್ಪಕನು ತಾನಾಗಿ ||
ಪೊಂದಿಕೊಂಡಿಹ ಪರಮ ಕರುಣಾಸಿಂಧು ಶಾಶ್ವತ |
ಮನವೆ ಮೊದಲಾದ ಇಂದ್ರಿಯಗಳೊಳಗೆ ಇದ್ದು ಭೋಗಿಸುತಿಹನು ವಿಷಯಗಳ ||
ಅರ್ಥ: ಗಂಧ, ರಸ, ರೂಪ ಮುಂತಾದ ವಿಷಯಗಳಲ್ಲಿ ಹರಿ ಇದ್ದರೂ ಅವುಗಳಿಗಿಂತ ಭಿನ್ನ. ಕರುಣಾಸಾಗರನಾದ ಭಗವಂತ ನಮ್ಮ ಇಂದ್ರಿಯಗಳ ಮೂಲಕವೇ ಆ ವಿಷಯಗಳನ್ನು ಭೋಗಿಸುತ್ತಾನೆ.

4. ಪದ್ಯ:
ಶ್ರವಣ ನಯನ ಘ್ರಾಣ ತ್ವಗ್ರಸನ ಇವುಗಳೊಳು |
ವಾಕ್ಪಾಣಿ ಪಾದಾದಿ ಅವಯವಗಳೊಳು ತದ್ಗುಣಗಳೊಳು ತತ್ಪತಿಗಳೊಳಗೆ ||
ಪ್ರವಿತತನು ತಾನಾಗಿ ಕೃತಿಪತಿ ವಿವಿಧ ಕರ್ಮವ ಮಾಡಿ ಮಾಡಿಸಿ |
ಭವಕೆ ಕಾರಣನಾಗಿ ತಿರುಗಿಸುತಿಹನು ತಿಳಿಸದಲೆ ||
ಅರ್ಥ: ನಮ್ಮ ಐದು ಜ್ಞಾನೇಂದ್ರಿಯಗಳು ಮತ್ತು ಕರ್ಮೇಂದ್ರಿಯಗಳಲ್ಲಿ ಭಗವಂತನು ವ್ಯಾಪಿಸಿದ್ದಾನೆ. ಎಲ್ಲ ಕರ್ಮಗಳನ್ನು ತಾನೇ ಮಾಡಿಸುತ್ತಾ, ಜೀವರನ್ನು ಸಂಸಾರ ಚಕ್ರದಲ್ಲಿ ತಿರುಗಿಸುತ್ತಿದ್ದಾನೆ.

5. ಪದ್ಯ:
ಗುಣಿಗುಣಗಳೊಳಗೆ ಇದ್ದು ಗುಣಿಗುಣನು ಎನಿಸುವನು ಗುಣಬದ್ಧನಾಗದೆ |
ಗುಣಜ ಪುಣ್ಯಾಪುಣ್ಯ ಫಲ ಬ್ರಹ್ಮಾದಿಚೇತನಕೆ ಉಣಿಸುತ ಅವರೊಳಗಿದ್ದು ||
ವೃಜಿನ ಅರ್ದನ ಚಿದಾನಂದೈಕ ದೇಹವನು |
ಕೊನೆಗೆ ಸಚರಾಚಾರ ಜಗದ್ಭುಕುವೆನಿಪನು ಅವ್ಯಯನು ||
ಅರ್ಥ: ಗುಣಗಳಿಗೆ ಒಡೆಯನಾದ ಹರಿ, ಗುಣಗಳ ಬಂಧನವಿಲ್ಲದವನು. ಜೀವರ ಪುಣ್ಯ-ಪಾಪಗಳಿಗೆ ತಕ್ಕ ಫಲ ನೀಡುತ್ತಾ, ಕೊನೆಯಲ್ಲಿ ಜಗತ್ತನ್ನೇ ಹೊಟ್ಟೆಯಲ್ಲಿ ಇಟ್ಟುಕೊಳ್ಳುವ ಅವ್ಯಯ ಸ್ವರೂಪ ಅವನು.

6. ಪದ್ಯ:
ವಿದ್ಯೆ ತಾನೆನೆಸಿಕೊಂಬ ಅನಿರುದ್ಧದೇವನು |
ಸರ್ವಜೀವರ ಬುದ್ಧಿಯಲಿ ತಾನಿದ್ದು ಕೃತಿಪತಿ ಬುದ್ಧಿಯೆನಿಸುವನು ||
ಸಿದ್ಧಿಯೆನಿಸುವ ಸಂಕರುಷನ ಪ್ರಸಿದ್ಧನಾಮಕ ವಾಸುದೇವ |
ಅನವದ್ಯ ರೂಪ ಚತುಷ್ಟಯಗಳ ಅರಿತವನೆ ಪಂಡಿತನು ||
ಅರ್ಥ: ಅನಿರುದ್ಧ, ಸಂಕರ್ಷಣ, ವಾಸುದೇವ, ಪ್ರದ್ಯುಮ್ನ ಎಂಬ ಚತುರ್ವ್ಯೂಹ ರೂಪಗಳನ್ನು ತಿಳಿದವನೇ ಜ್ಞಾನಿ. ಅನಿರುದ್ಧನು ನಮ್ಮ ಬುದ್ಧಿಯಲ್ಲಿ ಇದ್ದು ಎಲ್ಲವನ್ನು ನಡೆಸುತ್ತಿದ್ದಾನೆ.

7. ಪದ್ಯ:
ತನುಚತುಷ್ಟಯಗಳೊಳು ನಾರಾಯಣನು ಹೃತ್ಕಮಲಾಖ್ಯ ಸಿಂಹಾಸನದೊಳು |
ಅನಿರುದ್ಧಾದಿ ರೂಪಗಳಿಂದ ಶೋಭಿಸುತ ||
ತನಗೆ ತಾನೇ ಸೇವ್ಯ ಸೇವಕನೆನೆಸಿ ಸೇವಾಸಕ್ತ ಸುರರೊಳಗೆ |
ಅನವರತ ನೆಲೆಸಿದ್ದು ಸೇವೆಯ ಕೊಂಬನವರಂತೆ ||
ಅರ್ಥ: ನಾರಾಯಣನು ಹೃದಯ ಕಮಲದಲ್ಲಿ ನೆಲೆಸಿದ್ದಾನೆ. ದೇವತೆಗಳ ಮೂಲಕ ಭಗವಂತ ತನಗೆ ತಾನೇ ಸೇವೆಯನ್ನು ಸ್ವೀಕರಿಸುತ್ತಾನೆ.

8. ಪದ್ಯ:
ಜಾಗರ ಸ್ವಪ್ನಂಗಳೊಳು ವರಭೋಗೀಶಯನನು ಬಹು ಪ್ರಕಾರ ವಿಭಾಗಗೈಸಿ |
ನಿರಂಶಜೀವರ ಚಿತ್ಶರೀರವನು ಭೋಗವಿತ್ತು ||
ಸುಷುಪ್ತಿಕಾಲದಿ ಸಾಗರವ ನದಿ ಕೂಡುವಂತೆ |
ವಿಯೋಗರಹಿತನು ಅಂಶಗಳನು ಏಕತ್ರವೈದಿಸುವ ||
ಅರ್ಥ: ಎಚ್ಚರ ಮತ್ತು ಕನಸಿನ ಸ್ಥಿತಿಯಲ್ಲಿ ಜೀವರನ್ನು ಭೋಗಗಳಲ್ಲಿ ತೊಡಗಿಸುತ್ತಾನೆ. ಸುಷುಪ್ತಿಯಲ್ಲಿ ನದಿಗಳು ಸಮುದ್ರ ಸೇರಿದಂತೆ, ಜೀವರನ್ನು ತನ್ನಲ್ಲಿಯೇ ಲೀನ ಮಾಡಿಕೊಳ್ಳುತ್ತಾನೆ.

9. ಪದ್ಯ:
ಭಾರ್ಯರಿಂದೊಡಗೂಡಿ ಕಾರಣಕಾರ್ಯ ವಸ್ತುಗಳಲ್ಲಿ |
ಪ್ರೆರಕಪ್ರೇರ್ಯ ರೂಪಗಳಿಂದ ಪಟತಂತುಗಳವೊಳಿದ್ದು ||
ಸೂರ್ಯ ಕಿರಣಗಳಂತೆ ತನ್ನಯ ವೀರ್ಯದಿಂದಲಿ ಕೊಡುತ ಕೊಳುತಿಹ |
ಅನಾರ್ಯರಿಗೆ ಈತನ ವಿಹಾರವು ಗೋಚರಿಪುದೇನೋ ||
ಅರ್ಥ: ದಾರ ಮತ್ತು ವಸ್ತ್ರದಂತೆ, ಭಗವಂತ ಜಗತ್ತಿನಲ್ಲಿ ಹಾಸುಹೊಕ್ಕಾಗಿ ವ್ಯಾಪಿಸಿದ್ದಾನೆ. ಸೂರ್ಯನ ಕಿರಣಗಳಂತೆ ತನ್ನ ಶಕ್ತಿಯಿಂದ ಜಗತ್ತನ್ನು ನಡೆಸುತ್ತಿದ್ದಾನೆ.

10. ಪದ್ಯ:
ಜನಕ ತನ್ನ ಆತ್ಮಜಗೆ ವರ ಭೂಷಣದುಕೂಲವ ತೊಡಿಸಿ |
ತಾ ವಂದನೆಯ ಕೈಕೊಳುತ ಹರಸುತ ಹರುಷಬಡುವಂತೆ ||
ವನರುಹೇಕ್ಷಣ ಪೂಜ್ಯ ಪೂಜಕನು ಎನಿಸಿ ಪೂಜಾಸಾಧನ |
ಪದಾರ್ಥವನು ತನಗೆ ತಾನಾಗಿ ಫಲಗಳನೀವ ಭಜಕರಿಗೆ ||
ಅರ್ಥ: ತಂದೆಯು ಮಗನಿಗೆ ಉಡುಪು ತೊಡಿಸಿ ತಾನೇ ಸಂತೋಷಿಸುವಂತೆ, ಭಗವಂತನೇ ಪೂಜಕನಾಗಿ ಪೂಜಾ ಸಾಮಗ್ರಿಯಾಗಿ, ತಾನೇ ಫಲ ನೀಡುವ ದೇವನಾಗಿದ್ದಾನೆ.

11. ಪದ್ಯ:
ತಂದೆ ಬಹು ಸಂಭ್ರಮದಿ ತನ್ನಯ ಬಂಧು ಬಳಗವ ನೆರಹಿ |
ಮದುವೆಯ ನಂದನಗೆ ತಾ ಮಾಡಿ ಮನೆಯೊಳಗಿಡುವ ತೆರದಂತೆ ||
ಇಂದಿರಾಧವ ತನ್ನ ಇಚ್ಚಯಲಿಂದ ಗುಣಗಳ ಚೇತನಕೆ ಸಂಬಂಧಗೈಸಿ |
ಸುಖಾಸುಖಾತ್ಮಕ ಸಂಸೃತಿಯೊಳು ಇಡುವ ||
ಅರ್ಥ: ತಂದೆ ಮದುವೆ ಮಾಡಿ ಸಂಸಾರದಲ್ಲಿ ಇಡುವಂತೆ, ಲಕ್ಷ್ಮೀಪತಿಯಾದ ಹರಿ ಜೀವರನ್ನು ಅವರವರ ಗುಣಗಳಿಗೆ ತಕ್ಕಂತೆ ಸಂಸಾರದಲ್ಲಿ ಸುಖ-ದುಃಖಗಳನ್ನು ಅನುಭವಿಸುವಂತೆ ಮಾಡುತ್ತಾನೆ.

12. ಪದ್ಯ:
ತೃಣ ಕೃತ ಆಲಯದೊಳಗೆ ಪೋಗೆ ಸಂದಣಿಸಿ ಪ್ರತಿ ಛಿದ್ರದಲಿ ಪೊರಮಟ್ಟು |
ಅನಳ ನಿರವನು ತೋರಿ ತೋರದಲಿಪ್ಪ ತೆರದಂತೆ ||
ವನಜಾಂಡದೊಳು ಅಖಿಳ ಜೀವರ ತನುವಿನ ಒಳ ಹೊರಗೆ ಇದ್ದು |
ಕಾಣಿಸದೆ ಅನಿಮಿಶೇಷನು ಸಕಲ ಕರ್ಮವ ಮಾಳ್ಪನು ಅವರಂತೆ ||
ಅರ್ಥ: ಹುಲ್ಲಿನ ಮನೆಯಲ್ಲಿ ಬೆಂಕಿ ಎಲ್ಲೆಡೆ ಇದ್ದರೂ ಕಾಣದಂತೆ, ಭಗವಂತ ಜೀವರ ಒಳ-ಹೊರಗೆ ಇದ್ದರೂ ಕಾಣಿಸದೆ ಎಲ್ಲ ಕರ್ಮಗಳನ್ನು ನಡೆಸುತ್ತಿದ್ದಾನೆ.

13. ಪದ್ಯ:
ಪಾದಪಗಳ ಅಡಿಗೆ ಎರೆಯೆ ಸಲಿಲವು ತೋದು ಕಂಬಿಗಳು ಉಬ್ಬಿ |
ಪುಷ್ಪ ಸ್ವಾದು ಫಲವ ಈವಂದದಲಿ ಸರ್ವೇಶ್ವರನು ||
ಜನರ ಆರಾಧನೆಯ ಕೈಕೊಂಡು ಬ್ರಹ್ಮ ಭವಾದಿಗಳ ನಾಮದಲಿ ಫಲವಿತ್ತು |
ಆದರಿಸುವನು ತನ್ನ ಮಹಿಮೆಯ ತೋರಗೊಡ ಜನಕೆ ||
ಅರ್ಥ: ಮರದ ಬುಡಕ್ಕೆ ನೀರು ಹಾಕಿದರೆ ಫಲ ಸಿಗುವಂತೆ, ಭಗವಂತನ ಆರಾಧನೆ ಮಾಡಿದರೆ ಬ್ರಹ್ಮಾದಿ ದೇವತೆಗಳ ಮೂಲಕ ನಮಗೆ ಫಲವನ್ನು ಅನುಗ್ರಹಿಸುತ್ತಾನೆ.

14. ಪದ್ಯ:
ಶೃತಿತತಿಗಳಿಗೆ ಗೋಚರಿಸದ ಅಪ್ರತಿಮ ಅಜಾನಂದಾತ್ಮನು ಅಚ್ಯುತ ವಿತತ |
ವಿಶ್ವಾಧಾರ ವಿದ್ಯಾಧೀಶ ವಿಧಿ ಜನಕ ||
ಪ್ರತಿದಿವಸ ಚೇತನರೊಳಗೆ ಪ್ರಾಕೃತ ಪುರುಷನಂದದಲಿ ಸಂಚರಿಸುತ |
ನಿಯಮ್ಯ ನಿಯಾಮಕನು ತಾನಾಗಿ ಸಂತೈಪ ||
ಅರ್ಥ: ವೇದಗಳಿಗೂ ನಿಲುಕದ ಅಪ್ರತಿಮ ಅಚ್ಯುತನು, ಜೀವರೊಳಗೆ ಒಬ್ಬ ಸಾಮಾನ್ಯ ಪುರುಷನಂತೆ ಸಂಚರಿಸುತ್ತಾ, ನಿಯಾಮಕನಾಗಿ ಎಲ್ಲವನ್ನು ನಿಯಂತ್ರಿಸುತ್ತಾನೆ.

15. ಪದ್ಯ:
ಮನ ವಿಷಯದೊಳಗೆ ಇರಿಸಿ ವಿಷಯವ ಮನದೊಳಗೆ ನೆಲೆಗೊಳಿಸಿ |
ಬಲು ನೂತನವು ಸುಸಮೀಚೀನವಿದು ಉಪಾದೇಯವೆಂದೆನಿಸಿ ||
ಕನಸಿಲಾದರು ತನ್ನ ಪಾದದ ನೆನೆವನು ಈಯದೆ |
ಸರ್ವರೊಳಗಿದ್ದು ಅನುಭವಿಸುವನು ಸ್ಥೂಲ ವಿಷಯವ ವಿಶ್ವನೆಂದೆನಿಸಿ ||
ಅರ್ಥ: ಮನಸ್ಸನ್ನು ವಿಷಯಗಳಲ್ಲಿ ಮತ್ತು ವಿಷಯಗಳನ್ನು ಮನಸ್ಸಿನಲ್ಲಿ ಇರಿಸಿ, ಹರಿಯು ಸ್ಥೂಲ ವಿಷಯಗಳನ್ನು ತಾನೇ ಅನುಭವಿಸುತ್ತಾನೆ. ತನ್ನ ಪಾದವನ್ನು ಸ್ಮರಿಸದವರಿಗೆ ಅವನು ತನ್ನ ಸುಖವನ್ನು ಕೊಡುವುದಿಲ್ಲ.

16. ಪದ್ಯ:
ತೋದಕನು ತಾನಾಗಿ ಮನ ಮೊದಲಾದ ಕರಣದೊಳು ಇದ್ದು ವಿಷಯವ ನೈದುವನು |
ನಿಜಪೂರ್ಣ ಸುಖಮಯ ಗ್ರಾಹ್ಯ ಗ್ರಾಹಕನು ||
ವೇದ ವೇದ್ಯನು ತಿಳಿಯದವನೋಪಾದಿ ಭುಂಜಿಸುತ |
ಎಲ್ಲರೊಳಗೆ ಆಹ್ಲಾದ ಪಡುವನು ಭಕ್ತವತ್ಸಲ ಭಾಗ್ಯಸಂಪನ್ನ ||
ಅರ್ಥ: ಎಲ್ಲ ಇಂದ್ರಿಯಗಳಲ್ಲಿ ಇದ್ದು ವಿಷಯಗಳನ್ನು ಭೋಗಿಸುವವನು ಅವನೇ. ಆದರೆ ಭಗವಂತ ಸುಖಮಯನು. ಭಕ್ತರಿಗೆ ಭಾಗ್ಯವನ್ನು ನೀಡುವವನು.

17.
ನಿತ್ಯನಿಗಮಾತೀತ ನಿರ್ಗುಣ ಭೃತ್ಯವತ್ಸಲ ಭಯವಿನಾಶನ |
ಸತ್ಯಕಾಮ ಶರಣ್ಯ ಶ್ಯಾಮಲ ಕೋಮಲಾಂಗ ಸುಖಿ ||
ಮತ್ತನಂದದಿ ಮರ್ತ್ಯರ ಒಳ ಹೊರಗೆ ಎತ್ತ ನೋಡಲು ಸುತ್ತುತ ಇಪ್ಪನು |
ಅತ್ಯಧಿಕ ಸಂತೃಪ್ತ ತ್ರಿಜಗದ್ವ್ಯಾಪ್ತ ಪರಮಾಪ್ತ ||
ಅರ್ಥ: ವೇದಗಳಿಗೆ ನಿಲುಕದ, ಗುಣಾತೀತನಾದ ಹರಿ ತನ್ನ ಭಕ್ತರನ್ನು ಪ್ರೀತಿಸುತ್ತಾನೆ. ಮನುಷ್ಯರ ಒಳ-ಹೊರಗೆ ಎಲ್ಲೆಲ್ಲೂ ವ್ಯಾಪಿಸಿರುವ ಪರಮಾತ್ಮನು ಸದಾ ಸಂತೃಪ್ತನಾಗಿದ್ದಾನೆ.

18.
ಪವಿ ಹರಿನ್ಮಣಿ ವಿದ್ರುಮದ ಸಚ್ಛವಿಗಳ ಅಂದದಿ |
ರಾಜಿಸುತ ಮಾಧವ ನಿರಂತರ ಮಾನವ ದಾನವರೊಳು ಇದ್ದು ||
ತ್ರಿವಿಧ ಗುಣ ಕರ್ಮ ಸ್ವಭಾವವ ಪವನಮುಖ ದೇವಾಂತರಾತ್ಮಕ |
ದಿವಸ ದಿವಸದಿ ವ್ಯಕ್ತಮಾಡುತಲಿ ಅವರೊಳಿದ್ದು ಉಣಿಪ ||
ಅರ್ಥ: ಹರಿಯು ಮಾನವ-ದಾನವರೊಳಗೆ ಇದ್ದು, ವಾಯುದೇವರ ಮೂಲಕ ಅವರವರ ಗುಣ-ಕರ್ಮಗಳಿಗೆ ತಕ್ಕ ಫಲಗಳನ್ನು ಪ್ರತಿದಿನ ನೀಡುತ್ತಾನೆ.

19.
ಅಣು ಮಹತ್ತಿನೊಳು ಇಪ್ಪ ಘನ ಪರಮಣುವಿನೊಳು ಅಡಗಿಸುವ |
ಸೂಕ್ಷ್ಮವ ಮುಣುಗಿಸುವ ತೇಲಿಸುವ ಸ್ಥೂಲಗಳ ಅವನ ಮಾಯವಿದು ||
ದನುಜ ರಾಕ್ಷಸರು ಎಲ್ಲರು ಇವನೊಳು ಮುನಿದು ಮಾಡುವುದೇನು |
ಉಲೂಖಲ ಒನಕೆಗಳು ಧಾನ್ಯಗಳ ಹಣಿವಂದದಲಿ ಸಂಹರಿಪ ||
ಅರ್ಥ: ಹರಿಯ ಮಾಯೆ ಅಪಾರ. ಅಣುವಿಗಿಂತ ಚಿಕ್ಕದಾದ, ಮಹತ್ತಿಗಿಂತ ದೊಡ್ಡದಾದ ವಸ್ತುಗಳನ್ನು ಅವನು ನಿಯಂತ್ರಿಸುತ್ತಾನೆ. ರಾಕ್ಷಸರು ಅವನಿಗೆ ಏನು ಮಾಡಲು ಸಾಧ್ಯ? ಧಾನ್ಯಗಳನ್ನು ಕುಟ್ಟುವಂತೆ ಅವರನ್ನು ಸಂಹರಿಸುತ್ತಾನೆ.

20.
ದೇವ ಮಾನವ ದಾನವರು ಎಂದು ಈ ವಿಧದಲಿ ಆವಾಗಲಿ ಇಪ್ಪರು |
ಮೂವರೊಳಗೆ ಇವಗೆ ಇಲ್ಲ ಸ್ನೇಹ ಉದಾಸೀನ ದ್ವೇಷ ||
ಜೀವರ ಅಧಿಕಾರ ಅನುಸಾರದಲಿ ಈವ ಸುಖ ಸಂಸಾರ ದುಃಖವ |
ತಾ ಉಣದಲೆ ಅವರವರಿಗೆ ಉಣಿಸುವ ನಿರ್ಗತಾಶನನು ||
ಅರ್ಥ: ದೇವ-ಮಾನವ-ದಾನವರ ಮೇಲೆ ಹರಿಗೆ ಪಕ್ಷಪಾತವಿಲ್ಲ. ಜೀವರ ಯೋಗ್ಯತೆಗನುಗುಣವಾಗಿ ಸುಖ-ದುಃಖಗಳನ್ನು ನೀಡುತ್ತಾನೆಯೇ ಹೊರತು, ಅವನು ಸ್ವತಃ ಅದನ್ನು ಅನುಭವಿಸುವುದಿಲ್ಲ.

21.
ಎಲ್ಲಿ ಕೇಳಿದರೆ ಎಲ್ಲಿ ನೋಡಿದರೆ ಎಲ್ಲಿ ಬೇಡಿದರೆ ಎಲ್ಲಿ ನೀಡಿದರೆ |
ಎಲ್ಲಿ ಓಡಿದರೆ ಎಲ್ಲಿ ಆಡಿದರೆ ಅಲ್ಲೇ ಇರುತಿಹನು ||
ಬಲ್ಲಿದರಿಗೆ ಅತಿ ಬಲ್ಲಿದನು ಸರಿಯಿಲ್ಲ ಇವಗೆ ಅಲ್ಲಿ ನೋಡಲು |
ಖುಲ್ಲಮಾನವರೊಲ್ಲನು ಅಪ್ರತಿಮಲ್ಲ ಜಗಕೆಲ್ಲ ||
ಅರ್ಥ: ಎಲ್ಲೆಲ್ಲೂ ವ್ಯಾಪಿಸಿರುವ ಭಗವಂತನಿಗೆ ಸಮಾನರು ಯಾರೂ ಇಲ್ಲ. ಅವನು ಸರ್ವಶಕ್ತ, ಆದರೆ ಅಹಂಕಾರಿಗಳಾದ ಕ್ಷುದ್ರ ಮಾನವರಿಗೆ ಅವನು ಒಲಿಯುವುದಿಲ್ಲ.

22.
ತಪ್ತ ಲೋಹವು ನೋಳ್ಪ ಜನರಿಗೆ ಸಪ್ತ ಜಿಹ್ವವ ತೆರದಿ ತೋರ್ಪದು |
ಲುಪ್ತ ಪಾವಕ ಲೋಹ ಕಾಂಬುದು ಪೂರ್ವದೋಪಾದಿ ||
ಸಪ್ತವಾಹನ ನಿಖಿಳ ಜನರೊಳು ವ್ಯಾಪ್ತನು ಆದುದರಿಂದ |
ಸರ್ವರೂ ಆಪ್ತರು ಆಗಿಹರು ಎಲ್ಲ ಕಾಲದಿ ಕೈಕೊಂಡು ||
ಅರ್ಥ: ಕಾದ ಕಬ್ಬಿಣದಲ್ಲಿ ಬೆಂಕಿ ಅಡಗಿರುವಂತೆ, ಎಲ್ಲರಲ್ಲೂ ಭಗವಂತ ಅಡಗಿದ್ದಾನೆ. ಸೂರ್ಯನಂತೆ ಎಲ್ಲರಲ್ಲೂ ವ್ಯಾಪಿಸಿರುವ ಅವನು ಎಲ್ಲರಿಗೂ ಆಪ್ತನು.

23.
ವಾರಿದನು ಮಳೆಗರೆಯೆ ಬೆಳೆದಿಹ ಭೂರುಹಂಗಳು ಚಿತ್ರ ಫಲರಸ |
ಬೇರೆ ಬೇರೆ ಇಪ್ಪಂತೆ ಬಹುವಿಧ ಜೀವರೊಳಗೆ ಇದ್ದು ಮಾರಮಣನು ||
ಅವರವರ ಯೋಗ್ಯತೆ ಮೀರದಲೆ ಗುಣಕರ್ಮಗಳ ಅನುಸಾರ ನಡೆಸುವ |
ದೇವನಿಗೆ ವೈಷಮ್ಯವೆಲ್ಲಿಹುದೋ ||
ಅರ್ಥ: ಒಂದೇ ಮಳೆ ನೀರು ಹಲವು ಮರಗಳಿಗೆ ವಿವಿಧ ಫಲಗಳನ್ನು ನೀಡುವಂತೆ, ಭಗವಂತ ಎಲ್ಲ ಜೀವರಲ್ಲಿ ಇದ್ದು ಅವರವರ ಕರ್ಮಕ್ಕೆ ತಕ್ಕ ಫಲ ನೀಡುತ್ತಾನೆ. ಅವನಲ್ಲಿ ವೈಷಮ್ಯವಿಲ್ಲ.

24.
ವಾರಿಜಾಪ್ತನ ಕಿರಣ ಮಣಿಗಳ ಸೇರಿ ತತ್ತತ್ ವರ್ಣಗಳನು |
ವಿಕಾರಗೈಸದೆ ನೋಳ್ಪರಿಗೆ ಕಂಗೊಳಿಸುವಂದದಲಿ ||
ಮಾರಮಣ ಲೋಕತ್ರಯದೊಳು ಇಹ ಮೂರುವಿಧ ಜೀವರೊಳಗೆ |
ಇದ್ದು ವಿಹಾರಮಾಡುವನು ಅವರ ಯೋಗ್ಯತೆ ಕರ್ಮವ ಅನುಸರಿಸಿ ||
ಅರ್ಥ: ಸೂರ್ಯನ ಕಿರಣಗಳು ಬೇರೆ ಬೇರೆ ಬಣ್ಣಗಳನ್ನು ತೋರಿಸಿದರೂ ಅವುಗಳಿಗೆ ಯಾವುದೇ ಬದಲಾವಣೆ ಬರುವುದಿಲ್ಲ. ಅದರಂತೆ ಭಗವಂತ ಜೀವರೊಳಗೆ ಇದ್ದರೂ ನಿರ್ವಿಕಾರಿ.

25.
ಜಲವನು ಅಪಹರಿಸುವ ಘಳಿಗೆ ಬಟ್ಟಲನು ಉಳಿದು |
ಜಯಘಂಟೆ ಕೈಪಿಡಿದು ಎಳೆದು ಹೊಡೆವಂದದಲಿ ||
ಸಂತತ ಕರ್ತೃ ತಾನಾಗಿ ಹಲಧರಾನುಜ ಪುಣ್ಯ ಪಾಪದ ಫಲಗಳನು |
ದೇವಾಸುರರ ಗಣದೊಳು ವಿಭಾಗವ ಮಾಡಿ ಉಣಿಸುತ ಸಾಕ್ಷಿಯಾಗಿಪ್ಪ ||
ಅರ್ಥ: ಎಲ್ಲಾ ಕರ್ಮಗಳಿಗೂ ಸಾಕ್ಷಿಯಾಗಿ ನಿಂತು, ದೇವ-ಅಸುರರಿಗೆ ಅವರವರ ಕರ್ಮ ಫಲಗಳನ್ನು ಹಂಚುವವನು ಭಗವಂತನೇ.

26.
ಪೊಂದಿಕೊಂಡಿಹ ಸರ್ವರೊಳು ಸಂಬಂಧವಾಗದೆ |
ಸಕಲಕರ್ಮವ ಅರಂದದಲಿ ತಾ ಮಾಡಿಮಾಡಿಪ ತತ್ಫಲಗಳುಣದೆ ||
ಕುಂದದೆ ಅಣುಮಾಹತ್ತು ಎನಿಪ ಘಟಮಂದಿರದಿ ಸರ್ವತ್ರ ತುಂಬಿಹ |
ಬಾಂದಳದ ತೆರೆದಂತೆ ಇರುತಿಪ್ಪನು ರಮಾರಮಣ ||
ಅರ್ಥ: ಎಲ್ಲೆಲ್ಲೂ ತುಂಬಿದ್ದರೂ ಅವನು ಕರ್ಮಗಳಿಗೆ ಅಂಟಿಕೊಳ್ಳುವುದಿಲ್ಲ. ಆಕಾಶದಂತೆ ನಿರ್ಲಿಪ್ತವಾಗಿ ಎಲ್ಲವನ್ನು ನಿಯಂತ್ರಿಸುತ್ತಾನೆ.

27.
ಕಾದ ಕಬ್ಬಿಣ ಹಿಡಿದು ಬಡಿಯಲು ವೇದನೆಯು ಲೋಹಗಳಿಗೆ ಅಲ್ಲವೆ |
ಆದುದೇನೈ ಅನಳಗಾ ವ್ಯಥೆ ಏನು ಮಾಡಿದರು ||
ಆದಿದೇವನು ಸರ್ವ ಜೀವರ ಕಾದುಕೊಂಡಿಹನು ಒಳಹೊರಗೆ |
ದುಃಖಾದಿಗಳು ಸಂಬಂಧವಾಗುವವೇನೋ ಚಿನ್ಮಯಗೆ ||
ಅರ್ಥ: ಕಬ್ಬಿಣ ಕಾದಾಗ ತೊಂದರೆ ಕಬ್ಬಿಣಕ್ಕೆ, ಬೆಂಕಿಗಲ್ಲ. ಹಾಗೆಯೇ ಜಗತ್ತಿನ ಕಷ್ಟಗಳು ಜೀವಿಗೇ ಹೊರತು, ಜ್ಞಾನಮಯನಾದ ಹರಿಗೆ ಅಲ್ಲ.

28.
ಮಳಲ ಮನೆಗಳ ಮಾಡಿ ಮಕ್ಕಳು ಕಾಲದಲಾಡಿ ಮೋದದಿ ತುಳಿದು ಕೆಡಿಸುವ ತೆರದಿ |
ಲಕ್ಷ್ಮೀರಮಣ ಲೋಕಗಳ ಹಲವು ಬಗೆಯಲಿ ನಿರ್ಮಿಸುವ ||
ನಿಶ್ಚಲನು ತಾನಾಗಿದ್ದು ಸಲಹುವ |
ಎಲರುಣಿಯವೋಳ್ ನುಂಗುವಗೆ ಎಲ್ಲಿಹುದೋ ಸುಖ ದುಃಖ ||
ಅರ್ಥ: ಮಕ್ಕಳು ಮರಳಿನ ಮನೆ ಮಾಡಿ ಆಟವಾಡಿ ಕೆಡಿಸುವಂತೆ, ಭಗವಂತ ಜಗತ್ತನ್ನು ಸೃಷ್ಟಿಸಿ, ಲಯಗೊಳಿಸುತ್ತಾನೆ. ಅವನಿಗೆ ಸುಖ-ದುಃಖಗಳಿಲ್ಲ.

29.
ವೇಷಭಾಷೆಗಳಿಂದ ಜನರ ಪ್ರಮೋಷಗೈಸುವ ನಟಪುರುಷನೋಳ್ |
ದೋಷದೂರನು ಲೋಕದೊಳು ಬಹುರೂಪ ಮಾತಿನಲಿ ತೋಷಿಸುವನು ||
ಅವರವರ ಮನದ ಅಭಿಲಾಷೆಗಳ ಪೂರೈಸುತ ಅನುದಿನ ಪೋಷಿಸುವ |
ಪೂತಾತ್ಮ ಪೂರ್ಣ ಆನಂದ ಜ್ಞಾನಮಯ ||
ಅರ್ಥ: ನಟನು ಬೇರೆ ಬೇರೆ ವೇಷ ಹಾಕಿದರೂ ಅವನು ಬೇರೆಯೇ ಆಗಿರುವಂತೆ, ಭಗವಂತ ಲೋಕದಲ್ಲಿ ಎಲ್ಲ ರೂಪಗಳನ್ನು ಧರಿಸಿದರೂ ದೋಷರಹಿತ ಮತ್ತು ಆನಂದಮಯ.

30.
ಅಧಮ ಮಾನವನು ಓರ್ವ ಮಂತ್ರೌಷಧಗಳನು ತಾನರಿತು |
ಪಾವಕೋದಕಗಳ ಸಂಬಂಧವಿಲ್ಲದಲಿಪ್ಪನು ಅದರೊಳಗೆ ||
ಪದುಮಜ ಅಂಡ ಉದರನು ಸರ್ವರ ಹೃದಯದೊಳಗೆ ಇರೆ |
ಕಾಲಗುಣಕರ್ಮದ ಕಲುಷ ಸಂಬಂಧವಾಗುವುದೇ ನಿರಂಜನಗೆ ||
ಅರ್ಥ: ಮಂತ್ರ ತಿಳಿದವನು ಬೆಂಕಿ-ನೀರಿನಿಂದ ಬಾಧಿತನಾಗದಂತೆ, ಭಗವಂತ ಜಗತ್ತಿನಲ್ಲಿದ್ದರೂ ಕರ್ಮದ ಕಲುಷದಿಂದ ದೂರ.

31.
ಒಂದು ಗುಣದೊಳು ಅನಂತ ಗುಣಗಳು ಒಂದು ರೂಪದೊಳು ಇಹವು |
ಲೋಕಗಳ ಒಂದೇ ರೂಪದಿ ಧರಿಸಿ ತದ್ಗತ ಪದಾರ್ಥದ ಒಳ ಹೊರಗೆ ||
ಬಾಂದಳದೊಳಿದ್ದು ಬಹು ಪೆಸರಿಂದ ಕರೆಸುತ |
ಪೂರ್ಣ ಜ್ನಾನಾನಂದಮಯ ಪರಿಪರಿ ವಿಹಾರವ ಮಾಡಿ ಮಾಡಿಸುವ ||
ಅರ್ಥ: ಹರಿಯ ಒಂದೊಂದು ಗುಣದಲ್ಲೂ ಅನಂತ ಗುಣಗಳಿವೆ. ಅವನು ಒಂದೇ ರೂಪದಲ್ಲಿ ಜಗತ್ತನ್ನೆಲ್ಲಾ ವ್ಯಾಪಿಸಿ ಲೀಲೆಗಳನ್ನು ನಡೆಸುತ್ತಾನೆ.

32.
ಎಲ್ಲರೊಳು ತಾನಿಪ್ಪ ತನ್ನೊಳಗೆ ಎಲ್ಲರನು ಧರಿಸಿಹನು |
ಅಪ್ರತಿಮಲ್ಲ ಮನ್ಮಥಜನಕ ಜಗದ ಆದಿ ಅಂತ ಮಧ್ಯಗಳ ಬಲ್ಲ ||
ಬಹುಗುಣ ಭರಿತ ದಾನವ ದಲ್ಲಣ ಜಗನ್ನಾಥ ವಿಠಲ |
ಸೊಲ್ಲು ಲಾಲಿಸಿ ಸ್ತಂಭದಿಂದಲಿ ಬಂದ ಭಕುತನಿಗೆ ||
ಅರ್ಥ: ಎಲ್ಲರಲ್ಲೂ ಇರುವವನು, ಎಲ್ಲವನ್ನು ತನ್ನಲ್ಲಿ ಧರಿಸಿರುವವನು ಜಗನ್ನಾಥ ವಿಠಲ. ಭಕ್ತನ ಕರೆಗೆ ಓಗೊಟ್ಟು ಸ್ತಂಭದಿಂದ ಪ್ರತ್ಯಕ್ಷನಾದ ನರಸಿಂಹದೇವನೇ ನಮ್ಮ ರಕ್ಷಕ.
***


The 3rd Sandhi of the Harikathamritasara, known as the Vyapti Sandhi (The Sandhi of Omnipresence), is a beautiful exploration of the Lord’s omnipresence and His state of being Nirlipta (unaffected/detached).

Omnipresence and Detachment: The Lord resides within every atom of the universe—in men, women, the elements, time, and nature itself. Like thread woven through cloth, He is in everything, yet He remains completely untainted and detached, much like the sky which surrounds everything but is not touched by anything.

The Mover of Senses: The Lord dwells within our five sensory and action organs as the inner-dweller (Bimba). He is the one who conducts all our actions, often without us realizing it. While He experiences the world through our senses, He remains inherently blissful and untouched by the nature of those experiences.

Impartial Dispenser of Karma: Using the analogy of rain—which falls equally but produces different fruits depending on the tree—the Sandhi explains that the Lord grants happiness or sorrow based solely on an individual soul's past karma and inherent nature (Yogyata). He has no personal love, hatred, or bias toward any being.

Profound Analogies:

The Iron and Fire: Just as fire resides in red-hot iron, but the heat/pain is felt by the iron when struck—not the fire—so too, the sufferings of the world affect the living soul, but never the Lord residing within.

The Sun and Gems: Just as sunlight passing through colored gems takes on the appearance of the gem's color without the light itself changing, the Lord manifests through different beings without losing His divine nature.

The World as Divine Play: The creation, sustenance, and destruction of the universe are described as a form of divine play (Lila). Much like children building sandcastles, playing, and joyfully destroying them, the Lord creates and dissolves the world with total ease and indifference.

Summary:
The Vyapti Sandhi aims to instill the awareness that the Divine is present in every action, every object, and every moment. True knowledge (Jnana) is realized when one understands that the Lord is the true doer, shedding the ego of self-authorship, and recognizing His presence in all things at all times.

Meaning

1.
Purusharūpatraya purāṇa purusha purushōttama |
Ksharākshara purusha pūjita pāda pūrṇānanda jñānamaya ||
Purushasūkta sumēya tattat purusha hrutpushkara nilaya |
Mahāpurusha ajāṇḍa antaradi bahiradi vyāpta nirlipta ||
Meaning: The Lord, who has three forms (Aniruddha, Pradyumna, Sankarshana), is the ancient Purushottama. He is the master of both the perishable and imperishable worlds. He dwells within the lotus of every person's heart and, while pervading the entire universe both inside and out, He remains completely unaffected (nirlipta).

2.
Strī napunsaka purusha bhū salila anala gagana mana shashi |
Bhānu kāla guṇa prakrutiyoḷage ondu tānalla ||
Ēnu ivana mahāmahimē kaḍegāṇaru ajabhava shakra mukharu |
Nidhānisalu mānavarige aḷavaḍuvudē vicārisalu ||
Meaning: He is present in women, men, neuter beings, the five elements, the mind, the moon, the sun, time, and nature, yet He is distinct from all of them. Even Brahma, Shiva, and Indra cannot fathom His greatness; how can mere mortals hope to comprehend Him?

3.
Gandha rasarūpa sparsha shabda ondu tānalla |
Adaradara pesarinda kare-suta jīvarige tarpakanu tānāgi ||
Pondikoṇḍiha parama karuṇāsindhu shāshvata |
Manave modalāda indriyangaloḷage iddu bhōgisutihanu vishayagala ||
Meaning: He is not the smell, taste, form, touch, or sound themselves, but He pervades them to provide nourishment to living beings. As the eternal ocean of mercy, He dwells within the mind and senses to experience these sensory objects.

4.
Shravaṇa nayana ghrāṇa tvagrasana ivagaloḷu |
Vākpāṇi pādādi avayavagaloḷu tadguṇagaloḷu tatpatigaḷoḷage ||
Pravitatanu tānāgi krutipati vividha karmava māḍi māḍisi |
Bhavake kāraṇanāgi tirugisutihanu tiḷisadale ||
Meaning: He resides in our five senses of perception and five senses of action. He conducts all actions through us, making us go through the cycle of birth and death without our realization.

5.
Guṇiguṇagaloḷage iddu guṇiguṇanu enisanu guṇabaddhanāgade |
Guṇaja puṇyāpuṇya phala brahmādichētanake uṇisuta avar oḷagiddu ||
Vrujina ardana cidānandaika dēhavanu |
Koṇege sacharāchara jagadbhukuvenipanu avyayanu ||
Meaning: He resides in all attributes and substances without being bound by them. He awards the fruits of karma (good and bad) to all beings from Brahma downwards, and at the end, He consumes the entire animate and inanimate world.

6.
Vidyē tānenesikoḷba aniruddhadevanu |
Sarvajīvara buddhiyali tāniddu krutipati buddhiyennisuanu ||
Siddhiyennisuva sankarushana prasiddhanāmaka vāsudēva |
Anavadhya rūpa chatushtayagala aritavane paṇḍitanu ||
Meaning: Lord Aniruddha is the presiding deity of knowledge who dwells in the intellect of all beings. One who knows the four perfect forms—Aniruddha, Sankarshana, Pradyumna, and Vasudeva—is the true scholar.

7.
Tanuchatushtayagaloḷu nārāyaṇanu hrutkamalākhya simhāsanadoḷu |
Aniruddhādi rūpagaḷinda shōbhisuta ||
Tanage tānē sēvya sēvakanenesi sēvāsakta suraroḷage |
Anavarata nelesiddu sēveyakomba navarantē ||
Meaning: Lord Narayana resides on the throne of the heart. Manifesting through His forms like Aniruddha, He Himself becomes the servant and the served, eternally accepting service through the gods.

8.
Jāgara svapnangaḷoḷu varabhōgīshayananu bahu prakāra vibhāgagaisi |
Niramshajīvara chitsharīravanu bhōgavittu ||
Sushuptikāladi sāgarava nadi kūḍuvantē |
Viyōgarahitanu amshagalanu ēkatravaidisuv ||
Meaning: In the waking and dreaming states, He divides our experiences. In the state of deep sleep (Sushupti), just as rivers merge into the ocean, He draws all souls into Himself without separation.

9.
Bhāryarind oḍagūḍi kāraṇakārya vastugaḷalli |
Prērakaprērya rūpagaḷinda paṭatantu gaḷavoḷidduddu ||
Sūrya kiraṇagaḷantē tannaya vīryadindali koḍuta koḷutiha |
Anāryarige ītana vihāravu gōcharipudēnō ||
Meaning: Just as the threads constitute the cloth, He pervades all cause-and-effect objects. Like sunrays, He gives and takes with His energy. The ignorant cannot see His divine play.

10.
Janaka tanna ātmajage vara bhūshaṇadukūlava toḍisi |
Tā vandaneya kaikōḷuta harasuta harushabaḍuvantē ||
Vanaruhēkshaṇa pūjya pūjakanu enisi pūjāsādhana |
Padārthavanu tanage tānāgi phalagaḷanīva bhajakarige ||
Meaning: Just as a father dresses his child and delights in giving him gifts, the lotus-eyed Lord Himself becomes the worshiper, the objects of worship, and the fruit of the worship for His devotees.

11.
Tande bahu sambhramadi tannaya bandhu baḷagava nerahi |
Maduveya nandanage tā māḍi maneyoḷagiḍuva teradantē ||
Indirādhava tanna icchyalinda guṇagaḷa chētanake sambandhagaisi |
Sukhāsukhātmaka samsrutiyoḷu iḍuva ||
Meaning: Just as a father performs his son's marriage and settles him in life, Lord Hari, by His will, links the souls to their respective qualities and places them in the cycle of worldly happiness and sorrow.

12.
Truṇa kruta ālayadoḷage pōge sandanisi prati chidradali poramattu |
Anaḷa niravanu tōri tōradalippa teradantē ||
Vanajāṇḍadoḷu akhila jīvara tanuvina oḷa horage iddu |
Kāṇisade animishēshanu sakala karmava māḷpanu avar antē ||
Meaning: Just as fire exists in every pore of a grass hut, yet remains unseen until it flares up, the Lord dwells inside and outside every living body, unseen, conducting all their actions.

13.
Pādapagala aḍige eraye salilavu tōdu kambigaḷu ubbi |
Pushpa svādu phalava īvandadali sarvēshvaranu ||
Janara ārādhaneya kaikōṇḍu brahma bhavādigaḷa nāmadali phalavittu |
Ādarisanu tanna mahimeya tōragoḍa janakē ||
Meaning: Just as watering the root of a tree yields flowers and fruits, the Lord accepts the worship offered to various deities (Brahma, Shiva, etc.) and bestows the fruits, though He rarely reveals His true glory to the common man.

14.
Shrutitatigaḷige gōcharisada apratima ajānandātmanu achyuta vitata |
Vishvādhāra vidyādhīsha vidhi janaka ||
Pratidivasa chētanaroḷage prākruta purushanandadali sancharisuta |
Niyamya niyāmakanu tānāgi santipa ||
Meaning: He is the peerless, eternal source of bliss, beyond the reach of the Vedas. Yet, He walks within all beings like an ordinary person, acting as the controller of all, while also being the subject of His own control.

15.
Mana vishayadoḷage irisi vishayava manadoḷage nelegoḷisi |
Balu nūtanavu susamīchīnavidu upādēyavendensisi ||
Kanasilādaru tanna pādada nenevanu īyade |
Sarvaroḷagiddu anubhavisuvanu sthūla vishayava vishvanendensisi ||
Meaning: He places the mind in sensory objects and objects in the mind, making them seem new and desirable. He does not grant His grace to those who do not remember His feet even in dreams; instead, He dwells in all to experience the gross material world.

16.
Tōdakanu tānāgi mana modalāda karaṇadoḷu iddu vishayava naiduvanu |
Nijapūrṇa sukhamaya grāhya grāhakanu ||
Vēda vēdyanu tiḷiyadavanaōpādi bhuñjisuta |
Ellaroḷage āhlāda paḍuvanu bhaktavatsala bhāgyasampanna ||
Meaning: He resides in the mind and senses, experiencing objects, yet He is eternally full of bliss. Though He is the one meant to be known by the Vedas, He enjoys as if He is unaware of everything, and as the lover of devotees, He takes delight in all.

17.
Nityanigamātīta nirguṇa bhṛtyavatsala bhayavināshana |
Satyakāma sharaṇya shyāmala kōmalāṅga sukhi ||
Mattanandadi martyara oḷa horage etta nōḍalu suttuta ippanu |
Atyadhika santrupta trijagadvyāpta paramāpta ||
Meaning: He is beyond the Vedas, free from material attributes, and loves His servants. He destroys fear, is the refuge of the righteous, and has a beautiful dark-blue form. He dwells everywhere inside and outside humans, filling the three worlds, fully satisfied, and is the ultimate well-wisher.

18.
Pavi harinmaṇi vidrumada sacchavigaḷa andadi |
Rājisuta mādhava nirantara mānava dānavaroḷu iddu ||
Trividha guṇa karma svabhāva pavanamukha dēvāntarātmakada |
Divasa divasadi vyaktamāḍutali avar oḷagiddu uṇipa ||
Meaning: Shining like precious gems, Lord Madhava dwells within humans and demons. Through Vayu and other deities, He manifests their innate three-fold qualities (satva, rajas, tamas) and karmic tendencies day by day, awarding them their respective experiences.

19.
Aṇu mahattinoḷu ippa ghana paramāṇuvinoḷu aḍagisuva |
Sūkshmava muṇugisuva tēlisua sthūlagaḷa avana māyavidu ||
Danuja rākshasaru ellaru ivanoḷu munidu māḍuvadēnu |
Ulūkhala oṇakegaḷu dhānyagaḷa haṇivandadali samharipa ||
Meaning: His Maya is such that He can contain the infinite in the infinitesimal. He makes the subtle sink and the gross float. What can the demons do against Him? He destroys them just as a mortar and pestle crush grains.

20.
Dēva mānava dānavaru endu ī vidhadali āvāgali ipparu |
Mūvaroḷage ivage illa snēha udāsīna dvēsha ||
Jīvara adhikāra anusāradali īva sukha samsāra duḥkhava |
Tā uṇadale avaravarige uṇisuva nirgatāshananu ||
Meaning: Gods, humans, and demons exist in their respective categories. He has no love, indifference, or hatred toward them. Based on their inherent eligibility, He dispenses worldly happiness or sorrow to them without Himself being affected by those experiences.

21.
Elli kēḷidare elli nōḍidare elli bēḍidare elli nīdidare |
Elli ōḍidare elli āḍidare allē irutihanu ||
Ballidarige ati ballidanu sariyilla ivage alli nōḍalu |
Khullamānavaroḷlanu apratimalla jagakella ||
Meaning: Wherever one listens, sees, asks, gives, runs, or plays, He is right there. He is the greatest of the great, and there is no one equal to Him. He does not favor the petty-minded; He is the unrivaled champion of the entire universe.

22.
Tapta lōhavu nōḷpa janarige sapta jihvava teradi tōrpadu |
Lupta pāvaka lōha kāmbudu pūrva-dōpādi ||
Saptavāhana nikhila janaroḷu vyāptanu ādudarinda |
Sarvarū āptaru āgiharu ella kāladi kaikōṇḍu ||
Meaning: Just as fire appears to be the iron itself when heated, the Lord is present within everyone. Because He (the Lord of the seven-horsed chariot, the Sun) is pervasive in all, He is the beloved of everyone at all times.

23.
Vāridanu maḷegareye beḷedihabhūruhaṅgaḷu citra phalarasa |
Bērē bērē ippantē bahuvidha jīvaroḷage iddu māramaṇanu ||
Avaravara yōgyate mīradale guṇakarmagaḷa anusāra naḍesuva |
Dēvanige vaishamya-yellihuḍō ||
Meaning: Just as the same rain produces different fruits on different trees, the Lord resides in various types of souls and guides them according to their individual qualities and karmas. How can there be any partiality in Him?

24.
Vārijāptana kiraṇa maṇigaḷa sēri tattat varṇagaḷanu |
Vikāragaisade nōḷparige kaṅgoḷisuvandadali ||
Māramaṇalu lōkatrayadoḷu iha mūruvidha jīvaroḷage |
Iddu vihāramāḍuvanu avar yōgyate karmava anusarisi ||
Meaning: Just as sunlight passes through different colored gems without itself changing color, the Lord dwells in the three types of souls and conducts His divine play, respecting their eligibility and past actions.

25.
Jalavanu apaharisuvaghaḷige baṭṭalanu uḷidu |
Jayaghaṇṭe kaipidiḍu eḷedu hoḍevandadali ||
Santata kartru tānāgi haladharānuja puṇya pāpada phalagaḷanu |
Dēvāsurara gaṇadoḷu vibhāgava māḍi uṇisuta sākshiyāgippa ||
Meaning: Just as a person might use a ladle to take water or strike a bell, Lord Krishna, the brother of Balarama, acts as the eternal doer and witness, distributing the fruits of good and evil deeds among gods and demons.

26.
Pondikoṇḍiha sarvaroḷu sambandhavāgade |
Sakalakarmava arandadali tā māḍimāḍipa tatphalagaḷuṇade ||
Kundade aṇumāhattu enipa ghaṭamandiradi sarvatra tumbiha |
Bāndaḷada teradante irutippanu ramāramaṇanu ||
Meaning: He is connected to all, yet remains unattached. He orchestrates all actions without Himself consuming the fruits of those karmas. He remains everywhere, from the infinitesimal to the infinite, like the all-encompassing sky.

27.
Kāda kabbiṇa hiḍidu baḍiyalu vēdaneyu lōhagaḷige allave |
Ādudēnai anaḷagā vyathe ēnu māḍidaru ||
Ādidēvanu sarva jīvara kādukoṇḍihanu oḷahorage |
Duḥkhādigaḷu sambandhavāguvavēnō cinmayage ||
Meaning: When red-hot iron is beaten, the pain is for the iron, not the fire. Similarly, though He protects all beings from within and without, can suffering or sorrow ever touch Him, the Lord of Pure Consciousness?

28.
Maḷala manegaḷa māḍi makkaḷu kāladalāḍi mōdadi tuḷidu keḍisuva teradi |
Lakshmīramaṇa lōkagaḷa halavu bageyali nirmisuva ||
Nishchalanu tānāgiddusalahuva |
Elaruṇiyavoḷ nuṅguvage ellihuḍō sukha duḥkha ||
Meaning: Just as children build sandcastles, play, and then destroy them with joy, the Lord creates and dissolves worlds in many ways. While He remains changeless, how can He be subject to happiness or sorrow, when He consumes all at the end?

29.
Vēshabhāshegaḷinda janara pramōshagaisuva naṭapurushanōḷ |
Dōshadūranu lōkadoḷu bahurūpa mātinalli tōshisuvanu ||
Avaravara manada abhilāshegaḷa pūraisuṭa anudina pōshisuva |
Pūtātma pūrṇa ānanda jñānamaya ||
Meaning: Like an actor who assumes different roles and costumes to delight the audience, the faultless Lord plays many roles in the world. He fulfills the desires of everyone and sustains them daily; He is the pure, blissful, and all-knowing Soul.

30.
Adhama mānavanu ōrva mantrauṣadhagaḷanu tānaritu |
Pāvakōdakagaḷa sambandhavilladal ippanu adaroḷage ||
Padumaja aṇḍa udaranu sarvara hṛdayadoḷage ire |
Kālaguṇakarmada kalusha sambandhavāguvadē nirañjanage ||
Meaning: Just as a man who knows the right mantras can handle fire or water without harm, the Lord, in whose stomach lies the creator (Brahma) and the universe, remains in all hearts without being touched by the impurities of time, qualities, or karma.

31.
Ondu guṇadoḷu ananta guṇagaḷu ondu rūpadoḷu ihavu |
Lōkagaḷa ondē rūpadi dharisi tadgata padārthada oḷa horage ||
Bāndaḷadoḷiddubahu pesarinda karesuta |
Pūrṇa jñānānandamaya paripari vihārava māḍi māḍisuva ||
Meaning: In each of His qualities exist infinite qualities, and in His single form exist all forms. He supports the universe, dwells within and outside all objects, is called by many names, and is the blissful One who performs and orchestrates all divine plays.

32.
Ellaroḷu tān ippa tann oḷage ellaranu dharisihanu |
Apratimalla manmathajanaka jagada ādi anta madhyagaḷa balla ||
Bahuguṇa bharita dānava dallaṇa jagannātha viṭhala |
Soḷlu lālisi stambhadindali banda bhakutanige ||
Meaning: He resides in all, and He contains all within Himself. He is the peerless One, the father of Manmatha (Kamadeva), and He knows the beginning, end, and middle of the universe. He is the Lord filled with infinite qualities, the destroyer of demons—Jagannatha Vithala, who heard the call and emerged from the pillar for His devotee (Prahlada).
***


harikathAmRutasAra gurugaLa karuNadindApanitu kELuve
parama BagavadBaktaru idanAdaradi kELuvudu||

puruSharUpatraya purANa puruSha puruShOttama
kSharAkShara puruSha pUjita pAda pUrNAnaMda j~jAnamaya
puruShasUkta sumEya tattat puruSha hRutpuShkara nilaya
mahApuruSha ajAnDa antaradi bahiradi vyApta nirlipta||1||

strI napuMsaka puruSha BU salila anala gagana mana SaSi
BAnu kAla guNa prakRutiyoLage ondu tAnalla
Enu ivana mahAmahime kaDegANaru ajaBava Sakra muKaru
nidhAnisalu mAnavarige aLavaDuvudE vicArisalu||2||

gandha rasarUpa sparSa Sabda ondu tAnalla
adaradara pesarinda karesuta jIvarige tarpakanu tAnAgi
pondikonDiha parama karuNAsindhu SASvata
manave modalAda iMdriyagaLoLage iddu BOgisutihanu viShayagaLa||3||

SravaNa nayana GrANa tvagrasana ivugaLoLu
vAkpANi pAdAdi avayavagaLoLu tadguNagaLoLu tatpatigaLoLage
pravitatanu tAnAgi kRutipati vividha karmava mADi mADisi
Bavake kAraNanAgi tirugisutihanu tiLisadale||4||

guNiguNagaLoLage iddu guNiguNanu enisuvanu guNabaddhanAgade
guNaja puNyApuNya Pala brahmAdicEtanake uNisuta avaroLagiddu
vRujina ardana cidAnandaika dEhavanu
konege sacarAcAra jagadBukuvenipanu avyayanu||5||

vidye tAnenesikoMba aniruddhadEvanu
sarvajIvara buddhiyali tAniddu kRutipati buddhiyenisuvanu
siddhiyenisuva sankaruShana prasiddhanAmaka vAsudEva
anavadya rUpa catuShTayagaLa aritavane panDitanu||6||

tanucatuShTayagaLoLu nArAyaNanu hRutkamalAKya siMhAsanadoLu
aniruddhAdi rUpagaLinda SOBisuta
tanage tAnE sEvya sEvakanenesi sEvAsakta suraroLage
anavarata nelesiddu sEveya koMbanavaraMte||7||

jAgara svapnangaLoLu varaBOgISayananu bahu prakAra viBAgagaisi
niraMSajIvara citSarIravanu BOgavittu
suShuptikAladi sAgarava nadi kUDuvaMte
viyOgarahitanu aMSagaLanu Ekatravaidisuva||8||

BAryarindoDagUDi kAraNakArya vastugaLalli
prerakaprErya rUpagaLinda paTatantugaLavoLiddu
sUrya kiraNagaLante tannaya vIryadindali koDuta koLutiha
anAryarige Itana vihAravu gOcaripudEnO||9||

janaka tanna Atmajage vara BUShaNadukUlava toDisi
tA vaMdaneya kaikoLuta harasuta haruShabaDuvante
vanaruhEkShaNa pUjya pUjakanu enisi pUjAsAdhana
padArthavanu tanage tAnAgi PalagaLanIva Bajakarige||10||

tande bahu saMBramadi tannaya baMdhu baLagava nerahi
maduveya nandanage tA mADi maneyoLagiDuva teradante
indirAdhava tanna iccayalinda guNagaLa cEtanake saMbandhagaisi
suKAsuKAtmaka saMsRutiyoLu iDuva||11||

tRuNa kRuta AlayadoLage pOge saMdaNisi prati Cidradali poramaTTu
anaLa niravanu tOri tOradalippa teradaMte
vanajAnDadoLu aKiLa jIvara tanuvina oLa horage iddu
kANisade animiSEShanu sakala karmava mALpanu avarante||12||

pAdapagaLa aDige ereye salilavu tOdu kaMbigaLu ubbi
puShpa svAdu Palava Ivandadali sarvESvaranu
janara ArAdhaneya kaikonDu brahma BavAdigaLa nAmadali Palavittu
Adarisuvanu tanna mahimeya tOragoDa janake||13||

SRutitatigaLige gOcarisada apratima ajAnandAtmanu acyuta vitata
viSvAdhAra vidyAdhISa vidhi janaka
pratidivasa cEtanaroLage prAkRuta puruShanandadali sancarisuta
niyamya niyAmakanu tAnAgi saMtaipa||14||

mana viShayadoLage irisi viShayava manadoLage nelegoLisi
balu nUtanavu susamIcInavidu upAdEyavendenisi
kanasilAdaru tanna pAdada nenevanu Iyade
sarvaroLagiddu anuBavisuvanu sthUla viShayava viSvanendenisi||15||

tOdakanu tAnAgi mana modalAda karaNadoLu iddu viShayava naiduvanu
nijapUrNa suKamaya grAhya grAhakanu
vEda vEdyanu tiLiyadavanOpAdi Bunjisuta
ellaroLage AhlAda paDuvanu Baktavatsala BAgyasaMpanna||16||

nityanigamAtIta nirguNa BRutyavatsala BayavinASana
satyakAma SaraNya SyAmala kOmalAMga suKi
mattanandadi martyara oLa horage etta nODalu suttuta ippanu
atyadhika saMtRupta trijagadvyApta paramApta||17||

pavi harinmaNi vidrumada sacCavigaLa andadi
rAjisuta mAdhava nirantara mAnava dAnavaroLu iddu
trividha guNa karma svaBAvava pavanamuKa dEvAntarAtmaka
divasa divasadi vyaktamADutali avaroLiddu uNipa||18||

aNu mahattinoLu ippa Gana paramaNuvinoLu aDagisuva
sUkShmava muNugisuva tElisuva sthUlagaLa avana mAyavidu
danuja rAkShasaru ellaru ivanoLu munidu mADuvudEnu
ulUKala onakegaLu dhAnyagaLa haNivandadali saMharipa||19||

dEva mAnava dAnavaru eMdu I vidhadali AvAgali ipparu
mUvaroLage ivage illa snEha udAsIna dvESha
jIvara adhikAra anusAradali Iva suKa saMsAra duHKava
tA uNadale avaravarige uNisuva nirgatASananu||20||

elli kELidare elli nODidare elli bEDidare elli nIDidare
elli ODidare elli ADidare allE irutihanu
ballidarige ati ballidanu sariyilla ivage alli nODalu
KullamAnavarollanu apratimalla jagakella||21||

tapta lOhavu nOLpa janarige sapta jihvava teradi tOrpadu
lupta pAvaka lOha kAMbudu pUrvadOpAdi
saptavAhana niKiLa janaroLu vyAptanu AdudariMda
sarvarU Aptaru Agiharu ella kAladi kaikonDu||22||

vAridanu maLegareye beLediha BUruhangaLu citra Palarasa
bEre bEre ippante bahuvidha jIvaroLage iddu mAramaNanu
avaravara yOgyate mIradale guNakarmagaLa anusAra naDesuva
dEvanige vaiShamyavellihudO||23||

vArijAptana kiraNa maNigaLa sEri tattat varNagaLanu
vikAragaisade nOLparige kangoLisuvandadali
mAramaNa lOkatrayadoLu iha mUruvidha jIvaroLage
iddu vihAramADuvanu avara yOgyate karmava anusarisi||24||

jalavanu apaharisuva GaLige baTTalanu uLidu
jayaGanTe kaipiDidu eLedu hoDevandadali
saMtata kartRu tAnAgi haladharAnuja puNya pApada PalagaLanu
dEvAsurara gaNadoLu viBAgava mADi uNisuta sAkShiyAgippa||25||

pondikonDiha sarvaroLu saMbandhavAgade
sakalakarmava araMdadali tA mADimADipa tatPalagaLuNade
kundade aNumAhattu enipa GaTamandiradi sarvatra tuMbiha
bAndaLada teredante irutippanu ramAramaNa||26||

kAda kabbiNa hiDidu baDiyalu vEdaneyu lOhagaLige allave
AdudEnai anaLagA vyathe Enu mADidaru
AdidEvanu sarva jIvara kAdukoMDihanu oLahorage
duHKAdigaLu saMbaMdhavAguvavEnO cinmayage||27||

maLala manegaLa mADi makkaLu kAladalADi mOdadi tuLidu keDisuva teradi
lakShmIramaNa lOkagaLa halavu bageyali nirmisuva
niScalanu tAnAgiddu salahuva
elaruNiyavOL nunguvage ellihudO suKa duHKa||28||

vEShaBAShegaLinda janara pramOShagaisuva naTapuruShanOL
dOShadUranu lOkadoLu bahurUpa mAtinali tOShisuvanu
avaravara manada aBilAShegaLa pUraisuta anudina pOShisuva
pUtAtma pUrNa Ananda j~jAnamaya||29||

adhama mAnavanu Orva mantrauShadhagaLanu tAnaritu
pAvakOdakagaLa saMbandhavilladalippanu adaroLage
padumaja anDa udaranu sarvara hRudayadoLage ire
kAlaguNakarmada kaluSha saMbandhavAguvudE niranjanage||30||

ondu guNadoLu ananta guNagaLu ondu rUpadoLu ihavu
lOkagaLa oMdE rUpadi dharisi tadgata padArthada oLa horage
bAMdaLadoLiddu bahu pesarinda karesuta
pUrNa jnAnAnandamaya paripari vihArava mADi mADisuva||31||

ellaroLu tAnippa tannoLage ellaranu dharisihanu
apratimalla manmathajanaka jagada Adi anta madhyagaLa balla
bahuguNa Barita dAnava dallaNa jagannAtha viThala
sollu lAlisi staMBadindali banda Bakutanige||32||
*************

No comments:

Post a Comment