ಬೃಂದಾವನವೇ ಮಂದಿರವಾಗಿಹ ಇಂದಿರೆ ಶ್ರೀ ತುಳಸಿ
ನಂದನಂದನ ಮುಕುಂದಗೆ ಪ್ರಿಯಳಾದ ಚಂದದ ಶ್ರೀ ತುಳಸಿ ||ಪ||
ತುಳಸಿಯ ವನದಲಿ ಹರಿ ಇಹನೆಂಬುದು ಶ್ರುತಿ ಸಾರುತಿದೇ ಕೇಳಿ
ತುಳಿಸಿಯ ದರುಶನದಿಂದ ದುರಿತಗಳೆಲ್ಲ ಹರಿದು ಪೋಗುವುದು ಕೇಳಿ
ತುಳಸಿಯ ಸ್ಪರ್ಶದಿಂದ ದೇಹಪಾವನವೆಂದು ನೀವೆಲ್ಲ ತಿಳಿದು ಕೇಳಿ
ತುಳಸಿ ಸ್ಮರಣೆ ಮಾದಿ ಸಕಲ ಇಷ್ಟವ ಪಡೆದು ಸುಖದಲ್ಲಿ ಬಾಳಿ ||೧||
ಮೂಲ ಮೃತ್ತಿಕೆಯನು ಧರಿಸಿದ ಮಾತ್ರದಿ ಮೂರುಲೋಕ ವಶವಾಗುವುದು
ಮಾಲೆಗಳನ್ನೆ ಕೊರಳಲಿ ಇಟ್ಟ ಮನುಜಗೆ ಮುಕ್ತಿ ಮಾರ್ಗವನು ನೀಡುವುದು
ಕಾಲಕಾಲಗಳಲ್ಲಿ ಮಾಡಿದ ದುಷ್ಕರ್ಮ ಕಳೆದು ಬಿಸುಟ್ಟು ಪೋಗುವುದು
ಕಾಲನ ದೂತರ ಅಟ್ಟಿ ಕೈವಲ್ಯವ ಲೀಲೆಯ ತೋರುವಳು ||೨||
ಧರೆಯೊಳು ಸುಜನರ ಮರೆಯದೆ ಸಲಹುವ ವರಲಕ್ಷ್ಮಿ ಶ್ರೀ ತುಳಸಿ
ಪರಮ ಭಕ್ತರ ಪಾಪಗಳನು ತರಿದು ಪಾವನ ಮಾಡುವಳು ತುಳಸಿ
ಸಿರಿ ಆಯು ಪುತ್ರಾದಿ ಸಂಪತ್ತುಗಳನ್ನು ಇತ್ತು ಹರುಷ ನೀಡುವಳು ತುಳಸಿ
ಪುರಂದರವಿಠಲನ್ನ ಚರಣ ಕಮಲದ ಸ್ಮರಣೆ ಕೊಡುವಳು ತುಳಸಿ ||೩||
****
ರಾಗ : ಕಾಪಿ (raga, taala may differ in audio)
ಬೃಂದಾವನವೇ ಮಂದಿರವಾಗಿಹ ಇಂದಿರೆ ಶ್ರೀ ತುಳಸಿ ||ಪ||
ನಂದ ನಂದನ ಮುಕುಂದಗೆ ಪ್ರಿಯಳಾದ ಚಂದದ ಶ್ರೀ ತುಳಸಿ ||ಅ. ಪ||
ತುಳಸಿಯ ವನದಲಿ ಹರಿ ಇಹನೆಂಬುದ ಶೃತಿಯ ಸಾರುತಿದೆ ಕೇಳಿ.....
ತುಳಸಿಯ ದರುಶನದಿಂದ ದುರಿತಗಳೆಲ್ಲವು ದೂರಾಗುವುದು ಕೇಳಿ...
ತುಳಸಿಯ ಸ್ಪರ್ಶ ಮಾಡಿ ಸಕಲ ಇಷ್ಟವ ಪಡೆದು ಸುಖದಲಿ ನೀವು ಬಾಳಿ ||1||
ಮೂಲ ಮೃತ್ತಿಕೆಯನು ಮುಖದಲಿ ಧರಿಸಲು ಮೂರು ಲೋಕ ವಶವಾಹುದು
ಮಾಲೆ ಕೊರಳಲಿ ಇಟ್ಟ ಮನುಜಗೆ ಮುಕ್ತಿ ಮಾರ್ಗವ ತೋರುವುದು
ಧರೆಯೊಳು ಸುಜನರ ಮರೆಯದೆ ಸಲಹುವ ವರಲಕ್ಷ್ಮಿ ಶ್ರೀ ತುಳಸಿ
ಪುರಂದರ ವಿಠಲನ ಚರಣ ಕಮಲಾ ಸ್ಮರಣೆ ಕೊಡುವ ತುಳಸಿ ||2||
***
ನಂದ ನಂದನ ಮುಕುಂದಗೆ ಪ್ರಿಯಳಾದ ಚಂದದ ಶ್ರೀ ತುಳಸಿ ||ಅ. ಪ||
ತುಳಸಿಯ ವನದಲಿ ಹರಿ ಇಹನೆಂಬುದ ಶೃತಿಯ ಸಾರುತಿದೆ ಕೇಳಿ.....
ತುಳಸಿಯ ದರುಶನದಿಂದ ದುರಿತಗಳೆಲ್ಲವು ದೂರಾಗುವುದು ಕೇಳಿ...
ತುಳಸಿಯ ಸ್ಪರ್ಶ ಮಾಡಿ ಸಕಲ ಇಷ್ಟವ ಪಡೆದು ಸುಖದಲಿ ನೀವು ಬಾಳಿ ||1||
ಮೂಲ ಮೃತ್ತಿಕೆಯನು ಮುಖದಲಿ ಧರಿಸಲು ಮೂರು ಲೋಕ ವಶವಾಹುದು
ಮಾಲೆ ಕೊರಳಲಿ ಇಟ್ಟ ಮನುಜಗೆ ಮುಕ್ತಿ ಮಾರ್ಗವ ತೋರುವುದು
ಧರೆಯೊಳು ಸುಜನರ ಮರೆಯದೆ ಸಲಹುವ ವರಲಕ್ಷ್ಮಿ ಶ್ರೀ ತುಳಸಿ
ಪುರಂದರ ವಿಠಲನ ಚರಣ ಕಮಲಾ ಸ್ಮರಣೆ ಕೊಡುವ ತುಳಸಿ ||2||
***
ಬೃಂದಾವನವೇ ಮಂದಿರವಾಗಿಹ ಇಂದಿರೆ ಶ್ರೀ ತುಳಸಿ|ಪ|
ನಂದ ನಂದನ ಮುಕುಂದಗೆ ಪ್ರಿಯಳಾದ ಚಂದದ ಶ್ರೀ ತುಳಸಿ |ಅ.ಪ|
ತುಳಸಿಯ ವನದಲಿ ಹರಿ ಇಹನೆಂಬುದ ಶೃತಿ ಸಾರುತಿದೆ ಕೇಳಿ
ತುಳಸಿ ದರ್ಶನದಿಂದ ದುರಿತಗಳೆಲ್ಲವು ದೂರವಾಗುವುದು ಕೇಳಿ
ತುಳಸಿ ಸ್ಪರ್ಶವ ಮಾಡೇ, ದೇಹಪಾವನವೆಂದು ತಿಳಿದುದಿಲ್ಲವೇ ಕೇಳಿ
ತುಳಸಿ ಸ್ಮರಣೆ ಮಾಡಿ ಸಕಲ ಇಷ್ಟವ ಪಡೆದು ಸುಖದಲಿ ನೀವು ಬಾಳಿ ||೧||
ಮೂಲ ಮೃತ್ತಿಕೆಯನು ಮುಖದಲಿ ಧರಿಸಲು ಮೂರ್ಲೋಕ ವಶವಹುದು
ಮಾಲೆ ಕೊರಳಲಿಟ್ಟ ಮನುಜಗೆ ಮುಕುತಿಯ ಮಾರ್ಗವು ತೋರುವುದು
ಕಾಲ ಕಾಲಗಳಲಿ ಮಾಡಿದ ದುಷ್ಕರ್ಮ ಕಳೆದು ಬಿಸುಟು ಪೋಗುವುದು
ಕಾಲನ ದೂತರ ಕಳಚಿ ಕೈವಲ್ಯದ ಲೀಲೆಯ ತೋರುವುದು ||೨
ಧರೆಯೊಳು ಸುಜನರ ಮರೆಯದೆ ಸಲಹುವ ವರಲಕ್ಷ್ಮೀ ಶ್ರೀ ತುಳಸಿ
ಪರಮಭಕ್ತರ ಘೋರ ಪಾಪಗಳ ತರಿದು ಪಾವನ ಮಾಡುವ ತುಳಸಿ
ಸಿರೀಯಾಯುಪುತ್ರಾದಿ ಸಂಫದಗಳನಿತ್ತು ಹರುಷ ನೀಡುವಳು ತುಳಸಿ
ಪುರಂದರ ವಿಠಲನ ಚರಣ ಕಮಲಗಳ ಸ್ಮರಣೆ ಕೊಡುವಳು ತುಳಸಿ||೩||
***'
bRuMdAvanavE maMdiravAgiha iMdire SrI tuLasi|pa|
naMda naMdana mukuMdage priyaLAda caMdada SrI tuLasi |a.pa|
tuLasiya vanadali hari ihaneMbuda SRuti sArutide kELi
tuLasi darSanadiMda duritagaLellavu dUravAguvudu kELi
tuLasi sparSava mADE, dEhapAvanaveMdu tiLidudillavE kELi
tuLasi smaraNe mADi sakala iShTava paDedu suKadali nIvu bALi ||1||
mUla mRuttikeyanu muKadali dharisalu mUrlOka vaSavahudu
mAle koraLaliTTa manujage mukutiya mArgavu tOruvudu
kAla kAlagaLali mADida duShkarma kaLedu bisuTu pOguvudu
kAlana dUtara kaLaci kaivalyada lIleya tOruvudu ||2
dhareyoLu sujanara mareyade salahuva varalakShmI SrI tuLasi
paramaBaktara GOra pApagaLa taridu pAvana mADuva tuLasi
sirIyAyuputrAdi saMPadagaLanittu haruSha nIDuvaLu tuLasi
puraMdara viThalana caraNa kamalagaLa smaraNe koDuvaLu tuLasi||3||
***
Vrndvanavanave mandiravagiha indire shri tulasi
Namma nandana mukundage priyavada cendada shri tulasi
Tulasi vanadalli ihanembodu shruti sarutide keli tulasi
Darshanadinda duritagalella haridu hogodu keli
Tulasi sparsahanadinda deha pavanavendu nivella tilidu keli
Tulasi smarane madi sakalistava badedu sukhadali nivu bali||1||
Mula mrttikeyanu dharisida matradi muru loka vahavahudu
Malegalane koralallitta manujake mukti margava nivudu
Kala kalagalali madida duskarma kaledu bisutu hogodu kalana
Dutara atti kaivalyava lileya toruvudu||2||
Dhareyolu su-janara mareyade salahuva vara laksmi shri tulasi
Parama bhaktara papagalella taridu pavana maduvalu tulasi
Siri Ayu putradi sampattugalanittu harusavivalu tulasi
Purandara vittalanna smarane koduvalu tulasi||3||
***
No comments:
Post a Comment