CLICK-> INDEX ದೇವರನಾಮ ಕೇಳಿ ಕಲಿಯಲು ಲಿಂಕ್ LINKS TO LEARN DEVARANAMA
or just scroll down for other devaranama
ಶ್ರೀ ದುರ್ಗಾ ಸುಳಾದಿ
ಧ್ರುವ ತಾಳ
ದುರ್ಗಾ ದುರ್ಗಿಯೆ ಮಹಾ ದುಷ್ಟಜನ ಸಂಹಾರೆ
ದುರ್ಗಾಂತರ್ಗತ ದುರ್ಗೆ ದುರ್ಲಭೆ ಸುಲಭೆ
ದುರ್ಗಮವಾಗಿದೆ ನಿನ್ನ ಮಹಿಮೆ, ಬೊಮ್ಮ
ಭರ್ಗಾದಿಗಳಿಗೆಲ್ಲ ಗುಣಿಸಿದರೂ
ಸ್ವರ್ಗ ಭೂಮಿ ಪಾತಾಳ ಸಮಸ್ತ ವ್ಯಾಪುತ ದೇವಿ
ವರ್ಗಕ್ಕೆ ಮೀರಿದ ಬಲು ಸುಂದರೀ
ದುರ್ಗಣದವರ ಬಾಧೆ ಬಹಳವಾಗಿದೆ ತಾಯಿ
ದುರ್ಗತಿಹಾರೆ ನಾನು ಪೇಳುವುದೆನು
ದುರ್ಗಂಧವಾಗಿದೆ ಸಂಸೃತಿ ನೋಡಿದರೆ
ನಿರ್ಗಮ ನಾ ಕಾಣೆನಮ್ಮ ಮಂಗಳಾಂಗೆ
ದುರ್ಗೆ ಹೇ ದುರ್ಗೆ ಮಹಾದುರ್ಗೆ ಭೂದುರ್ಗೆ ವಿಷ್ಣು
ದುರ್ಗೆ ದುರ್ಜಯೆ ದುರ್ಧರ್ಷೆ ಶಕ್ತಿ
ದುರ್ಗ ಕಾನನ ಗಹನ ಪರ್ವತ ಘೋರ ಸರ್ಪ
ಗರ್ಗರ ಶಬ್ದ ವ್ಯಾಪ್ರ ಕರಡಿ ಮೃತ್ಯು
ವರ್ಗ ಭೂತ ಪ್ರೇತ ಪೈಶಾಚಿ ಮೊದಲಾದ
ದುರ್ಗಣ ಸಂಕಟ ಪ್ರಾಪ್ತವಾಗೆ
ದುರ್ಗಾ ದುರ್ಗೆ ಎಂದು ಉಚ್ಚಸ್ವರದಿಂದ
ನಿರ್ಗಳಿತವಾಗಿ ಒಮ್ಮೆ ಕೂಗಿದರೂ
ಸ್ವರ್ಗಾಪವರ್ಗದಲ್ಲಿ ಹರಿಯೊಡನೆ ಇದ್ದರು
ಸುರ್ಗಣ ಜಯಜಯವೆಂದು ಪೊಗಳುತಿರೆ
ಕರ್ಗಳಿಂದಲಿ ಎತ್ತಿ ಸಾಕುವ ಸಾಕ್ಷಿಭೂತೆ
ನೀರ್ಗುಡಿದಂತೆ ಲೋಕಲೀಲೆ ನಿನಗೆ
ಸ್ವರ್ಗಂಗಾಜನಕ ನಮ್ಮ ವಿಜಯ ವಿಠಲನಂಘ್ರಿ
ದುರ್ಗಾಶ್ರಯಮಾಡಿ ಬದುಕುವಂತೆ ಮಾಡು ||೧||
ಮಟ್ಟ ತಾಳ
ಅರಿದರಾಂಕುಶ ಶಕ್ತಿ ಪರಶು ನೇಗಿಲು ಖಡ್ಗ
ಸರಸಿಜಗದಾ ಮುದ್ಗರ ಚಾಪ ಮಾರ್ಗಣ
ವರ ಅಭಯ ಮುಸಲ ಪರಿ ಪರಿ ಆಯುಧವ
ಧರಿಸಿ ಮೆರೆವ ಲಕುಮಿ ಸರಸಿಜಭವ ರುದ್ರ
ಸರುವ ದೇವತೆಗಳ ಕರುಣಾಪಾಂಗದಲ್ಲಿ
ನಿರೀಕ್ಷಿಸಿ ಅವರವರ ಸ್ವರೂಪಸುಖ ಕೊಡುವ
ಸಿರಿ ಭೂಮಿದುರ್ಗಾ ಸರುವೋತ್ತಮ
ನಮ್ಮ ವಿಜಯವಿಠಲನಂಘ್ರಿ
ಪರಮ ಭಕುತಿಯಿಂದ ಸ್ಮರಿಸುವ ಜಗಜ್ಜನನಿ ||೨||
ತ್ರಿಪುಡೆ ತಾಳ
ಸ್ತುತಿ ಮಾಡುವೆ ನಿನ್ನ ಕಾಳಿ ಮಹಾ ಕಾಳಿ
ಉನ್ನತ ಬಾಹು ಕರಾಳವದನೆ ಚಂದಿರಮುಖಿ
ಧೃತಿ ಶಾಂತಿ ಬಹುರೂಪೆ ರಾತ್ರಿ ರಾತ್ರಿಂ ಚರಣೆ
ಸ್ಥಿತಿಯೆ ನಿದ್ರಾ ಭದ್ರೆ ಭಕ್ತವತ್ಸಲೆ ಭವ್ಯೆ
ಚತುರಷ್ಟದ್ವಿಹಸ್ತೆ ಹಸ್ತಿ ಹಸ್ತಿಗಮನೆ
ಅದ್ಭುತ ಪ್ರಭಾವೆ ಪ್ರವಾಸೆ ದುರ್ಗಾರಣ್ಯವಾಸೆ
ಕ್ಷಿತಿಭಾರ ಹರಣೆ ಕ್ಷೀರಾಬ್ಧಿತನಯೆ ಸ
ದ್ಗತಿ ಪ್ರದಾತೆ ಮಾಯೆ ಶ್ರೀಯೆ ಇಂದಿರೆ ರಮೆ
ದಿತಿಜಾತ ನಿಗ್ರಹೆ ನಿರ್ಧೂತ ಕಲ್ಮಷೆ
ಪ್ರತಿಕೂಲ ಭೇದೆ ಪೂರ್ಣಬೋಧೆ ರೌದ್ರೆ
ಅತಿಶಯ ರಕ್ತ ಜಿಹ್ವಾಲೋಲೆ ಮಾಣಿಕ್ಯ ಮಾಲೆ
ಜಿತಕಾಮೆ ಜನನ ಮರಣ ರಹಿತೆ ಖ್ಯಾತೆ
ಘೃತ ಪಾತ್ರ ಪರಮಾನ್ನ ತಾಂಬೂಲಹಸ್ತೆ
ಸುವ್ರತೆ ಪತಿವ್ರತೆ ತ್ರಿನೇತ್ರೆ ರಕ್ತಾಂಬರೆ
ಶತಪತ್ರನಯನೆ ನಿರುತ ಕನ್ಯೆ ಉದಯಾರ್ಕ
ಶತಕೋಟಿ ಸನ್ನಿಭೆ ಹರಿ ಆಂಕಸಂಸ್ಥೆ
ಶ್ರುತಿತತಿನುತೆ ಶುಕ್ಲ ಶೋಣಿತ ರಹಿತೇ
ಅಪ್ರತಿಹತೆ ಸರ್ವದಾ ಸಂಚಾರಿಣಿ ಚತುರೆ
ಚತುರ ಕಪರ್ದಿಯೆ ಅಂಭ್ರಣಿ ಹ್ರೀ
ಉತ್ಪತ್ತಿ ಸ್ಥಿತಿ ಲಯ ಕರ್ತೆ ಶುಭ್ರ ಶೋಭನ ಮೂರ್ತೆ
ಪತಿತಪಾವನೆ ಧನ್ಯೆ ಸರ್ವೌಷಧಿಯಲಿದ್ದು
ಹತಮಾಡು ಕಾಡುವ ರೋಗಂಗಳ
ಕ್ಷಿತಿಯೊಳು ಸುಖದಲ್ಲಿ ಬಾಳುವ ಮತಿಯಿತ್ತು
ಸತತ ಕಾಯಲಿಬೇಕು ದುರ್ಗಾ ದುರ್ಗೆ
ಚ್ಯುತದೂರ ವಿಜಯ ವಿಠ್ಠಲರೇಯನ ಪ್ರೀಯೆ
ಕೃತಾಂಜಲಿಯಿಂದಲಿ ತಲೆಬಾಗಿ ನಮಿಸುವೆ ||೩||
ಮಟ್ಟ ತಾಳ
ಶ್ರೀ ಲಕ್ಷ್ಮೀ ಕಮಲಾ ಪದ್ಮಾ ಪದ್ಮಿನಿ ಕಮ
ಲಾಲಯೆ ರಮಾ ವೃಷಾಕಪಿ ಧನ್ಯೆ ವೃದ್ಧಿ ವಿ
ಶಾಲ ಯಜ್ಞಾ ಇಂದಿರೆ ಹಿರಣ್ಯ ಹರಿಣಿ
ವಾಲಯ ಸತ್ಯನಿತ್ಯಾನಂದಿ ತ್ರಾಹಿ
ಸುಶೀಲೆ ಸುಗಂಧ ಸುಂದರಿ ವಿದ್ಯಾಶೀಲೆ
ಸುಲಕ್ಷಣ ದೇವಿ ನಾನಾ ರೂಪಗಳಿಂದ ಮೆರೆವ ಮೃತ್ಯುನಾಶೆ
ವಾಲಗಕೊಡು ಸಂತರ ಸನ್ನಿಧಿಯಲ್ಲಿ
ಕಾಲಕಾಲಕೆ ಎನ್ನ ಭಾರ ವಹಿಸುವ ತಾಯಿ
ಮೇಲು ಮೇಲು ನಿನ್ನ ಶಕ್ತಿ ಕೀರ್ತಿ ಬಲು
ಕೇಳಿ ಕೇಳಿ ಬಂದೆ ಕೇವಲ ಈ ಮನ
ಗಾಳಿಯಂತೆ ಪರದ್ರವ್ಯಕ್ಕೆ ಪೋಪುದು
ಏಳಾಲ ಮಾಡದೆ ಉದ್ಧಾರ ಮಾಡು
ಕೈಲಾಸಪುರದಲ್ಲಿ ಪೂಜೆಗೊಂಬ ದೇವಿ
ಮೂಲ ಪ್ರಕ್ರೃತಿ ಸರ್ವ ವರ್ಣಾಭಿಮಾನಿನಿ
ಪಾಲಸಾಗರಶಾಯಿ ವಿಜಯವಿಠಲನೊಳು
ಲೀಲೆ ಮಾಡುವ ನಾನಾಭರಣೆ ಭೂಷಣೆ ಪೂರ್ಣೆ ||೪||
ಆದಿ ತಾಳ
ಗೋಪಿನಂದನೆ ಮುಕ್ತೆ ದೈತ್ಯಸಂತತಿ ಸಂ
ತಾಪವ ಕೊಡುತಿಪ್ಪ ಮಹಾಕಠೋರೆ ಉಗ್ರ
ರೂಪ ವೈಲಕ್ಷಣೆ ಅಜ್ಞಾನಕಭಿಮಾನಿನಿ
ತಾಪತ್ರಯ ವಿನಾಶೆ ಓಂಕಾರೆ ಹೂಂಕಾರೆ
ಪಾಪಿ ಕಂಸಗೆ ಭಯ ತೋರಿದ ಬಾಲಲೀಲೆ
ವ್ಯಾಪುತೆ ಧರ್ಮ ಮಾರ್ಗ ಪ್ರೇರಣೆ ಅಪ್ರಾಕೃತೆ
ಸ್ವಪ್ನದಲಿ ನಿನ್ನ ನೆನೆಸಿದ ಶರಣನಿಗೆ
ಅಪಾರವಾಗಿದ್ದ ವಾರಿಧಿಯಂತೆ ಮಹಾ
ಆಪತ್ತುಬಂದಿರಲು ಹಾರಿ ಪೋಗೋದು ಸಪ್ತ
ದ್ವೀಪ ನಾಯಿಕೆ ನರಕ ನಿರ್ಲೇಪೆ ತಮೋಗುಣದ
ವ್ಯಾಪಾರ ಮಾಡಿಸಿ ಭಕ್ತಜನಕೆ ಪುಣ್ಯ
ಸೋಪಾನ ಮಾಡಿಕೊಡುವ ಸೌಭಾಗ್ಯವಂತೆ ದುರ್ಗೆ
ಪ್ರಾಪುತವಾಗಿ ಎನ್ನ ಮನದಲ್ಲಿ ನಿಂದು ದುಃಖ
ಕೂಪದಿಂದಲಿ ಎತ್ತಿ ಕಡೆಮಾಡು ಜನ್ಮಂಗಳ
ಸೌಪರ್ಣಿ ಮಿಗಿಲಾದ ಸತಿಯರು ನಿತ್ಯ ನಿನ್ನ
ಆಪಾದಮೌಳಿ ತನಕ ಭಜಿಸಿ ಭವ್ಯರಾದರು
ನಾ ಪೇಳುವುದೇನು ಪಾಂಡವರ ಮನೋಭೀಷ್ಟೆ
ಈ ಪಂಚಭೌತಿಕದಲ್ಲಿ ಆವ ಸಾಧನ ಕಾಣೆ
ಶ್ರೀಪತಿನಾಮ ಒಂದೇ ಜಿಹ್ವಾಗ್ರದಲಿ ನೆನೆವ
ಔಪಾಸನ ಕೊಡು ರುದ್ರಾದಿಗಳ ವರದೆ
ತಾಪಸ ಜನ ಪ್ರಿಯ ವಿಜಯ ವಿಠ್ಠಲ ಮೂರ್ತಿಯ
ಶ್ರೀಪಾದಾರ್ಚನೆ ಮಾಳ್ಪ ಶ್ರೀ ಭೂ ದುರ್ಗಾ ವರ್ಣತ್ರಯೆ ||೫||
ಜೊತೆ
ದುರ್ಗೆ ಹಾ ಹೇ ಹಾ ಹಾ ದುರ್ಗೆ ಮಂಗಳ ದುರ್ಗೆ|
ದುರ್ಗತಿ ಕೊಡದಿರು ವಿಜಯವಿಠಲಪ್ರಿಯೆ|
***
ಧ್ರುವ ತಾಳ
ದುರ್ಗಾ ದುರ್ಗಿಯೆ ಮಹಾ ದುಷ್ಟಜನ ಸಂಹಾರೆ
ದುರ್ಗಾಂತರ್ಗತ ದುರ್ಗೆ ದುರ್ಲಭೆ ಸುಲಭೆ
ದುರ್ಗಮವಾಗಿದೆ ನಿನ್ನ ಮಹಿಮೆ, ಬೊಮ್ಮ
ಭರ್ಗಾದಿಗಳಿಗೆಲ್ಲ ಗುಣಿಸಿದರೂ
ಸ್ವರ್ಗ ಭೂಮಿ ಪಾತಾಳ ಸಮಸ್ತ ವ್ಯಾಪುತ ದೇವಿ
ವರ್ಗಕ್ಕೆ ಮೀರಿದ ಬಲು ಸುಂದರೀ
ದುರ್ಗಣದವರ ಬಾಧೆ ಬಹಳವಾಗಿದೆ ತಾಯಿ
ದುರ್ಗತಿಹಾರೆ ನಾನು ಪೇಳುವುದೆನು
ದುರ್ಗಂಧವಾಗಿದೆ ಸಂಸೃತಿ ನೋಡಿದರೆ
ನಿರ್ಗಮ ನಾ ಕಾಣೆನಮ್ಮ ಮಂಗಳಾಂಗೆ
ದುರ್ಗೆ ಹೇ ದುರ್ಗೆ ಮಹಾದುರ್ಗೆ ಭೂದುರ್ಗೆ ವಿಷ್ಣು
ದುರ್ಗೆ ದುರ್ಜಯೆ ದುರ್ಧರ್ಷೆ ಶಕ್ತಿ
ದುರ್ಗ ಕಾನನ ಗಹನ ಪರ್ವತ ಘೋರ ಸರ್ಪ
ಗರ್ಗರ ಶಬ್ದ ವ್ಯಾಪ್ರ ಕರಡಿ ಮೃತ್ಯು
ವರ್ಗ ಭೂತ ಪ್ರೇತ ಪೈಶಾಚಿ ಮೊದಲಾದ
ದುರ್ಗಣ ಸಂಕಟ ಪ್ರಾಪ್ತವಾಗೆ
ದುರ್ಗಾ ದುರ್ಗೆ ಎಂದು ಉಚ್ಚಸ್ವರದಿಂದ
ನಿರ್ಗಳಿತವಾಗಿ ಒಮ್ಮೆ ಕೂಗಿದರೂ
ಸ್ವರ್ಗಾಪವರ್ಗದಲ್ಲಿ ಹರಿಯೊಡನೆ ಇದ್ದರು
ಸುರ್ಗಣ ಜಯಜಯವೆಂದು ಪೊಗಳುತಿರೆ
ಕರ್ಗಳಿಂದಲಿ ಎತ್ತಿ ಸಾಕುವ ಸಾಕ್ಷಿಭೂತೆ
ನೀರ್ಗುಡಿದಂತೆ ಲೋಕಲೀಲೆ ನಿನಗೆ
ಸ್ವರ್ಗಂಗಾಜನಕ ನಮ್ಮ ವಿಜಯ ವಿಠಲನಂಘ್ರಿ
ದುರ್ಗಾಶ್ರಯಮಾಡಿ ಬದುಕುವಂತೆ ಮಾಡು ||೧||
ಮಟ್ಟ ತಾಳ
ಅರಿದರಾಂಕುಶ ಶಕ್ತಿ ಪರಶು ನೇಗಿಲು ಖಡ್ಗ
ಸರಸಿಜಗದಾ ಮುದ್ಗರ ಚಾಪ ಮಾರ್ಗಣ
ವರ ಅಭಯ ಮುಸಲ ಪರಿ ಪರಿ ಆಯುಧವ
ಧರಿಸಿ ಮೆರೆವ ಲಕುಮಿ ಸರಸಿಜಭವ ರುದ್ರ
ಸರುವ ದೇವತೆಗಳ ಕರುಣಾಪಾಂಗದಲ್ಲಿ
ನಿರೀಕ್ಷಿಸಿ ಅವರವರ ಸ್ವರೂಪಸುಖ ಕೊಡುವ
ಸಿರಿ ಭೂಮಿದುರ್ಗಾ ಸರುವೋತ್ತಮ
ನಮ್ಮ ವಿಜಯವಿಠಲನಂಘ್ರಿ
ಪರಮ ಭಕುತಿಯಿಂದ ಸ್ಮರಿಸುವ ಜಗಜ್ಜನನಿ ||೨||
ತ್ರಿಪುಡೆ ತಾಳ
ಸ್ತುತಿ ಮಾಡುವೆ ನಿನ್ನ ಕಾಳಿ ಮಹಾ ಕಾಳಿ
ಉನ್ನತ ಬಾಹು ಕರಾಳವದನೆ ಚಂದಿರಮುಖಿ
ಧೃತಿ ಶಾಂತಿ ಬಹುರೂಪೆ ರಾತ್ರಿ ರಾತ್ರಿಂ ಚರಣೆ
ಸ್ಥಿತಿಯೆ ನಿದ್ರಾ ಭದ್ರೆ ಭಕ್ತವತ್ಸಲೆ ಭವ್ಯೆ
ಚತುರಷ್ಟದ್ವಿಹಸ್ತೆ ಹಸ್ತಿ ಹಸ್ತಿಗಮನೆ
ಅದ್ಭುತ ಪ್ರಭಾವೆ ಪ್ರವಾಸೆ ದುರ್ಗಾರಣ್ಯವಾಸೆ
ಕ್ಷಿತಿಭಾರ ಹರಣೆ ಕ್ಷೀರಾಬ್ಧಿತನಯೆ ಸ
ದ್ಗತಿ ಪ್ರದಾತೆ ಮಾಯೆ ಶ್ರೀಯೆ ಇಂದಿರೆ ರಮೆ
ದಿತಿಜಾತ ನಿಗ್ರಹೆ ನಿರ್ಧೂತ ಕಲ್ಮಷೆ
ಪ್ರತಿಕೂಲ ಭೇದೆ ಪೂರ್ಣಬೋಧೆ ರೌದ್ರೆ
ಅತಿಶಯ ರಕ್ತ ಜಿಹ್ವಾಲೋಲೆ ಮಾಣಿಕ್ಯ ಮಾಲೆ
ಜಿತಕಾಮೆ ಜನನ ಮರಣ ರಹಿತೆ ಖ್ಯಾತೆ
ಘೃತ ಪಾತ್ರ ಪರಮಾನ್ನ ತಾಂಬೂಲಹಸ್ತೆ
ಸುವ್ರತೆ ಪತಿವ್ರತೆ ತ್ರಿನೇತ್ರೆ ರಕ್ತಾಂಬರೆ
ಶತಪತ್ರನಯನೆ ನಿರುತ ಕನ್ಯೆ ಉದಯಾರ್ಕ
ಶತಕೋಟಿ ಸನ್ನಿಭೆ ಹರಿ ಆಂಕಸಂಸ್ಥೆ
ಶ್ರುತಿತತಿನುತೆ ಶುಕ್ಲ ಶೋಣಿತ ರಹಿತೇ
ಅಪ್ರತಿಹತೆ ಸರ್ವದಾ ಸಂಚಾರಿಣಿ ಚತುರೆ
ಚತುರ ಕಪರ್ದಿಯೆ ಅಂಭ್ರಣಿ ಹ್ರೀ
ಉತ್ಪತ್ತಿ ಸ್ಥಿತಿ ಲಯ ಕರ್ತೆ ಶುಭ್ರ ಶೋಭನ ಮೂರ್ತೆ
ಪತಿತಪಾವನೆ ಧನ್ಯೆ ಸರ್ವೌಷಧಿಯಲಿದ್ದು
ಹತಮಾಡು ಕಾಡುವ ರೋಗಂಗಳ
ಕ್ಷಿತಿಯೊಳು ಸುಖದಲ್ಲಿ ಬಾಳುವ ಮತಿಯಿತ್ತು
ಸತತ ಕಾಯಲಿಬೇಕು ದುರ್ಗಾ ದುರ್ಗೆ
ಚ್ಯುತದೂರ ವಿಜಯ ವಿಠ್ಠಲರೇಯನ ಪ್ರೀಯೆ
ಕೃತಾಂಜಲಿಯಿಂದಲಿ ತಲೆಬಾಗಿ ನಮಿಸುವೆ ||೩||
ಮಟ್ಟ ತಾಳ
ಶ್ರೀ ಲಕ್ಷ್ಮೀ ಕಮಲಾ ಪದ್ಮಾ ಪದ್ಮಿನಿ ಕಮ
ಲಾಲಯೆ ರಮಾ ವೃಷಾಕಪಿ ಧನ್ಯೆ ವೃದ್ಧಿ ವಿ
ಶಾಲ ಯಜ್ಞಾ ಇಂದಿರೆ ಹಿರಣ್ಯ ಹರಿಣಿ
ವಾಲಯ ಸತ್ಯನಿತ್ಯಾನಂದಿ ತ್ರಾಹಿ
ಸುಶೀಲೆ ಸುಗಂಧ ಸುಂದರಿ ವಿದ್ಯಾಶೀಲೆ
ಸುಲಕ್ಷಣ ದೇವಿ ನಾನಾ ರೂಪಗಳಿಂದ ಮೆರೆವ ಮೃತ್ಯುನಾಶೆ
ವಾಲಗಕೊಡು ಸಂತರ ಸನ್ನಿಧಿಯಲ್ಲಿ
ಕಾಲಕಾಲಕೆ ಎನ್ನ ಭಾರ ವಹಿಸುವ ತಾಯಿ
ಮೇಲು ಮೇಲು ನಿನ್ನ ಶಕ್ತಿ ಕೀರ್ತಿ ಬಲು
ಕೇಳಿ ಕೇಳಿ ಬಂದೆ ಕೇವಲ ಈ ಮನ
ಗಾಳಿಯಂತೆ ಪರದ್ರವ್ಯಕ್ಕೆ ಪೋಪುದು
ಏಳಾಲ ಮಾಡದೆ ಉದ್ಧಾರ ಮಾಡು
ಕೈಲಾಸಪುರದಲ್ಲಿ ಪೂಜೆಗೊಂಬ ದೇವಿ
ಮೂಲ ಪ್ರಕ್ರೃತಿ ಸರ್ವ ವರ್ಣಾಭಿಮಾನಿನಿ
ಪಾಲಸಾಗರಶಾಯಿ ವಿಜಯವಿಠಲನೊಳು
ಲೀಲೆ ಮಾಡುವ ನಾನಾಭರಣೆ ಭೂಷಣೆ ಪೂರ್ಣೆ ||೪||
ಆದಿ ತಾಳ
ಗೋಪಿನಂದನೆ ಮುಕ್ತೆ ದೈತ್ಯಸಂತತಿ ಸಂ
ತಾಪವ ಕೊಡುತಿಪ್ಪ ಮಹಾಕಠೋರೆ ಉಗ್ರ
ರೂಪ ವೈಲಕ್ಷಣೆ ಅಜ್ಞಾನಕಭಿಮಾನಿನಿ
ತಾಪತ್ರಯ ವಿನಾಶೆ ಓಂಕಾರೆ ಹೂಂಕಾರೆ
ಪಾಪಿ ಕಂಸಗೆ ಭಯ ತೋರಿದ ಬಾಲಲೀಲೆ
ವ್ಯಾಪುತೆ ಧರ್ಮ ಮಾರ್ಗ ಪ್ರೇರಣೆ ಅಪ್ರಾಕೃತೆ
ಸ್ವಪ್ನದಲಿ ನಿನ್ನ ನೆನೆಸಿದ ಶರಣನಿಗೆ
ಅಪಾರವಾಗಿದ್ದ ವಾರಿಧಿಯಂತೆ ಮಹಾ
ಆಪತ್ತುಬಂದಿರಲು ಹಾರಿ ಪೋಗೋದು ಸಪ್ತ
ದ್ವೀಪ ನಾಯಿಕೆ ನರಕ ನಿರ್ಲೇಪೆ ತಮೋಗುಣದ
ವ್ಯಾಪಾರ ಮಾಡಿಸಿ ಭಕ್ತಜನಕೆ ಪುಣ್ಯ
ಸೋಪಾನ ಮಾಡಿಕೊಡುವ ಸೌಭಾಗ್ಯವಂತೆ ದುರ್ಗೆ
ಪ್ರಾಪುತವಾಗಿ ಎನ್ನ ಮನದಲ್ಲಿ ನಿಂದು ದುಃಖ
ಕೂಪದಿಂದಲಿ ಎತ್ತಿ ಕಡೆಮಾಡು ಜನ್ಮಂಗಳ
ಸೌಪರ್ಣಿ ಮಿಗಿಲಾದ ಸತಿಯರು ನಿತ್ಯ ನಿನ್ನ
ಆಪಾದಮೌಳಿ ತನಕ ಭಜಿಸಿ ಭವ್ಯರಾದರು
ನಾ ಪೇಳುವುದೇನು ಪಾಂಡವರ ಮನೋಭೀಷ್ಟೆ
ಈ ಪಂಚಭೌತಿಕದಲ್ಲಿ ಆವ ಸಾಧನ ಕಾಣೆ
ಶ್ರೀಪತಿನಾಮ ಒಂದೇ ಜಿಹ್ವಾಗ್ರದಲಿ ನೆನೆವ
ಔಪಾಸನ ಕೊಡು ರುದ್ರಾದಿಗಳ ವರದೆ
ತಾಪಸ ಜನ ಪ್ರಿಯ ವಿಜಯ ವಿಠ್ಠಲ ಮೂರ್ತಿಯ
ಶ್ರೀಪಾದಾರ್ಚನೆ ಮಾಳ್ಪ ಶ್ರೀ ಭೂ ದುರ್ಗಾ ವರ್ಣತ್ರಯೆ ||೫||
ಜೊತೆ
ದುರ್ಗೆ ಹಾ ಹೇ ಹಾ ಹಾ ದುರ್ಗೆ ಮಂಗಳ ದುರ್ಗೆ|
ದುರ್ಗತಿ ಕೊಡದಿರು ವಿಜಯವಿಠಲಪ್ರಿಯೆ|
***
1. Dhṛvatāḷa
Durgā durgiye mahā duṣṭajana saṃhāre |
Durgāṃtargata durge durlabhe sulabhe |
Durgamavāgide niṃna mahime, bomma |
Bhargādigaḷellā guṇisidarū |
Svarga bhūmi pātāḷa samasta vyāputa dēvi |
Vargakke mīrida balu suṃdarī |
Durgaṇadavara bādhe baḷavāgide tāyi |
Durgati hāre nānu pēḷuvudenū |
Durgandhavāgide saṃsṛti nōḍidare |
Nirgamā nā kāṇenammā maṃgaḷāṃge |
Durge hē durge mahādurge bhūdurge viṣṇu |
Durge durjaye durdharṣe śakti |
Durga kānaṇa gahana parvata ghōra sarpa |
Gargara śabda vyāpra karaḍi mṛtyu |
Varga bhūta prēta paiśāchi modalāda |
Durgaṇa saṃkaṭa prāptavāge |
Durgā durge eṃdu ucchasvaradiṃda |
Nirgaḷitavāgi oṃme kūgidarū |
Svargāpavargadalli hariyoḍane iddarū |
Surgaṇa jayajayaveṃdu pogaḷutire |
Kargaḷiṃdali etti sākuva sākṣibhūte |
Nīrguḍidante lōkalīle ninage |
Svargaṃgājanaka namman vijayaviṭṭhalanaṃghri |
Durgāśrayamāḍi badukuvaṃte māḍu ॥ 1 ॥
2. Maṭṭatāḷa
Aridarāṃkuśa śakti paraśu nēgilu khaḍga |
Sarasijagadā mudgara chāpa mārgaṇa |
Vara abhaya musala pari pari āyudhava |
Dharisi mereva lakumi sarasijabhava rudra |
Sarva dēvategaḷa karuṇāpāṃgadalli |
Nirīkṣisi avaravara svarūpasukha koḍuva |
Siri bhūmidurgā sarvōttama |
Namma vijayaviṭṭhalanaṃghri |
Parama bhakutiyiṃda smarisuva jagajjanani ॥ 2 ॥
3. Tripuḍetāḷa
Stuti māḍuve ninna kāḷi mahā kāḷi |
Unnata bāhu karāḷavadane chaṃdiramukhi |
Dhṛti śānti bahurūpe rātri rātriṃ charaṇe |
Sthitiye nidrā bhadre bhaktavatsale bhavye |
Chaturaṣṭadvihaste hasti hastigamane |
Adbuta prabhāve pravāse durgāraṇyavāse |
Kṣitibhāra haraṇe kṣīrābdhitanaye sa -
dgati pradāte māye śrīye iṃdire rame |
Ditijāta nigrahe nirdhūta kalmaṣe |
Pratikūla bhēde pūrṇabōdhe raudre |
Atiśaya rakta jihvālōle māṇikya māle |
Jitakāme janana maraṇa rahitē khyāte |
Ghṛta pātra paramānna tāṃbūlahaste |
Suvrate pativrate trinētre raktāṃbare |
Śatapatranayane niruta kanyē udayārka |
Śatakōṭi sannibhe hari āṃkasamsthe |
Śrutitatinute śukla śōṇita rahitē |
Apratihate sarvadā saṃchāriṇi chature |
Chatura kapardiye aṃbhraṇi hrī |
Utpatti sthiti laya kartē śubhra śōbhana mūrtē |
Patitapāvane dhanye sarvauṣadhiyalliddu |
Hatamāḍu kāḍuva rōgaṃgaḷa |
Kṣitiyoḷu sukhadalli bāḷuva matiyittu |
Satata kāyalibēku durgā durge |
Chyutadūra vijayaviṭṭhalarēyana prīye |
Kṛtāṃjaliyiṃdalai talebāgi namisuve ॥ 3 ॥
4. Maṭṭatāḷa
Śrī lakṣmī kamalā padmā padmini kama |
Lālaye ramā vṛṣākapi dhanye vṛddhi vi |
Śāla yajñā iṃdire hiraṇya hariṇi |
Vālaya satyanityānandi trāhi |
Suśīle sugaṃdha suṃdari vidyāśīle |
Sulakṣaṇa dēvi nānā rūpagaḷiṃda mereva mṛtyunāśe |
Vālagakoḍu saṃtara sannidhiyalli |
Kālakālake enna bhāravahisuva tāyi |
Mēlu mēlu ninna śakti kīrti baḷu |
Kēḷi kēḷi baṃde kēvala ī mana |
Gāḷiyaṃte paradravyakke pōpudu |
Ēḷāla māḍade uddhāra māḍu |
Kailāsapuradalli pūjegōmba dēvi |
Mūla prakṛti sarva varṇābhimānini |
Pālasāgaraśāyi vijayaviṭṭhalanoḷu |
Līle māḍuva nānābharaṇe bhūṣaṇe pūrṇe ॥ 4 ॥
5. Āditāḷa
Gōpinandane mukte daityasaṃtati saṃ -
tāpava koḍutippa mahākaṭhōre ugra |
Rūpa vailakṣaṇe ajñānakabhimānini |
Tāpatraya vināśe ōṃkāre hūṃkāre |
Pāpi kaṃsage bhaya tōrida bālalīle |
Vyāpute dharma mārga prēraṇe aprākṛte |
Svapnadali ninna nenesida śaraṇanige |
Apāravāgiddha vāridhiyaṃte mahā |
Āpattubaṃdiralu hāri pōgōdu sapta |
Dvīpa nāyike naraka nirlēpe tamōguṇada |
Vyāpāra māḍisi bhaktajanake puṇya |
Sōpāna māḍikoḍuva saubhāgyavaṃte durge |
Prāputavāgi enna manadalli niṃdu duḥkha |
Kūpadaṃtali etti kaḍemāḍu janmaṃgaḷa |
Sauparṇi migilāda satiyaru nitya ninna |
Āpādamauḷi tanaka bhajisi bhavyarādaru |
Nā pēḷuvudēnu pāṃḍavara manōbhīṣṭe |
Ī paṃchabhautikadalli āva sādhanakāṇe |
Śrīpatināma oṃdē jihvāgradali neneva |
Aupāsana koḍu rudrādigaḷa varade |
Tāpasa jana priya vijaya viṭṭhala mūrtiya |
Śrīpādārcane māḷpa śrī bhū durgā varṇatraye ॥ 5 ॥
6. Jote
Durge hā hē hā hā durge maṃgaḷa durge |
Durgati koḍadiru vijayaviṭhalapriye ॥
***
Phonetic Notes for Chanting:
Durgāṃtargata: Pronounced as Dur-gāṃ-tar-ga-tha. This signifies that she is the power residing within the "difficult" or "hidden" aspects of existence.
Durgāraṇyavāse: Pronounced as Dur-gā-ra-ṇya-vā-se. This refers to her as one who dwells in the "wilderness of material suffering."
Karatala-āmalaka: Though not explicitly in the text, the concept of her grace being "clear and accessible" is emphasized.
Jihvāgradali: Pronounced as Jih-vā-gra-da-li. This emphasizes having the name of the Lord continuously on the "tip of the tongue."
***
ಶ್ರೀ ವಿಜಯದಾಸಾರ್ಯರು ವಿರಚಿಸಿರುವ ಈ 'ದುರ್ಗಾ ಸುಳಾದಿ'ಯು ಭಗವಂತನ ಶಕ್ತಿಯಾದ ಶ್ರೀ ದುರ್ಗಾದೇವಿಯ ಅದ್ಭುತ ಮಹಿಮೆ, ಆಕೆಯ ನಾನಾ ಅವತಾರಗಳು ಮತ್ತು ಭಕ್ತರನ್ನು ಕಾಪಾಡುವ ಆಕೆಯ ಕರುಣೆಯನ್ನು ವರ್ಣಿಸುವ ಅತ್ಯಂತ ಶಕ್ತಿಯುತವಾದ ಕೃತಿಯಾಗಿದೆ. ಈ ಸುಳಾದಿಯು ದುರ್ಗಾದೇವಿಯನ್ನು ಕೇವಲ ಒಂದು ದೇವತೆಯಾಗಿ ನೋಡದೆ, ಜಗನ್ಮಾತೆಯಾಗಿ, ಪ್ರಕೃತಿ ರೂಪಿಯಾಗಿ ಮತ್ತು ಹರಿಯ ಪಾದದಾಸಿಯಾಗಿ ವರ್ಣಿಸುತ್ತದೆ.
ಸಾರಾಂಶ (Summary)
ಧ್ರುವ ಮತ್ತು ಮಟ್ಟತಾಳ: ದುರ್ಗಾದೇವಿಯು ಸಮಸ್ತ ಜಗತ್ತನ್ನು ವ್ಯಾಪಿಸಿದ ಶಕ್ತಿ. ಬ್ರಹ್ಮ-ರುದ್ರಾದಿಗಳಿಗೂ ಆಕೆಯ ಮಹಿಮೆಯನ್ನು ಅರಿಯುವುದು ದುರ್ಗಮ. ಸಂಸಾರದ ದುರ್ಗಂಧದಿಂದ ಬಳಲುವ ನಮಗೆ ಆಕೆಯೇ ಗತಿ. ಕಷ್ಟದ ಸಮಯದಲ್ಲಿ ಆಕೆಯನ್ನು ಸ್ಮರಿಸಿದರೆ ಸಾಕು, ಆಕೆ ಸಾಕ್ಷಿಭೂತಳಾಗಿ ಕಾಪಾಡುತ್ತಾಳೆ. ಅವಳು ಶಂಖ-ಚಕ್ರ-ಗದಾಪದ್ಮಗಳಂತಹ ಆಯುಧಗಳನ್ನು ಧರಿಸಿ ದೇವತೆಗಳಿಗೆ ಸುಖವನ್ನು ನೀಡುವ ಜಗಜ್ಜನನಿ.
ತ್ರಿಪುಡೆ ಮತ್ತು ಮಟ್ಟತಾಳ: ದೇವಿಯು ಕಾಳಿ, ಮಹಾಕಾಳಿ, ನಿದ್ರಾ, ಭದ್ರೆ ಮುಂತಾದ ಬಹುರೂಪಿಣಿ. ಭಕ್ತರ ಕಷ್ಟಗಳನ್ನು ದೂರಮಾಡಿ, ದುಷ್ಟರನ್ನು ಸಂಹರಿಸುವ ರೌದ್ರರೂಪಿಣಿಯೂ ಹೌದು. ಲಕ್ಷ್ಮೀ, ರಮಾ, ಪದ್ಮಾ ಮುಂತಾದ ನಾಮಗಳಿಂದ ಮೆರೆಯುವ ಆಕೆ ಮೂಲ ಪ್ರಕೃತಿ. ಭಗವಂತನ ಲೀಲೆಯಲ್ಲಿ ಸಹಭಾಗಿಯಾದ ಆಕೆಯು ಸಂತರ ಸನ್ನಿಧಿಯಲ್ಲಿ ತನ್ನ ಭಕ್ತರಿಗೆ ರಕ್ಷಣೆ ನೀಡುತ್ತಾಳೆ.
ಆದಿತಾಳ ಮತ್ತು ಜತೆ: ಗೋಪಿನಂದನೆಯಾದ ಆಕೆ ದೈತ್ಯರ ಪಾಲಿಗೆ ಉಗ್ರಳು, ಭಕ್ತರ ಪಾಲಿಗೆ ಸೌಭಾಗ್ಯವಂತೆ. ದುಃಖದ ಕೂಪದಲ್ಲಿ ಬಿದ್ದವರನ್ನು ಎತ್ತಿ ಮೋಕ್ಷದ ಸೋಪಾನವನ್ನು ತೋರುವವಳು. ಪಂಚಭೂತಗಳ ಮಧ್ಯದಲ್ಲಿ ಆಕೆಯ ನೆನಪು ಒಂದೇ ನಮಗೆ ತಾರಕ ಮಂತ್ರ. ದುರ್ಗಾದೇವಿಯು ಸದಾ ನಮ್ಮನ್ನು ದುರ್ಗತಿಯಿಂದ ಕಾಪಾಡಿ, ವಿಜಯವಿಠ್ಠಲನ ಪಾದಕಮಲಗಳಲ್ಲಿ ಭಕ್ತಿಯನ್ನು ಕರುಣಿಸಲಿ ಎಂದು ದಾಸರು ಪ್ರಾರ್ಥಿಸಿದ್ದಾರೆ.
ಅರ್ಥ (Meaning Parawise)
೧. ಧ್ರುವತಾಳ (ದುರ್ಗಾ ಸ್ತುತಿ ಮತ್ತು ಮಹಿಮೆ)
ಅರ್ಥ: ಓ ದುರ್ಗೆ, ನೀನು ದುಷ್ಟರನ್ನು ಸಂಹರಿಸುವವಳು. ನಿನ್ನನ್ನು ಅರಿಯುವುದು ಬ್ರಹ್ಮ, ರುದ್ರಾದಿಗಳಿಗೂ ಕಷ್ಟ (ದುರ್ಲಭ). ನೀನು ಭೂಮಿ, ಆಕಾಶ, ಪಾತಾಳ ಎಲ್ಲೆಡೆಯೂ ವ್ಯಾಪಿಸಿದ್ದೀಯೆ. ಸಂಸಾರವೆಂಬ ಈ ಲೋಕವು ದುರ್ಗಂಧಮಯವಾಗಿದೆ, ಇಲ್ಲಿಂದ ಪಾರಾಗುವ ದಾರಿ ನನಗೆ ಕಾಣುತ್ತಿಲ್ಲ. ಮಹಾದುರ್ಗೆಯೇ, ದುಷ್ಟರ ಕಾಟ ಹೆಚ್ಚಾಗಿದೆ, ನನ್ನನ್ನು ಕಾಪಾಡು. ಕಾಡು, ಪರ್ವತ, ಕ್ರೂರ ಮೃಗಗಳು, ಭೂತ-ಪ್ರೇತಗಳಂತಹ ಘೋರ ಕಷ್ಟಗಳು ಬಂದಾಗ, ನಿನ್ನನ್ನು ಒಂದೇ ಬಾರಿ 'ದುರ್ಗೆ' ಎಂದು ಕೂಗಿದರೂ ಸಾಕು, ನೀನು ಸಾಕ್ಷಿಭೂತಳಾಗಿ ಬಂದು ಕಾಪಾಡುತ್ತೀಯೆ. ವಿಜಯವಿಠ್ಠಲನ ಪಾದಾಶ್ರಯದಲ್ಲಿ ನಾನು ಬದುಕುವಂತೆ ಕರುಣಿಸು.
೨. ಮಟ್ಟತಾಳ (ಆಯುಧಧಾರಿಣಿ ಮತ್ತು ದೇವತಾ ವಂದನೆ)
ಅರ್ಥ: ಶಂಖ, ಚಕ್ರ, ಪರಶು, ನೇಗಿಲು, ಖಡ್ಗ, ಗದೆ, ಧನುಸ್ಸು ಹೀಗೆ ನಾನಾ ಬಗೆಯ ಆಯುಧಗಳನ್ನು ಧರಿಸಿ ಮೆರೆಯುವವಳು ನೀನು. ಲಕ್ಷ್ಮೀ ಮತ್ತು ಸರಸ್ವತಿಯರೂ ನಿನ್ನ ಅಂಶವೇ. ಸಮಸ್ತ ದೇವತೆಗಳನ್ನು ಕರುಣೆಯಿಂದ ನೋಡಿ ಅವರಿಗೆ ಸುಖವನ್ನು ನೀಡುವವಳು. ಓ ಶ್ರೀ, ಭೂ, ದುರ್ಗಾ ಸ್ವರೂಪಿಣಿಯೇ, ನಮ್ಮ ವಿಜಯವಿಠ್ಠಲನ ಪಾದಗಳಿಗೆ ಪರಮ ಭಕ್ತಿಯಿಂದ ನಿನ್ನನ್ನು ಸ್ಮರಿಸುತ್ತೇವೆ, ನಮ್ಮನ್ನು ರಕ್ಷಿಸು.
೩. ತ್ರಿಪುಡೆ ತಾಳ (ದುರ್ಗಾದೇವಿಯ ಬಹುರೂಪಿ ವರ್ಣನೆ)
ಅರ್ಥ: ನಿನ್ನನ್ನು ಸ್ತುತಿಸುತ್ತೇನೆ ಓ ಕಾಳಿ, ಮಹಾಕಾಳಿ. ಚಂದ್ರನಂತಹ ಮುಖ, ಉಗ್ರರೂಪದ ಬಾಹುಗಳುಳ್ಳವಳು ನೀನು. ರಾತ್ರಿಯ ಅಧಿದೇವತೆಯೇ, ಭಕ್ತವತ್ಸಲೆಯೇ, ಓ ಜಗಜ್ಜನನಿಯೇ! ನಿನ್ನದು ಅದ್ಭುತ ಪ್ರಭಾವ. ಕ್ಷೀರಸಾಗರದ ತನಯೆಯೇ, ನೀನು ಮಾಯಾ ಸ್ವರೂಪಿಣಿ. ದೈತ್ಯರನ್ನು ನಿಗ್ರಹಿಸುವವಳು, ರೌದ್ರರೂಪಿಣಿ, ಶುಭ್ರವಾದ ಮೂರ್ತಿ ಹೊಂದಿದವಳು. ನೀನು ಪತಿತ ಪಾವನಿ, ರೋಗಗಳನ್ನು ದೂರ ಮಾಡುವ ಸರ್ವೌಷಧಿ ಸ್ವರೂಪಿಣಿ. ನಮ್ಮ ಮನಸ್ಸಿಗೆ ಶಾಂತಿಯನ್ನು ನೀಡಿ, ಈ ಭೂಮಿಯ ಮೇಲೆ ಸುಖವಾಗಿ ಬಾಳುವಂತೆ ಕರುಣಿಸು. ವಿಜಯವಿಠ್ಠಲನ ಪ್ರಿಯಳಾದ ದುರ್ಗೆಯೆ, ನಿನಗೆ ನಮಸ್ಕಾರ.
೪. ಮಟ್ಟತಾಳ (ಮೂಲ ಪ್ರಕೃತಿ ಮತ್ತು ಲಕ್ಷ್ಮೀ ಸ್ವರೂಪ)
ಅರ್ಥ: ಶ್ರೀ, ಲಕ್ಷ್ಮೀ, ಕಮಲಾ, ರಮಾ ಎನ್ನುವ ನಾನಾ ನಾಮಗಳಿಂದ ಮೆರೆಯುವವಳು ನೀನು. ಸುಶೀಲೆಯೇ, ಸುಂದರಿಯೇ, ಮೃತ್ಯುವನ್ನು ನಾಶ ಮಾಡುವವಳೇ! ಸಂತರ ಸನ್ನಿಧಿಯಲ್ಲಿ ನನಗೆ ನೆಲೆ ಕೊಡು. ನನ್ನ ಪಾಪದ ಭಾರವನ್ನು ನೀನೇ ಹೊತ್ತುಕೊಳ್ಳಬೇಕು. ನಿನ್ನ ಕೀರ್ತಿ ಮತ್ತು ಶಕ್ತಿ ಮೇಲ್ಮಟ್ಟದ್ದು. ನನ್ನ ಮನಸ್ಸು ಚಂಚಲವಾಗಿ ಪರಧನಗಳ ಕಡೆಗೆ ಹೋಗದಂತೆ ತಡೆದು, ನನ್ನನ್ನು ಉದ್ದಾರ ಮಾಡು. ಕೈಲಾಸದಲ್ಲಿ ಪೂಜೆಗೊಳ್ಳುವ ಮೂರುಲೋಕದ ಅಭಿಮಾನಿನಿಯೇ, ವಿಜಯವಿಠ್ಠಲನೊಡನೆ ಲೀಲೆ ಮಾಡುವ ನೀನು ನನಗೆ ರಕ್ಷಣೆಯನ್ನು ನೀಡು.
೫. ಆದಿತಾಳ (ದುಃಖ ನಿವಾರಣೆ ಮತ್ತು ವಿಜಯವಿಠ್ಠಲನ ಪಾದಸೇವೆ)
ಅರ್ಥ: ಗೋಪಿನಂದನೆಯೇ, ದೈತ್ಯರಿಗೆ ಭಯವನ್ನು ಹುಟ್ಟಿಸುವವಳೇ, ಓಂಕಾರ ಸ್ವರೂಪಿಣಿಯೇ! ಕಂಸನಿಗೆ ಭಯವನ್ನು ತೋರಿದವಳು ನೀನು. ಸ್ವಪ್ನದಲ್ಲಿ ನಿನ್ನನ್ನು ನೆನೆದರೆ ಸಾಕು, ಮಹಾ ಆಪತ್ತನ್ನೂ ದೂರ ಮಾಡುತ್ತೀಯೆ. ದುಃಖವೆಂಬ ಕೂಪದಿಂದ ನಮ್ಮನ್ನು ಎತ್ತಿ, ಈ ಜನ್ಮದ ಪಾಪಗಳನ್ನು ಕಳೆದು, ಮೋಕ್ಷದ ಸೋಪಾನವನ್ನು ತೋರು. ಪಂಚಭೂತಗಳ ಈ ಜಗತ್ತಿನಲ್ಲಿ ನನಗೆ ಬೇರೆ ಯಾವುದೇ ಸಾಧನ ಕಾಣುತ್ತಿಲ್ಲ, ನಿನ್ನ ಸ್ಮರಣೆಯೇ ಮುಖ್ಯ. ನಮಗೆ ಕೃಷ್ಣನ ಪಾದದಲ್ಲಿ ಭಕ್ತಿಯನ್ನು ನೀಡು. ತಪಸ್ವಿಗಳಿಗೆ ಪ್ರಿಯನಾದ ವಿಜಯವಿಠ್ಠಲನ ಪಾದವನ್ನು ಅರ್ಚಿಸುವ ಭಾಗ್ಯವನ್ನು ನಮಗೆ ಕರುಣಿಸು.
ಜೊತೆ (ಮುಕ್ತಾಯ)
ಅರ್ಥ: ಓ ದುರ್ಗೆ, ಮಂಗಲಕಾರಕಿಯೇ, ನನಗೆ ದುರ್ಗತಿ (ಕೆಟ್ಟ ಗತಿ) ನೀಡಬೇಡ. ವಿಜಯವಿಠ್ಠಲನಿಗೆ ಪ್ರಿಯಳಾದವಳೇ, ನಮ್ಮನ್ನು ಕಾಪಾಡು.
***
This deeply powerful and protective hymn, Durgā Suḷādi, was composed by the great saint Sri Vijaya Dasaru (Ankita: Vijaya Viṭhṭhala).
In this composition, Sri Vijaya Dasaru venerates Goddess Durga not merely as a distinct deity, but as the primordial power (Śakti) and the eternal consort who facilitates the devotional journey toward Sri Hari. She is depicted as the ultimate protector who shields the seeker from the "difficult-to-traverse" (Durga) tangles of material existence and guides them toward the feet of Sri Vijaya Viṭhṭhala.
Summary
Dhruva and Matta Talas: The poet addresses Durga as the destroyer of the wicked and the remover of the miseries of Samsara. He acknowledges that even for the gods, her majesty is beyond full comprehension. When the seeker is overwhelmed by the "wilderness" of worldly crises—symbolized by wild animals, ghosts, and negative energies—a single call to her name acts as a shield. She is the presiding deity of all weaponry and the mother who provides the "fruit" of devotion to the gods.
Trivida and Matta Talas: Durga is identified with various forms including Kali, Mahakali, and Lakshmi. She is the destroyer of ignorance and the provider of spiritual wisdom. The poet equates her with the ultimate material and spiritual wealth (Indire/Rama). She is the one who monitors the seeker's progress in the company of saints, carrying the burden of their karmic debts.
Adi Tala: Durga is the protector of the pious and a terror to the demonic. She serves as a "ladder" (Sōpāna) for devotees, helping them climb out of the well of suffering. The poet concludes that since no other path is viable in this material world, the only refuge is the constant mindfulness of the name of Sri Hari, bestowed upon the seeker through Durga’s grace.
Section-wise Meaning
1. Dhruva Tala (The Invocation of the Protector)
Meaning: O Durga, You are the destroyer of the wicked. You are the essence residing within all; You are both difficult to reach and yet easily accessible to the sincere. Your majesty is so profound that even Brahma and Rudra cannot fully fathom it. You permeate the heaven, earth, and the netherworlds. My life in this Samsara feels like a forest of stench; I see no exit. O Mother, the influence of the wicked is overwhelming—please protect me! Even when I am surrounded by the "wilderness" of life—metaphorically described as thick forests, wild beasts, death, and ghosts—a single, desperate cry of "Durga!" is enough to summon Your grace. Be my witness and savior, O Mother. Please enable me to survive by taking refuge at the feet of Vijaya Viṭhṭhala.
2. Matta Tala (The Weapon-Bearer)
Meaning: You shine brilliantly, wielding the conch, discus, battle-axe, plow, sword, lotus, mace, bow, and arrow, alongside the gesture of fearlessness (Abhaya). You are the power behind Lakshmi and the creator-god Brahma. You look upon all gods with grace and grant them the happiness corresponding to their divine nature. O Mother of the universe, who resides in Sri and Bhū, I meditate on You with supreme devotion at the feet of our Vijaya Viṭhṭhala.
3. Trivida Tala (The Many-Formed Mother)
Meaning: I praise You, O Kali, Mahakali! You have infinite arms and a fearsome face, yet Your countenance is as lovely as the moon. You are the Goddess of the night, the protector of the devotee, and the one who sleeps as the dormant power within. You are the destroyer of the burden of the earth and the daughter of the Milk Ocean (Kṣīrābdhi). You provide the path to salvation (Sadgati). You are the destroyer of demons and the one who cleanses all stains of sin.
You are the one with a red tongue, adorned in a garland of rubies, and beyond birth and death. You are the consort of Hari, praised by the Vedas, and pure. O Mother, creator, maintainer, and destroyer—You reside in all medicinal herbs. Please destroy my chronic diseases and grant me the intellect to live happily on this earth. I bow to You with folded hands, O beloved of Vijaya Viṭhṭhalarēya.
4. Matta Tala (The Primordial Nature)
Meaning: You are known by many names—Lakshmi, Kamala, Padma, Rama—the essence of wealth and victory. O auspicious one, You are the destroyer of death. Grant me a place in the company of saints and carry the burden of my existence through the passage of time. My mind, like the wind, is restless and prone to coveting the wealth of others; please rectify this and uplift me. You are the primordial Nature (Mūla Prakṛti), the presiding deity of all letters and sounds. O complete one, adorned with divine ornaments, who plays alongside the Lord of the Milk Ocean, Vijaya Viṭhṭhala, please protect me.
5. Adi Tala (The Ladder to Liberation)
Meaning: O daughter of the Gopis, You are fierce to the demonic lineage but a source of grace to the devotee. You are the essence of the Omkara. When a devotee remembers You even in a dream, You rescue them from the vast ocean of obstacles. You are the leader of the seven islands and are untouched by the impurity of Tamo Guna. You provide the ladder of merit to Your devotees. Please stand within my mind, lift me out of the well of sorrow, and rescue me from the cycle of births. Just as the great ones have sought refuge at Your feet, I seek Your grace. In this world of five elements, I find no other path—please grant me the blessing of constant mindfulness of the name of Sri Hari.
Jate (Conclusion)
Meaning: O Durga, auspicious Durga! Do not consign me to a low destiny (Durgati). O beloved of Vijaya Viṭhṭhala, please protect me!
***
🙏🙏
ReplyDelete