Tuesday, 15 October 2019

ಒದಗಿ ಪಾಲಿಸೋ ಭವಾಂಬುಧಿಯ ದಾಟಿಸೋ ankita pranesha vittala padmanabha teertha stutih

ಒದಗಿ ಪಾಲಿಸೋ ಭವಾಂಬುಧಿಯ ದಾಟಿಸೋ ||ಪ||

ಮದನ ಜಿತ ಭೂಸುರ ಶರಣ್ಯ|
ಪದುಮನಾಭ ಯತಿವರೇಣ್ಯ ||ಅ.ಪ||

ಸದ್ಯ ದೊಡ್ಡ ಮಾತು ಅಪ್ರ|
ಬದ್ಧನಾ ನುಡಿ ಕೇಳು |
ಮಧ್ವ ದ್ವೇಷಿಗಳಲಿಯೆನ್ನ|
ವಿದ್ಯೆ ತೋರಿ ಬದುಕದಂತೆ ||೧||

ಒಡಲಿನಾಸೆಗಾಗಿ ಕಂಡ |
ಕಡೆಗೆ ತಿರುಗೆ ಪ್ರಾಪ್ತಿಯೆಂಬುದುಡುಗಿ 
ಪೋಗಿ ಕೊನೆಗೆ ಮನೆಗೆ |
ಮಿಡುಕಿಕೊಳುತ ಬರುವ ಅಧಮನ ||೨||

ಹಾನಿಲಾಭ ಕ್ಲೇಶ ಮೋದ|
ವೇನು ಆವಕ್ಷಣಕೊದಗಲು|
ಪ್ರಾಣೇಶವಿಠ್ಠಲ ಕರುಣೆಯಿಂದ ತಾನೇ
ಕೊಟ್ಟನೆಂಬ ಸುಮತಿ ||೩||
***


odagi pAliso BavAMbudhiya dATiso ||pa||

madana jita BUsura SaraNya |
padumanABa yativarENya ||a.pa||

sadya doDDa mAtu apra |buddhanA nuDiye kELu ||
madhva dvEShigaLali enna |vidye tOri badukadante||1||

oDalinAsegAgi kanDa |kaDege tirugi prAptiyeMbu ||
duDugi pOgi konege manege |miDukikoLuta baruvadhamana ||2||

hAni lABa klESa mOda |vEnu Ava kShaNakodagalu ||
prANESa viThala karuNeyinda |tAne koTTaneMba sumati ||3||
***

ರಾಗ : ವರಾಳಿ  ತಾಳ : ಅಟ್ಟ 

ಒದಗಿ ಪಾಲಿಸೋ । ಭವಾಂ ।
ಬುಧಿಯ ದಾಟಿಸೋ ।। ಪಲ್ಲವಿ ।।

ಮದನ ಜಿತ ಭೂಸುರ ಶರಣ್ಯ ।
ಪದುಮನಾಭ 
ಯತಿವರೇಣ್ಯ ।। ಅ ನು ।।

ಸದ್ಯ ದೊಡ್ಡ ಮಾತು । ಅಪ್ರ ।
ಬುದ್ಧ ನಾನು ನುಡಿಯ ಕೇಳೋ ।
ಮಧ್ವ ದ್ವೇಷಿಗಳಲಿ ಯೆನ್ನ ।
ವಿದ್ಯೆ ತೋರಿ 
ಬದುಕದಂತೆ ।। ಚರಣ ।।

ಒಡಲಿನಾಸೆಗಾಗಿ ಕಂಡ ।
ಕಡೆಗೆ ತಿರುಗಿ ಪ್ರಾಪ್ತಿಯೆಂಬು ।
ದುಡುಗಿ ಪೋಗಿ ಕೊನೆಗೆ ಮನೆಗೆ ।
ಮಿಡಿಕಿ ಕೊಳುತ 
ಬರುವಧಮನ ।। ಚರಣ ।।

ಹಾನಿ ಲಾಭ ಕ್ಲೇಶ । ಮೋದ ।
ವೇನು ಆವ ಕ್ಷಣಕೊದಗಲು ।
ಪ್ರಾಣೇಶವಿಠಲ ಕರುಣೆಯಿಂದ ।
ತಾನೆ ಕೊಟ್ಟನೆಂಬ 
ಸುಮತಿ ।। ಚರಣ ।।
****

No comments:

Post a Comment