Tuesday, 15 October 2019

ಯಾತರವನೆಂದುಸುರಲಿ ಜಗನ್ನಾಥ ankita neleyadikeshava

ಯಾತರವನೆಂದುಸುರಲಿ ಜಗ
ನ್ನಾಥ ಮಾಡಿದ ಒಂದು ನರರೂಪವಯ್ಯ     ||ಪ||

ಮುಟ್ಟು ಹುಟ್ಟಿನೊಳು ನೆಟ್ಟನೆ ನಾ ಬಂದೆ
ತೊಟ್ಟಿದ್ದೆನಾಗ ತೊಗಲಬಕ್ಕಣ
ಇಷ್ಟರೊಳಗೆ ಒಂದು ವಿವರವರಿಯದಿಂಥ
ಭ್ರಷ್ಟಗೆ ನನಗಿನ್ಯಾತರ ಕುಲವಯ್ಯ          ।।೧।।

ಇಂದ್ರಿಯ ಸುತಕ ದುರ್ಗಂಧದ ಮಲಮೂತ್ರ
ನಿಂದ ಠಾವಲಿ ತನ್ನ ನಿಜವರಿಯದೆ
ಬಂದದ್ದು ಬಚ್ಚಲಗುಣಿ ತಿಂದದ್ದು ಮೊಲೆ ಮಾಂಸ ಇಂಥ
ಅಂಧಕಗೆ ನನಗಿನ್ಯಾತರ ಕುಲವಯ್ಯ       ।।೩।।

ಒಂಬತ್ತು ಎಜ್ಜದೊಳೊಸರುವ ಹೊಲಸದು
ತುಂಬಿ ತುಳುಕುವ ಕೊಡವಾಗಿರಲು
ಇಂಬಿಲ್ಲದೆ ಹೊಲೆಗೊಂಡ ಠಾವಿನಲಿ ಬಂದಂಥ
ಡಂಬಕ ನನಗಿನ್ಯಾತರ ಕುಲವಯ್ಯ          ।।೩।।

ಕರುಳು ಖಂಡ ನಾರುವ ಚರ್ಮ ರೋಹಿತ
ನರಪಂಜರದೀ ಹುರುಳಿಲ್ಲದ
ನರದೇಹ ಹೊತ್ತು ತಿರುಗುವಂತ
ತಿರುಕ ನನಗಿನ್ಯಾತರ ಕುಲವಯ್ಯ             ।।೪।।

ಹಚ್ಚಡದ ಮೇಲೆ ಲಚ್ಚಿಕೆಯಿಟ್ಟಂತೆ
ಹೆಚ್ಚು ಕಡಮೆ ಎಂದು ಹೆಣಗಾಡುತ
ನಿಚ್ಚ ಕಾಗಿನೆಲೆಯಾದಿಕೇಶವನ
ಹುಚ್ಚಗೆ ನನಗಿನ್ಯಾತರ ಕುಲವಯ್ಯ             ।।೫।।
***

Yataravanendusurali jaga
Nnatha madida omdu nararupavayya ||pa||

Muttu huttinolu nettane na bande
Tottiddenaga togalabakkana
Ishtarolage ondu vivaravariyadintha
Brashtage nanaginyatara kulavayya ||1||

Indriya sutaka durgandhada malamutra
Ninda thavali tanna nijavariyade
Bandaddu baccalaguni tindaddu mole mamsa intha
Andhakage nanaginyatara kulavayya ||2||

Ombattu ejjadolosaruva holasadu
Tumbi tulukuva kodavagiralu
Imbillade holegonda thavinali bandantha
Dambaka nanaginyatara kulavayya ||3||

Karulu kannda naruva carma rohita
Narapanjaradi hurulillada
Naradeha hottu tiruguvanta
Tiruka nanaginyatara kulavayya ||4||

Haccadada mele laccikeyittante
Heccu kadame endu henagaduta
Nicca kagineleyadikesavana
Huccage nanaginyatara kulavayya ||5||
***

No comments:

Post a Comment