Tuesday, 1 October 2019

music raaga ಸಂಗೀತದ ರಾಗಗಳು

ಸಂಗೀತದ ರಾಗಗಳು 
music raaga ರಾಗಗಳು

 



#
ಓಂ-ಕಾರವನ್ನು ನಾದ ಬ್ರಹ್ಮವೆಂದು ಸೃಷ್ಠಿ ಮೂಲವೆಂದು ನಾವೆಲ್ಲರು ಕೇಳಿದ್ದೇವೆ.
ಆಧುನಿಕ ವಿಜ್ಞಾನದ ಪ್ರಕಾರವೂ ನಮ್ಮೆದುರು ಕಾಣುವ ಈ ವಿಶ್ವವೆಲ್ಲಾ ಆದಿಮೂಲದಲ್ಲಿ ಒಂದು ಪುಟಾಣಿ ಬಿಂದುವಿನ ಸ್ವರೂಪದಲ್ಲಿದ್ದು (ಸಿಂಗುಲಾರ್ ಪಾಯಿಂಟ್) ಇದ್ದಕ್ಕಿದ್ದಂತೆ ದೊಡ್ಡ ನಾದದೊಡನೆ ಸ್ಫೋಟಗೊಂಡು ಶುರುವಾಯಿತು ಎಂದು ಹೇಳುತ್ತದೆ. ಇದನ್ನು ಅವರು "ಬಿಗ್ ಬ್ಯಾಂಗ್ ಥಿಯರಿ" ಎಂದು ಕರೆದಿದ್ದಾರೆ.
ಸೃಷ್ಟಿ ಮೊದಲುಗೊಂಡ ಆ ನಾದವೇ ಬ್ರಹ್ಮಾಂಡದ ಮೂಲ ಅಥವಾ ನಾದಬ್ರಹ್ಮ.
ಈ ಓಂ-ಕಾರ ಸೃಷ್ಠಿ ಮೂಲ (ಓಂ-ಕಾರ ಸ್ವರೂಪಿ ಬ್ರಹ್ಮ) ಹೌದೋ ಇಲ್ಲವೋ ಎನ್ನುವುದಕ್ಕಿಂತ ಅದು ಸದ್ಯಕ್ಕಂತು ಹಿಂದುಮತದ ಕೇಂದ್ರಬಿಂದುವಾಗಿ ಉಳಿದುಬಿಟ್ಟಿದೇ ಅಷ್ಟೇ.
ಓಂ-ಕಾರ ಸೃಷ್ಠಿ ಮೂಲವೇನೊ ಸರಿ ಅದು ಸ್ವರಮೂಲವು (ಸ್ವರಗಳ+ವ್ಯಂಜನಗಳ ಮೂಲ) ಕೂಡ.
ಸಂಸ್ಕೃತದ ಪ್ರಕಾರ ಓಂ-ಕಾರ "ಅ"+"ಉ"+"ಮ್" ಕಾರಗಳ ಸಂಗಮ.
ಇವು ಮೂರು ಸ್ವರಗಳು ಶಬ್ದದ/ಸದ್ದಿನ ಅಥವಾ ನಮ್ಮೆಲ್ಲ ಮಾತುಗಳ ಮೂಲ.
ಈಚಿನ ದಿನಗಳಲ್ಲಿ ಸದ್ದು ಗದ್ದಲಗಳ ಮೂಲವು ಕೂಡ :)
ನಾದ->ಶಬ್ದ->ಸ್ವರ->ನುಡಿ->ಮಾತು->ಅಕ್ಷರಗಳು->ಬರಹ
ಇನ್ನು ಹಿತಮಿತವಾಗಿ ಹೇಳಬೇಕೆಂದರೆ,
ಓಂ -> ಅ + ಉ + ಮ್ -> ಅಕ್ಷರ ಮಾಲೆ?
ಇದೇನಿದು ಈ ಮೂರು ಸ್ವರಗಳಿಂದ ನೂರಾರು ಅಕ್ಷರಗಳೇ!!!
ಇದನ್ನು ಸಾಧಿಸೋ ಮೊದಲು ಸಪ್ತಸ್ವರಗಳಿಗೆ ಹೆಜ್ಜೆ ಹಾಕೋಣ?
ಇದೇನಪ್ಪ ಇವನು ನಾದಬ್ರಹ್ಮನಿಂದ ನಾದದೇವತೆ ಹತ್ತಿರಕ್ಕೆ ಬಂದ ಅಂತೀರ?
ನನಗೇನೂ ನಿಮಗೆ ಸಂಗೀತ ಕಲಿಸಿಕೊಡಬೇಕು ಅನ್ನೊ ವಿಚಾರ ಇಲ್ಲ.
ಆದರೆ, ಇಲ್ಲಿ ಯಾರು ಸಾಮಾನ್ಯವಾಗಿ ಗಮನಿಸದ ಒಂದು ಅಂಶ ಇದೆ.
ಕನ್ನಡ ಪಠ್ಯ ಪುಸ್ತಕದ ಪ್ರಕಾರ ಸ್ವರಗಳು "ಇ" "ಎ" "ಉ" "ಒ" "ಅ" ಅಲ್ಲವೇ?
ಸಂಗೀತ ಶಾಸ್ತ್ರದ ಈ ಸಪ್ತ ಸ್ವರಗಳಾದ "ಸ", "ರಿ", "ಗ", ಮ", "ಪ", "ದ", "ನಿ",
ಕನ್ನಡ ಪಠ್ಯ ಪುಸ್ತಕದ ಪ್ರಕಾರ ಎಲ್ಲವೂ ವ್ಯಂಜನ ಅಕ್ಷರಗಳೇ!!!
ನನಗೋ ಈ ಸಂಗೀತ ಶಾಸ್ತ್ರ ಪಂಡಿತರು ಏಳು ಸ್ವರಗಳನ್ನು ಬಿಂಬಿಸಲಿಕ್ಕೆ,
ಈ ಏಳು ವ್ಯಂಜನ ಅಕ್ಷರಗಳನ್ನು ಯಾಕೆ ಬಳಸಿದರು ಅನ್ನುವುದೇ ಸೋಜಿಗದ ವಿಷಯ ಅನ್ನಿಸುತ್ತದೆ.
ಬಹುಃಶ ಕಾಲಾನುಗಟ್ಟಲೆ ಕಾಲ ಜರುಗುತ್ತಿದ್ದಂತೆ ಇದರ ಜ್ಞಾನ/ಜಾಣ್ಮೆ ಮಾಸಿ ಹೋಗಿದೆಯೋ ಏನೋ!!!
ಈ ವಿಚಾರದ ಹಾದಿಯಲ್ಲಿ ಈ ಸಪ್ತ-ಸ್ವರಗಳನ್ನು (ಸಪ್ತ ವ್ಯಂಜನಗಳನ್ನು) ಎಳೆ-ಎಳೆಯಾಗಿ ಬಿಡಿಸಿ ಪರಿಶೀಲಿಸಬೇಕು.
ಅದೇನೆ ಇರಲಿ, ಸದ್ಯಕ್ಕೆ ಇಲ್ಲಿ ಇದರಬಗ್ಗೆ ಒಂದಿಷ್ಟು ಮಿತವಾಗಿ ತಿಳಿದುಕೊಳ್ಳೋಣ.
ಹೇಗೆ "ಸ", "ರಿ", "ಗ", ಮ", "ಪ", "ದ", "ನಿ", ಅನ್ನೊ ಈ ಏಳು ಅಕ್ಷರಗಳು ಸಂಗೀತದಲ್ಲಿ ಸ್ವರಗಳನ್ನು ಬಿಂಬಿಸುತ್ತವೊ ಹಾಗೆಯೇ ಇವೇ ಅಕ್ಷರಗಳು ಗದ್ಯ/ಪಠ್ಯದಲ್ಲಿ ಎಲ್ಲ ವ್ಯಂಜನ ಅಕ್ಷರಗಳನ್ನು ಅಂದರೆ, {"ಸ್", "ರ್", "ಗ್", ಮ್", "ಪ್", "ದ್", "ನ್" } ಅನ್ನು ಪ್ರತಿನಿಧಿಸುತ್ತಿವೆ.
ಉದಾಹರಣೆಗೆ,
"ಸ" ಅಕ್ಷರ -> {"ಚ", "ಜ", "ಶ", "ಷ" "ಜ಼", ... ಇತರೆ} ಅಕ್ಷರಗಳನ್ನು ಪ್ರತಿನಿಧಿಸುತ್ತದೆ.
"ರಿ" ಅಕ್ಷರ -> {"ರ", "ಲ", "ಳ", "ೞ", "ಋ"... ಇತರೆ} ಅಕ್ಷರಗಳನ್ನು ಪ್ರತಿನಿಧಿಸುತ್ತದೆ.
"ಗ" ಅಕ್ಷರ -> {"ಗ", "ಕ", "ಘ", "ಕ್ಷ", ... ಇತರೆ} ಅಕ್ಷರಗಳನ್ನು ಪ್ರತಿನಿಧಿಸುತ್ತದೆ.
"ಮ" ಅಕ್ಷರ -> {"ಮ", "ಅಂ" ... ಇತರೆ} ಅಕ್ಷರಗಳನ್ನು ಪ್ರತಿನಿಧಿಸುತ್ತದೆ.
"ಪ" ಅಕ್ಷರ -> {"ಪ", "ಬ", "ವ", "ಫ಼", ... ಇತರೆ } ಅಕ್ಷರಗಳನ್ನು ಪ್ರತಿನಿಧಿಸುತ್ತದೆ.
"ದ" ಅಕ್ಷರ -> {"ತ", "ದ", "ಟ", "ಡ", ... ಇತರೆ} ಅಕ್ಷರಗಳನ್ನು ಪ್ರತಿನಿಧಿಸುತ್ತದೆ.
"ನಿ" ಅಕ್ಷರ -> {"ನ", "ಣ" "ಞ", ... ಇತರ್} ಅಕ್ಷರಗಳನ್ನು ಪ್ರತಿನಿಧಿಸುತ್ತದೆ.
ಈಗ, ಸ್ವರಗಳ ಬಗ್ಗೆ ಒಂದಿಷ್ಟು ಮಾತಾಡೋಣ.
ನಾವೆಲ್ಲ ಕನ್ನಡದಲ್ಲಿ (ಆಡುನುಡಿಯಲ್ಲಿ) ಹತ್ತು ಸ್ವರಗಳನ್ನು ಬಳಸುತ್ತೇವೆ.
{"ಇ" "ಎ" "ಉ" "ಒ" "ಅ"} = ಗಿಡ್ಡ ಸ್ವರಗಳು/ಹ್ರಸ್ವ ಸ್ವರಗಳು.
{"ಈ" "ಏ" "ಊ" "ಓ" "ಆ"} = ಉದ್ದ ಸ್ವರಗಳು/ದೀರ್ಘ ಸ್ವರಗಳು (ಮೇಲಿನ ಸ್ವರಗಳ ಉದ್ದನೆಯ ರೂಪ).
ನಿಜ ಹೇಳಬೇಕೆಂದರೆ ಕನ್ನಡದಲ್ಲಿ ಬರಿ ಐದು ಸ್ವರಗಳಷ್ಟೇ ಇವೆ.
ಆದರೆ, "ಎ" ಅಕ್ಷರ ವ್ಯಾಕರಣಿಗಳ ಪ್ರಕಾರ "ಅ" ಮತ್ತು "ಇ" ಸ್ವರಗಳು ಬೆರೆತು ಬರುವಂತಹದು.
ಅದೇ ರೀತಿ, "ಒ" ಅಕ್ಷರ ವ್ಯಾಕರಣಿಗಳ ಪ್ರಕಾರ "ಅ" ಮತ್ತು "ಉ" ಸ್ವರಗಳ ಬೆರೆತು ಬರುವಂತಹದು.
ಒಟ್ಟಾರೆ ಹೇಳಬೇಕೆಂದರೆ,
ಎಲ್ಲಾ ಸ್ವರ ಅಕ್ಷರಗಳು ಈ ಮೂರು {"ಇ", "ಉ", "ಅ"} ಅಕ್ಷರಗಳ ಪ್ರತಿರೂಪವೇ.
ಎಲ್ಲಾ ವ್ಯಂಜನ ಅಕ್ಷರಗಳು ಒಟ್ಟು ಏಳು {"ಸ್", "ರ್", "ಗ್", ಮ್", "ಪ್", "ದ್", "ನ್" } ಅಕ್ಷರಗಳ ಪ್ರತಿರೂಪವೇ.
ಇದರ ಅರ್ಥ, ಯಾವುದೇ ಒಂದು ಭಾಷೆಯನ್ನು ಸರಿಯಾಗಿ ಬಳಸಲು
ಕೆಲವು (ಕನಿಷ್ಟ ಏಳು) ವ್ಯಂಜನಗಳು ಮತ್ತು ಕೆಲವು (ಕನಿಷ್ಟ ಮೂರು) ಸ್ವರಗಳು ಬೇಕೆಬೇಕು.
ಇಲ್ಲಾವಾದಲ್ಲಿ ಆ ಭಾಷೆ ಆಡು ಮಾತಗದೆ, ಶಬ್ದವಾಗಿ ಉಳಿದುಬಿಡುತ್ತದೆ.
ಇನ್ನೊಂದು ರೀತಿ ಹೇಳಬೇಕೆಂದರೆ,
ಯಾವುದೇ ಭಾಷೆ/ನುಡಿ ಒಟ್ಟು ಈ ಮೇಲೆ ತಿಳಿಸಿದ ಕನಿಷ್ಟ (ಮಿನಿಮಮ್) ಏಳು ವ್ಯಂಜನ ಅಕ್ಷರಗಳಿಲ್ಲದೆ ಮತ್ತು
ಕನಿಷ್ಟ (ಮಿನಿಮಮ್) ಮೂರು ಸ್ವರ ಅಕ್ಷರಗಳಿಲ್ಲದೆ ಪೂರ್ಣವಲ್ಲ.
{"ಸ", "ರಿ", "ಗ", ಮ", "ಪ", "ದ", "ನಿ"}/{"ಸ್", "ರ್", "ಗ್", ಮ್", "ಪ್", "ದ್", "ನ್" } ಏಳು ವ್ಯಂಜನಗಳನ್ನು ಬಿಂಬಿಸುವುದಾದರೆ, {"ಇ", "ಉ", "ಅ"} ಮೂರು ಸ್ವರಗಳನ್ನು ಬಿಂಬಿಸುತ್ತವೆ.
ನಾದ->ಸ್ವರ->ಅಕ್ಷರಗಳು->ಭಾಷೆ
ಅಥವಾ...
ಓಂ -> (ಅ + ಉ + ಮ್) -> (ಅ ಇ ಉ) + (ಸ್ ರ್ ಗ್ ಮ್ ಪ್ ದ್ ನ್) -> ಭಾಷೆ (ಕನ್ನಡ).
ಈ ಹಿನ್ನಲೆಯಲ್ಲಿ ಕನ್ನಡ(ಆಡು ನುಡಿಯ) ಅಕ್ಷರಗಳನ್ನು ನೋಡಿದಾಗ,
ಸ್ವರಗಳು...
ಇ ಎ ಉ ಒ ಅ
ಈ ಏ ಊ ಓ ಆ
ವ್ಯಂಜನಗಳು...
ಕ ಚ ಟ ತ ಪ
ಗ ಜ ಡ ದ ಬ
ಯ ರ ಲ ವ ಸ ಶ ಹ ಳ
ನ ಮ ಣ ಂ
***
ಕರ್ನಾಟಕ ಸಂಗೀತದ ೭೨ ಮೇಳ ರಾಗಗಳು


ಕರ್ನಾಟಕ ಸಂಗೀತದ ಎಪ್ಪತ್ತೇಳು ಮೇಳ ರಾಗಗಳ ಪಟ್ಟಿ ಇಲ್ಲಿದೆ.

ಇಲ್ಲಿ ಪ್ರತಿ ಆರು ರಾಗಗಳಿಗೆ ಒಂದೊಂದು ಚಕ್ರಗಳಿವೆ. ಈ ಚಕ್ರಗಳ ಮಹತ್ವ ನನಗೆ ಅಷ್ಟು ತಿಳಿದಿಲ್ಲ. ಯಾರಾದರೂ ದಯವಿಟ್ಟು ತಿಳಿಸಿ...

ಹಾಗೇ ಎಡಗಡೆಯಲ್ಲಿರುವ ಮೊದಲ ೩೬ ರಾಗಗಳಲ್ಲಿ ಶುದ್ಧ ಮಧ್ಯಮವಿದೆ.

ಹಾಗೇನೇ ಬಲಗಡೆಯಲ್ಲಿರುವ ಕೊನೆಯ ೩೬ ರಾಗಗಳಲ್ಲಿ ಪ್ರತಿ ಮಧ್ಯಮವಿದೆ.

ಉಳಿದಂತೆ, ರಿಷಭ, ಗಾಂಧಾರ, ಧೈವತ, ನಿಷಾದಗಳು ರಾಗಗಳ ಪಟ್ಟಿಯಲ್ಲಿವೆ.

ಯಾವ ಯಾವ ರಾಗಗಳಿಗೆ ಯಾವ ಯಾವ ಸ್ವರ ಬರುತ್ತದೆಂದು ಸುಲಭವಾಗಿ ತಿಳಿದುಕೊಳ್ಳಬಹುದು...


೭೨ ಮೇಳಕರ್ತ ರಾಗಗಳು
ಶುದ್ಧ ಮಧ್ಯಮ ರಾಗಗಳು ಪ್ರತಿ ಮಧ್ಯಮ
ರಾಗಗಳು
ಚಕ್ರದ ಹೆಸರು ಕ್ರಮ ಸಂಖ್ಯೆ ರಾಗದ ಹೆಸರು ರಿಷಭ ಗಾಂಧಾರ ಧೈವತ ನಿಷಾದ ರಾಗದ ಹೆಸರು ಕ್ರಮ ಸಂಖ್ಯೆ ಚಕ್ರದ ಹೆಸರು
೧ನೇ ಇಂದು ಚಕ್ರ
(ರಗ) ೧ ಕನಕಾಂಗಿ ಶುದ್ಧ ಶುದ್ಧ ಶುದ್ಧ ಶುದ್ಧ ಸಾಲಗ ೩೭ ೭ನೇ ಋಶಿ ಚಕ್ರ (ರಗ)
೨ ರತ್ನಾಂಗಿ ಶುದ್ಧ ಶುದ್ಧ ಶುದ್ಧ ಕೈಶಿಕ ಜಲಾರ್ಣವ ೩೮
೩ ಗಾನಮೂರ್ತಿ ಶುದ್ಧ ಶುದ್ಧ ಶುದ್ಧ ಕಾಕಲಿ ಝಾಲವರಾಳಿ ೩೯
೪ ವನಸ್ಪತಿ ಶುದ್ಧ ಶುದ್ಧ ಚತುಶೃತಿ ಕೈಶಿಕ ನವನೀತ ೪೦
೫ ಮಾನವತಿ ಶುದ್ಧ ಶುದ್ಧ ಚತುಶೃತಿ ಕಾಕಲಿ ಪಾವನಿ ೪೧
೬ ತಾನರೂಪ ಶುದ್ಧ ಶುದ್ಧ ಷಟ್
ಶೃತಿ ಕಾಕಲಿ ರಘುಪ್ರಿಯ ೪೨

೨ನೇ ನೇತ್ರ ಚಕ್ರ
(ರಗಿ) ೭ ಸೇನಾವತ ಶುದ್ಧ ಸಾಧಾರಣ ಶುದ್ಧ ಶುದ್ಧ ಗಂವಾಂಬೋಧಿ ೪೩ ೮ನೇ ವಸು ಚಕ್ರ (ರಗಿ)
೮ ಹನುಮತೋಡಿ ಶುದ್ಧ ಸಾಧಾರಣ ಶುದ್ಧ ಕೈಶಿಕ ಭವಪ್ರಿಯ ೪೪
೯ ಧೇನುಕ ಶುದ್ಧ ಸಾಧಾರಣ ಶುದ್ಧ ಕಾಕಲಿ ಶುಭಪಂತುವರಾಳಿ ೪೫
೧೦ ನಾಟಕಪ್ರಿಯ ಶುದ್ಧ ಸಾಧಾರಣ ಚತುಶೃತಿ ಕೈಶಿಕ ಷಡ್ವಿಧಮಾರ್ಗಿಣಿ ೪೬
೧೧ ಕೋಕಿಲಪ್ರಿಯ ಶುದ್ಧ ಸಾಧಾರಣ ಚತುಶೃತಿ ಕಾಕಲಿ ಸುವರ್ಣಾಂಗಿ ೪೭
೧೨ ರೂಪವತಿ ಶುದ್ಧ ಸಾಧಾರಣ ಷಟ್
ಶೃತಿ ಕಾಕಲಿ ದಿವ್ಯಮಣಿ ೪೮

೩ನೇ ಅಗ್ನಿ ಚಕ್ರ
(ರಗು) ೧೩ ಗಾಯಕಪ್ರಿಯ ಶುದ್ಧ ಅಂತರ ಶುದ್ಧ ಶುದ್ಧ ಧವಳಾಂಬರಿ ೪೯ ೯ನೇ ಬ್ರಹ್ಮ ಚಕ್ರ (ರಗು)
೧೪ ವಕುಳಾಭರಣ ಶುದ್ಧ ಅಂತರ ಶುದ್ಧ ಕೈಶಿಕ ನಾಮನಾರಾಮಿಣಿ ೫೦
೧೫ ಮಾಯಾಮಾಳವಗೌಳ ಶುದ್ಧ ಅಂತರ ಶುದ್ಧ ಕಾಕಲಿ ಕಾಮವರ್ಧಿನಿ ೫೧
೧೬ ಚಕ್ರವಾಕ ಶುದ್ಧ ಅಂತರ ಚತುಶೃತಿ ಕೈಶಿಕ ರಾಮಪ್ರಿಯ ೫೨
೧೭ ಸೂರ್ಯಕಾಂತ ಶುದ್ಧ ಅಂತರ ಚತುಶೃತಿ ಕಾಕಲಿ ಗಮನಶ್ರಮ ೫೩
೧೮ ಹಾಟಕಾಂಬರಿ ಶುದ್ಧ ಅಂತರ ಷಟ್
ಶೃತಿ ಕಾಕಲಿ ವಿಶ್ವಂಬರಿ ೫೪

೪ನೇ ವೇದ ಚಕ್ರ
(ರಿಗಿ) ೧೯ ಝಂಕಾರಧ್ವನಿ ಚತುಶೃತಿ ಸಾಧಾರಣ ಶುದ್ಧ ಶುದ್ಧ ಶ್ಯಾಮಲಾಂಗಿ ೫೫ ೧೦ನೇ ದಿಶಿ ಚಕ್ರ (ರಿಗಿ)
೨೦ ನಠಭೈರವಿ ಚತುಶೃತಿ ಸಾಧಾರಣ ಶುದ್ಧ ಕೈಶಿಕ ಷಣ್ಮುಖಪ್ರಿಯ ೫೬
೨೧ ಕೀರವಾಣಿ ಚತುಶೃತಿ ಸಾಧಾರಣ ಶುದ್ಧ ಕಾಕಲಿ ಸಿಂಹೇಂದ್ರಮದ್ಯಮ ೫೭
೨೨ ಖರಹರಪ್ರಿಯ ಚತುಶೃತಿ ಸಾಧಾರಣ ಚತುಶೃತಿ ಕೈಶಿಕ ಹೇಮವತಿ ೫೮
೨೩ ಗೌರೀಮನೋಹರಿ ಚತುಶೃತಿ ಸಾಧಾರಣ ಚತುಶೃತಿ ಕಾಕಲಿ ಧರ್ಮವತಿ ೫೯
೨೪ ವರುಣಪ್ರಿಯ ಚತುಶೃತಿ ಸಾಧಾರಣ ಷಟ್
ಶೃತಿ ಕಾಕಲಿ ನೀತಿಮತಿ ೬೦

೫ನೇ ಬಾಣ ಚಕ್ರ
(ರಿಗು) ೨೫ ಮಾರರಂಜನಿ ಚತುಶೃತಿ ಅಂತರ ಶುದ್ಧ ಶುದ್ಧ ಕಾಂತಾಮಣಿ ೬೧ ೧೧ನೇ ರುದ್ರ ಚಕ್ರ (ರಿಗು)
೨೬ ಚಾರುಕೇಶಿ ಚತುಶೃತಿ ಅಂತರ ಶುದ್ಧ ಕೈಶಿಕ ರಿಷಭಪ್ರಿಯ ೬೨
೨೭ ಸರಸಾಂಗಿ ಚತುಶೃತಿ ಅಂತರ ಶುದ್ಧ ಕಾಕಲಿ ಲತಾಂಗಿ ೬೩
೨೮ ಹರಿಕಾಂಬೋಜಿ ಚತುಶೃತಿ ಅಂತರ ಚತುಶೃತಿ ಕೈಶಿಕ ವಾಚಸ್ಪತಿ ೬೪
೨೯ ಧೀರಶಂಕರಾಭರಣ ಚತುಶೃತಿ ಅಂತರ ಚತುಶೃತಿ ಕಾಕಲಿ ಮೇಚಕಲ್ಯಾಣಿ ೬೫
೩೦ ನಾಗಾನಂದಿನಿ ಚತುಶೃತಿ ಅಂತರ ಷಟ್
ಶೃತಿ ಕಾಕಲಿ ಚಿಕ್ರಾಂಬರಿ ೬೬

೬ನೇ ಋತು ಚಕ್ರ
(ರುಗು) ೩೧ ಯಾಗಪ್ರಿಯ ಷಟ್
ಶೃತಿ ಅಂತರ ಶುದ್ಧ ಶುದ್ಧ ಸಚರಿತ್ರ ೬೭ ೧೨ನೇ ಆದಿತ್ಯ ಚಕ್ರ (ರುಗು)
೩೨ ರಾಗವರ್ಧಿನಿ ಷಟ್
ಶೃತಿ ಅಂತರ ಶುದ್ಧ ಕೈಶಿಕ ಜ್ಯೋತಿಶ್ಮತಿ ೬೮
೩೩ ಗಾಂಗೇಯಭೂಷಣಿ ಷಟ್
ಶೃತಿ ಅಂತರ ಶುದ್ಧ ಕಾಕಲಿ ಧಾತುವರ್ಧಿನಿ ೬೯
೩೪ ವಾಗಧೀಶ್ವರಿ ಷಟ್
ಶೃತಿ ಅಂತರ ಚತುಶೃತಿ ಕೈಶಿಕ ನಾಸಿಕಭೂಷಣಿ ೭೦
೩೫ ಶೂಲಿನಿ ಷಟ್
ಶೃತಿ ಅಂತರ ಚತುಶೃತಿ ಕಾಕಲಿ ಕೋಸಲ ೭೧
೩೬ ಚಲನಾಟ ಷಟ್
ಶೃತಿ ಅಂತರ ಷಟ್
ಶೃತಿ ಕಾಕಲಿ ರಸಿಕಪ್ರಿಯ ೭೨

ಮೇಲೆ ತಿಳಿಸಿರುವ ೭೨ ರಾಗಗಳೂ ಸಂಪೂರ್ಣ ರಾಗಗಳು. ಈ ೭೨ ರಾಗಗಳಿಂದಲೇ ಅನೇಕ ರಾಗಗಳು ಕರ್ನಾಟಕ ಸಂಗೀತದಲ್ಲಿ ಸೃಷ್ಟಿಯಾಗಿರುವುದು.
***

ಮೇಳಕರ್ತ ರಾಗಗಳು
ಸಂಖ್ಯೆ ರಾಗ ಆರೋಹಣ       ಅವರೋಹಣ ಚಕ್ರ

ಕನಕಾಂಗಿ ಸ ರಿ೧ ಗ೧ ಮ೧ ಪ ದ೧ ನಿ೧ ಸ ಸ ನಿ೧ ದ೧ ಪ ಮ೧ ಗ೧ ರಿ೧ ಸ ಚಕ್ರ ೧ ಇಂದು
ರತ್ನಾಂಗಿ ಸ ರಿ೧ ಗ೧ ಮ೧ ಪ ದ೧ ನಿ೨ ಸ ಸ ನಿ೨ ದ೧ ಪ ಮ೧ ಗ೧ ರಿ೧ ಸ ಚಕ್ರ ೧ ಇಂದು
ಗಾನಮೂರ್ತಿ ಸ ರಿ೧ ಗ೧ ಮ೧ ಪ ದ೧ ನಿ೩ ಸ ಸ ನಿ೩ ದ೧ ಪ ಮ೧ ಗ೧ ರಿ೧ ಸ ಚಕ್ರ ೧ ಇಂದು
ವನಸ್ಪತಿ ಸ ರಿ೧ ಗ೧ ಮ೧ ಪ ದ೨ ನಿ೨ ಸ ಸ ನಿ೨ ದ೨ ಪ ಮ೧ ಗ೧ ರಿ೧ ಸ ಚಕ್ರ ೧ ಇಂದು
ಮಾನವತಿ ಸ ರಿ೧ ಗ೧ ಮ೧ ಪ ದ೨ ನಿ೩ ಸ ಸ ನಿ೩ ದ೨ ಪ ಮ೧ ಗ೧ ರಿ೧ ಸ ಚಕ್ರ ೧ ಇಂದು
ತಾನರೂಪಿ ಸ ರಿ೧ ಗ೧ ಮ೧ ಪ ದ೩ ನಿ೩ ಸ ಸ ನಿ೩ ದ೩ ಪ ಮ೧ ಗ೧ ರಿ೧ ಸ ಚಕ್ರ ೧ ಇಂದು
ಸೇನಾವತಿ ಸ ರಿ೧ ಗ೨ ಮ೧ ಪ ದ೧ ನಿ೧ ಸ ಸ ನಿ೧ ದ೧ ಪ ಮ೧ ಗ೨ ರಿ೧ ಸ ಚಕ್ರ ೨ ನೇತ್ರ
ಹನುಮತೋಡಿ ಸ ರಿ೧ ಗ೨ ಮ೧ ಪ ದ೧ ನಿ೨ ಸ ಸ ನಿ೨ ದ೧ ಪ ಮ೧ ಗ೨ ರಿ೧ ಸ ಚಕ್ರ ೨ ನೇತ್ರ
ಧೇನುಕಾ ಸ ರಿ೧ ಗ೨ ಮ೧ ಪ ದ೧ ನಿ೩ ಸ ಸ ನಿ೩ ದ೧ ಪ ಮ೧ ಗ೨ ರಿ೧ ಸ ಚಕ್ರ ೨ ನೇತ್ರ
೧೦ ನಾಟಕಪ್ರಿಯ ಸ ರಿ೧ ಗ೨ ಮ೧ ಪ ದ೨ ನಿ೨ ಸ ಸ ನಿ೨ ದ೨ ಪ ಮ೧ ಗ೨ ರಿ೧ ಸ ಚಕ್ರ ೨ ನೇತ್ರ
೧೧ ಕೋಕಿಲಪ್ರಿಯ ಸ ರಿ೧ ಗ೨ ಮ೧ ಪ ದ೨ ನಿ೩ ಸ ಸ ನಿ೩ ದ೨ ಪ ಮ೧ ಗ೨ ರಿ೧ ಸ ಚಕ್ರ ೨ ನೇತ್ರ
೧೨ ರೂಪವತಿ ಸ ರಿ೧ ಗ೨ ಮ೧ ಪ ದ೩ ನಿ೩ ಸ ಸ ನಿ೩ ದ೩ ಪ ಮ೧ ಗ೨ ರಿ೧ ಸ ಚಕ್ರ ೨ ನೇತ್ರ
೧೩ ಗಾಯಕಪ್ರಿಯ ಸ ರಿ೧ ಗ೩ ಮ೧ ಪ ದ೧ ನಿ೧ ಸ ಸ ನಿ೧ ದ೧ ಪ ಮ೧ ಗ೩ ರಿ೧ ಸ ಚಕ್ರ ೩ ಆಗ್ನಿ
೧೪ ವಕುಲಾಭರಣ ಸ ರಿ೧ ಗ೩ ಮ೧ ಪ ದ೧ ನಿ೨ ಸ ಸ ನಿ೨ ದ೧ ಪ ಮ೧ ಗ೩ ರಿ೧ ಸ ಚಕ್ರ ೩ ಆಗ್ನಿ
೧೫ ಮಾಯಾಮಾಳವ ಗೌಳ ಸ ರಿ೧ ಗ೩ ಮ೧ ಪ ದ೧ ನಿ೩ ಸ ಸ ನಿ೩ ದ೧ ಪ ಮ೧ ಗ೩ ರಿ೧ ಸ ಚಕ್ರ ೩ ಆಗ್ನಿ
೧೬ ಚಕ್ರವಾಕ ಸ ರಿ೧ ಗ೩ ಮ೧ ಪ ದ೨ ನಿ೨ ಸ ಸ ನಿ೨ ದ೨ ಪ ಮ೧ ಗ೩ ರಿ೧ ಸ ಚಕ್ರ ೩ ಆಗ್ನಿ
೧೭ ಸೂರ್ಯಕಾಂತ ಸ ರಿ೧ ಗ೩ ಮ೧ ಪ ದ೨ ನಿ೩ ಸ ಸ ನಿ೩ ದ೨ ಪ ಮ೧ ಗ೩ ರಿ೧ ಸ ಚಕ್ರ ೩ ಆಗ್ನಿ
೧೮ ಹಾಟಕಾಂಬರಿ ಸ ರಿ೧ ಗ೩ ಮ೧ ಪ ದ೩ ನಿ೩ ಸ ಸ ನಿ೩ ದ೩ ಪ ಮ೧ ಗ೩ ರಿ೧ ಸ ಚಕ್ರ ೩ ಆಗ್ನಿ
೧೯ ಝಂಕಾರಧ್ವನಿ ಸ ರಿ೨ ಗ೨ ಮ೧ ಪ ದ೧ ನಿ೧ ಸ ಸ ನಿ೧ ದ೧ ಪ ಮ೧ ಗ೨ ರಿ೨ ಸ ಚಕ್ರ ೪ ವೇದ
೨೦ ನಠಭೈರವಿ ಸ ರಿ೨ ಗ೨ ಮ೧ ಪ ದ೧ ನಿ೨ ಸ ಸ ನಿ೨ ದ೧ ಪ ಮ೧ ಗ೨ ರಿ೨ ಸ ಚಕ್ರ ೪ ವೇದ
೨೧ ಕೀರವಾಣಿ ಸ ರಿ೨ ಗ೨ ಮ೧ ಪ ದ೧ ನಿ೩ ಸ ಸ ನಿ೩ ದ೧ ಪ ಮ೧ ಗ೨ ರಿ೨ ಸ ಚಕ್ರ ೪ ವೇದ
೨೨ ಖರಹರಪ್ರಿಯ ಸ ರಿ೨ ಗ೨ ಮ೧ ಪ ದ೨ ನಿ೨ ಸ ಸ ನಿ೨ ದ೨ ಪ ಮ೧ ಗ೨ ರಿ೨ ಸ ಚಕ್ರ ೪ ವೇದ
೨೩ ಗೌರಿಮನೋಹರಿ ಸ ರಿ೨ ಗ೨ ಮ೧ ಪ ದ೨ ನಿ೩ ಸ ಸ ನಿ೩ ದ೨ ಪ ಮ೧ ಗ೨ ರಿ೨ ಸ ಚಕ್ರ ೪ ವೇದ
೨೪ ವರುಣಪ್ರಿಯ ಸ ರಿ೨ ಗ೨ ಮ೧ ಪ ದ೩ ನಿ೩ ಸ ಸ ನಿ೩ ದ೩ ಪ ಮ೧ ಗ೨ ರಿ೨ ಸ ಚಕ್ರ ೪ ವೇದ
೨೫ ಮಾರರಂಜನಿ ಸ ರಿ೨ ಗ೩ ಮ೧ ಪ ದ೧ ನಿ೧ ಸ ಸ ನಿ೧ ದ೧ ಪ ಮ೧ ಗ೩ ರಿ೨ ಸ ಚಕ್ರ ೫ ಬಾಣ
೨೬ ಚಾರುಕೇಶಿ ಸ ರಿ೨ ಗ೩ ಮ೧ ಪ ದ೧ ನಿ೨ ಸ ಸ ನಿ೨ ದ೧ ಪ ಮ೧ ಗ೩ ರಿ೨ ಸ ಚಕ್ರ ೫ ಬಾಣ
೨೭ ಸರಸಾಂಗಿ ಸ ರಿ೨ ಗ೩ ಮ೧ ಪ ದ೧ ನಿ೩ ಸ ಸ ನಿ೩ ದ೧ ಪ ಮ೧ ಗ೩ ರಿ೨ ಸ ಚಕ್ರ ೫ ಬಾಣ
೨೮ ಹರಿಕಾಂಭೋಜಿ ಸ ರಿ೨ ಗ೩ ಮ೧ ಪ ದ೨ ನಿ೨ ಸ ಸ ನಿ೨ ದ೨ ಪ ಮ೧ ಗ೩ ರಿ೨ ಸ ಚಕ್ರ ೫ ಬಾಣ
೨೯ ಧೀರಶಂಕರಾಭರಣ ಸ ರಿ೨ ಗ೩ ಮ೧ ಪ ದ೨ ನಿ೩ ಸ ಸ ನಿ೩ ದ೨ ಪ ಮ೧ ಗ೩ ರಿ೨ ಸ ಚಕ್ರ ೫ ಬಾಣ
೩೦ ನಾಗಾನಂದಿನಿ ಸ ರಿ೨ ಗ೩ ಮ೧ ಪ ದ೩ ನಿ೩ ಸ ಸ ನಿ೩ ದ೩ ಪ ಮ೧ ಗ೩ ರಿ೨ ಸ ಚಕ್ರ ೫ ಬಾಣ
೩೧ ಯಾಗಪ್ರಿಯ ಸ ರಿ೩ ಗ೩ ಮ೧ ಪ ದ೧ ನಿ೧ ಸ ಸ ನಿ೧ ದ೧ ಪ ಮ೧ ಗ೩ ರಿ೩ ಸ ಚಕ್ರ ೬ ಋತು
೩೨ ರಾಗವರ್ಧಿನಿ ಸ ರಿ೩ ಗ೩ ಮ೧ ಪ ದ೧ ನಿ೨ ಸ ಸ ನಿ೨ ದ೧ ಪ ಮ೧ ಗ೩ ರಿ೩ ಸ ಚಕ್ರ ೬ ಋತು
೩೩ ಗಾಂಗೇಯಭೂಷಿಣಿ ಸ ರಿ೩ ಗ೩ ಮ೧ ಪ ದ೧ ನಿ೩ ಸ ಸ ನಿ೩ ದ೧ ಪ ಮ೧ ಗ೩ ರಿ೩ ಸ ಚಕ್ರ ೬ ಋತು
೩೪ ವಾಗಧೀಶ್ವರಿ ಸ ರಿ೩ ಗ೩ ಮ೧ ಪ ದ೨ ನಿ೨ ಸ ಸ ನಿ೨ ದ೨ ಪ ಮ೧ ಗ೩ ರಿ೩ ಸ ಚಕ್ರ ೬ ಋತು
೩೫ ಶೂಲಿನಿ ಸ ರಿ೩ ಗ೩ ಮ೧ ಪ ದ೨ ನಿ೩ ಸ ಸ ನಿ೩ ದ೨ ಪ ಮ೧ ಗ೩ ರಿ೩ ಸ ಚಕ್ರ ೬ ಋತು
೩೬ ಚಲನಾಟ ಸ ರಿ೩ ಗ೩ ಮ೧ ಪ ದ೩ ನಿ೩ ಸ ಸ ನಿ೩ ದ೩ ಪ ಮ೧ ಗ೩ ರಿ೩ ಸ ಚಕ್ರ ೬ ಋತು
೩೭ ಸಾಲಗ ಸ ರಿ೧ ಗ೧ ಮ೨ ಪ ದ೧ ನಿ೧ ಸ ಸ ನಿ೧ ದ೧ ಪ ಮ೨ ಗ೧ ರಿ೧ ಸ ಚಕ್ರ ೭ ಋಷಿ
೩೮ ಜಲಾರ್ಣವ ಸ ರಿ೧ ಗ೧ ಮ೨ ಪ ದ೧ ನಿ೨ ಸ ಸ ನಿ೨ ದ೧ ಪ ಮ೨ ಗ೧ ರಿ೧ ಸ ಚಕ್ರ ೭ ಋಷಿ
೩೯ ಝಾಲವರಾಳಿ ಸ ರಿ೧ ಗ೧ ಮ೨ ಪ ದ೧ ನಿ೩ ಸ ಸ ನಿ೩ ದ೧ ಪ ಮ೨ ಗ೧ ರಿ೧ ಸ ಚಕ್ರ ೭ ಋಷಿ
೪೦ ನವನೀತ ಸ ರಿ೧ ಗ೧ ಮ೨ ಪ ದ೨ ನಿ೨ ಸ ಸ ನಿ೨ ದ೨ ಪ ಮ೨ ಗ೧ ರಿ೧ ಸ ಚಕ್ರ ೭ ಋಷಿ
೪೧ ಪಾವನಿ ಸ ರಿ೧ ಗ೧ ಮ೨ ಪ ದ೨ ನಿ೩ ಸ ಸ ನಿ೩ ದ೨ ಪ ಮ೨ ಗ೧ ರಿ೧ ಸ ಚಕ್ರ ೭ ಋಷಿ
೪೨ ರಘುಪ್ರಿಯ ಸ ರಿ೧ ಗ೧ ಮ೨ ಪ ದ೩ ನಿ೩ ಸ ಸ ನಿ೩ ದ೩ ಪ ಮ೨ ಗ೧ ರಿ೧ ಸ ಚಕ್ರ ೭ ಋಷಿ
೪೩ ಗವಾಂಬೋಧಿ ಸ ರಿ೧ ಗ೨ ಮ೨ ಪ ದ೧ ನಿ೧ ಸ ಸ ನಿ೧ ದ೧ ಪ ಮ೨ ಗ೨ ರಿ೧ ಸ ಚಕ್ರ ೮ ವಸು
೪೪ ಭವಪ್ರಿಯ ಸ ರಿ೧ ಗ೨ ಮ೨ ಪ ದ೧ ನಿ೨ ಸ ಸ ನಿ೨ ದ೧ ಪ ಮ೨ ಗ೨ ರಿ೧ ಸ ಚಕ್ರ ೮ ವಸು
೪೫ ಶುಭಪಂತುವರಾಳಿ ಸ ರಿ೧ ಗ೨ ಮ೨ ಪ ದ೧ ನಿ೩ ಸ ಸ ನಿ೩ ದ೧ ಪ ಮ೨ ಗ೨ ರಿ೧ ಸ ಚಕ್ರ ೮ ವಸು
೪೬ ಷಡ್ವಿಧಮಾರ್ಗಿಣಿ ಸ ರಿ೧ ಗ೨ ಮ೨ ಪ ದ೨ ನಿ೨ ಸ ಸ ನಿ೨ ದ೨ ಪ ಮ೨ ಗ೨ ರಿ೧ ಸ ಚಕ್ರ ೮ ವಸು
೪೭ ಸುವರ್ಣಾಂಗಿ ಸ ರಿ೧ ಗ೨ ಮ೨ ಪ ದ೨ ನಿ೩ ಸ ಸ ನಿ೩ ದ೨ ಪ ಮ೨ ಗ೨ ರಿ೧ ಸ ಚಕ್ರ ೮ ವಸು
೪೮ ದಿವ್ಯಾಮಣಿ ಸ ರಿ೧ ಗ೨ ಮ೨ ಪ ದ೩ ನಿ೩ ಸ ಸ ನಿ೩ ದ೩ ಪ ಮ೨ ಗ೨ ರಿ೧ ಸ ಚಕ್ರ ೮ ವಸು
೪೯ ಧವಳಾಂಬರಿ ಸ ರಿ೧ ಗ೩ ಮ೨ ಪ ದ೧ ನಿ೧ ಸ ಸ ನಿ೧ ದ೧ ಪ ಮ೨ ಗ೩ ರಿ೧ ಸ ಚಕ್ರ ೯ ಬ್ರಹ್ಮ
೫೦ ನಾಮನಾರಾಯಣಿ ಸ ರಿ೧ ಗ೩ ಮ೨ ಪ ದ೧ ನಿ೨ ಸ ಸ ನಿ೨ ದ೧ ಪ ಮ೨ ಗ೩ ರಿ೧ ಸ ಚಕ್ರ ೯ ಬ್ರಹ್ಮ
೫೧ ಕಾಮವರ್ಧಿನಿ ಸ ರಿ೧ ಗ೩ ಮ೨ ಪ ದ೧ ನಿ೩ ಸ ಸ ನಿ೩ ದ೧ ಪ ಮ೨ ಗ೩ ರಿ೧ ಸ ಚಕ್ರ ೯ ಬ್ರಹ್ಮ
೫೨ ರಾಮಪ್ರಿಯ ಸ ರಿ೧ ಗ೩ ಮ೨ ಪ ದ೨ ನಿ೨ ಸ ಸ ನಿ೨ ದ೨ ಪ ಮ೨ ಗ೩ ರಿ೧ ಸ ಚಕ್ರ ೯ ಬ್ರಹ್ಮ
೫೩ ಗಮನಶ್ರಮ ಸ ರಿ೧ ಗ೩ ಮ೨ ಪ ದ೨ ನಿ೩ ಸ ಸ ನಿ೩ ದ೨ ಪ ಮ೨ ಗ೩ ರಿ೧ ಸ ಚಕ್ರ ೯ ಬ್ರಹ್ಮ
೫೪ ವಿಶ್ವಾಂಬರಿ ಸ ರಿ೧ ಗ೩ ಮ೨ ಪ ದ೩ ನಿ೩ ಸ ಸ ನಿ೩ ದ೩ ಪ ಮ೨ ಗ೩ ರಿ೧ ಸ ಚಕ್ರ ೯ ಬ್ರಹ್ಮ
೫೫ ಶ್ಯಾಮಲಾಂಗಿ ಸ ರಿ೨ ಗ೨ ಮ೨ ಪ ದ೧ ನಿ೧ ಸ ಸ ನಿ೧ ದ೧ ಪ ಮ೨ ಗ೨ ರಿ೨ ಸ ಚಕ್ರ ೧೦ ದಿಶಿ
೫೬ ಷಣ್ಮುಖಪ್ರಿಯ ಸ ರಿ೨ ಗ೨ ಮ೨ ಪ ದ೧ ನಿ೨ ಸ ಸ ನಿ೨ ದ೧ ಪ ಮ೨ ಗ೨ ರಿ೨ ಸ ಚಕ್ರ ೧೦ ದಿಶಿ
೫೭ ಸಿಂಹೇಂದ್ರ ಮಧ್ಯಮ ಸ ರಿ೨ ಗ೨ ಮ೨ ಪ ದ೧ ನಿ೩ ಸ ಸ ನಿ೩ ದ೧ ಪ ಮ೨ ಗ೨ ರಿ೨ ಸ ಚಕ್ರ ೧೦ ದಿಶಿ
೫೮ ಹೇಮಾವತಿ ಸ ರಿ೨ ಗ೨ ಮ೨ ಪ ದ೨ ನಿ೨ ಸ ಸ ನಿ೨ ದ೨ ಪ ಮ೨ ಗ೨ ರಿ೨ ಸ ಚಕ್ರ ೧೦ ದಿಶಿ
೫೯ ಧರ್ಮವತಿ ಸ ರಿ೨ ಗ೨ ಮ೨ ಪ ದ೨ ನಿ೩ ಸ ಸ ನಿ೩ ದ೨ ಪ ಮ೨ ಗ೨ ರಿ೨ ಸ ಚಕ್ರ ೧೦ ದಿಶಿ
೬೦ ನೀತಿಮತಿ ಸ ರಿ೨ ಗ೨ ಮ೨ ಪ ದ೩ ನಿ೩ ಸ ಸ ನಿ೩ ದ೩ ಪ ಮ೨ ಗ೨ ರಿ೨ ಸ ಚಕ್ರ ೧೦ ದಿಶಿ
೬೧ ಕಾಂತಾಮಣಿ ಸ ರಿ೨ ಗ೩ ಮ೨ ಪ ದ೧ ನಿ೧ ಸ ಸ ನಿ೧ ದ೧ ಪ ಮ೨ ಗ೩ ರಿ೨ ಸ ಚಕ್ರ ೧೧ ರುದ್ರ
೬೨ ರಿಷಭಪ್ರಿಯ ಸ ರಿ೨ ಗ೩ ಮ೨ ಪ ದ೧ ನಿ೨ ಸ ಸ ನಿ೨ ದ೧ ಪ ಮ೨ ಗ೩ ರಿ೨ ಸ ಚಕ್ರ ೧೧ ರುದ್ರ
೬೩ ಲತಾಂಗಿ ಸ ರಿ೨ ಗ೩ ಮ೨ ಪ ದ೧ ನಿ೩ ಸ ಸ ನಿ೩ ದ೧ ಪ ಮ೨ ಗ೩ ರಿ೨ ಸ ಚಕ್ರ ೧೧ ರುದ್ರ
೬೪ ವಾಚಸ್ಪತಿ ಸ ರಿ೨ ಗ೩ ಮ೨ ಪ ದ೨ ನಿ೨ ಸ ಸ ನಿ೨ ದ೨ ಪ ಮ೨ ಗ೩ ರಿ೨ ಸ ಚಕ್ರ ೧೧ ರುದ್ರ
೬೫ ಮೇಚಕಲ್ಯಾಣಿ ಸ ರಿ೨ ಗ೩ ಮ೨ ಪ ದ೨ ನಿ೩ ಸ ಸ ನಿ೩ ದ೨ ಪ ಮ೨ ಗ೩ ರಿ೨ ಸ ಚಕ್ರ ೧೧ ರುದ್ರ
೬೬ ಚಿತ್ರಾಂಬರಿ ಸ ರಿ೨ ಗ೩ ಮ೨ ಪ ದ೩ ನಿ೩ ಸ ಸ ನಿ೩ ದ೩ ಪ ಮ೨ ಗ೩ ರಿ೨ ಸ ಚಕ್ರ ೧೧ ರುದ್ರ
೬೭ ಸುಚರಿತ್ರ ಸ ರಿ೩ ಗ೩ ಮ೨ ಪ ದ೧ ನಿ೧ ಸ ಸ ನಿ೧ ದ೧ ಪ ಮ೨ ಗ೩ ರಿ೩ ಸ ಚಕ್ರ ೧೨ ಆದಿತ್ಯ
೬೮ ಜ್ಯೋತಿಸ್ವರೂಪಿಣಿ ಸ ರಿ೩ ಗ೩ ಮ೨ ಪ ದ೧ ನಿ೨ ಸ ಸ ನಿ೨ ದ೧ ಪ ಮ೨ ಗ೩ ರಿ೩ ಸ ಚಕ್ರ ೧೨ ಆದಿತ್ಯ
೬೯ ಧಾತುವರ್ಧಿನಿ ಸ ರಿ೩ ಗ೩ ಮ೨ ಪ ದ೧ ನಿ೩ ಸ ಸ ನಿ೩ ದ೧ ಪ ಮ೨ ಗ೩ ರಿ೩ ಸ ಚಕ್ರ ೧೨ ಆದಿತ್ಯ
೭೦ ನಾಸಿಕಾಭೂಷಿಣಿ ಸ ರಿ೩ ಗ೩ ಮ೨ ಪ ದ೨ ನಿ೨ ಸ ಸ ನಿ೨ ದ೨ ಪ ಮ೨ ಗ೩ ರಿ೩ ಸ ಚಕ್ರ ೧೨ ಆದಿತ್ಯ
೭೧ ಕೋಸಲ ಸ ರಿ೩ ಗ೩ ಮ೨ ಪ ದ೨ ನಿ೩ ಸ ಸ ನಿ೩ ದ೨ ಪ ಮ೨ ಗ೩ ರಿ೩ ಸ ಚಕ್ರ ೧೨ ಆದಿತ್ಯ
೭೨ ರಸಿಕಪ್ರಿಯ ಸ ರಿ೩ ಗ೩ ಮ೨ ಪ ದ೩ ನಿ೩ ಸ ಸ ನಿ೩ ದ೩ ಪ ಮ೨ ಗ೩ ರಿ೩ ಸ ಚಕ್ರ ೧೨ ಆದಿತ್ಯ
***
ಇಂದು ಚಕ್ರ
1. ಕನಕಾಂಗಿ2. ರತ್ನಾಂಗಿ3. ಗಾನಮೂರ್ತಿ4. ವನಸ್ಪತಿ5. ಮಾನವತಿ6. ತಾನರೂಪಿ
ನೇತ್ರ ಚಕ್ರ
7. ಸೇನಾವತಿ8. ಹನುಮತೋಡಿ9. ಧೇನುಕ10. ನಾಟಕಪ್ರಿಯ11. ಕೋಕಿಲಪ್ರಿಯ12. ರೂಪವತಿ
ಅಗ್ನಿ ಚಕ್ರ
13. ಗಾಯಕಪ್ರಿಯ14. ವಕುಲಾಭರಣ15. ಮಾಯಮಾಳವಗೌಳ16. ಚಕ್ರವಾಕ17. ಸೂರ್ಯಕಾಂತ18. ಹಾಟಕಾಂಬರಿ
ವೇದ ಚಕ್ರ
19. ಝಂಕಾರಧ್ವನಿ20. ನಟಭೈರವಿ21. ಕೀರ್ವಾಣಿ22. ಖರಹರಪ್ರಿಯ23. ಗೌರಿಮನೋಹರಿ24. ವರುಣಪ್ರಿಯ
ಬಣ ಚಕ್ರ
25. ಮಾರರಂಜನಿ26. ಚಾರುಕೇಶಿ27. ಸರಸಾಂಗಿ28. ಹರಿಕಾಂಭೋಜಿ29. ಧೀರಶಂಕರಾಭರಣ30. ನಾಗನಂದಿನಿ
ಋತುಚಕ್ರ
31. ಯಾಗಪ್ರಿಯ32. ರಾಗವರ್ಧಿನಿ33. ಗಾಂಗೇಯಭೂಷಿಣಿ34. ವಾಗಧೀಶ್ವರಿ35. ಶೂಲಿನಿ36. ಚಲನಾಟ

ಪ್ರತಿ ಮಧ್ಯಮ ರಾಗಗಳು
ಋಷಿ ಚಕ್ರ
37. ಸಾಲಗ38. ಜಲಾರ್ಣವ39. ಝಾಲವರಾಳಿ40. ನವನೀತ41. ಪಾವನಿ42. ರಘುಪ್ರಿಯ
ವಸು ಚಕ್ರ
43. ಗವಾಂಭೋದಿ44. ಭವಪ್ರಿಯ45. ಶುಭಪಂತುರಾವಳಿ46. ಷಡ್ವಿದಮಾರ್ಗಿನಿ47. ಸುವರ್ಣಾಂಗಿ48. ದಿವ್ಯಮಣಿ
ಬ್ರಹ್ಮ ಚಕ್ರ
49. ಧವಳಾಂಬರಿ50. ನಾಮನಾರಾಯಣಿ51. ಕಾಮವರ್ಧಿನಿ52. ರಾಮಪ್ರಿಯ53. ಗಮನಶ್ರಮ54. ವಿಶ್ವಾಂಬರಿ
ದಿಸಿ ಚಕ್ರ
55. ಶ್ಯಾಮಲಾಂಗಿ56. ಷಣ್ಮುಖಪ್ರಿಯ57. ಸಿಂಹೇಂದ್ರಮಧ್ಯಮ58. ಹೇಮಾವತಿ (ರಾಗ)59. ಧರ್ಮವತಿ60. ನೀತಿಮತಿ
ರುದ್ರ ಚಕ್ರ
61. ಕಾಂತಾಮಣಿ62. ರಿಷಭಪ್ರಿಯ63. ಲತಾಂಗಿ64. ವಾಚಸ್ಪತಿ (ರಾಗ)65. ಮೇಛಕಲ್ಯಾಣಿ66. ಚಿತ್ರಾಂಬರಿ
ಆದಿತ್ಯ ಚಕ್ರ
67. ಸುಚರಿತ್ರ68. ಜ್ಯೋತಿ ಸ್ವರೂಪಿಣಿ69. ಧಾತುವರ್ದಿನಿ70. ನಾಸಿಕಭೂಷಣಿ71. ಕೋಸಲಂ72. ರಸಿಕಪ್ರಿಯ
***

ರುದ್ರಪಟ್ಟಣ

ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಒಂದು ಸಾಮಾನ್ಯ ಸಣ್ಣ ಹಳ್ಳಿ ರುದ್ರಪಟ್ಟಣವು ಕಾವೇರಿನದಿ ದಂಡೆಯಲ್ಲಿ ಇದೆ. ಇಲ್ಲಿ ಸುಮಾರು ನಾಲ್ಕುನೂರು ವರ್ಷಗಳಷ್ಟು ಹಳೆಯದಾದ ಚನ್ನಕೇಶವ ದೇವಾಲಯವಿದೆ. ಅದರ ಜೊತೆಗೆ ಇತ್ತೀಚೆಗೆ ಕಟ್ಟಲ್ಪಟ್ಟಿರುವ ಸಪ್ತಸ್ವರ ಮಂದಿರ ಹಾಗೂ ದ್ವಾದಶ ಸ್ವರ ಸ್ತಂಭ ಮಂಟಪಗಳು ಇಲ್ಲಿನ ವಿಶೇಷಗಳು. ಈ ಗ್ರಾಮ ಶ್ರೀಮಂತ ಸಂಗೀತ ಪರಂಪರೆಯ ಗ್ರಾಮ ಎಂದರೆ ತಪ್ಪಾಗಲಾರದು.

ಈ ಗ್ರಾಮವನ್ನು ವೇದ ಬ್ರಹ್ಮ ಹಾಗೂ ನಾದಬ್ರಹ್ಮರ ಸಂಗಮ ಸ್ಥಾನ ಎನ್ನುತ್ತಾರೆ. ಒಂದು ಹೇಳಿಕೆಯ ಪ್ರಕಾರ ಈ ಹಳ್ಳಿಯ ಮೂಲ ಜನರು ತಮಿಳುನಾಡಿನ ತಿರುನಲ್ವೆಲಿ ಜಿಲ್ಲೆಯ ಸೆಂಗೊಟ್ಟೈ ನಿಂದ ಬಂದು ನೆಲೆಸಿದವರು. ಹೀಗೆ ಬಂದವರಲ್ಲಿ  ಒಂದು ಗುಂಪಿನ ಜನರು ಹಾಸನದ ಕೌಶಿಕಾ ಗ್ರಾಮದಲ್ಲಿ ನೆಲೆಸಿದರೆ ಮತ್ತೊಂದು ಗುಂಪು ಬೆಟ್ಟದಪುರಕ್ಕೆ ಬಂದು ನೆಲಸಿದರು. ಅಲ್ಲಿಂದ ಜನರು ಕಾವೇರಿ ನದಿ ತೀರದಲ್ಲಿ ವಾಸಿಸಲು ಆರಂಭಿಸಿದರು, ಹಾಗೆಯೇ  ರುದ್ರಪಟ್ಟಣದಂತಹ ಗ್ರಾಮವು ರೂಪುಗೊಂಡಿತು ಎಂದು ಹೇಳುತ್ತಾರೆ. ಇಲ್ಲಿ ನೆಲೆಸಿದವರನ್ನು ಸಂಕೇತಿಗಳು ಎಂದು ಕರೆಯಲಾಯಿತು. ಸಂಗೀತ ಹಾಗೂ ವೇದಾಧ್ಯಯನ ಇವರ ಮೂಲ ಕಸುಬಾಯಿತು. ಇವೆರಡೂ ವಿಷಯಗಳಲ್ಲಿ ಇಲ್ಲಿನ ಜನರು ಹೆಚ್ಚಿನ ಸಾಧನೆ ಮಾಡಿದ ವರು ಪರಿಣಿತರು ಎಂದರೆ ತಪ್ಪಾಗಲಾರದು. ಸಂಗೀತ ಕ್ಷೇತ್ರಕ್ಕೆ ಸಾಕಷ್ಟು ಹೆಸರಾಂತ ಕಲಾವಿದರನ್ನು ನೀಡಿರುವುದು ಈ ರುದ್ರಪಟ್ಟಣ. ಸಂಗೀತದಲ್ಲಿ ಇಲ್ಲಿನವರನ್ನು ಮೀರಿಸುವುದು ಕಷ್ಟವೇ ಸರಿ.

ಈ ಚಿಕ್ಕ ಹಳ್ಳಿಯಿಂದ ಕಲೆಗಾಗಿ ಸೇವೆಸಲ್ಲಿಸಿದ ಮಹನಿಯರುಗಳಲ್ಲಿ
ವೆಂಕಟರಮಣಯ್ಯ, ವೆಂಕಟರಾಮಯ್ಶ r.k.ಶ್ರೀಕಂಠನ್, ಶತಾವಧಾನಿಗಳು, ವೀಣೆ ಸುಬ್ಬರಾಯರು, r.k. ಪ್ರಕಾಶ್, ವೀಣೆ ಪದ್ಮನಾಭ, ವೀಣೆ ದೊರೆಸ್ವಾಮಿ, ಮರಿಯಪ್ಪ, ವೀಣೆ ರಂಗಪ್ಪ, r.v. ರಂಗನಾಥ. R.k. ನಾರಾಯಣ್, ಕೃಷ್ಣಶಾಸ್ತ್ರಿ, ರಾಮಸ್ವಾಮಯ್ಯೊಂಗಾರ್, ವೀಣೆ ಕೇಶವಮೂರ್ತಿ, r.k.ಸೂರ್ಯನಾರಾಯಣ, ರುದ್ರಪಟ್ಟಣ ಸಹೋದರರು,
ಶಾಮಶಾಸ್ತಿ, ಗುರುಕಾರ್ ರಾಮಸ್ವಾಮಿ, ವೀಣೆ ದೊರೆಸ್ವಾಮಿ,ಇತ್ತೀಚಿನ ರತ್ನಮಾಲಾ ಪ್ರಕಾಶ್  ಹೀಗೆ ಇನ್ನೂ ಸಾಕಷ್ಟು ಸಂಗೀತದಲ್ಲಿ ಹೆಸರಾಂತರನ್ನು ಕೊಟ್ಟ ಊರು. ಇವರೆಲ್ಲ ಸಂಗೀತವನ್ನು ಅಭ್ಯಸಿಸಿ ಸಾಧನೆಯ ಜೊತೆಗೆ ಪ್ರಚಾರ ಮಾಡಿದವರು.

೨೦೦೨ ರಲ್ಲಿ  ಇಲ್ಲಿನ ಸಂಗಿತಾಸಕ್ತ ಸ್ನೇಹಿತರು ಸೇರಿ ಸಂಗೀತದ ಮಿಲನ ಎನ್ನುವ ಹೆಸರಿನಲ್ಲಿ ಸಂಗೀತ  ಮಹೋತ್ಸವ ಏರ್ಪಡಿಸುತ್ತಾರೆ. ಇದು ಮುಂದುವರೆದಂತೆ ಇಲ್ಲಿನವರೆ R.K.ಪದ್ಮನಾಭ ಅವರಲ್ಲಿ
ರುದ್ರಪಟ್ಟಣ ಗ್ರಾಮ ಮತ್ತೊಂದು ತಿರುವೈಯಾರ್ ಆಗಬೇಕು ಎನ್ನುವ ತುಡಿತ ಹುಟ್ಟುತ್ತದೆ. ಅದೇ ತುಡಿತದಲ್ಲಿ  ಸಂಗೀತ ವಿದ್ವಾನ್, ಕಲಾಭೂಷಣ 
ಡಾ ll  ಆರ್.ಕೆ. ಪದ್ಮನಾಭ ಅವರ ಪರಿಕಲ್ಪನೆಯಲ್ಲಿ  ಮೂಡಿ ಬಂದಿರುವ ದೇವಾಲಯವೇ "ಸಪ್ತಸ್ವರ ದೇವತಾ ಧ್ಯಾನ ಮಂದಿರ".ಇದು ಸಂಗೀತದ ಮಹಾನ್ ಚೇತನಗಳು ಬಾಳಿ ಬದುಕಿದ ಗ್ರಾಮ ಅದ ಕಾರಣ ಸಂಗೀತಕ್ಕೆ ಅನ್ವಯವಾದ ದೇವಾಲಯ ಕಟ್ಟುವ ಯೋಚನೆಯೊಂದು ಇವರಲ್ಲಿ ಮೂಡಿದಾಗ ನಿರ್ಮಾಣ ಆಗಿದ್ದೇ ಈ "ಸಪ್ತಸ್ವರ ದೇವತಾ ಧ್ಯಾನ ಮಂದಿರ" ಸಂಗೀತಕ್ಕೆ ಆಧಾರವಾದದ್ದು ಶ್ರುತಿ, ಶ್ರುತಿಯನ್ನು ಕೊಡುವ ತಂಬೂರಿಯ ಆಕಾರದಲ್ಲಿ ಜಾತಿ ರಹಿತ ಸಂಗೀತದ ದೇವಾಲಯವನ್ನು ಕಟ್ಟುವ ಯೋಜನೆಯಗೆ ೨೦೦೭ ರಲ್ಲಿ ಶಿಲಾನ್ಯಾಸ ಅಗಿ ೨೦೦೮  ಮೇ  ಪೂರ್ಣವಾಗಿ ಲೋಕಾರ್ಪಣೆ ಆಯಿತು.

ಇಲ್ಲಿ ಎಲ್ಲವೂ ೭ಕ್ಕ್ ಅನ್ವಯ ೭ಮೆಟ್ಟಿಲು, ೭ಮೂಲೆಗಳು ೭ ದೇವತೆಗಳು, ೭೨ ಮೇಳಕ್ಕೆ ಅನ್ವಯ ಆಗುವಂತೆ  ಎರಡು ಸಾಲು 36_36 ನಕ್ಷತ್ರಗಳ ಮೂಲಕ ಸೂಚಿಸಲಾಗಿದೆ.  ಸಂಗಿತದಿಂದಲೆ ಷೋಡಶೋಪಚಾರ ಪೂಜೆ ಮಾಡುವುದು ಇಲ್ಲಿನ ವಿಶೇಷ. ಪ್ರತೀ ದೇವತೆಗೆ 7 ನಾಮಾವಳಿಗಳಿಂದ ಪೂಜೆ ನಡೆಯುತ್ತದೆ, ಇದನ್ನು r.k.ಪದ್ಮನಾಭ ಅವರೇ ಬರೆದಿರುವುದು ಮತ್ತೊಂದು ವಿಶೇಷ. 

ಈ ಸಪ್ತಸ್ವರ ಮಂದಿರವು ಒಂದು ಸಸ್ಯೋಧ್ಯಾನದ ನಡುವೆ ತಂಬೂರಿ ಇಟ್ಟಂತೆ  ನಿರ್ಮಿಸಲಾಗಿದೆ. ಈ ದೇವಾಲಯಕ್ಕೆ ಎರಡು ದ್ವಾರಗಳು ಇದ್ದು,  ಒಂದರ ಮೂಲಕ ಪ್ರವೇಶಿಸಿದರೆ ಮತ್ತೊಂದರ ಮೂಲಕ ಹೊರ ಬರುವಂತೆ ಯೋಜಿಸಲಾಗಿದೆ.  ಪ್ರತಿಯೊಬ್ಬರೂ ಇಲ್ಲಿ ಪ್ರವೇಶ ಮಾಡುವಾಗ ತಂಬೂರಿಯ ನಾದ ಹೊಮ್ಮುವಂತೆ, ಸ್ವರಗಳ ನಿನಾದ ಕೇಳುವಂತೆ ತಂತ್ರಜ್ಞಾನ ಅಳವಡಿಸಿದ್ದು, ಪ್ರವೇಶಿಸಿದ ಕೂಡಲೇ ನಮ್ಮನ್ನು ಒಂದು ಧ್ಯಾನ ಲೋಕಕ್ಕೆ ಕೊಂಡೊಯ್ಯುವ ಅನುಭವ ಆಗುತ್ತದೆ.

ದೇವಾಲಯದ  ಮಧ್ಯದಲ್ಲಿ ಸಂಗೀತದ ಅಧಿದೇವತೆ ಸರಸ್ವತಿಯ ವಿಗ್ರಹವಿದ್ದು, ಒಂದು ಪಕ್ಕಕ್ಕೆ ಮೂವರು ದಾಸ ಶ್ರೇಷ್ಠರಾದ ಕನಕ ದಾಸರು ಪುರಂದರ ದಾಸರು ವಾದಿರಾಜರು ಹಾಗೂ ಮತ್ತೊಂದು ಪಕ್ಕದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ತ್ರಿಮೂರ್ತಿಗಳಾದ ತ್ಯಾಗರಾಜರು, ಮೂತ್ತೂಸ್ವಾಮಿ ದೀಕ್ಷಿತರು ಹಾಗೂ ಶ್ಯಾಮಾಶಾಸ್ತ್ರೀ ಗಳು ಹೀಗೆ ಆರು ಜನ ಸಂಗೀತದ ಶ್ರೇಷ್ಠರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಸರಸ್ವತಿ ಮೂರ್ತಿಯ ಮೇಲೆ "ಸ" ಎಂದು ಬರೆದಿದ್ದು ಉಳಿದ ಮೂರ್ತಿಗಳ ಮೇಲೆ ರಿ ಗ ಮ ಪ ಧ ನಿ ಎಂದು ಸಂಗೀತದ ಸ್ವರಗಳನ್ನು ಬರೆಯಲಾಗಿದೆ. ಇಲ್ಲಿ ಸಂಗೀತದ ಮೂಲಕವೇ ಪೂಜೆ ನಡೆಯುವುದು ಅತೀ ವಿಶೇಷ. ಇಲ್ಲಿ ಸಂಗೀತ ತಿಳಿದ ಭಕ್ತರು ಮನದಣಿಯೆ ಹಾಡಿ ಸಂಗೀತ ಸೇವೆ ಮಾಡಬಹುದು.ಇಂದು ಇದು ವಿಶ್ವ ಪ್ರಸಿದ್ದವಾಗಿದೆ. ಎಲ್ಲೆಡೆಯಿಂದ ಸಾಕಷ್ಟು ಜನ ಬರ್ತಾರೆ.

ರುದ್ರಪಟ್ಟನ ಸಂಗೀತೋತ್ಸವ ಸಮಿತಿ ಟ್ರಸ್ಟ್  ಮುಖಾಂತರ ಪ್ರತೀ ವರ್ಷ ಮೇ ತಿಂಗಳಲ್ಲಿ ಬೃಹತ್ ಸಂಗೀತೋತ್ಸವ  ನಡೆಯುತ್ತದೆ. ಆಗಂತೂ ಸಂಗೀತ ಪ್ರೇಮಿಗಳಿಗೆ ಸಂಗೀತದ ರಸದೌತಣವೇ ಸರಿ.

ಇದರೊಂದಿಗೆ ಇತ್ತೀಚೆಗೆ ಲೋಕಾರ್ಪಣೆ ಅದ ದ್ವಾದಶ ಸ್ವರ ಸ್ತಂಭ ಮಂಟಪ ಕೂಡಾ ಅತ್ಯಂತ ವಿಶಿಷ್ಟ. ಹೊರಗಿನಿಂದ ನೋಡಲೇ ಮನಸೂರೆಗೊಳ್ಳುವ ಹಾಗಿದೆ. ಶಿಲಾಬಾಲಿಕೆ ಹಾಗೂ ಸುಂದರ ಕಂಬಗಳಿಂದ ಕೂಡಿದ್ದು ಬಹಳ ಸೊಗಸಾಗಿದೆ. ಇನ್ನು ಒಳಭಾಗವಂತೂ ಸಂಗೀತ ಸರಸ್ವತಿಯ ಆವಾಸ ಸ್ಥಾನ ಎನ್ನುವಂತಿದೆ.

ಜನ ಸಾಮಾನ್ಯರಿಗೆ ಹಾಗೂ ಸಂಗೀತದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದವರಿಗೆ ಸಂಗೀತದಲ್ಲಿ 7 ಸ್ವರಗಳಿವೆ ಎನ್ನುವುದು ಮಾತ್ರ ತಿಳಿದಿರುತ್ತದೆ. ಆದರೆ ಈ 7 ಸ್ವರಗಳಲ್ಲಿ ಕೆಲವೊಂದು ಸ್ವರಾಗಳಲ್ಲಿ ಅತೀ ಸೂಕ್ಷ್ಮವಾದ ವ್ಯತ್ಯಾಸಗಳಿಂದ  ಬೇರೆ ಬೇರೆಯಾಗಿದ್ದು ಅವುಗಳನ್ನು ೧೨ ಸ್ವರಗಳಾಗಿ ಗುರುತಿಸಬಹುದು.  

ಇನ್ನೂ ವಿಸ್ತಾರವಾಗಿ ಹೇಳಬೇಕೆಂದರೆ
ಶಾಸ್ತ್ರೀಯ ಸಂಗೀತ ನಿಂತಿರುವುದು ಇದೇ 12  ಸ್ವರಸ್ಥಾನಗಳ ಮೇಲೆ. ಈ 12 ಸ್ವರ ಸ್ಥಾನಗಳ ಸ್ತಂಭಗಳನ್ನು ಇಲ್ಲಿ ಕಾಣಬಹುದು. ಇವುಗಳು  "ಆಧಾರ ಷಡ್ಜ, ಶುದ್ಧ ರಿಶಭ, ಚತುಶೃತ ರಿಷಭ, ಸಾಧಾರಣ ಗಾಂಧಾರ, ಅಂತರ ಗಾಂಧಾರ, ಶುದ್ಧ ಮಧ್ಯಮ, ಪ್ರತಿ ಮಧ್ಯಮ,  ಪಂಚಮ, ಶುದ್ದ ದೇವತಾ, ಚತುಶೃತ ದೇವತಾ, ಕೈಶಕಿ ನಿಷಾಧ , ಕಾಕಲಿ ನಿಷಾಧ, ತಾರಾ ಷಡ್ಜ ಹೆಸರಿನ  ಈ 12 ಕಂಬಗಳಾಗಿವೆ. ಈ 12 ಕಂಬಗಳಿಂದ ಒಂದೊಂದು ಸ್ವರದ ನಾದ ಹೊಮ್ಮುವುದನ್ನ ನಾವೇ ಸುತ್ತಿಗೆಯಿಂದ ಹೊಡೆದು ಕೇಳಬಹುದು ಹಾಗೂ ಅನುಭವಿಸಬಹುದು.

ಹೊಯ್ಸಳರ ಕಾಲದ ದೇವಾಲಯಗಳಲ್ಲಿ ಇರುವ ಸಂಗೀತ ಸ್ತಂಭಗಳ ನೆನಪನ್ನು ತರುತ್ತವೆ ಈ ಕಂಬಗಳು. (ಹಂಪೆ,ಬೇಲೂರು ಹಾಗೂ ಸಚ್ಚಿದಾನಂದ ಆಶ್ರಮದಲ್ಲಿ ಸಪ್ತ ಸ್ವರಗಳ ಸ್ತಂಭಗಳಿವೆ. ಇದರಲ್ಲಿ ಶಂಕರಾಭರಣ ಸ್ಕೇಲ್ ನ ಸ್ತಂಭಗಳು ಇವೆ). ಅದರೆ  ದ್ವಾದಶ ಸ್ವರ ಸ್ತಂಭ ಗಳ ಪರಿಕಲ್ಪನೆ ಹಾಗೂ ನಿರ್ಮಾಣ ಇಡೀ ವಿಶ್ವದಲ್ಲಿಯೇ ಇಲ್ಲಿಯೇ ಪ್ರಥಮ ಎನ್ನುವುದು ನಮ್ಮ ಕರ್ನಾಟಕದ ಹೆಮ್ಮೆಗೆ ಮತ್ತೊಂದು ಗರಿ ಎಂದರೆ ತಪ್ಪಾಗಲಾರದು. ಇದೆಲ್ಲಕ್ಕೂ ಕಾರಣರು ನಮ್ಮವರೇ ಆದ  R.K.ಪದ್ಮನಾಭ ಅವರು.

ಚಿತ್ರ ಹಾಗೂ ಮಾಹಿತಿ:ಅಂತರ್ಜಾಲ
***

No comments:

Post a Comment