sung as purandara vittala ankita
check ?
same song written by purandara dasaru
ಮರೆತೆಯೇನೋ ರಂಗ ಮಂಗಳಾಂಗ ।।ಪ।।
ಕೋಲು ಕೈಯಲಿ ಕೊಳಲು ಜೋಲುಗಂಬಳಿ ಹೆಗಲ
ಮ್ಯಾಲೆ ಕಲ್ಲಿಚೀಲಿ ಕೊಂಕಳಲ್ಲಿ
ಕಾಲಗಡಗವನಿಟ್ಟು ಕಾಡೊಳಿಹ ಪಶುಹಿಂಡ
ಲಾಲಿಸುವ ಬಾಲಕರ ಮ್ಯಾಳದೊಳಗಿದ್ದೆನ್ನ ।।೧।।
ಕಲ್ಲು ಮಣಿ ಕವಡೆಯನು ಕಾಡೊಳಿಹ ಗುಲಗಂಜಿ
ಸಲ್ಲದೊಡವೆಯ ನೀನು ಸರ್ವಾಂಗಕೆ
ಅಲ್ಲಲ್ಲೆಸೆಯೆ ಧರಿಸಿ ನವಿಲುಗರಿಗಳ ಗೊಂಡೆ
ಅಲ್ಲಿ ಗೊಲ್ಲರ ಕೂಡ ಚಲ್ಲಾಟ ಮಾಡುತಲಿ ।।೨।।
ಸಿರಿದೇವಿ ಬಂದು ಸೇರಿದ ಬಳಿಕ ಲೋಕದಲಿ
ಸಿರಿ ಅರಸನೆಂದು ಸೇವಕರರಿವರೋ
ಶರಣಾಗತರ ಪೊರೆವ ಶ್ರೀ ರಂಗವಿಠಲಯ್ಯ
ನರಸಿಂಗ ನೀನಿರುವ ಪರಿಯ ಮುಂದಿನ ಸಿರಿಯು ।।೩।।
***
ರಾಗ ಕಾಂಬೋಧಿ ತಾಳ ಝಂಪೆ (raga, taala may differ in audio)
Mareteyeno ranga mangalanga turukara kayvalli tondanagiddenna ||pa||
Kolu kaiyali kolalu jolugambali hegala
Myale kallicili konkalalli
Kalagadagavanittu kadoliha pasuhinda
Lalisuva balakara myaladolagiddenna ||1||
Kallu mani kavadeyanu kadoliha gulaganji
Salladodaveya ninu sarvangake
Allalleseye dharisi navilugarigala gonde
Alli gollara kuda callata madutali ||2||
Siridevi bandu serida balika lokadali
Siri arasanendu sevakararivaro
Saranagatara poreva sri rangavithalayya
Narasinga niniruva pariya mundina siriyu ||3||
***
No comments:
Post a Comment