ಬಂದೆ ಗುರುರಾಯ ನಿಮ್ಮ
ಸಂದರುಶನಂಗಳ ಬಯಸಿ ||ಪ||
ನೊಂದು ಸಂಸಾರದಲಿ ಬೆಂದು ಬೇಡುತ ನಾ ||ಅ.ಪ||
ರಾಮದೂತನಾಗಿ ತ್ರಿಜಗದೊಳಗೆ ಮೇಲಾಗಿ ಪೋಗಿ
ಕಾಮಿನೀ ಮಣಿಗೆ ಪ್ರೆಮದುಂಗುರುವನಿತ್ತೆ ||1||
ಚಂದಕುಲದಲ್ಲೇ ಪುಟ್ಟಿ ಚಂದ ಕುಮತಿಗಳ ತರಿದು
ಭಂಡಿಲನ್ನವನುಂಡು ದುರುಳನ ಚೆಂಡಾಡಿದ ಕೇಳಿ ||2||
ಕಟ್ಟಕಡೆಯಲ್ಲೇ ಪುಟ್ಟಿ ಕೆಟ್ಟಕುಮತಗಳ ತರಿದು
ಪುಟ್ಟ ಜಗನ್ನಾಥ ವಿಠಲನ ಕೊಂಡಾಡಿದ ಕೇಳಿ ||3||
***
No comments:
Post a Comment