Wednesday, 1 September 2021

ಅರುಕ್ಯುಳ್ಳ ಗುರುಪಾದವಾಶ್ರೈಸೊ ಎನ್ನ ಮನವೆ ಎgವಾಗ್ಯನುಭವ ankita mahipati


ಕಾಖಂಡಕಿ ಶ್ರೀ ಮಹಿಪತಿರಾಯರು

ಅರುಕ್ಯುಳ್ಳ ಗುರುಪಾದವಾಶ್ರೈಸೊ ಎನ್ನ ಮನವೆ ಎgವಾಗ್ಯನುಭವ ಸುರಕಿ ಕೊಳ್ಳೊ P

ಮರಹುಮರದೀಡ್ಯಾಡಿ ಅರಹುವಿನೊಳರಿತು ಗೂಡಿ ಕುರುಹ ಗುರುತುಮಾಡಿ ಸ್ಥಿರವು ಕೂಡಿ 1 

ತಿರಹು ಮರ್ಹವಿನ ಖೂನ ಅರಹು ಮರ್ಹವಿನ ಸ್ಥಾನ ಇರಹು ಆಗೀಹ್ಯ ಘನ ಬೆರಿಯೋ ಧ್ಯಾನಾ 2 

ಜೀವ ಶಿವರಸಂದು ಠಾವಮಾಡಲು ಬಂದು ಭವಕ ಬೀಳುವನೆಂದು ಭಾವಿಕನೆಂದು 3 

ಅಗ್ರಗುರು ಸುವಿದ್ಯ ಶೀಘ್ರಸಾಧ್ಯ 4 

ಕೀಲು ತಿಳಿದರೆ ಸಾಕು ಜಾಲವ್ಯಾತಕೆ ಬೇಕು ಮೂಲಗುರುಪಾದ ಮಹಿಪತಿ ನೀ ಸೋಂಕು 5

***


No comments:

Post a Comment