ankita ವಿಠಲೇಶ
ರಾಗ: ಜುಂಜೂಟಿ ತಾಳ: ದಾದರಾ
ಬಂದ ಚಂದ್ರಾ ಚಂದದಿಂದ ಬಂದ ನೋಡೈ
ಬೃಂದಾವನದಿಂದ ಮೆರೆದುಬಂದ ನೋಡೈ ಅಕೋ !! ಪ
ರಾಘವೇಂದ್ರನೆಂಬ ಚಂದ್ರ ಬಂದ ನೋಡೈ
ರಾಘವೇಶನಂಘ್ರಿಧ್ಯಾನದಿಂದ ನೋಡೈ
ಯೋಗಕೀರ್ತಿಕಾಂತಿಯಿಂದ ಬಂದ ನೋಡೈ
ತ್ಯಾಗರಾಜ ರಥವನೇರಿ ಬಂದ ನೋಡೈ ಅಕೋ !! 1
ಬಾಲ ಪ್ರಹ್ಲಾದ ಚಂದ್ರ ಬಂದ ನೋಡೈ
ಲೀಲೆಯಿಂದ ಗರಳಕುಡಿದ ಕಂದ ನೋಡೈ
ಖೂಳಪಾಪಿಖಳನಗತಿಸಿ ಬಂದ ನೋಡೈ
ಲೋಲ ನಾರಸಿಂಹನನು ತಂದ ನೋಡೈ ಅಕೋ !! 2
ವ್ಯಾಸರಾಜೇಂದ್ರ ಚಂದ್ರಾ ಬಂದ ನೋಡೈ
ವೇಷತಾಳಿ ರಾಜ್ಯಭಾರದಿಂದ ನೋಡೈ
ದೋಷಕಳೆವ ದಿವ್ಯಬೋಧದಿಂದ ನೋಡೈ
ರಾಶಿಗ್ರಂಥರಚನೆಗೈದು ತಂದ ನೋಡೈ ಅಕೋ !! 3
ಕರೆವ ಕಾಮಧೇನುವೆನಿಸಿ ಬಂದ ನೋಡೈ
ಮೆರೆವ ಕಲ್ಪವೃಕ್ಷನಾಗಿ ನಿಂದ ನೋಡೈ
ಮೊರೆಯ ಕೇಳಿ ಭಕ್ತಜನಕೆ ಬಂದನೋಡೈ
ಧರೆಯಭಾಗ್ಯ ಜ್ಯೋತಿಯೆನಿಸಿ ನಿಂದ ನೋಡೈ ಅಕೋ !! 4
ಧರಮರಾಜ್ಯಚಕ್ರವರ್ತಿ ಬಂದ ನೋಡೈ
ಪರಮಪೂಜ್ಯ ಕಾವ್ಯಮೂರ್ತಿ ನಿಂದ ನೋಡೈ
ದುರುಮತಾದ್ರಿಕುಲಿಶ ಕೀರ್ತಿಚಂದ್ರ ನೋಡೈ
ಪರಿಮಳಾರ್ಯ ಸಾರ್ವಭೌಮ ಬಂದ ನೋಡೈ ಅಕೋ !! 5
ಸುರರು ಪುಷ್ಪವೃಷ್ಟಿಗೈವ ಸಿರಿಯು ನೋಡೈ
ಮೊರೆವ ವಾದ್ಯ ವೇದಘೋಷಸ್ವರವ ಕೇಳೈ
ಕರವಮುಗಿದು ಕುಣಿವ ಪರಿಯ ನೋಡೈ
ಸುರಪನಂತೆ ಶೋಭಿಸುವನು ತ್ವರದಿ ನೋಡೈ ಅಕೋ !! 6
ಭವದತಾಪದಿಂದ ಗುರುವೆ ನೊಂದೆ ನೋಡೈ
ಕವಿದ ತಾಮಸಾಂಧನಾಗಿ ನಿಂದೆ ನೋಡೈ
ಆವಿದು ಕಂದನೆಂದು ಕರುಣದಿಂದ ನೋಡೈ
ಜವದಿ ವಿಠಲೇಶನೊಲ್ಮೆ ತಂದ ನೋಡೈ ಅಕೋ !! 7
***
ಬಂದ ಚಂದ್ರಾ ಚಂದದಿಂದ ಬಂದ ನೋಡೈ
ಬೃಂದಾವನದಿಂದ ಮೆರೆದುಬಂದ ನೋಡೈ-ಅಕೋ !! || ಪ ||
ರಾಘವೇಂದ್ರನೆಂಬ ಚಂದ್ರ ಬಂದ ನೋಡೈ
ರಾಘವೇಶನಂಘ್ರಿಧ್ಯಾನದಿಂದ ನೋಡೈ
ಯೋಗ ಕೀರ್ತಿಕಾಂತಿಯಿಂದ ಬಂದ ನೋಡೈ
ತ್ಯಾಗರಾಜ ರಥವನೇರಿ ಬಂದ ನೋಡೈ-ಅಕೋ !! || 1 ||
ಬಾಲ ಪ್ರಹ್ಲಾದ ಚಂದ್ರ ಬಂದ ನೋಡೈ
ಲೀಲೆಯಿಂದ ಗರಳಕುಡಿದ ಕಂದ ನೋಡೈ
ಖೂಳಪಾಪಿಖಳನ ಗತಿಸಿ ಬಂದ ನೋಡೈ
ಲೋಲ ನಾರಸಿಂಹನನು ತಂದ ನೋಡೈ-ಅಕೋ !! || 2 ||
ವ್ಯಾಸರಾಜೇಂದ್ರ ಚಂದ್ರಾ ಬಂದ ನೋಡೈ
ವೇಷತಾಳಿ ರಾಜ್ಯಭಾರದಿಂದ ನೋಡೈ
ದೋಷ ಕಳೆವ ದಿವ್ಯಬೋಧದಿಂದ ನೋಡೈ
ರಾಶಿ ಗ್ರಂಥ ರಚನೆ ಗೈದು ತಂದ ನೋಡೈ-ಅಕೋ !! || 3 ||
ಕರೆವ ಕಾಮಧೇನುವೆನಿಸಿ ಬಂದ ನೋಡೈ
ಮೆರೆವ ಕಲ್ಪವೃಕ್ಷನಾಗಿ ನಿಂದ ನೋಡೈ
ಮೊರೆಯ ಕೇಳಿ ಭಕ್ತಜನಕೆ ಬಂದನೋಡೈ
ಧರೆಯ ಭಾಗ್ಯಜ್ಯೋತಿಯೆನಿಸಿ ನಿಂದ ನೋಡೈ-ಅಕೋ !! || 4 ||
ಧರಮರಾಜ್ಯಚಕ್ರವರ್ತಿ ಬಂದ ನೋಡೈ
ಪರಮಪೂಜ್ಯ ಕಾವ್ಯಮೂರ್ತಿ ನಿಂದ ನೋಡೈ
ದುರುಮತಾದ್ರಿ ಕುಲಿಶಕೀರ್ತಿಚಂದ್ರ ನೋಡೈ
ಪರಿಮಳಾರ್ಯ ಸಾರ್ವಭೌಮ ಬಂದ ನೋಡೈ-ಅಕೋ !! || 5 ||
ಸುರರು ಪುಷ್ಪವೃಷ್ಟಿಗೈವ ಸಿರಿಯು ನೋಡೈ
ಮೊರೆವ ವಾದ್ಯ ವೇದಘೋಷಸ್ವರವ ಕೇಳೈ
ಕರವಮುಗಿದು ಕುಣಿವ ಪರಿಯ ನೋಡೈ
ಸುರಪನಂತೆ ಶೋಭಿಸುವನು ತ್ವರದಿ ನೋಡೈ-ಅಕೋ !! || 6 ||
ಭವದತಾಪದಿಂದ ಗುರುವೆ-ನೊಂದೆ ನೋಡೈ
ಕವಿದ ತಾಮಸಾಂಧನಾಗಿ ನಿಂದೆ ನೋಡೈ
ಆವಿದು ಕಂದನೆಂದು ಕರುಣದಿಂದ ನೋಡೈ
ಜವದಿ ವಿಠಲೇಶನನಲ್ಮೆ ತಂದ ನೋಡೈ-ಅಕೋ !! 7 ||
***
Banda candra candadinda banda nodai brndavanadinda meredubanda nodai-ako!! || Pa ||
raghavendranemba candra banda nodai raghavesananghridhyanadinda nodai
yoga kirtikantiyinda banda nodai tyagaraja rathavaneri banda nodai-ako!! || 1 ||
Bala prahlada candra banda nodai lileyinda garalakudida kanda nodai
khulapapikhalana gatisi banda nodai lola narasinhananu tanda nodai-ako!! || 2 ||
Vyasarajendra candra banda nodai vesatali rajyabharadinda nodai
dosa kaleva divyabodhadinda nodai rasi grantha racane gaidu tanda nodai-ako!! || 3 ||
Kareva kamadhenuvenisi banda nodai mereva kalpavrksanagi ninda nodai
moreya keli bhaktajanake bandanodai dhareya bhagyajyotiyenisi ninda nodai-ako!! || 4 ||
Dharamarajyacakravarti banda nodai paramapujya kavyamurti ninda nodai
durumatadri kulisakirticandra nodai parimalarya sarvabhauma banda nodai-ako!! || 5 ||
Suraru puspavrstigaiva siriyu nodai moreva vadya vedaghosasvarava kelai
karavamugidu kuniva pariya nodai surapanante sobhisuvanu tvaradi nodai-ako!! || 6 ||
Bhavadatapadinda guruve-nonde nodai kavida tamasandhanagi ninde nodai
avidu kandanendu karunadinda nodai javadi vithalesananalme tanda nodai-ako!! 7 ||
***
No comments:
Post a Comment