Wednesday, 1 September 2021

ಕಂಡೆನು ಕೌತುಕ ಮಂಡಲದೊಳಗೊಂದು ಹೊಯ್ಯಂದ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು


ಕಂಡೆನು ಕೌತುಕ ಮಂಡಲದೊಳಗೊಂದು ಹೊಯ್ಯಂದ ಡಂಗುರವ ಮಂಡಿಯ ಮಸಿಯಲಖಂಡಿತವಾಗ್ಯದೆ p


ಖೋಯೆಂದು ಕೂಗುತ ಕಾಯದೊಳಗದೆ ಮಾಯದ ಮರೆಯಲುಪಾಯ ಮುಚ್ಚಿದ ನೋಡಿ 1 

ಝೇಂ ಝೇಂ ಝೇಂ ಝೇಂ ಝೇಂಕರಿಸುತದೆ ಕಂಜನಾಭನ ಕರುಣಾನಂದನೋಡಿರ್ಯೊ 2 

ಘೇಳೆನಿಸುತದÀ ತಾಳಮೃದಂಗವು ಒಳಹೊರಗಿದು ಧಿಮಿಗುಡುತದ 3 

ಅನುಹಾತ ಧ್ವನಿಅನುಭವ ನೋಡಿರೋ ಅನುದಿನ ಸಾಧಿಸಿ ಘನ ಬೆರದಾಡಿರೊ 4 

ಆನಂದೊಬ್ರಹ್ಮದ ಆಟವಿದುನೋಡಿ ಏನೆಂದ್ಹೇಳಲಿ ಸ್ವಾನುಭವದ ಸುಖ 5 

ತುಂಬಿತುಳುಕುತದೆ ಅಂಬುಜಾಕ್ಷನ ಮಹಿಮೆ ಕುಂಭಿನಿಯೊಳು ನಿಜ ಗಂಭಗುರುತ ನೋಡಿ 6 

ಸಾಧಿಸಿ ನೋಡಿರೊ ಶ್ರೀ ಸದ್ಗುರು ಶ್ರೀಪಾದ ಗಾದಿಯ ಮಾತಲ್ಲ ಭೇದಿಸಿ ನೋಡದು 7 

ಶುಕಾದಿ ಮುನಿಗಳ ಸುಖಾಶ್ರಯವಿದು ಏಕಾಕ್ಷರ ಬ್ರಹ್ಮ ಏಕೋಚಿತ್ತದಿ 8 

ಮೊತ್ತರಾಗಿ ತನ್ನ ನೆತ್ತಿಯೊಳಗಿದೆ ಉತ್ತಮರ ಸುತ್ತ ಮುತ್ತ ಸೂಸುತದ9 

ಗುರು ಕೃಪೆಯಿಲ್ಲದೆ ಗುರುತವಾಗದಿದು ಬರೆ ಮಾತಿನ ಮಾಲೆಗೆ ಸೆರಗ ಸಿಲುಕದಿದು 10 

ಗುರುತವಿಟ್ಟು ಗುರುವಿನ ಮಹಿಮೆಯ ತರಳ ಮಹಿಪತಿ ನಿನ್ನೊಳು ನೋಡೆಂದು 11

***


No comments:

Post a Comment