Wednesday, 1 September 2021

ಕಾಯಬೇಕೆಲೋ ರಂಗಾ ಎನ್ನಾ ನೀ ಕಾಯಬೇಕೆಲೋ ರಂಗಾ ankita mahipati

 ಕಾಖಂಡಕಿ ಶ್ರೀ ಕೃಷ್ಣದಾಸರು


ಕಾಯಬೇಕೆಲೋ ರಂಗಾ ಎನ್ನಾ | ನೀ ಕಾಯಬೇಕೆಲೋ ರಂಗಾ | ತೋಯಜಾಕ್ಷ ದಯಾನಿಧಿ ತರಣೋ | ಪಾಯದೋರೋ ಶುಭಾಂಗಾ ಪ 


ದುರಿತ ಸಮೂಹವ ಬಂದು | ಶಣಸುತ | ಹರಿದಂಜಿಸುತಿವೆಯಿಂದು | ನರಹರಿ ನಿನ್ನ ನಾಮದ ಘನಗರ್ಜನೆಯ |ಕೊಡು | ಮರಳು ಮಾನವನಿವನೆಂದು 1 

ಕುಂದನಾರಿಸಿಯೆಲ್ಲಾ ನೋಡಲು | ಒಂದೆರಡೆನಲಿಕ್ಕಿಲ್ಲಾ | ಮಂದಮತಿ ಅವಗುಣ ರಾಶಿ ಪತಿತರ | ವೃಂದದೊಳೆನ್ನಧಿಕಲಾ2 

ಕೊಂಬು ನೀಚನವಾದರೆ ಬಿರದಾ | ಡಂಬರ ನೀಚನಲ್ಲಾ | ಇಂಬುದೋರೆಲೆ ನಿನ್ನ ದಾಸರ ದಾಸ | ಎಂಬದೆನ್ನಧಿಕಾರವಿಲ್ಲಾ 3 

ಬಿನ್ನಹವೆನ್ನ ಮುರಾರಿ | ಪಾಲಿಸಿ | ನಿನ್ನ ಚರಣವ ದೋರಿ | ಧನ್ಯಗೈಸೆಲೋ ಗುರುವರ ಮಹಿಪತಿ ಚಿನ್ನನೊಡಿಯ ಸಹಕಾರಿ 4

***


No comments:

Post a Comment