Wednesday, 1 September 2021

ನೋಡೆ ನೋಡೆ ನೋಡೆ ಗೋಪಿನೋಡೆ ನಿನ್ನ ಮಗನಾಟವ ankita hayavadana

 ..

ನೋಡೆ ನೋಡೆ ನೋಡೆ ಗೋಪಿನೋಡೆ ನಿನ್ನ ಮಗನಾಟವ ಪ.


ಮಧುರೆಯೊಳಗಿರುವೋದೆ ಕಠಿಣವೆಮದನಜನಕನ ಕಾಟವೆ ಹೆದರಿಸಿಬೆದರಿಸಿ ನಮ್ಮಾ ನಮ್ಮಗುಗಳ ಚೂಟೋಡಿ ಹೋದನೆ1


ನಿನ್ನಿನಾ ದಿನದಲ್ಲಿ ಬಂದುಗನ್ನಗತಕ ಕೃಷ್ಣನುಹೆಣ್ಣಮಕ್ಕಳ ಕಣ್ಣ ಮುಚ್ಚಿಬೆಣ್ಣೆಯ ಮೆಲುವುತ ಓಡಿದ2


ಜಾರಬುದ್ಧಿ ಮಾಡದಿರೆಂತಪೇಳಿದೆವು ಬಹಳ ನಾವುಕಂಸಾಂತಕ ಕೃಷ್ಣ ನಮ್ಮನೆಹಾಳುಮಾಡಿ ಹೋಳಿ ಆಡಿದ 3


ನಿತ್ಯ ನಮ್ಮನೆಯಲ್ಲಿ ಬಂದುಸುತ್ತ ಸುತ್ತಿ ಸುಳಿಯುತಾನೆಅಚ್ಚುತಾನಂತಾದ್ರೀಶನುರಚ್ಚಿಗೆ ಬರುತಾನೆ ಗೋಪಿ 4


ಸರಸ ತೇಜಿಯನೇರಿ ಮೆರೆವನೆಹರುಷ ಹಯವದನ ಕಾಂತನೆಪರಮಪಾವನಚರಿತ್ರಗಾತ್ರನೆಹರುಷದಿ ಭಕ್ತರನು ಪೊರೆವನೆ 5

***


No comments:

Post a Comment