ಕಾಖಂಡಕಿ ಶ್ರೀ ಕೃಷ್ಣದಾಸರು
ಆರು ನಿನ್ನಂಘ್ರಿ ಭಜಿಸುವರೈಯ್ಯಾ ಸಾರಹೃದಯರ ಪ್ರೀಯ ಸುರಮುನಿಜನ ಧ್ಯೇಯಾ ಪ
ಕಮಲಭವಶಿವ ಇಂದ್ರ ನೀನಾಗೇನು ರಮೆ ಧರಾದೇವಿ ರಮಣಾದರೇನು ಯಮದೂತರೊಳಗಾದ ಆಜಮಿಳ ಪೆಸೆ ರ್ಗೊಳೆ ಸುಮನಿಸುರ ನಯ್ಯವನ ಕಾಯದಿದ್ದೊಡೆ 1
ಜಗದುತ್ಪತ್ತಿ ಸ್ಥಿತಿಲಯ ಕರ್ತನಾಗೇನು ಮಗುಳಿ ಸೂತ್ರಧಾರಿಯಾದರೇನು ಸುಗುಣ ಪ್ರಲ್ಹಾದಂಬರೀಷ ಕರಿವರ ಧ್ರುವಾದಿಗಳನುದ್ದರಿಸಿ ತಾರಿಸದಿದ್ದಡೆ 2
ಎಂದೆಂದು ಅರ್ತಜನ ಬಂದು ದೀನಾನಾಥ ತಂದೆ ಮಹಿಪತಿ ಸ್ವಾಮಿಯಂದಡೇನು ಮಂದಮತಿ ಕುಂದಘನವಂದು ನೋಡದ್ದೆ ಇಂದು ನಂದನಗೆ ಸೇವೆ ಪದಲಿಡದಿದ್ದರೆ 3
***
No comments:
Post a Comment