Wednesday, 1 September 2021

ಜಯ ದೇವ ಜಯದೇವ ಜಯರಾಮಲಿಂಗಾ ಜಯಜಯವೆಂದು ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಜಯದೇವ ಜಯದೇವ ಜಯರಾಮಲಿಂಗಾ ಜಯಜಯವೆಂದು ಬೆಳಗುವೆ ಆರತಿ ಸುರತುಂಗಾ ಪ 


ಸ್ವಾನಂದದ ನಿಜಕಾಶೀಪುರದಿಂದ ಅತ್ಯರಳಿ ನಾನಾಸ್ಥಳಗಳ ನೋಡುತ ಬಂದು ನೀತೀರ್ಥದಲಿ ದೀನೋದ್ದಾರ ಕಾಪಾಪನಾಶನಿ ಹರಿಸುತಲಿ ಖೂನವ ತೋರಿದೆ ಓಂಕಾರೇಶ್ವರನೆನಿಸುತಲಿ 1 

ಕಾಲ ಕೆರಾಘವಸುಖದರುಕ್ಷಣಲೆಂದು ತಳಿಯೊಳುಖ್ಯಾತಿಗೆ ಬಂದು ರಾಮೇಶ್ವರನೆಂದು ನಲಿದರುಗಿರಿಜಾನಂದಿಸರ್ವದೇವರು ಬಂದು ಸಲುಹುವೆ ಭಕ್ಷರಿಗಿಷ್ಟಾರ್ಥವ ನೀಡುತಲಿಂದು 2 

ನಿನ್ನಯ ಮಹಿಮೆಯ ಹೊಗಳಲು ಮನುಜರಿಗಳವಲ್ಲಾ ಮುನ್ನಾಭರಣವ ಆಗಿಹಶಶಿನೇತಾಬಲ್ಲಾ ಎನ್ನೊಳು ಬೀರುತರಕ್ಷಿಸುಘನ ತಾರಕನೊಲ್ಲಾ ಸನ್ನುತ ಮಹಿಪತಿ ನರದನ ಪ್ರಭು ಪಾರ್ವತಿನಲ್ಲಾ 3

****


No comments:

Post a Comment