Wednesday, 1 September 2021

ಆರೇ ಸುಳಿದವನಿಂದು|ನೀರೇ ತಂದುವನ ತೋರೇ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಆರೇ ಸುಳಿದವನಿಂದು|ನೀರೇ ತಂದುವನ ತೋರೇ ಪ 

ನೀಲಮೇಘದ ಕಾಂತಿಮೈಯ್ಯಾ|ನೋಡೇಮದನಯ್ಯಾ| ಕಾಲಲುಂದಿಗೆ ಹೆಜ್ಜೆಘಿಲು ಘಲುಕೆನುವಾ| ಮೇಲು ಪಿತಾಂಬರ ಝಳ ಝಳಿಸುವ ನವನಾರೇ 1 
ಮೆರೆವ ವಡ್ಯಾಣ ಘಂಟೆಸಿರಿಯಾ|ಕವಿಹೊಗಳಲರಿಯಾ| ಬೆರಳುಂಗುರ ಕಡಗ ಕೇಯೂರಾ| ಕೌಸ್ತುಭ ಮಾಲೆಯ ಹೊರವನಾರೇ 2 
ಕಡೆಗಣ್ಣನೋಟ ಪದುಮದೆಲಿಯೋ|ಮೋಹನದಾಬಲೆಯಾ| ಕುಂಡಲ ಹೊಳೆವ ಕಪೋಲಾ| ಇಡಿದನೇ ನಗೆಯ ಸುನಾಶಿಕ ಸರಳವನಾರೇ 3 
ಮೃಗದ ಪಣಿಯಾಲುಂಗುರ ಗುರುಳೋ|ಕಾವನಸರಳೋ| ಝಗಝಗಿಸುವ ರನ್ನ ಮುಕುಟದ ಚೆಲುವಾ| ಬಗೆ ಬಗೆ ಸೊಬಗಿನ ನವರಸಗರೆವನಾರೇ 4 
ತರುಣೀ ಮುನ್ನಿನಸುಕೃತಬಂದು|ವದಗಿ ತಾ ಇಂದು| ಗುರು ಮಹಿಪತಿ ಪ್ರಭು ಚರಣವದೋರಿ|ಮರುಳೆನ್ನಾ ಮಾಡಿದ ದೀನೋದ್ಧಾರಿವನಾರೇ 5
***

No comments:

Post a Comment