ಕಾಖಂಡಕಿ ಶ್ರೀ ಕೃಷ್ಣದಾಸರು
ಆರೋಗಣೆಯ ಮಾಡೋ ಮುಕುಂದಾ ಪ
ಆರೋಗಣೆಯ ಮಾಡೋ ವಾರಿಜರಮಣಾ ಸಾರಿದವರಿಗೆ ಭಯನಿವಾಕರದಿ 1
ಪೊಂಬ್ಹರಿವಾಣದಿರನ್ನ ಬಟ್ಟಲುಗಳು ಅಂಬುಜಾನನಸಿರಿ ಲಕುಮಿಯವೇರಿಸಿ 2
ಶಾಲ್ಯೋದನಸೂಪಘೃತ ಪರಿಪರಿಯಾ ಶಾಲ್ಯಾಶಾಖಂಗಳಸವಿಯನೆ ಕೊಳುತಾ3
ಪಂಚಭಕ್ಷವು ಕೆನೆಹಾಲು ಸೀಖರಿಣಿಯಾ ಮುಂಚೆ ಪಾಯಸಪರಿಪರಿಶರ್ಕರದಲಿ4
ದದ್ಯೋದನದಲುಪಗಾಯಿಸ್ವಾದಿಸುತ ದಮನ ಕಲ್ಪಿತರುವೆಲ್ಲಾ5
ಪತ್ರಸುಮನತೋಯ ಭಕ್ತರು ಕೊಟ್ಟು ದರ್ಥಲಿ ಕೊಂಬ ದಯಾಳುತನದಲಿ6
ತಂದೆ ಮಹಿಪತಿ ನಂದನ ಸಾರಥಿ ಎಂದೆಂದು ಸ್ಮರಣೆ ಗೊದಗಿ ಮುದ್ದು ಮುಖದಿ7
****
No comments:
Post a Comment