..
kruti by tandeshreenarahari
ಬಂದಿಹ ನೋಡಿರಿ ಸುಂದರ ಸುಕುಮಾರನಂದ ಸುನಂದನ ಯದು ಕಂದಾ ಪ
ಮಾಧವ ಮಧುಸೂದನಾ ಮಂದಸ್ಮಿತಾನನ ಕುಂದರ ವದನ ಪೂರ್ಣ ಚಂದ್ರ ಶತಾನನ ಗುಣ ಪೂರ್ಣಾ ಅ.ಪ.
ವೇಣುನಾದ ವಿಶಾರದಾ ಗಾನಾಪಹೃತಸ್ತ್ರೀ ಮಾನಾಪಹರಣ ಮಾನಸ ಮಂದಿರ ಸ್ತ್ರೀಲೋಲಾ 1
ಜಾರ ಚೋರ ಶಿಖಾಮಣಿ ಘೋರದುರಿತಾರಣ್ಯ ಪಾರ ಪದಕ ನಾಮ ಅ ಪಾರ ಮಹಿಮ ಶಿರಿ ಮಾನವ 2
ಪೂತನಾ ಪ್ರಾಣಾಪಹ ವಾತಾತ್ಮ ಜಾರಿಹರಿ ಪೂತಾತ್ಮಾ ನಾರಿ ಜಾರ ಖ್ಯಾತಾತ್ಮ ನರವೀರ ಪ್ರೀತಾತ್ಮ 3
ಭೂಧರಾರ ಮಾಧರ ಸುಧಾಪಾನದಿ ಮತ್ತಸದಮಾಲಾ ಚಿತ್ತ ಮುದಾ ಪೂರಿತಗಾತ್ರ ಸರ್ವತ್ರ 4
ಮಾಧವ ರಾಧಾ ಪ್ರಿಯ ತಂದೆ ಶ್ರೀನೃಹರಿಯೆ ಇಂದೂ ವಂದಿಪೆ ನಿನ್ನ ಬಂಧನ ಬಿಡಿಸೆಯ್ಯ ಗೋವಿಂದ 5
***
No comments:
Post a Comment