Friday 6 August 2021

ಸುಧೆಯನು ಸುರಿಸುವ ಸಮಯವಿದುಸದಯಾಕರ ankita sirigurutandevarada vittala

..

Kruti by ಸಿರಿಗುರುತಂದೆವರದವಿಠಲರು sirigurutandevarada vittala 


ಸುಧೆಯನು ಸುರಿಸುವ ಸಮಯವಿದುಸದಯಾಕರ ಶ್ರೀಯಾದವ ಕುಲಪತಿ ಪ.


ವೃಂದಾವನದಿ ನಿಂದಿರಿ ಕೊಳಲನೂದಿಆನಂದಬಿಡಿಸಿದ ಇಂದಿರೆ ರಮಣನೇ 1


ಬಾಲೆರ ಮಧ್ಯದಿ ಕೋಲನೆ ಹಾಕುತಲೀಲೆಯ ತೋರಿದ ಬಾಲಗೋಪಾಲನೆ2


ಶಿರಿಯರಸ ತಂದೆವರದವಿಠಲನೆಚರಣಕಮಲ ತೋರೋ ಹೃದಯ ಮಂದಿರದಲಿ 3

***


No comments:

Post a Comment