..
kruti by Srida Vittala Dasaru Karjagi Dasappa
ಬಿಡೊ ಬಿಡೊ ಬಡಿವಾರಾ ಬೀರದಿರು
ನಡಿ ನಡಿ ಹೋಗೈ ಸಾಕು ಪ
ಗಂಡನುಳ್ಳವಳೆಂದರಿಯದೆ ನೀನೆಂಥಾ
ಪುಂಡಾಟಿಕೆ ಯಾರಿಗೆ ಬೇಕೊ 1
ತಕ್ಕ ಬುದ್ಧಿ ಹೇಳುವರಿಲ್ಲದೆ ನಿ -
ನ್ನಕ್ಕ ತಂಗಿಯರನೆ ಸೋಕೊ 2
ಶ್ರೀದವಿಠಲ ಸುಮ್ಮನೆ ಹೋಗದೆ ನಡು
ಬೀದಿಯೊಳಗೆ ಮಾಡೊರೆ ಹೋಕು 3
***
No comments:
Post a Comment