Sunday, 1 August 2021

ಕೇಳಿದ್ಯಾ ಈ ಕೌತುಕ ಕೇಳಿದ್ಯಾ ಕೇಳಿದ್ಯಾ ಕೌತುಕವನ್ನು ಈಗ ankita shreeda vittala

 ..

kruti by Srida Vittala Dasaru  Karjagi Dasappa


ಕೇಳಿದ್ಯಾ ಈ ಕೌತುಕ ಕೇಳಿದ್ಯಾ

ಕೇಳಿದ್ಯಾ ಕೌತುಕವನ್ನು ಈಗ ಪ


ಪೇಳುವೆ ನಾ ನಿಮಗಿನ್ನು ಆಹಾ

ಹೇಳಾದೆ ಮಧುರೆಗೆ ಜಾರ ಚೋರ ಕೃಷ್ಣ ಅ.ಪ.


ಕರೆಯೆ ಬಂದಿಹನೊಬ್ಬ ಚೋರಾ ತನ್ನ

ಕಿರಿಯಯ್ಯನಂತೆ ಅಕ್ರೂರಾ

ಊರ ಹೊರ ಹೊಳಿಯಲಿ ಬಟ್ಟ ತೇರಾ ಆಹಾ

ಹಿರಿಯನೆಂದು ಕಾಲಿಗೊರಗೋರಾ

ರಾಮಕೃಷ್ಣರ ಭರದಿ ಅಪ್ಪಿಕೊಂಡು

ಮರುಳು ಮಾಡಿದ ಸುದ್ದೀ 1


ಸೋದರಮಾವನ ಮನೆಯೋಳ್ ಬೆಳ -

U್ಫದ ನಾಳಿನ ದಿನದೋಳ್ ಕೃಷ್ಣ

ಪೋದರೆ ನೆರೆದ ಜನರೋಳ್ ಆಹಾ

ಕಾದುವ ಮಲ್ಲರ ಮೇಲ್ಹಾರ ಬಿಲ್ಹಬ್ಬ

ಸಾಧಿಸಿ ಸಮಯಕ್ಕೆ ಹೋದೆವೆಂಬ ಅರ್ತಿ 2


ಹುಟ್ಟಿದ ಸ್ಥಳವಂತೆ ಮಧುರೀ ಕಂಸ -

ನಟ್ಟುಳಿಗಾಗಿ ತಾ ಬೆದರೀ ಇ -

ಲ್ಲಿಟ್ಟಳಾತನ ತಂಗಿ ಚದುರೀ ತೋರಿ

ಕೊಟ್ಟರೆ ತನ್ನನು ಬೆದರೀ ಆಹಾ

ಇಷ್ಟು ಸ್ನೇಹವು ಶ್ರೀದವಿಠಲ ಮಾವನ

ಭೆಟ್ಟಿಗಾಗಿ ಒಡಂಬಟ್ಟು ಹೋಗುವನಂತೆ 3

***


No comments:

Post a Comment