Tuesday, 5 October 2021

ನೀನೇ ವರಗುರು ಮುಖ್ಯಪ್ರಾಣನಿರಂತರವು ನಂಬಿದೆನೊ ankita shree krishna NEENE VARAGURU MUKHYAPRANA NIRANTARAVU NAMBIDENO

 




ನೀನೆ ವರಗುರು ಮುಖ್ಯಪ್ರಾಣನಿರಂತರವು 

ನಂಬಿದೆನೊ ನಿಖಿಳ ಗುಣಪೂರ್ಣ ಪ


ಜಾಣೆ ಕೋಮಲೆ ಭಾರತೀಶ ಸಕಲಪ್ರಾಣಿಗಳ 

ಹೃದಯಾಬ್ಜ ವಾಸ ಸುರೇಶಅ.ಪ


ವಾತಸುತನಾಗಿ ರಘುನಾಥ ಪ್ರಿಯ ದೂತ ಬಲುಯೂಥ ಲಂಕೆಯ ಪೊಕ್ಕು ಖ್ಯಾತಿಯನು ಪಡೆದೆಸೀತೆಗುಂಗುರವಿತ್ತು ವೀತಿಹೋತ್ರಗೆ ಪುರವಪ್ರೀತೆನಿಸಿದಾತ ದಿತಿಜಾತರಿಗೆ ಭೀತಿಕರ 1


ಲಂಡ ಕೀಚಕ ಬಕರ ಮಂಡೆಯನು ಒಡೆದು ಉ-ದ್ದಂಡ ಮಗಧಾಧಿಪನ ದಂಡವನು ಸೀಳಿಭಂಡ ಕೌರವರ ಶಿರ ಚೆಂಡಾಡಿ ಪ್ರಬಲ ರಣ-ಮಂಡಲದಿ ಚಂಡರಿಪು ದಂಡೆಗಳ ಖಂಡಿಸಿದೆ 2


ಸಾಂಗದಲಿ ಮಧ್ವಮತದಂಗವನು ಏರ್ಪಡಿಸಿಕಂಗೆಟ್ಟ ಕುಮತ ದುಸ್ಸಂಗಗಳನಳಿದುಗಂಗೆಪಿತ ಕೃಷ್ಣಪದ ಭೃಂಗ ಮೂಜ್ಜಗದೊಳಗೆತುಂಗ ಭವಭಂಗ ದಯಾಪಾಂಗ ಯತಿಪುಂಗವನೆ3

***

ನೀನೆ ವರಗುರು ಮುಖ್ಯಪ್ರಾಣ


ನಿರಂತರವು ನಂಬಿದೆನೋ-ನಿಖಿಳ ಗುಣಪೂರ್ಣ ||ಪ||


ಜಾಣೆ ಕೋಮಲೆ ಭಾರತೀಶ ಸಕಲ


ಪ್ರಾಣಿಗಳ ಹೃದಯಾಬ್ಜ ವಾಸ ಸುರೇಶ ||ಅ.ಪ||


ವಾತಸುತನಾಗಿ ರಘುನಾಥ ಪ್ರಿಯ ದೂತ ಬಲು


ಯೂಥ ಲಂಕೆಯ ಪೊಕ್ಕು ಖ್ಯಾತಿಯನು ಪಡೆದೆ


ಸೀತೆಗುಂಗುರವಿತ್ತು ವೀತಿಹೋತ್ರಗೆ ಪುರವ


ಪ್ರೀತೆನಿಸಿದಾತ ದಿತಿಜಾತರಿಗೆ ಭೀತಿಕರ ||1||


ಲಂಡ ಕೀಚಕ ಬಕರ ಮಂಡೆಯನು ಒಡೆದು ಉ


ದ್ದಂಡ ಮಗಧಾಧಿಪನ ದಂಡವನು ಸೀಳಿ


ಭಂಡ ಕೌರವರ ಶಿರಚೆಂಡಾಡಿ ಪ್ರಬಲರಣ


ಮಂಡಲದಿ ಚಂಡರಿಪು ದಂಡೆಗಳ ಖಂಡಿಸಿದೆ ||2||


ಸಾಂಗದಲಿ ಮಧ್ವಮತ ದಂಗವನು ಏರ್ಪಡಿಸಿ


ಕಂಗೆಟ್ಟ ಕುಮತ ದುಸ್ಸಂಗಗಳನಳಿದು


ಗಂಗೆ ಪಿತ ಕೃಷ್ಣಪದ ಭೃಂಗ ಮೂಜ್ಜಗದೊಳಗೆ


ತುಂಗ ಭವಭಂಗ ದಯಾಪಾಂಗ ಯತಿಪುಂಗವನೆ ||3||

***



No comments:

Post a Comment