Tuesday 5 October 2021

ಗೆದ್ದೆಯೋ ಹನುಮಂತಾ ಅಸುರರ ಒದ್ದ್ಯೋ ನೀ ಬಲವಂತ purandara vittala GEDYO HANUMANTA ASURARA ODYO NEE BALAVANTA






ಗೆದ್ದೆಯೋ ಹನುಮಂತ, ಅಸುರರ
ಒದ್ದ್ಯೋ ನೀ ಬಲವಂತ ||ಪ ||

ಬದ್ಧಾಂಜಲಿಯಿಂದ ರಘುಪತಿಪಾದವ
ಹೃದ್ಯದಿ ಭಜನೆ ಮಾಡುವ ಬುದ್ಧಿವಂತ ||ಅ ||

ಅಂಜನೆ ಸುತನೀತ, ಲಂಕಾಪುರದಿ
ಅಕ್ಷಯನ ಕೊಂದಾತ
ಕಂಜಾಕ್ಷಿ ಸೀತೆತ್ಯ ಕಂಡು ಮುದ್ರಿಕೆಯಿತ್ತು
ಮಂಜುಳ ವಾರ್ತೆಯ ತಂದ ರಾಮನ ದೂತ ||

ಈರೇಳು ಜಗದೊಳಗೆ, ಇನ್ನು ಮತ್ತೆ
ಯಾರು ಸರಿ ನಿನಗೆ
ವೀರ ಮಹಾಬಲ ಶೂರ ಪರಾಕ್ರಮ
ಧೀರ ಸಮೀರ ಉದಾರ ಗಂಭೀರ ||

ವಾಂಚಿತ ಫಲವೀವ, ನಾಥ ಮುಖ್ಯ
ಪ್ರಾಣ ಮಹಾನುಭಾವ
ಕಿಂಚಿತ್ಕಷ್ಟವ ಪಡಲೀಸ ಭಕ್ತರ್ಗೆ
ಪಾಂಚಜನ್ಯಧರ ಪುರಂದರವಿಠಲದಾಸ ||
***

ರಾಗ ಕಲ್ಯಾಣಿ. ಅಟ ತಾಳ (raga tala may differ in audio)

pallavi

geddeyO hanumanta asurara oddyO nI balavanta

anupallavi

baddhAnjaliyinda raghupatiya pAdava hrdyadi bhajane mADuva buddhivanta

caraNam 1

anjane sutanIta lankApuradi akSayana kondAda
kanjAkSi sItetamudrkeyittu manjuLa vArteya tanda rAmana dUta

caraNam 2

IrELu jagadoLage innu matte yAru sariyA ninage
vIra mahAbala shUra parAkrama dhIra samIra udAra gambhIra

caraNam 3

vAncita phalavIva nAtha mukhya prANa mahAnubhAva
kincittu kaSTava baDalIsa bhaktarge pAncajanyadhara purandaradasa
***

ಗೆದ್ದೆಯೊ ಹನುಮಂತಾ ಅಸುರರ ಒದ್ದೆಯೊ ಬಲವಂತಾ ಪ

ಬದ್ಧಾಂಜಲಿಯಿಂದ ರಘುಪತಿ ಪಾದವಹೃದ್ಯದಿ ಭಜನೆ ಮಾಡುವ ಬುದ್ಧಿವಂತ ಅ.ಪ

ಅಂಜನಿಸುತನೀತ-ಲಂಕಾಪುರದಿ-ಅಕ್ಷಯನ ಕೊಂದಾತ ||ಕಂಜಾಕ್ಷಿ ಸೀತೆಯ ಕಂಡು ಮುದ್ರಿಕೆಯಿತ್ತು |ಮಂಜುಳವಾರೆಯ ತಂದ ರಾಮನ ದೂತ 1

ಈರೇಳು ಜಗದೊಳಗೆ-ಇನ್ನು ಮತ್ತೆ ಯಾರು ಸರಿಯೊ ನಿನಗೆವೀರ ಮಹಾಬಲ ಶೂರ ಪರಾಕ್ರಮ |ಧೀರಸಮೀರಉದಾರ ಗಂಭೀರ2

ವಾಂಛಿತಫಲವೀವ-ನಾದ ಮುಖ್ಯ- ಪ್ರಾಣ ಮಹಾನುಭಾವ ||ಕಿಂಚಿತ್ತು ಕಷ್ಟವ ಪಡಲೀಸ ಭಕ್ತರ್ಗೆ |ಪಾಂಚಜನ್ಯಪುರಂದರವಿಠಲದಾಸ3
***

No comments:

Post a Comment