..
kruti by prasanna shreenivasaru ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಗೋಪೀವಲ್ಲಭ ಗೋಪಾಲವಿಠಲ
ಗೋಪೀವಲ್ಲಭ ಗೋಪಾಲ ವಿಠಲದೇವ ಕಾಪಾಡೊ ಇವಳ ಭಕ್ತ್ಯಾದಿಗಳನಿತ್ತು ಪ
ಶ್ರೀಪ ಕೃಷ್ಣ ನಿನ್ನ ಭಕ್ತಸುಜ್ಞಾನಿಗಳ ಸತ್ಪಂಥದಲಿ ಇಟ್ಟು ದಯದಿ ಪಾಲಿಪುದು ಅಪ
ಭೀಷ್ಮಕನ ಸುತೆ ಸತ್ಯಭಾಮಾಸಮೇತ ನೀ ವಾಮಚಿನ್ಮಯ ಹರಿಣ್ಮಣಿನಿಭ ಸುಕಾಯ ಅಮಲ ಸುಸ್ವರ ವೇಣು ಅಭಯ ವರಹಸ್ತದಲಿ ವಾಮದಷ್ಟದಿ ಶಂಖ ತಮ ತರಿವ ಚಕ್ರ 1
ಇಂದಿರಾಪತಿ ಕಂಬುಗ್ರೀವದಲಿ ಕೌಸ್ತುಭವು ಇಂದುಧರೆ ಆಶ್ರಿತನಾಗಿರುವ ವೈಜಯಂತಿ ಸುಂದರ ಸು¥ಟ್ಟೆ ಪೀತಾಂಬರವನುಟ್ಟಿಹ ಸೌಂದರ್ಯಸಾರನೆ ಜಗದೇಕವಂದ್ಯ 2
ವನಜನಾಭನೆ ಅಜನೆ ವನಜಾಪತಿಯೆ ನಮೋ ವನಜಸಂಭವಪಿತ ಪ್ರಸನ್ನ ಶ್ರೀನಿವಾಸ ವನಜಲೋಚನ ಮಧ್ವ ಸಾಧು ಸುಜನರ ಹೃದಯ ವನಜಕೆ ದಿನಪ ನಮ್ಮೆಲ್ಲರನು ಪೊರೆಯೊ 3
***
No comments:
Post a Comment