Wednesday, 1 September 2021

ಮಗುವಿನ ಮರುಳಿದು ಬಿಡದಲ್ಲ ಜಗದೊಳು ಪಂಡಿತರಿದ ಬಿಡಿಸಿ ankita neleyadikeshava

..

ಮಗುವಿನ ಮರುಳಿದು ಬಿಡದಲ್ಲ - ಈ ಪ


ಜಗದೊಳು ಪಂಡಿತರಿದ ಬಿಡಿಸಿ ಅ


ನೀರನು ಕಂಡರೆ ಮುಳುಗುತಿದೆ - ತನ್ನಮೋರೆಯ ತೋರದೆ ಆಡುತಿದೆಧಾರಿಣಿ ಹಲ್ಲಲಿ ಎಳೆಯುತಿದೆ - ದೊಡ್ಡಭೈರವಾಕಾರದಿ ಕೂಗುತಿದೆ 1


ಪೊಡವಿಯ ಕೊಟ್ಟಗೆ ಅಳೆಯುತಿದೆ - ತನ್ನಕೊಡಲಿಯೊಳು ಭೂಪರ ಕಡಿಯುತಿದೆಅಡವಿ ಕೋತಿಗಳ ಕೂಡುತಿದೆ - ಚೆಲ್ವಮಡದಿಯರನು ಹಿಡಿದೆಳೆಯುತಿದೆ 2


ಉಟ್ಟಿದ್ದ ವಸ್ತ್ರವ ಬಿಸುಡುತಿದೆ - ತನ್ನದಿಟ್ಟ ತೇಜಿಯನೇರಿ ನಲಿಯುತಿದೆಸೃಷ್ಟಿಯೊಳು ಭೂಸುರರ ಪೊರೆದ ಜಗಜಟ್ಟಿಯಾದಿಕೇಶವ ರಾಯನಂತೆ 3

***

 

No comments:

Post a Comment