Wednesday, 1 September 2021

ಇವ ನೋಡಮ್ಮಾ ಮಾನವನೆ|ಅವತರಸಿಹ ತ ಮಾಧವನೇ ankita mahipati

ಕೃತಿ ಕಾಖಂಡಕಿ ಶ್ರೀ ಮಹಿಪತಿರಾಯರು

 ಇವ ನೋಡಮ್ಮಾ ಮಾನವನೆ|ಅವತರಸಿಹ ತ ಮಾಧವನೇ ಪ 


ಹಲವು ನಾರೇರೊಳಗ ಕೂಡಿ|ಹಲವು ರೂಪಾದನು ನೋಡಿ| ಬೋಧ ಸ್ವರದಿ ಪಾಡಿ| ನಲಿದಾಡುವ ಸ್ವಸುಖ ನೀಡಿ 1 

ಅವಿದ್ಯ ವಿಷಮಡುವನೆ ಕಲಕಿ|ಬವರದಿ ಹಮ್ಮಿತುರಗ ತುಡಕಿ| ತವೆ ವಾಸನೆ ಹಡೆಗಳ ಕುಸುಕಿ| ಜೀವನಮೃತ ಮಾಡಿದ ಬಳಿಕಿ 2 

ಗೋವಳರನು ತೆಗೆದಾ| ಕವಿಗುರು ಮಹಿಪತಿಜನ ಹೊರದಾ| ಭುವನದಿ ಗೋಕುಲದಲಿ ಮೆರೆದಾ 3

***


No comments:

Post a Comment