Wednesday, 1 September 2021

ಮರ್ಯಾದಿ ಗುಣ ವಳ್ಹದೋ ಗುರುವರ್ಯರ ಸೇವೆಲಿ ಬಾಳ್ವೆನೆಂಬನಿಗೆ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಮರ್ಯಾದಿ ಗುಣ ವಳ್ಹದೋ | ಗುರುವರ್ಯರ ಸೇವೆಲಿ ಬಾಳ್ವೆನೆಂಬನಿಗೆ ಪ 


ಅರಸುವಲಿದು ಅತಿ ಪ್ರೀತಿ ಮಾಡಿದರೇನು ? ಕರಗಳ ಮುಗಿದು ನಿಂದಿರಬೇಕು ಚರನು 1 

ಹಿಂಗದೆ ಭಕುತಿಗೆ ಬೆಜ್ಜರ ವಿಡಿದರ | ಬಂಗಾರಕ ಸುವಾಸನೆಯು ಬಂದಂತೆ 2 

ಕುದುರೆಗೆ ಉತ್ತತ್ತಿ ತುಸು ಕೊಟ್ಟರಾರೋಗ್ಯ | ಅದೇ ವಿಶೇಷ ಕೊಡಲು ವಿಪರೀತವೋ 3 

ಯೋಗ್ಯವಲ್ಲದ ಅಲಂಕಾರಿಸಿಕೊಂಡರೆ ತನ್ನ | ಶ್ಲಾಘ್ಯವೇ ಜಗದೊಳು ಉಪಹಾಸ್ಯ ಮೂಲಾ 4 

ತರಳತನವ ಬಿಟ್ಟೆಚರದಲಿ ನಡಿಬೇಕು | ಗುರು ಮಹಿಪತಿಸುತ ಪ್ರಭು ನೊಲುವಂತೆ 5

****


No comments:

Post a Comment