Wednesday, 1 September 2021

ಸಿಕ್ಕಿತೆನಗೊಂದು ಸುವಸ್ತ ಮುಖ್ಯದಂತಸ್ಥ ಅಕ್ಕಿ ಮನಕ್ಕಾಯಿತು ankita mahipati

 ಸಿಕ್ಕಿತೆನಗೊಂದು ಸುವಸ್ತ ಮುಖ್ಯದಂತಸ್ಥ ಅಕ್ಕಿ ಮನಕ್ಕಾಯಿತು ಸ್ವಸ್ತ ದಕ್ಕಿ ಪ್ರಶಸ್ತ 1 

ಕಟ್ಟ ಇಡುವದಲ್ಲ ಬಿಟ್ಟರೆ ಹೋಗುವದಲ್ಲ ಮುಟ್ಟಿದರೆ ಬಿಡುವುದಿಲ್ಲ ಗುಟ್ಟು ಕೇಳೆಲ್ಲ 2 

ಮುಚ್ಚುಮರಿಲಿಹುದಲ್ಲ ಬಚ್ಚಿಟ್ಟು ಕೊಂಬಂಥದಲ್ಲ ನೆಚ್ಚಿದ ಮಹಿಮನೆ ಬಲ್ಲ ಆಶ್ಚರ್ಯವಲ್ಲ 3 

ಭಾನುಕೋಟಿ ತೇಜನಾಗಿ ಘನದಯದಲೊದಗಿ ತಾನೆ ಸಿಕ್ಕಿತ್ಯೆನಗಾಗಿ ಸಾನುಕೂಲಾಗಿ4 

ಮಿಹಿತದ ಅಗರ ಸ್ವಹಿತ ಸುಖಸಾಗರ ಮಹಿಪತಿಯ ಮನೋಹರ ಸಹಕಾರ 5

***


No comments:

Post a Comment