..
ಶ್ರೀ ಪರಾತ್ಪರವಿಠಲ ಪಾಲಿಸಿವರ ಪ
ಚರಾಚರಾತ್ಮಕದೇವ ಪರಮ ಪ್ರೀತಿಯಿಂದ ಅ.ಪ.
ಜಗನ್ಮಂಗಳ ಮೂರ್ತಿ ಭಾಗವತ ಪ್ರಧಾನ
ಸಾಗರೋಪಮ ಭಕ್ತಿ ಪ್ರದದೇವ
ಬಾಗಿ ಬೇಡುವೆ ವಿe್ಞÁನರೂಪದಿ ನಿನ್ನ 1
ಭಾಗವತೋತ್ತಮರ ಪದ್ಧತಿಯಲಿ
ಗುಪ್ತಸಾಧನ ಪಾಲಿಸು
ಶುಕಾನುಬಂಧದಿ ಶುಕಪ್ರೇಮ ಪಾತ್ರನಾಗಿ
ಸುಖಮಯನ ಭಜಿಸುತಿರಲಿ 2
ಆಪ್ತತಮ ಗುಣಸಮುದ್ರ ಶ್ರೀಜಯೇಶ-
ವಿಠಲ ಪೂರ್ಣ ಪ್ರೀತಿಯಲಿ
ನಿತ್ಯ ಭಾಗವತರ ಸಂಗದಲಿಟ್ಟು
ನಿರುಪಮ ಸುಖನೀಡು 3
ಮರುತಾತ್ಮಜನು ನಿರುತದಿ ಭಜಿಪನು
ಪರಿಪರಿ ಪಾಡಿ ಸುಖಗೂಡಿ 1
ಪತಿತ ಪಾವನ್ನ ಸತತ ಈ ನಾಮ
ಗತಿಯಿಲ್ಲದವರಿಗೆ ಗತಿ ಈವ ನಾಮ
ಹತವೆ ಮಾಡುತಲಿದ್ದ ಕಿತವನಿಗೊಲಿದು
ಕ್ಷಿತಿಯೊಳು ಮುನಿಪತಿ ಎನ್ನಿಸಿತು
ಪಥದಿ ಪಾಷಾಣವ ಪೆಣ್ಣನು ಮಾಡಿದ
ಅತುಳ ಮಹಿಮನ ಹಿತನಾಮ 2
ಕುಲಶೀಲಗಳನ್ನು ಎಂದೊ ಎಣಿಸನೊ
ಸುಲಭರೊಳಗೆ ಬಲು ಸುಲಭನು ಇವನು
ಕಲುಷದಿ ದೂರನು ಶಬರಿಯ ಫಲವನು
ಮೆಲ್ಲುತೆ ಮುಕ್ತಿಯನಿತ್ತಿಹನು
ಲಲನೆಯ ಕದ್ದೊಯ್ದ ಖಳನ ತಮ್ಮನಿಗೆನೆಲವಿತ್ತ ದಯವಂತ ಶ್ರೀಕಾಂತ 3
***
No comments:
Post a Comment