Wednesday, 1 September 2021

ಇಂಥಾ ಗುರುಗಳ ಕಾಣೆನೋ ಈ ಜಗದೊಳು ನಾ ankita gurujagannatha vittala

 ..

ಇಂಥಾ ಗುರುಗಳ ಕಾಣೆನೋ ಈ ಜಗದೊಳು ನಾ ಪ


ಇಂಥಾ ಗುರುಗಳನೆಂದು ಕಾಣೆನಾ

ನಂತ ಚೇತನರಂತರ ಬಹಿರದಿ

ನಿಂತು ಕರ್ಮವವರಂತೆ ಮಾಳ್ಪಾ -

ನಂತ ಮಹಿಮಾನಂತನಾಂಶಜರಿಂಥಾಅ.ಪ


ತುಂಗಾತೀರದಿ ನಿವಾಸಾ ಮಂತ್ರಾಲಯಕೀಶ

ತುಂಗ ವಿಕÀ್ರಮ ಜಗದೀಶಾ ಶ್ರೀಹರಿ ದಾಸಾ

ಮಂಗಲ್ಮಾತಕ ವೃಂದಾವನ ದೇಶಾ ಸಾರಿದ ವ್ರತೀಶಾ

ಮಂಗಲ ಮಹಿಮ ರಂಗನ ಕರುಣಾಪಾಂಗ ಪಡೆದ ಕೃ -

ಪಾಂಗ ಯತಿಕುಲೋತ್ತುಂಗ ಮಾಯಿ ಮಾ -

ತಂಗ ಸಂಘಕೆ ಸಿಂಗ ದುಷ್ಟ ಭು -

ಜಂಗ ಗಣ ವಿಹಂಗ ಸ್ವಮತೋ -

ತ್ತುಂಗ ವಾರಿಜ ಭೃಂಗ ಮನ್ಮನೋ -

ರಂಗ ಬಿಂಬನ ಇಂಗಿತಙ್ಞರ ಸಂಗ ನೀಡಿ

ಕಂಗಳಿಗೆ ತಾವು ಕಂಗೊಳಿಪರಿಂಥಾ 1


ಮೇದಿನಿ ತಳದಲಿ ಜನಿಸೀ ಸುಖತಿರ್ಥರ ಭಜಿಸೀ

ಭೇಧಮತವನೆ ಸಾಧಿಸೀ ವಾದದಿ ಜೈಸಿ

ಮಾಧವನೆ ಸರ್ವೋತ್ತಮನೆನಿಸಿ ಸ್ವಮತವ ಸ್ಥಾಪಿಸಿ

ಭೋಧಿಸಿ ತತ್ತ್ವವ ಭೇಧಿಸಿ ಪರಮತ

ಛೇಧಿಸಿ ಕುಮತಿಯ ಶೋಧಿಸಿ ತತ್ತ್ವದ

ಹಾದಿಯ ಹಿಡಿಸಿ - ಮೋದಕೊಡುವ ಪಂಚ

ಭೇದವ ತಿಳಿಸೀ ಸಾದರ ತನ್ನಯ ಪಾದಸೇವೆಯ

ಮೋದವ ನೀಡುವ ಮೇದಿನೀ ದಿವಿಜಾರಾಧಿತ ಪದಯುಗ

ಶೋಧಿಸಿ ಜನಮನೋ ಖೇದಗೊಳಿಪ ಭ -

ವೋಧಧಿ ದಾಟಿಸಿ ಶ್ರೀದÀನ ತೆರದಲಿ

ಮೇದಿನಿಯಾಳುವರಿಂಥಾ 2


ಧಿಟ್ಟ ಗುರು ಜಗನ್ನಾಥ ವಿಠಲದೂತಾ

ಸೃಷ್ಟಯೊಳಗತಿ ವಿಖ್ಯಾತಾನೆನಿಸಿದ ಯತಿನಾಥಾ

ಕುಷ್ಟಾದಿ ರೋಗದ ಘಾತಾ ಮಾಡುವೊದಾತಾ

ಇಷ್ಟಾರ್ಥವಾ ತಾ ಸೃಷ್ಠಿಗೆ ಬೀರುವ

ಶಿಷ್ಟಜನರನುತ್ನøಷ್ಟದಿ ಪಾಲಿಪ

ಎಷ್ಟು ಪೇಳುವುದೋ ಉತ್ಕøಷ್ಟನ ಗುಣಗಳ

ಭ್ರಷ್ಟರರಿಯರೆಲೆ ಶಿಷ್ಟರು ಬಲ್ಲರು

ಇಷ್ಟೇ ಅಲ್ಲವೀತನ ವಿಶಿಷ್ಟ ಮಹಿಮೆಗ -

ಳೆಷ್ಟು ಪೇಳಲವಶಿಷ್ಟವೆನಿಪವೋ

ದೃಷ್ಟಿಹೀನರಿಗೆ ದೃಷ್ಟಿ ನೀಡುವ

ದೃಷ್ಟಿ ಮಾತ್ರದಿ ತುಷ್ಟಿಬಡಿಸುವೊರಿಂಥಾ 3

***


No comments:

Post a Comment