ಮರತ್ಯಾಕೊ ಹರಿಯೆ ಮರಗುವೆನಾ ಕರುಣ ಬಾರದೆ ಪ
ಸಿರಿಗೆ ಭ್ರಮಿಸಿ ಸರಸ ಸುಖದಿ ಮರೆತು ಇರುವೆಯಾ
ಬರುವ ಮುಡುಪಿನ್ಹಣವನೆಣಿಸಿ ದಣಿದು ಮರತಿಯಾ 1
ತ್ರಾಣ ಕಳದಿ ಹಣವ ಸೆಳದಿ ಮನವ ದಣಿಸಿದಿ
ಕಣ್ಣೀರಲಿ ಕೈ ತೊಳೆಸಿದಿ ಗುಣ ಗಣ ಮಣಿಯೇ2
ನಿನಗೆ ಆಟ ಎನಗೆ ಹರಿಯೇ ಪ್ರಾಣ ಸಂಕಟಾ
ಅನುಭವಿಸಲಾರೆನಕಟಾ ಪಾಹಿ ವೆಂಕಟಾ 3
ಹರಿಯೆ ನೀನು ಗಿರಿಯೊಳು ನಿಂತಿರುವದ್ಯಾತಕೊ
ಸ್ಮರಿಸುವವರ ಪೊರೆವುದಕೊ ಧನ ಸೆಳೆವುದಕೊ 4
ಇಟ್ಟರಿಡು ನೀ ಘಟ್ಟಿ ಭಕುತಿ ಕೊಟ್ಟ ನಿನ್ನೋಳು
ಧಿಟ್ಟ ಶ್ರೀ ಹನುಮೇಶವಿಠಲ ಥಟ್ಟನೇ ದಯದಿ 5
****
No comments:
Post a Comment