Thursday, 12 November 2020

ಹರಿಕಥಾಮೃತಸಾರ ಸಂಧಿ 07 ankita jagannatha vittala ಪಂಚತನ್ಮಾತ್ರ ಸಂಧಿ HARIKATHAMRUTASARA SANDHI 7 PANCHATANMATRA SANDHI


ರಾಗ ಸಾರಂಗ
Audio by Mrs. Nandini Sripad



RESTART MOBILE IF AUDIO IS NOT PLAYING  CLICK-> HOME

or just scroll down for other devaranama 


ರಚನೆ : ಶ್ರೀ ಜಗನ್ನಾಥ ದಾಸರು 
for saahitya click   ಹರಿಕಥಾಮೃತಸಾರ ಸಂಧಿ 1 to 32  

ಶ್ರೀ ಜಗನ್ನಾಥದಾಸಾರ್ಯ ವಿರಚಿತ ಹರಿಕಥಾಮೃತಸಾರ , 
 ಪಂಚತನ್ಮಾತ್ರ ಸಂಧಿ (ಸಂಧಿ 07)

ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ
ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು||

ಭೂಸಲಿಲ ಶಿಖಿ ಪವನ ಭೂತ ಆಕಾಶದೊಳಗೆ ಐದೈದು ತನ್ಮಾತ್ರಾ ಸಹಿತ
ಒಂದಧಿಕ ಪಂಚಾಶತ್ ವರಣ ವೇದ್ಯ
ಈ ಶರೀರದಿ ವ್ಯಾಪಿಸಿದ್ದು ಸುರಾಸುರರಿಗೆ ನಿರಂತರದಲಿ
ಸುಖಾಸುಖಪ್ರದನಾಗಿ ಆಡುವ ದ್ವೇಷಿಪರ ಬಡಿವ||1||

ಪ್ರಣವ ಪ್ರತಿಪಾದ್ಯ ತ್ರಿನಾಮದಿ ತನುವಿನೊಳು ತ್ರಿಸ್ಥಾನಗ ಅನಿರುದ್ಧನು
ತ್ರಿಪಂಚಕ ಏಕ ವಿಂಶತಿ ಚತುರ ವಿಂಶತಿಗನು ಎನಿಸಿ
ಎಪ್ಪತ್ತೆರಡು ಸಾವಿರ ಇನಿತು ನಾಡಿಗಳೊಳು ನಿಯಾಮಿಸುತ ಇನ ಭಸ್ತಿಗ
ಲೋಕದೊಳು ಸರ್ವತ್ರ ಬೆಳಗುವನು||2||

ಜೀವಲಿಂಗಾನಿರುದ್ಧ ಸ್ಥೂಲ ಕಳೇವರಗಳಲಿ
ವಿಶ್ವತುರಗಗ್ರೀವ ಮೂಲೇಶ ಅಚ್ಯುತತ್ರಯ ಹಂಸ ಮೂರ್ತಿಗಳ
ಈ ವಿಧ ಚತು: ಸ್ಥಾನದಲಿ ಶಾಂತೀವರನ ಈರೆರಡು ರೂಪದಿ ಭಾವಿಸುವುದು
ಏಕ ಊನ ವಿಂಶತಿ ಮೂರ್ತಿ ಸರ್ವತ್ರ||3||

ಕಲುಷವಿಲ್ಲದ ದರ್ಪಣದಿ ಪ್ರತಿಫಲಿಸಿ ಸರ್ವ ಪದಾರ್ಥಗಳು ಕಂಗೊಳಿಸುವಂದದಲಿ
ಬಿಂಬ ಜಡ ಚೇತನಗಳೊಳಗಿದ್ದು
ಪೊಳೆವ ಬಹುರೂಪದಲಿ ಸಜ್ಜನರೊಳಗೆ ಮನದರ್ಪಣದಿ ತಾ
ನಿಶ್ಚಲ ನಿರಾಮಯ ನಿರ್ವಿಕಾರ ನಿರಾಶ್ರಯಾನಂತ||4||

ಈ ಶರೀರ ಚತುಷ್ಟಯಗಳು ಕೋಶ ಧಾತುಗ ಭಾರತಿಪ ಪ್ರಾಣೇಶನು
ಇಪ್ಪತ್ತೊಂದು ಸಾವಿರದ ಆರುನೂರೆನಿಪ ಶ್ವಾಸ ರೂಪಕ ಹಂಸ
ಭಾಸ್ಕರ ಭೇಶರೊಳಗಿದ್ದು ಅವರ ಕೈವಿಡಿದು
ಈ ಸರೋಜ ಭವಾಂಡದೊಳು ಸರ್ವತ್ರ ತುಂಬಿಹನು||5||

ಶಿರಗಳೈದು ಐದೆರೆಡು ಬಾಹುಗಳು ಎರಡು ಪಾದಗಳು
ಒಂದು ಮಧ್ಯ ಉದರದಿ ಶೋಭಿಪ ವಾಕ್ಮನೋಮಯನೆನಿಸಿ ನಿತ್ಯದಲಿ
ಕರಣ ಧಾತುಗಳಲ್ಲಿ ಎಪ್ಪತ್ತೆರಡು ಸಾವಿರ ನಾಡಿಗಳಲಿ ಇಪ್ಪ
ಅರವಿದೂರನು ಭಾರತ ಪ್ರತಿಪಾದ್ಯನು ಎನಿಸಿ||6||

ಈರೆರೆಡು ದೇಹ ಊರ್ಮಿ ಭೂತಗಳಾರು ಅಧಿಕ ದಶ ಋಗ್ವಿನುತ
ಲಕ್ಷ್ಮೀರಮಣ ವಿಷ್ಣ್ವಾಖ್ಯ ರೂಪದಿ ಚತು ಷಷ್ಠಿ ಕಲಾಧಾರಕನು ತಾನಾಗಿ
ಬ್ರಹ್ಮಪುರಾರಿ ಮುಖ್ಯರೊಳಿದ್ದು ಸತತ ವಿಹಾರ ಮಾಳ್ಪನು
ಚತುಷ್ಪಾದ ಆಹ್ವಯದಿ ಲೋಕದೊಳು||7||

ತೃಣ ಮೊದಲು ಬ್ರಹ್ಮ ಅಂತ ಜೀವರ ತನುಗಳ ತ್ರಯಗಳಲಿ
ನಾರಾಯಣನ ಸಾವಿರದೈನೂರಿಪ್ಪತ್ತು ಮೇಲೆ ಆರು
ಗಣನೆ ಮಾಳ್ಪುದು ಬುಧರು ರೂಪವ
ಘ್ರುಣಿ ಸೂರ್ಯ ಆದಿತ್ಯ ನಾಮಗಳು ಅನುದಿನದಿ ಜಪಿಸುವರಿಗೆ ಈವ ಆರೋಗ್ಯ ಸಂಪದವ||8||

ಐದು ನೂರು ಎಪ್ಪತ್ತು ನಾಲ್ಕು ಅಧಿಭೌತಿಕದಲಿ ತಿಳಿವುದು
ಐದೆರೆಡು ಶತ ಏಕ ವಿಂಶತಿ ರೂಪವು ಆಧ್ಯಾತ್ಮ
ಭೇದಗಳು ಇನ್ನೂರು ಮೂವತ್ತಾದ ಮೇಲೆ ಒಂದಧಿಕ ಮೂರ್ತಿಗಳು
ಆದರದಲಿ ಅಧಿದೈವದೊಳು ಚಿಂತಿಪುದು ಭೂಸುರರು||9||

ಸುರುಚಿ ಶಾರ್ವರೀಕರನು ಎನಿಸಿ ಸಂಕರುಷಣ ಪ್ರದ್ಯುಮ್ನ
ಶಶಿ ಭಾಸ್ಕರರೊಳಗೆ ಅರವತ್ತಧಿಕ ಮುನ್ನೂರು ರೂಪದಲಿ ಕರೆಸಿಕೊಂಬನು
ಅಹಃ ಸಂವತ್ಸರನೆನಿಪನು ವಿಶಿಷ್ಟ ನಾಮದಲಿ ಅರಿತವರಿಗೆ
ಆರೋಗ್ಯ ಭಾಗ್ಯವನು ಈವ ಆನಂದಮಯ||10||

ಏಕ ಪಂಚಾಶತ್ ವರಣ ಗತ ಮಾಕಳತ್ರನು ಸರ್ವರೊಳಗ
ಅವ್ಯಾಕೃತ ಆಕಾಶಾಂತ ವ್ಯಾಪಿಸಿ ನಿಗಮತತಿಗಳು ವ್ಯಾಕರಣ ಭಾರತ
ಮುಖಾದಿ ಅನೇಕ ಶಾಸ್ತ್ರ ಪುರಾಣ ಭಾಷ್ಯ ಅನೀಕಗಳ ಕಲ್ಪಿಸಿ
ಮನೋ ವಾಙ್ಮಯನೆನಿಸಿಕೊಂಬ||11||

ಭಾರಭೃತ್ ನಾಮಕನ ಸಾವಿರದ ಆರುನೂರ ಇಪ್ಪತ್ತನಾಲ್ಕು ಮೂರುತಿಗಳು
ಚರಾಚರದಿ ಸರ್ವತ್ರ ತುಂಬಿಹವು
ಆರು ನಾಲ್ಕು ಜಡಗಳಲಿ ಹದಿನಾರು ಚೇತನಗಳಲಿ ಚಿಂತಿಸೆ
ತೋರಿಕೊಂಬನು ತನ್ನ ರೂಪವ ಸಕಲ ಟಾವಿನಲಿ||12||

ಮಿಸುಣಿ ಮೇಲಿಹ ಮಣಿಯವೊಳ್ ರಾಜಿಸುವ ಬ್ರಹ್ಮಾದಿಗಳ ಮನದಲಿ
ಬಿಸಿಜಜಾಂಡ ಅಧಾರಕನು ಅಧೇಯನೆಂದೆನಿಸಿ
ದ್ವಿಶತ ನಾಲ್ವತ್ತೆರಡು ರೂಪದಿ ಶಶಿಯೊಳು ಇಪ್ಪನು
ಶಶದೊಳಗೆ ಶೋಭಿಸುವ ನಾಲ್ವತ್ತೆರಡು ಅಧಿಕ ಶತ ರೂಪದಲಿ ಬಿಡದೆ||13||

ಎರಡು ಸಾವಿರದ ಎಂಟು ರೂಪವನರಿತು ಸರ್ವ ಪದಾರ್ಥದಲಿ
ಶ್ರೀ ವರನ ಪೂಜೆಯ ಮಾಡು ವಾರಗಳ ಬೇಡು ಕೊಂಡಾಡು
ಬರಿದೆ ಜಲದೊಳು ಮುಳುಗಿ ಬಿಸಿಲೊಳು ಬೆರಳನು ಎಣಿಸಿದರೇನು
ಸದ್ಗುರು ಹಿರಿಯರ ಅನುಸರಿಸಿ ಇದರ ಮರ್ಮವನ್ನು ಅರಿಯದಿಹ ನರನು||14||

ಮತ್ತೆ ಚಿತ್ದೇಹದೊಳಗೆ ಎಂಭತ್ತು ಸಾವಿರದ ಏಳು ನೂರ ಇಪ್ಪತ್ತೈದು
ನರಸಿಂಹ ರೂಪದಲಿದ್ದು
ಜೀವರಿಗೆ ನಿತ್ಯದಲಿ ಹಗಲು ಇರಲು ಬಪ್ಪ ಅಪಮೃತ್ಯುವಿಗೆ ತಾ ಮೃತ್ಯುವೆನಿಸುವ
ಭೃತ್ಯ ವಾತ್ಸಲ ಭಯವಿನಾಶನ ಭಾಗ್ಯ ಸಂಪನ್ನ||15||

ಜ್ವರನೊಳು ಇಪ್ಪತ್ತೇಳು ಹರನೊಳಗೆ ಇರುವನು ಇಪ್ಪತ್ತೆಂಟು ರೂಪದಿ
ಎರಡು ಸಾವಿರದ ಎಂಟು ನೂರಿಪ್ಪತ್ತೇಳು ಅಧಿಕ ಜ್ವರಹರ ಆಹ್ವಯ
ನಾರಸಿಂಹನ ಸ್ಮರಣೆಮಾತ್ರದಿ ದುರಿತ ರಾಶಿಗಳು ಇರದೇ ಪೋಪವು
ತರಣಿ ಬಿಂಬವ ಕಂಡ ಹಿಮದಂತೆ||16||

ಮಾಸ ಪರಿಯಂತರವು ಬಿಡದೆ ನೃಕೇಸರಿಯ ಶುಭನಾಮ ಮಂತ್ರ
ಜಿತಾಸನದಲಿ ಏಕಾಗ್ರ ಚಿತ್ತದಿ ನಿಷ್ಕಪಟದಿಂದ ಬೇಸರದೆ ಜಪಿಸಲು
ವೃಜಿನಗಳ ನಾಶಗೈಸಿ
ಮನೋರಥಗಳ ಪರೇಶ ಪಾರ್ಟಿಯ ಮಾಡಿ ಕೊಡುವನು ಕಡೆಗೆ ಪರಗತಿಯ||17||

ಚತುರ ಮೂರ್ತ್ಯಾತ್ಮಕ ಹರಿಯು ತ್ರಿಂಶತಿ ಸುರೂಪದಿ ಬ್ರಹ್ಮನೊಳು
ಮಾರುತನೊಳು ಇಪ್ಪತ್ತೇಳು ರೂಪದೊಳು ಇಪ್ಪ ಪ್ರದ್ಯುಮ್ನ
ಸುತರೊಳು ಇಪ್ಪತ್ತೈದು ಹದಿನೆಂಟು ಅತುಳ ರೂಪಗಳ ಅರಿತು
ವತ್ಸರ ಶತಗಳಲಿ ಪೂಜಿಸುತಲಿರು ಚತುರಾತ್ಮಕನ ಪದವ||18||

ನೂರು ವರುಷಕೆ ದಿವಸ ಮೂವತ್ತಾರು ಸಾವಿರ ವಹವು
ನಾಡಿ ಶರೀರದೊಳಗೆ ಇನಿತು ಇಹವು ಸ್ತ್ರೀಪುಂಭೇದದಲಿ
ಹರಿಯ ಈರಧಿಕ ಎಪ್ಪತ್ತು ಸಾವಿರ ಮೂರುತಿಗಳನೆ ನೆನೆದು
ಸರ್ವಾಧಾರಕನ ಸರ್ವತ್ರ ಪೂಜಿಸು ಪೂರ್ಣನೆಂದರಿದು||19||

ಕಾಲಕರ್ಮಗುಣ ಸ್ವಭಾವಗಳ ಆಲಯನು ತಾನಾಗಿ ಲಕ್ಷ್ಮೀಲೋಲ
ತತ್ತದ್ರೂಪ ನಾಮಡಿ ಕರೆಸುತ ಒಳಗಿದ್ದು
ಲೀಲೆಯಿಂದಲಿ ಸರ್ವಜೀವರ ಪಾಲಿಸುವ ಸಂಹರಿಪ ಸೃಷ್ಟಿಪ
ಮೂಲ ಕಾರಣ ಪ್ರಕೃತಿ ಗುಣ ಕಾರ್ಯಗಳ ಮನೆಮಾಡಿ||20||

ತಿಲಜವರ್ತಿಗಳ ಅನುಸರಿಸಿ ಪ್ರಜ್ವಲಿಸಿ ದೀಪಗಳು
ಆಲಯದ ಕತ್ತಲೆಯ ಭಂಗಿಸಿ ತದ್ಗತಾರ್ಥವ ತೋರುವಂದದಲಿ
ಜಲರುಹೇಕ್ಷಣ ತನ್ನವರ ಮನದೊಳಗೆ
ಭಕ್ತಿ ಜ್ಞಾನ ಕರ್ಮಕೆ ಒಲಿದು ಪೊಳೆವುತ ತೋರುವನು ಗುಣ ರೂಪ ಕ್ರಿಯೆಗಳನು||21||

ಆವ ದೇಹವ ಕೊಡಲಿ ಹರಿ ಮತ್ತಾವ ಲೋಕದೊಳು ಇಡಲಿ
ತಾ ಮತ್ತಾವ ದೇಶದೊಳು ಇಡಲಿ ಆವಾವಸ್ಥೆಗಳು ಬರಲಿ
ಈ ವಿಧದಿ ಜಡ ಚೇತನದೊಳು ಪರಾವರೇಶನ ರೂಪ ಗುಣಗಳ ಭಾವಿಸುತ
ಸುಜ್ಞಾನ ಭಕುತಿಯ ಬೇಡು ಕೊಂಡಾಡು||22||

ಒಂದರೊಳಗೊಂದು ಬೆರದಿಹವು ಇಂದಿರೇಶನ ರೂಪಗಳ ಮನಬಂದ ತೆರದಲಿ
ಚಿಂತಿಸಿದಕೆ ಅನುಮಾನವಿನಿತಿಲ್ಲ
ಸಿಂಧು ರಾಜನೊಳು ಅಂಬರ ಆಲಯ ಬಂಧಿಸಲು
ಪ್ರತಿ ತಂತುಗಳೊಳು ಉದಬಿಂದು ವ್ಯಾಪಿಸಿದಂತೆ ಇರುತಿಪ್ಪನು ಚರಾಚರದಿ||23||

ಒಂದು ರೂಪದೊಳು ಒಂದು ಅವಯವದೊಳು ಒಂದು ರೋಮದೊಳು ಒಂದು ದೇಶದಿ ಪೊಂದಿ ಇಪ್ಪವು
ಅಜಾಂಡ ಅನಂತಾನಂತ ಕೋಟಿಗಳು
ಹಿಂದೆ ಮಾರ್ಕಾಂಡೆಯ ಕಾಣನೆ ಒಂದು ರೂಪದಿ ಸೃಷ್ಟಿ ಪ್ರಳಯಗಳು
ಇಂದಿರೇಶನೊಳು ಏನಿದು ಅಚ್ಚರಿ ಅಪ್ರಮೇಯ ಸದಾ||24||

ಒಂದು ಅನಂತಾನಂತ ರೂಪಗಳು ಒಂದೇ ರೂಪದೊಳು ಇಹವು ಲೋಕಗಳು ಒಂದೇ ರೂಪದಿ
ಸೃಷ್ಟಿ ಸ್ಥಿತಿ ಮೊದಲಾದ ವ್ಯಾಪಾರ
ಒಂದೇ ಕಾಲಡಿ ಮಾಡಿ ತಿಳಿಸದೆ ಸಂದಣಿಸಿ ಕೊಂಡಿಪ್ಪ ಜಗದೊಳು
ನಂದ ನಂದನ ರಣದೊಳು ಇಂದ್ರ ಆತ್ಮಜಗೆ ತೋರಿಸನೆ||25||

ಶ್ರೀರಮೇಶನ ಮೂರ್ತಿಗಳು ನವ ನಾರಿ ಕುಂಜರದಂತೆ ಏಕಾಕಾರ ತೋರ್ಪವು
ಅವಯವಾಹ್ವಾಯ ಅವಯಗಳಲ್ಲಿ
ಬೇರೆಬೇರೆ ಕಂಗೊಳಿಸುವ ಶರೀರದೊಳು ನಾನಾ ಪ್ರಕಾರ
ವಿಕಾರಶೂನ್ಯ ವಿರಾಟನೆನಿಸುವ ಪದುಮಜಾಂಡದೊಳು||26||

ವಾರಿಜಭವಾಂಡದೊಳು ಲಕ್ಷ್ಮೀನಾರಸಿಂಹನ ರೂಪಗುಣಗಳು
ವಾರಿಧಿಯೊಳಿಹ ತೆರಗಳಂದದಿ ಸಂದಣಿಸಿ ಇಹವು
ಕಾರಣಾoಶಾವೇಶ ವ್ಯಾಪ್ತಾವತಾರ ಕಾರ್ಯಾವ್ಯಕ್ತವ್ಯಕ್ತವು
ಈರೈದು ವಿಭೂತಿ ಅಂತರ್ಯಾಮಿ ರೂಪಗಳು||27||

ಮಣಿಗಳೊಳಗಿಹ ಸೂತ್ರದಂದದಿ ಪ್ರಣವ ಪಾದ್ಯನು ಚೇತನಾಚೇತನ
ಜಗತ್ತಿನೊಳು ಅನುದಿನದಲು ಆಡುವನು ಸುಖಪೂರ್ಣ
ದಣಿವಿಕೆಯು ಇವಗಿಲ್ಲ ಬಹು ಕಾರುಣಿಕ ಅನಂತಾನಂತ ಜೀವರ ಗಣದೊಳು
ಏಕಾಂಶ ಅಂಶ ರೂಪದಿ ನಿಂತು ನೇಮಿಸುವ||28||

ಜೀವ ಜೀವರ ಭೇದ ಜಡ ಜಡ ಜೀವ ಜಡ
ಜಡ ಜೀವರಿಂದಲಿ ಶ್ರೀವರನು ಅತ್ಯಂತ ಭಿನ್ನ ವಿಲಕ್ಷಣನು
ಲಕ್ಷ್ಮೀ ಮೂವರಿಂದಲಿ ಪದ್ಮಜಾಂದದಿ ತಾ ವಿಲಕ್ಷಣಳು ಎನಿಸುತಿಪ್ಪಳು
ಸಾ ಅಧಿಕಸಮ ಶೂನ್ಯಳು ಎಂದರಿತು ಈರ್ವರನು ಭಜಿಸು||29||

ಆದಿತೇಯರು ತಿಳಿಯದಿಹ ಗುಣ ವೇದಮಾನಿಗಳು ಎಂದೆನಿಪ ವಾಣಿ ಆದಿಗಳು ಬಲ್ಲರು
ಅವರು ಅರಿಯದ ಗುಣಂಗಳನು ವೇಧ ಬಲ್ಲನು
ಬೊಮ್ಮನು ಅರಿಯದ ಅಗಾಧ ಗುಣಗಳು ಲಕುಮಿ ಬಲ್ಲಳು
ಶ್ರೀಧರ ಒಬ್ಬನು ಉಪಾಸ್ಯ ಸದ್ಗುಣಪೂರ್ಣ ಹರಿಯೆಂದು||30||

ಇಂತ ಅನಂತಾನಂತ ಗುಣಗಳ ಪ್ರಾಂತಗಾಣದೆ ಮಹಾಲಕುಮಿ
ಭಗವಂತಗೆ ಆಭರಣ ಆಯುಧ ಅಂಬರ ಆಲಯಗಳಾಗಿ
ಸ್ವಾಂತದಲಿ ನೆಲೆಗೊಳಿಸಿ ಪರಮ ದುರಂತ ಮಹಿಮನ ದೌತ್ಯಕರ್ಮ
ನಿರಂತರದಿ ಮಾಡುತಲಿ ತದಧೀನತ್ವಯೈದಿಹಳು||31||

ಪ್ರಳಯ ಜಲಧಿಯೊಳು ಉಳ್ಳ ನಾವೆಯು ಹೊಲಬುಗಾಣದೆ ಸುತ್ತುವಂದದಿ
ಜಲರುಹೇಕ್ಷಣನ ಅಮಲ ಗುಣರೂಪಗಳ ಚಿಂತಿಸುತ
ನೆಲೆಯಗಾಣದೆ ಮಹಾಲಕುಮಿ ಚಂಚಲವನು ಐದಿಹಳು
ಅಲ್ಪ ಜೀವರಿಗೆ ಅಳವಡುವದೇನು ಇವನ ಮಹಿಮೆಗಳು ಈ ಜಗತ್ರಯದಿ||32||

ಶ್ರೀನಿಕೇತನ ಸಾತ್ವತಾಂಪತಿ ಜ್ಞಾನ ಗಮ್ಯ ಗಯಾಸುರ ಅರ್ದನ ಮೌನಿಕುಲ ಸನ್ಮಾನ್ಯ
ಮಾನದ ಮಾತುಳ ದ್ವ್ಹಂಸಿ
ದೀನಜನ ಮಂದಾರ ಮಧುರಿಪು ಪ್ರಾಣದ ಜಗನ್ನಾಥ ವಿಠಲ
ತಾನೇ ಗತಿಯೆಂದು ಅನುದಿನದಿ ನಂಬಿದವರ ಪೊರೆವ||33||
***


Panchatanmatra Sandhi:

bhūsalila śikhi pavana bhūta ākāśadoḷage aidaidu tanmātrā sahita | oṁdadika paṁcāśat varaṇa vēdya || ī śarīradi vyāpisiddu surāsurarige nirantaradali | sukhāsukhapradanāgi āḍuva dvēṣipara baḍiva ||1||

praṇava pratipādya trināmadi tanuvinoḷu tristhānaga aniruddhanu | tripañcaka ēka viṁśati catura viṁśatiganu enisi || eppatteraḍu sāvira initu nāḍigaḷoḷu niyāmisuta ina bhastiga | lōkadoḷu sarvatra beḷaguvanu ||2||

jīvaliṅgāniruddha sthūla kaḷēvaragaḷali | viśvaturagagrīva mūlēśa acyutatraya haṁsa mūrtigaḷa || ī vidha catuḥ sthānadali śāntīvarana īreradu rūpadi bhāvisuvudu | ēka ūna viṁśati mūrti sarvatra ||3||

kaluṣavillada darpaṇadi pratiphalisi sarva padārthagalu kaṅgoḷisuvandadali | biṁba jaḍa cētanagaḷoḷagiddū || poḷeva bahurūpadali sajjanaroḷage manadarpaṇadi tā | niścala nirāmaya nirvikāra nirāśrayānanta ||4||

ī śarīra catuṣṭayagaḷu kōśa dhātuga bhāratipa prāṇēśanu | ippattoṁdu sāvira dāruṇūrenipa śvāsa rūpaka haṁsa || bhāskara bhēśaroḷagiddū avara kaivididu | ī sarōja bhavāṇḍadoḷu sarvatra tuṁbihanu ||5||

śiragaḷaidu aideredu bāhugalu eraḍu pādagaḷu | oṁdu madhya udaradi śōbhipa vākmanōmayanenisi nityadali || karaṇa dhātugaḷalli eppatteraḍu sāvira nāḍigaḷali ippa | aravidūranu bhārata pratipādyanu enisi ||6||

īreradu dēha ūrmi bhūtagalāru adika daśa r̥gvinuta | lakṣmīramaṇa viṣṇvākhya rūpadi catu ṣaṣṭhi kalādhārakanu tānāgi || brahmapurāri mukhyaroḷiddū satata vihāra māḷpanu | catuṣpāda āhvayadi lōkadoḷu ||7||

tr̥ṇa modalu brahma anta jīvara tanugaḷa trayagaḷali | nārāyaṇana sāvira dainūrippattu mēle āru || gaṇane māḷpudu budharu rūpava | ghruṇi sūrya āditya nāmagalu anudinadi japisuvarige īva ārōgya saṁpadava ||8||

aidu nūru eppattu nālku adhibhautikadali tiḷivudu | aideredu śata ēka viṁśati rūpavu ādhyātma || bhēdagalu iṁnūru mūvattāda mēle oṁdadika mūrtigaḷu | ādaradali adhid aivad oḷu cintipudu bhūsuraru ||9||

suruci śārvarīkaranu enisi saṁkaruṣaṇa pradyumna | śaśi bhāskararoḷage aravattadika munnūru rūpadali karesikoṁbanu || ahaḥ saṁvatsaranenipanu viśiṣṭa nāmadi aritavarige | ārōgya bhāgyavanu īva ānandamaya ||10||

ēka paṁcāśat varaṇa gata mākāḷatranu sarvaroḷaga | avyākr̥ta ākāśānta vyāpisi nigamatatigaḷu vyākaraṇa bhārata || mukhādi anēka śāstra purāṇa bhāṣya anīkagaḷa kalpisi | manō vāṅmayanenisikoṁba ||11||

bhārabhŕt nāmagana sāvirada ārunūra ippattanālku mūrutigalu | carācaradi sarvatra tuṁbihavu || āru nālku jaḍagaḷali hadināru cētanagaḷali cintise | tōrikoṁbanu tanna rūpava sakala ṭāvinali ||12||

misuṇi mēliha maṇiyavoḷ rājisuva brahmādigaḷa manadali | bisijajāṇḍa adhārakanu adhayenendenisi || dviśata nālvatteraḍu rūpadi śaśiyoḷu ippanu | śaśadoḷage śōbhisuva nālvatteraḍu adika śata rūpadali biḍade ||13||

eraḍu sāvirada ēṇṭu rūpavanaritu sarva padārthadali | śrī varana pūjeya māḍu vāragaḷa bēḍu koṇḍāḍu || baride jaladoḷu muḷugi bisiloḷu beraḷanu eṇisidarēnu | sadguru hiriyara anusarisi idara marmavannu ariyadiha naranu ||14||

matte citdēhadoḷage eṁbhattu sāvirada ēḷu nūrada ippattaidu | narasiṁha rūpadaliddū || jīvarige nityadali hagalu iralu bappa apamr̥tyuvige tā mr̥tyuvenisuva | bhr̥tya vātsala bhayavināśana bhāgya saṁpanna ||15||

jvaranoḷu ippattēḷu haranoḷage iruvanu ippatteṁṭu rūpadi | eraḍu sāvirada ēṇṭu nūrippattēḷu adika jvarahara āhvaya || narasiṁhana smaraṇamātradi durita rāśigaḷu iradē pōpavu | taraṇi biṁbava kaṇḍa himadante ||16||

māsa pariyāntaravu biḍade nr̥kēsariya śubhanāma maṁtra | jitāsanadali ēkāgra cittadi niṣkapaṭadinda bēsarade japasalu || vr̥jinagaḷa nāśagaisi | manōrathagaḷa parēśa pāṭhiya māḍi koḍuvanu kaḍege paragatiya ||17||

catura mūrtyātmakahariyu triṁśati surūpadi brahmanoḷu | mārutanoḷu ippattēḷu rūpadoḷu ippa pradyumna || sutaroḷu ippattaidu hadineṁṭu atuḷa rūpagaḷa aritu | vatsara śatagaḷali pūjisutiliru caturātmakana padava ||18||

nūru varuṣake divasa mūvattāru sāvira vahavu | nāḍi śarīradoḷage initu ihavu strīpuṁbhēdadi || hariya īradhika eppattu sāvira mūrutigaḷane nenedu | sarvādhārakanu sarvatra pūjisupu pūrṇanendaridu ||19||

kālakarmaguṇasvabhāvagala ālayanu tānāgi lakṣmīlōla | tattadrūpanāmadi karesuta oḷagiddū || līleyindali sarvajīvara pālisuvasaṁharipa sr̥ṣṭipa | mūlakāraṇa prakr̥ti guṇakāryagaḷa manemāḍi ||20||

tilajavartigaḷa anusarisi prajvalisi dīpagaḷu | ālayada kattaleya bhaṅgisi tadgatārthava tōruvaṁdadi || jalaruhēkṣaṇa tannavara manadoḷage | bhakti jñāna karmake olidu poḷevuta tōruvanu guṇa rūpa kriyegaḷanu ||21||

āva dēhava koḍali hari mattāva lōkadoḷu iḍali | tā mattāva dēśadoḷu iḍali āvāvasthegaḷu barali || ī vidhadi jaḍa cētanadoḷu parāvarēśana rūpa guṇagaḷa bhāvisuta | sujñāna bhakutiya bēḍu koṇḍāḍu ||22||

oṁdar oḷag oṁdu beradihavu iṁdirēśana rūpagaḷa manabaṁda teradali | cintisidakē anumānavinitilla || siṁdhu rājan oḷu aṁbara ālaya baṁdhisalu | prati taṁtugaḷoḷu udabiṁdu vyāpisidaṁte irutippanu carācaradi ||23||

oṁdu rūpadoḷu oṁdu avayavadoḷu oṁdu rōmadoḷu oṁdu dēśadi poṁdi ippavu | ajāṇḍa anantānanta kōṭigaḷu ||24||

oṁdu anantānanta rūpagaḷu oṁdē rūpadoḷu ihavu lōkagaḷu oṁdē rūpadi | sr̥ṣṭi sthiti modalāda vyāpāra ||25||

śrīramēśana mūrtigaḷu nava nāri kuṁjaradaṁte ēkākāra tōrpavu | avayavāhvāya avayagaḷalli ||26||

vārijabhavāṇḍadoḷu lakṣmīnārasiṁhana rūpaguṇagaḷu | vāridhiy oḷiha teragaḷandad i saṁḍaṇisi ihavu ||27||

maṇigaḷ oḷag iha sūtradaṁdadi praṇava pādyanu cētanācētana | jagattin oḷu anudinadalu āḍuvanu sukhapūrṇa || daṇivikey u ivagilla bahu kāruṇika anantānanta jīvara gaṇadoḷu | ēkāṁśa aṁśa rūpadi niṁtu nēmisuva ||28||

jīva jīvara bhēda jaḍa jaḍa jīva jaḍa | jaḍa jīvarindali śrīvaranu atyaṁta bhinnavilakṣaṇanu ||29||

āditéyaru tiḷiyadiha guṇa vēdamāṇigaḷu endenipa vāṇi ādigaḷu baḷḷaru | avaru ariyada guṇaṁgaḷanu vēdha baḷḷanu ||30||

inta anantānanta guṇagaḷa prāṁtagāṇade mahālakumi | bhagavaṁtage ābharaṇa āyudha aṁbara ālayagaḷāgi ||31||

pralaya jaladhiyoḷu uḷḷa nāvēyu holabugāṇade suttuvaṁdadi | alpa jīvarige aḷavaḍuvadēnu ivana mahimegaḷu ī jagatrayadi ||32||

śrīnikētana sātvatāṁpati jñānagamya gayāsura ardana maunikula sanmānya | mānada mātuḷa dvhaṁsi || dīnajana maṁdāra madhuripu prāṇada jagannātha viṭhala | tānē gatiyendu anudinadi naṁbidavara poreva ||33||
***

Pronunciation Guide
Pronounce long vowels (ā, ī, ū, ē, ō) for double the duration of their short counterparts (a, i, u, e, o).

For retroflex sounds (ṭ, ḍ, ṇ, ṣ), curl the tip of your tongue back to touch the roof of your mouth.

The 'ś' and 'ṣ' are soft "sh" sounds, while 'kh', 'gh', and 'th' require an audible breath of air.

Pronounce 'ñ' like the "ny" in "canyon" and 'ṅ' like the nasal "ng" in "sing."

Maintain a steady, rhythmic cadence, pausing slightly at the "|" to emphasize each line's conclusion.
***


ಹರಿಕಥಾಮೃತಸಾರದ ಪಂಚತನ್ಮಾತ್ರ ಸಂಧಿ (ಸಂಧಿ 7) ಯ ಸಾರಾಂಶ ಇಲ್ಲಿದೆ:

ಈ ಸಂಧಿಯು ಭಗವಂತನ ಸರ್ವವ್ಯಾಪಕತ್ವ ಮತ್ತು ಅವನ ಅನಂತ ರೂಪಗಳ ಬಗ್ಗೆ ತಿಳಿಸುವ ಅದ್ಭುತವಾದ ಭಾಗವಾಗಿದೆ. ಜಗನ್ನಾಥದಾಸರು ಭಗವಂತನು ಈ ಜಗತ್ತಿನಲ್ಲಿ ಹೇಗೆ ನೆಲೆಸಿದ್ದಾನೆ ಎಂಬುದನ್ನು ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ದೃಷ್ಟಿಕೋನದಿಂದ ವಿವರಿಸಿದ್ದಾರೆ.

ಈ ಸಂಧಿಯ ಪ್ರಮುಖ ಅಂಶಗಳು:

ಸರ್ವವ್ಯಾಪಕತ್ವ (Pervasiveness): ಭಗವಂತನು ಕೇವಲ ದೂರದ ಲೋಕದಲ್ಲಿಲ್ಲ, ಬದಲಾಗಿ ನಮ್ಮ ಶರೀರದ ಪ್ರತಿಯೊಂದು ನಾಡಿ (72,000 ನಾಡಿಗಳು) ಮತ್ತು ಪ್ರತಿಯೊಂದು ಜೀವಕೋಶದಲ್ಲಿಯೂ ನೆಲೆಸಿದ್ದಾನೆ. ಪೃಥ್ವಿ, ಜಲ, ಅಗ್ನಿ, ವಾಯು ಮತ್ತು ಆಕಾಶ ಎಂಬ ಪಂಚಭೂತಗಳಲ್ಲಿ ಅವುಗಳ ತನ್ಮಾತ್ರಗಳೊಂದಿಗೆ ಅವನು ವ್ಯಾಪಿಸಿದ್ದಾನೆ.

ರೂಪಗಳ ವೈವಿಧ್ಯತೆ: ಭಗವಂತನಿಗೆ ಅನಂತ ರೂಪಗಳಿವೆ. ಪ್ರತಿಯೊಂದು ಕ್ರಿಯೆಯ ಹಿಂದೆ, ಪ್ರತಿಯೊಂದು ಕಾಲಘಟ್ಟದಲ್ಲಿ (ಸಂವತ್ಸರ, ದಿನ, ತಿಂಗಳು) ಅವನು ಬೇರೆ ಬೇರೆ ನಾಮ ಮತ್ತು ರೂಪಗಳಿಂದ ಕಾರ್ಯಾಚರಣೆ ಮಾಡುತ್ತಾನೆ. ನರಸಿಂಹ, ಅನಿರುದ್ಧ, ಪ್ರದ್ಯುಮ್ನ ಮೊದಲಾದ ರೂಪಗಳಲ್ಲಿ ಅವನು ಜೀವರನ್ನು ನಿಯಂತ್ರಿಸುತ್ತಾನೆ.

ಜೀವ-ಭಗವಂತನ ಸಂಬಂಧ: ಮಣಿಗಳ ಮಧ್ಯದಲ್ಲಿ ದಾರವಿರುವಂತೆ, ಭಗವಂತನು ಪ್ರಪಂಚದ ಪ್ರತಿ ವಸ್ತುವಿನಲ್ಲೂ (ಜಡ ಮತ್ತು ಚೇತನ) ಅಂತರಾತ್ಮನಾಗಿ ಇದ್ದಾನೆ. ಅವನು ಜಗತ್ತಿನ ಸೃಷ್ಟಿ, ಸ್ಥಿತಿ ಮತ್ತು ಲಯಗಳ ಮೂಲ ಕಾರಣ.

ಭಕ್ತಿಯ ಮಹತ್ವ: ಭಗವಂತನ ಈ ಅನಂತ ರೂಪಗಳನ್ನು ಅರ್ಥಮಾಡಿಕೊಳ್ಳುವುದು ಸುಲಭದ ಮಾತಲ್ಲ. ಕೇವಲ ಬಾಹ್ಯ ಸ್ನಾನ-ಪೂಜೆಗಳಿಗಿಂತ, ಸದ್ಗುರುವಿನ ಮೂಲಕ ಭಗವಂತನ ಈ ಸರ್ವವ್ಯಾಪಕ ಸ್ವರೂಪವನ್ನು ತಿಳಿದು, ಏಕಾಗ್ರತೆಯಿಂದ ಅವನ ನಾಮಸ್ಮರಣೆ ಮಾಡುವುದೇ ನಿಜವಾದ ಭಕ್ತಿ.

ಆರೋಗ್ಯ ಮತ್ತು ರಕ್ಷಣೆ: ನರಸಿಂಹನ ಸ್ಮರಣೆಯು ಪಾಪಗಳನ್ನು ಕರಗಿಸುತ್ತದೆ ಮತ್ತು ಅಕಾಲ ಮೃತ್ಯು, ರೋಗಾದಿಗಳಿಂದ ರಕ್ಷಿಸುತ್ತದೆ. ಭಗವಂತನೇ ನಮ್ಮ ರಕ್ಷಕ ಎಂದು ನಂಬಿದವರಿಗೆ ಅವನು ಸದಾ ಬೆಂಗಾವಲಾಗಿರುತ್ತಾನೆ.

ಸಾರಾಂಶ:
ಈ ಸಂಧಿಯು ನಮಗೆ ಭಗವಂತನನ್ನು ಕೇವಲ ಮೂರ್ತಿಯಾಗಿ ಮಾತ್ರವಲ್ಲದೆ, ಜಗತ್ತಿನ ಪ್ರತಿ ಅಣುವಿನಲ್ಲೂ ಮಿಡಿಯುವ ಚೈತನ್ಯವಾಗಿ ಕಾಣಲು ಕಲಿಸುತ್ತದೆ. "ನಾನು ಮತ್ತು ನನ್ನದು" ಎಂಬ ಅಹಂಕಾರವನ್ನು ಬಿಟ್ಟು, ಭಗವಂತನೇ ಸರ್ವಾಂತರಾಮಿ ಎಂದು ಅರಿತು ಅವನ ಶರಣಾಗತರಾಗುವುದೇ ಈ ಸಂಧಿಯ ಮುಖ್ಯ ಸಂದೇಶವಾಗಿದೆ.

Meaning

ಪದ್ಯ 1:
ಭೂಸಲಿಲ ಶಿಖಿ ಪವನ ಭೂತ ಆಕಾಶದೊಳಗೆ ಐದೈದು ತನ್ಮಾತ್ರಾ ಸಹಿತ |
ಒಂದಧಿಕ ಪಂಚಾಶತ್ ವರಣ ವೇದ್ಯ ||
ಈ ಶರೀರದಿ ವ್ಯಾಪಿಸಿದ್ದು ಸುರಾಸುರರಿಗೆ ನಿರಂತರದಲಿ |
ಸುಖಾಸುಖಪ್ರದನಾಗಿ ಆಡುವ ದ್ವೇಷಿಪರ ಬಡಿವ || 1 ||

ಅರ್ಥ: ಪೃಥ್ವಿ, ಜಲ, ಅಗ್ನಿ, ವಾಯು ಮತ್ತು ಆಕಾಶ ಎಂಬ ಪಂಚಭೂತಗಳಲ್ಲಿ ಅವುಗಳ ಗುಣಗಳೊಂದಿಗೆ (ತನ್ಮಾತ್ರಗಳು) ಭಗವಂತನಿದ್ದಾನೆ. ಐವತ್ತೊಂದು ಅಕ್ಷರಗಳ ಅಧಿಪತಿಯಾದ ಅವನು ನಮ್ಮ ಶರೀರದಲ್ಲಿ ವ್ಯಾಪಿಸಿದ್ದಾನೆ. ದೇವತೆಗಳಿಗೆ ಸುಖವನ್ನೂ, ಅಸುರರಿಗೆ (ದ್ವೇಷಿಗಳಿಗೆ) ದುಃಖವನ್ನೂ ಕೊಡುತ್ತಾ ಅವನು ಲೀಲೆಯನ್ನು ಆಡುತ್ತಿದ್ದಾನೆ.

ಪದ್ಯ 2:
ಪ್ರಣವ ಪ್ರತಿಪಾದ್ಯ ತ್ರಿನಾಮದಿ ತನುವಿನೊಳು ತ್ರಿಸ್ಥಾನಗ ಅನಿರುದ್ಧನು |
ತ್ರಿಪಂಚಕ ಏಕ ವಿಂಶತಿ ಚತುರ ವಿಂಶತಿಗನು ಎನಿಸಿ ||
ಎಪ್ಪತ್ತೆರಡು ಸಾವಿರ ಇನಿತು ನಾಡಿಗಳೊಳು ನಿಯಾಮಿಸುತ ಇನ ಭಸ್ತಿಗ |
ಲೋಕದೊಳು ಸರ್ವತ್ರ ಬೆಳಗುವನು || 2 ||

ಅರ್ಥ: ಓಂಕಾರ ಸ್ವರೂಪನಾದ ಅನಿರುದ್ಧನು ನಮ್ಮ ಶರೀರದ ಮೂರು ಸ್ಥಾನಗಳಲ್ಲಿ ನೆಲೆಸಿದ್ದಾನೆ. 72,000 ನಾಡಿಗಳನ್ನು ನಿಯಂತ್ರಿಸುತ್ತಾ, ಸೂರ್ಯನಂತೆ ಪ್ರಪಂಚದಾದ್ಯಂತ ಬೆಳಗುತ್ತಿದ್ದಾನೆ.

ಪದ್ಯ 3:
ಜೀವಲಿಂಗಾನಿರುದ್ಧ ಸ್ಥೂಲ ಕಳೇವರಗಳಲಿ |
ವಿಶ್ವತುರಗಗ್ರೀವ ಮೂಲೇಶ ಅಚ್ಯುತತ್ರಯ ಹಂಸ ಮೂರ್ತಿಗಳ ||
ಈ ವಿಧ ಚತು: ಸ್ಥಾನದಲಿ ಶಾಂತೀವರನ ಈರೆರಡು ರೂಪದಿ ಭಾವಿಸುವುದು |
ಏಕ ಊನ ವಿಂಶತಿ ಮೂರ್ತಿ ಸರ್ವತ್ರ || 3 ||

ಅರ್ಥ: ಜೀವನ ಮತ್ತು ಸ್ಥೂಲ ದೇಹದಲ್ಲಿ ಅನಿರುದ್ಧ, ವಿಶ್ವ, ಹಂಸ ಮುಂತಾದ ಭಗವಂತನ ವಿವಿಧ ರೂಪಗಳನ್ನು ನಾಲ್ಕು ಸ್ಥಾನಗಳಲ್ಲಿ ಭಾವಿಸಿ ಪೂಜಿಸಬೇಕು. ಹೀಗೆ ಹತ್ತೊಂಬತ್ತು ರೂಪಗಳನ್ನು ಸಕಲ ಕಡೆಗಳಲ್ಲಿ ಚಿಂತಿಸಬೇಕು.

ಪದ್ಯ 4:
ಕಲುಷವಿಲ್ಲದ ದರ್ಪಣದಿ ಪ್ರತಿಫಲಿಸಿ ಸರ್ವ ಪದಾರ್ಥಗಳು ಕಂಗೊಳಿಸುವಂದದಲಿ |
ಬಿಂಬ ಜಡ ಚೇತನಗಳೊಳಗಿದ್ದು ||
ಪೊಳೆವ ಬಹುರೂಪದಲಿ ಸಜ್ಜನರೊಳಗೆ ಮನದರ್ಪಣದಿ ತಾ |
ನಿಶ್ಚಲ ನಿರಾಮಯ ನಿರ್ವಿಕಾರ ನಿರಾಶ್ರಯಾನಂತ || 4 ||

ಅರ್ಥ: ಕನ್ನಡಿಯು ಸ್ವಚ್ಛವಾಗಿದ್ದರೆ ಅದರಲ್ಲಿ ಹೇಗೆ ವಸ್ತುಗಳು ಕಾಣುತ್ತವೆಯೋ, ಹಾಗೆಯೇ ನಿರ್ಮಲವಾದ ಸಜ್ಜನರ ಮನಸ್ಸಿನಲ್ಲಿ ಭಗವಂತನ ಪ್ರತಿರೂಪ ಕಾಣಿಸುತ್ತದೆ. ಅವನು ನಿಶ್ಚಲ ಮತ್ತು ನಿರ್ವಿಕಾರನಾಗಿದ್ದಾನೆ.

ಪದ್ಯ 5:
ಈ ಶರೀರ ಚತುಷ್ಟಯಗಳು ಕೋಶ ಧಾತುಗ ಭಾರತಿಪ ಪ್ರಾಣೇಶನು |
ಇಪ್ಪತ್ತೊಂದು ಸಾವಿರದ ಆರುನೂರೆನಿಪ ಶ್ವಾಸ ರೂಪಕ ಹಂಸ ||
ಭಾಸ್ಕರ ಭೇಶರೊಳಗಿದ್ದು ಅವರ ಕೈವಿಡಿದು |
ಈ ಸರೋಜ ಭವಾಂಡದೊಳು ಸರ್ವತ್ರ ತುಂಬಿಹನು || 5 ||

ಅರ್ಥ: ದೇಹದಲ್ಲಿನ ಪ್ರಾಣಶಕ್ತಿಯ ಅಧಿಪತಿಯಾದ ವಾಯುದೇವನ ಮೂಲಕ ಭಗವಂತನು ಉಸಿರಾಟದ ಕ್ರಿಯೆಯನ್ನು ನಡೆಸುತ್ತಾನೆ. ಪ್ರತಿದಿನ 21,600 ಶ್ವಾಸ ರೂಪದ ಹಂಸ ಮಂತ್ರದ ಮೂಲಕ ಅವನು ಜಗತ್ತಿನಾದ್ಯಂತ ತುಂಬಿದ್ದಾನೆ.

ಪದ್ಯ 6:
ಶಿರಗಳೈದು ಐದೆರೆಡು ಬಾಹುಗಳು ಎರಡು ಪಾದಗಳು |
ಒಂದು ಮಧ್ಯ ಉದರದಿ ಶೋಭಿಪ ವಾಕ್ಮನೋಮಯನೆನಿಸಿ ನಿತ್ಯದಲಿ ||
ಕರಣ ಧಾತುಗಳಲ್ಲಿ ಎಪ್ಪತ್ತೆರಡು ಸಾವಿರ ನಾಡಿಗಳಲಿ ಇಪ್ಪ |
ಅರವಿದೂರನು ಭಾರತ ಪ್ರತಿಪಾದ್ಯನು ಎನಿಸಿ || 6 ||

ಅರ್ಥ: ಐದು ತಲೆ, ಹತ್ತು ಕೈ ಮತ್ತು ಎರಡು ಪಾದಗಳನ್ನು ಹೊಂದಿದ ಭಗವಂತನು ನಮ್ಮ ದೇಹದ ಅಂತರಾಳದಲ್ಲಿದ್ದಾನೆ. ಅವನು ಎಪ್ಪತ್ತೆರಡು ಸಾವಿರ ನಾಡಿಗಳಲ್ಲಿ ನೆಲೆಸಿದ್ದು, ವೇದ-ಪುರಾಣಗಳಿಂದ ಕೊಂಡಾಡಲ್ಪಡುತ್ತಾನೆ.

ಪದ್ಯ 7:
ಈರೆರೆಡು ದೇಹ ಊರ್ಮಿ ಭೂತಗಳಾರು ಅಧಿಕ ದಶ ಋಗ್ವಿನುತ |
ಲಕ್ಷ್ಮೀರಮಣ ವಿಷ್ಣ್ವಾಖ್ಯ ರೂಪದಿ ಚತು ಷಷ್ಠಿ ಕಲಾಧಾರಕನು ತಾನಾಗಿ ||
ಬ್ರಹ್ಮಪುರಾರಿ ಮುಖ್ಯರೊಳಿದ್ದು ಸತತ ವಿಹಾರ ಮಾಳ್ಪನು |
ಚತುಷ್ಪಾದ ಆಹ್ವಯದಿ ಲೋಕದೊಳು || 7 ||

ಅರ್ಥ: ಲಕ್ಷ್ಮೀಪತಿಯಾದ ವಿಷ್ಣುವು 64 ಕಲೆಗಳಿಗೆ ಆಧಾರನಾಗಿದ್ದಾನೆ. ಬ್ರಹ್ಮ, ರುದ್ರ ಮೊದಲಾದ ದೇವತೆಗಳ ಒಳಗೂ ಇದ್ದು, ಅವನು ಜಗತ್ತಿನಲ್ಲಿ ವಿಹರಿಸುತ್ತಿದ್ದಾನೆ.

ಪದ್ಯ 8:
ತೃಣ ಮೊದಲು ಬ್ರಹ್ಮ ಅಂತ ಜೀವರ ತನುಗಳ ತ್ರಯಗಳಲಿ |
ನಾರಾಯಣನ ಸಾವಿರದೈನೂರಿಪ್ಪತ್ತು ಮೇಲೆ ಆರು ||
ಗಣನೆ ಮಾಳ್ಪುದು ಬುಧರು ರೂಪವ |
ಘ್ರುಣಿ ಸೂರ್ಯ ಆದಿತ್ಯ ನಾಮಗಳು ಅನುದಿನದಿ ಜಪಿಸುವರಿಗೆ ಈವ ಆರೋಗ್ಯ ಸಂಪದವ || 8 ||

ಅರ್ಥ: ಹುಲ್ಲಿನಿಂದ ಬ್ರಹ್ಮನವರೆಗಿನ ಎಲ್ಲಾ ಜೀವಿಗಳ ದೇಹದಲ್ಲಿ ನಾರಾಯಣನ 1526 ರೂಪಗಳಿವೆ ಎಂದು ಜ್ಞಾನಿಗಳು ತಿಳಿಯುತ್ತಾರೆ. ಸೂರ್ಯನ ನಾಮಗಳನ್ನು ಜಪಿಸುವವರಿಗೆ ಅವನು ಆರೋಗ್ಯ ಮತ್ತು ಸಂಪತ್ತನ್ನು ನೀಡುತ್ತಾನೆ.

ಪದ್ಯ 9:
ಐದು ನೂರು ಎಪ್ಪತ್ತು ನಾಲ್ಕು ಅಧಿಭೌತಿಕದಲಿ ತಿಳಿವುದು |
ಐದೆರೆಡು ಶತ ಏಕ ವಿಂಶತಿ ರೂಪವು ಆಧ್ಯಾತ್ಮ ||
ಭೇದಗಳು ಇನ್ನೂರು ಮೂವತ್ತಾದ ಮೇಲೆ ಒಂದಧಿಕ ಮೂರ್ತಿಗಳು |
ಆದರದಲಿ ಅಧಿದೈವದೊಳು ಚಿಂತಿಪುದು ಭೂಸುರರು || 9 ||

ಅರ್ಥ: ಅಧಿಭೌತಿಕ, ಆಧ್ಯಾತ್ಮಿಕ ಮತ್ತು ಅಧಿದೈವಿಕ ಭೇದಗಳಲ್ಲಿ ಭಗವಂತನ ನಾನಾ ರೂಪಗಳನ್ನು ಲೆಕ್ಕಾಚಾರ ಮಾಡಿ, ಜ್ಞಾನಿಗಳು ಭಕ್ತಿಯಿಂದ ಚಿಂತಿಸಬೇಕು.

ಪದ್ಯ 10:
ಸುರುಚಿ ಶಾರ್ವರೀಕರನು ಎನಿಸಿ ಸಂಕರುಷಣ ಪ್ರದ್ಯುಮ್ನ |
ಶಶಿ ಭಾಸ್ಕರರೊಳಗೆ ಅರವತ್ತಧಿಕ ಮುನ್ನೂರು ರೂಪದಲಿ ಕರೆಸಿಕೊಂಬನು ||
ಅಹಃ ಸಂವತ್ಸರನೆನಿಪನು ವಿಶಿಷ್ಟ ನಾಮದಲಿ ಅರಿತವರಿಗೆ |
ಆರೋಗ್ಯ ಭಾಗ್ಯವನು ಈವ ಆನಂದಮಯ || 10 ||

ಅರ್ಥ: ಸಂಕರುಷಣ, ಪ್ರದ್ಯುಮ್ನ ಮುಂತಾದ ರೂಪಗಳಲ್ಲಿ 360 ರೂಪಗಳೊಂದಿಗೆ ಅವನು ಕಾಲಸ್ವರೂಪನಾಗಿ (ಸಂವತ್ಸರ) ಇದ್ದಾನೆ. ಇದನ್ನು ತಿಳಿದವರಿಗೆ ಅವನು ಆರೋಗ್ಯ ಭಾಗ್ಯವನ್ನು ಕರುಣಿಸುತ್ತಾನೆ.

ಪದ್ಯ 11:
ಏಕ ಪಂಚಾಶತ್ ವರಣ ಗತ ಮಾಕಳತ್ರನು ಸರ್ವರೊಳಗ |
ಅವ್ಯಾಕೃತ ಆಕಾಶಾಂತ ವ್ಯಾಪಿಸಿ ನಿಗಮತತಿಗಳು ವ್ಯಾಕರಣ ಭಾರತ ||
ಮುಖಾದಿ ಅನೇಕ ಶಾಸ್ತ್ರ ಪುರಾಣ ಭಾಷ್ಯ ಅನೀಕಗಳ ಕಲ್ಪಿಸಿ |
ಮನೋ ವಾಙ್ಮಯನೆನಿಸಿಕೊಂಬ || 11 ||

ಅರ್ಥ: ಅಕ್ಷರಗಳ ಅಧಿಪತಿಯಾದ ಭಗವಂತನು ಆಕಾಶದವರೆಗೆ ವ್ಯಾಪಿಸಿದ್ದಾನೆ. ವೇದ, ವ್ಯಾಕರಣ, ಭಾರತ, ಪುರಾಣಗಳೆಲ್ಲವೂ ಅವನನ್ನೇ ವರ್ಣಿಸುತ್ತವೆ. ಅವನು ಮನಸ್ಸು ಮತ್ತು ವಾಕ್ (ಮಾತು) ಅಧಿಪತಿಯಾಗಿದ್ದಾನೆ.

ಪದ್ಯ 12:
ಭಾರಭೃತ್ ನಾಮಕನ ಸಾವಿರದ ಆರುನೂರ ಇಪ್ಪತ್ತನಾಲ್ಕು ಮೂರುತಿಗಳು |
ಚರಾಚರದಿ ಸರ್ವತ್ರ ತುಂಬಿಹವು ||
ಆರು ನಾಲ್ಕು ಜಡಗಳಲಿ ಹದಿನಾರು ಚೇತನಗಳಲಿ ಚಿಂತಿಸೆ |
ತೋರಿಕೊಂಬನು ತನ್ನ ರೂಪವ ಸಕಲ ಟಾವಿನಲಿ || 12 ||

ಅರ್ಥ: ಭಾರಭೃತ್ ರೂಪದ ಭಗವಂತನ 1624 ಮೂರ್ತಿಗಳು ಸಕಲ ಜೀವರಾಶಿಗಳಲ್ಲಿ ತುಂಬಿವೆ. ಜಡ ಮತ್ತು ಚೇತನ ವಸ್ತುಗಳಲ್ಲಿ ಅವನನ್ನು ಚಿಂತಿಸಿದರೆ ಅವನು ಎಲ್ಲೆಡೆಯೂ ತನ್ನ ರೂಪವನ್ನು ತೋರುತ್ತಾನೆ.

ಪದ್ಯ 13:
ಮಿಸುಣಿ ಮೇಲಿಹ ಮಣಿಯವೊಳ್ ರಾಜಿಸುವ ಬ್ರಹ್ಮಾದಿಗಳ ಮನದಲಿ |
ಬಿಸಿಜಜಾಂಡ ಅಧಾರಕನು ಅಧೇಯನೆಂದೆನಿಸಿ ||
ದ್ವಿಶತ ನಾಲ್ವತ್ತೆರಡು ರೂಪದಿ ಶಶಿಯೊಳು ಇಪ್ಪನು |
ಶಶದೊಳಗೆ ಶೋಭಿಸುವ ನಾಲ್ವತ್ತೆರಡು ಅಧಿಕ ಶತ ರೂಪದಲಿ ಬಿಡದೆ || 13 ||

ಅರ್ಥ: ಮಣಿಯೊಳಗೆ ದಾರವಿರುವಂತೆ, ಬ್ರಹ್ಮಾದಿ ದೇವತೆಗಳ ಮನಸ್ಸಿನಲ್ಲಿ ಭಗವಂತನಿದ್ದಾನೆ. ಚಂದ್ರನಲ್ಲೂ ಅವನು ನೂರಾರು ರೂಪಗಳಿಂದ ನಿರಂತರವಾಗಿ ನೆಲೆಸಿದ್ದಾನೆ.

ಪದ್ಯ 14:
ಎರಡು ಸಾವಿರದ ಎಂಟು ರೂಪವನರಿತು ಸರ್ವ ಪದಾರ್ಥದಲಿ |
ಶ್ರೀ ವರನ ಪೂಜೆಯ ಮಾಡು ವಾರಗಳ ಬೇಡು ಕೊಂಡಾಡು ||
ಬರಿದೆ ಜಲದೊಳು ಮುಳುಗಿ ಬಿಸಿಲೊಳು ಬೆರಳನು ಎಣಿಸಿದರೇನು |
ಸದ್ಗುರು ಹಿರಿಯರ ಅನುಸರಿಸಿ ಇದರ ಮರ್ಮವನ್ನು ಅರಿಯದಿಹ ನರನು || 14 ||

ಅರ್ಥ: ಕೇವಲ ನದಿ ಸ್ನಾನ ಅಥವಾ ಕಠಿಣ ತಪಸ್ಸಿನಿಂದ ಪ್ರಯೋಜನವಿಲ್ಲ. ಭಗವಂತನ 2008 ರೂಪಗಳ ರಹಸ್ಯವನ್ನು ಗುರುಮುಖದಿಂದ ತಿಳಿದು, ಅವನನ್ನು ಭಕ್ತಿಯಿಂದ ಪೂಜಿಸುವುದೇ ನಿಜವಾದ ಸಾಧನೆ.

ಪದ್ಯ 15:
ಮತ್ತೆ ಚಿತ್ದೇಹದೊಳಗೆ ಎಂಭತ್ತು ಸಾವಿರದ ಏಳು ನೂರ ಇಪ್ಪತ್ತೈದು |
ನರಸಿಂಹ ರೂಪದಲಿದ್ದು ||
ಜೀವರಿಗೆ ನಿತ್ಯದಲಿ ಹಗಲು ಇರಲು ಬಪ್ಪ ಅಪಮೃತ್ಯುವಿಗೆ ತಾ ಮೃತ್ಯುವೆನಿಸುವ |
ಭೃತ್ಯ ವಾತ್ಸಲ ಭಯವಿನಾಶನ ಭಾಗ್ಯ ಸಂಪನ್ನ || 15 ||

ಅರ್ಥ: ಭಗವಂತನು ನರಸಿಂಹ ರೂಪದಲ್ಲಿ 80,725 ರೂಪಗಳಿಂದ ಜೀವನ ದೇಹದಲ್ಲಿ ನೆಲೆಸಿದ್ದಾನೆ. ಭಕ್ತರ ಸಂಕಷ್ಟಗಳನ್ನು ಮತ್ತು ಅಕಾಲ ಮೃತ್ಯುವನ್ನು ನಾಶಮಾಡುವ ಅವನು ಭಯಾನಾಶಕನಾಗಿದ್ದಾನೆ.

ಪದ್ಯ 16:
ಜ್ವರನೊಳು ಇಪ್ಪತ್ತೇಳು ಹರನೊಳಗೆ ಇರುವನು ಇಪ್ಪತ್ತೆಂಟು ರೂಪದಿ |
ಎರಡು ಸಾವಿರದ ಎಂಟು ನೂರಿಪ್ಪತ್ತೇಳು ಅಧಿಕ ಜ್ವರಹರ ಆಹ್ವಯ ||
ನಾರಸಿಂಹನ ಸ್ಮರಣೆಮಾತ್ರದಿ ದುರಿತ ರಾಶಿಗಳು ಇರದೇ ಪೋಪವು |
ತರಣಿ ಬಿಂಬವ ಕಂಡ ಹಿಮದಂತೆ || 16 ||

ಅರ್ಥ: ಜ್ವರ ಮೊದಲಾದ ರೋಗಗಳನ್ನು ಹೋಗಲಾಡಿಸುವವನು ಅವನು. ನಾರಸಿಂಹನನ್ನು ಸ್ಮರಿಸಿದ ಕ್ಷಣದಲ್ಲಿಯೇ ಪಾಪಗಳೆಲ್ಲವೂ ಸೂರ್ಯನ ಬೆಳಕನ್ನು ಕಂಡ ಮಂಜಿನಂತೆ ಕರಗಿ ಹೋಗುತ್ತವೆ.

ಪದ್ಯ 17:
ಮಾಸ ಪರಿಯಂತರವು ಬಿಡದೆ ನೃಕೇಸರಿಯ ಶುಭನಾಮ ಮಂತ್ರ |
ಜಿತಾಸನದಲಿ ಏಕಾಗ್ರ ಚಿತ್ತದಿ ನಿಷ್ಕಪಟದಿಂದ ಬೇಸರದೆ ಜಪಿಸಲು ||
ವೃಜಿನಗಳ ನಾಶಗೈಸಿ |
ಮನೋರಥಗಳ ಪರೇಶ ಪಾರ್ಟಿಯ ಮಾಡಿ ಕೊಡುವನು ಕಡೆಗೆ ಪರಗತಿಯ || 17 ||

ಅರ್ಥ: ನರಸಿಂಹನ ನಾಮವನ್ನು ನಿಷ್ಕಪಟವಾಗಿ ಏಕಾಗ್ರತೆಯಿಂದ ಜಪಿಸಿದರೆ, ಭಗವಂತನು ಪಾಪಗಳನ್ನು ನಾಶಪಡಿಸಿ, ನಮ್ಮ ಕೋರಿಕೆಗಳನ್ನು ಈಡೇರಿಸಿ, ಕೊನೆಗೆ ಮೋಕ್ಷವನ್ನೂ ನೀಡುತ್ತಾನೆ.

ಪದ್ಯ 18:
ಚತುರ ಮೂರ್ತ್ಯಾತ್ಮಕ ಹರಿಯು ತ್ರಿಂಶತಿ ಸುರೂಪದಿ ಬ್ರಹ್ಮನೊಳು |
ಮಾರುತನೊಳು ಇಪ್ಪತ್ತೇಳು ರೂಪದೊಳು ಇಪ್ಪ ಪ್ರದ್ಯುಮ್ನ ||
ಸುತರೊಳು ಇಪ್ಪತ್ತೈದು ಹದಿನೆಂಟು ಅತುಳ ರೂಪಗಳ ಅರಿತು |
ವತ್ಸರ ಶತಗಳಲಿ ಪೂಜಿಸುತಲಿರು ಚತುರಾತ್ಮಕನ ಪದವ || 18 ||

ಅರ್ಥ: ಬ್ರಹ್ಮ, ವಾಯು ಮತ್ತು ಇತರರಲ್ಲಿ ಭಗವಂತನ ವಿವಿಧ ರೂಪಗಳನ್ನು ಅರಿತು ಭಕ್ತಿಯಿಂದ ಪೂಜಿಸಬೇಕು.

ಪದ್ಯ 19:
ನೂರು ವರುಷಕೆ ದಿವಸ ಮೂವತ್ತಾರು ಸಾವಿರ ವಹವು |
ನಾಡಿ ಶರೀರದೊಳಗೆ ಇನಿತು ಇಹವು ಸ್ತ್ರೀಪುಂಭೇದದಲಿ ||
ಹರಿಯ ಈರಧಿಕ ಎಪ್ಪತ್ತು ಸಾವಿರ ಮೂರುತಿಗಳನೆ ನೆನೆದು |
ಸರ್ವಾಧಾರಕನ ಸರ್ವತ್ರ ಪೂಜಿಸು ಪೂರ್ಣನೆಂದರಿದು || 19 ||

ಅರ್ಥ: ನೂರಾರು ವರ್ಷಗಳಲ್ಲಿನ ದಿನಗಳಷ್ಟೇ ನಮ್ಮ ದೇಹದಲ್ಲಿ ನಾಡಿಗಳಿವೆ. ಭಗವಂತನ 70,002 ರೂಪಗಳನ್ನು ಸ್ಮರಿಸಿ ಸರ್ವಾಧಾರಕನಾದ ಅವನನ್ನು ಪೂಜಿಸು.

ಪದ್ಯ 20-21:

ಅರ್ಥ: ಕಾಲ, ಕರ್ಮ, ಗುಣ, ಸ್ವಭಾವಗಳಿಗೆಲ್ಲ ಮೂಲ ಭಗವಂತನೇ. ದೀಪವು ಕತ್ತಲೆಯನ್ನು ಹೋಗಲಾಡಿಸುವಂತೆ, ಭಗವಂತನು ಸಜ್ಜನರ ಮನಸ್ಸಿನಲ್ಲಿ ಭಕ್ತಿ, ಜ್ಞಾನ ಮತ್ತು ಕರ್ಮಗಳನ್ನು ಬೆಳಗಿಸುತ್ತಾನೆ.

ಪದ್ಯ 22:
ಆವ ದೇಹವ ಕೊಡಲಿ ಹರಿ ಮತ್ತಾವ ಲೋಕದೊಳು ಇಡಲಿ |
ತಾ ಮತ್ತಾವ ದೇಶದೊಳು ಇಡಲಿ ಆವಾವಸ್ಥೆಗಳು ಬರಲಿ ||
ಈ ವಿಧದಿ ಜಡ ಚೇತನದೊಳು ಪರಾವರೇಶನ ರೂಪ ಗುಣಗಳ ಭಾವಿಸುತ |
ಸುಜ್ಞಾನ ಭಕುತಿಯ ಬೇಡು ಕೊಂಡಾಡು || 22 ||

ಅರ್ಥ: ಭಗವಂತನು ನಮಗೆ ಯಾವುದೇ ದೇಹವನ್ನಾಗಲಿ, ಲೋಕವನ್ನಾಗಲಿ ಕೊಟ್ಟರೂ, ಅವನು ಎಲ್ಲದರಲ್ಲೂ ಇದ್ದಾನೆ ಎಂದು ಭಾವಿಸಿ ಸುಜ್ಞಾನ ಮತ್ತು ಭಕ್ತಿಯನ್ನು ಬೇಡಬೇಕು.

ಪದ್ಯ 23:
ಒಂದರೊಳಗೊಂದು ಬೆರದಿಹವು ಇಂದಿರೇಶನ ರೂಪಗಳ ಮನಬಂದ ತೆರದಲಿ |
ಚಿಂತಿಸಿದಕೆ ಅನುಮಾನವಿನಿತಿಲ್ಲ ||
ಸಿಂಧು ರಾಜನೊಳು ಅಂಬರ ಆಲಯ ಬಂಧಿಸಲು |
ಪ್ರತಿ ತಂತುಗಳೊಳು ಉದಬಿಂದು ವ್ಯಾಪಿಸಿದಂತೆ ಇರುತಿಪ್ಪನು ಚರಾಚರದಿ || 23 ||

ಅರ್ಥ: ಸಮುದ್ರದಲ್ಲಿ ನೀರಿನ ಪ್ರತಿ ಹನಿಯೂ ಹೇಗೆ ಸಮುದ್ರವೇ ಆಗಿದೆಯೋ, ಹಾಗೆಯೇ ಭಗವಂತನು ಚರಾಚರ ಜಗತ್ತಿನ ಪ್ರತಿಯೊಂದರಲ್ಲೂ ತುಂಬಿದ್ದಾನೆ.

ಪದ್ಯ 24-25:

ಅರ್ಥ: ಅನಂತಾನಂತ ಕೋಟಿ ಬ್ರಹ್ಮಾಂಡಗಳು ಭಗವಂತನ ಒಂದೊಂದು ರೂಪದಲ್ಲಿ ಅಡಗಿವೆ. ಶ್ರೀಕೃಷ್ಣನು ಅರ್ಜುನನಿಗೆ ರಣಭೂಮಿಯಲ್ಲಿ ತೋರಿಸಿದಂತೆ, ಅವನು ಸೃಷ್ಟಿ-ಸ್ಥಿತಿ-ಲಯಗಳನ್ನು ಲೀಲೆಯಿಂದ ನಡೆಸುತ್ತಾನೆ.

ಪದ್ಯ 26-27:

ಅರ್ಥ: ಶ್ರೀಲಕ್ಷ್ಮೀ ನರಸಿಂಹನ ರೂಪಗುಣಗಳು ಸಾಗರದಲ್ಲಿನ ಅಲೆಗಳಂತೆ ಅನಂತ. ಅವನ ವಿಭೂತಿಗಳು ಮತ್ತು ಅಂತರ್ಯಾಮಿ ರೂಪಗಳು ಅಚಿಂತ್ಯವಾದವು.

ಪದ್ಯ 28:
ಮಣಿಗಳೊಳಗಿಹ ಸೂತ್ರದಂದದಿ ಪ್ರಣವ ಪಾದ್ಯನು ಚೇತನಾಚೇತನ |
ಜಗತ್ತಿನೊಳು ಅನುದಿನದಲು ಆಡುವನು ಸುಖಪೂರ್ಣ ||
ದಣಿವಿಕೆಯು ಇವಗಿಲ್ಲ ಬಹು ಕಾರುಣಿಕ ಅನಂತಾನಂತ ಜೀವರ ಗಣದೊಳು |
ಏಕಾಂಶ ಅಂಶ ರೂಪದಿ ನಿಂತು ನೇಮಿಸುವ || 28 ||

ಅರ್ಥ: ಮಣಿಗಳ ಮಧ್ಯದ ದಾರದಂತೆ ಭಗವಂತನು ಜಗತ್ತಿನ ಎಲ್ಲ ಜೀವಿಗಳಲ್ಲೂ ಇದ್ದು ಅವುಗಳನ್ನು ನಿಯಂತ್ರಿಸುತ್ತಾನೆ. ಅವನಿಗೆ ಯಾವುದೇ ದಣಿವು ಇಲ್ಲ.

ಪದ್ಯ 29-30:

ಅರ್ಥ: ಜೀವರು ಮತ್ತು ಭಗವಂತನಿಗೆ ಅಜಗಜಾಂತರ ವ್ಯತ್ಯಾಸವಿದೆ. ಬ್ರಹ್ಮಾದಿ ದೇವತೆಗಳೂ ಅವನ ಪೂರ್ಣ ಗುಣಗಳನ್ನು ಅರಿಯಲಾರರು. ಲಕ್ಷ್ಮೀದೇವಿಯು ಅವನ ಮಹಿಮೆಯನ್ನು ಅಲ್ಪಸ್ವಲ್ಪ ಬಲ್ಲಳು.

ಪದ್ಯ 31-32:

ಅರ್ಥ: ಲಕ್ಷ್ಮೀದೇವಿಯು ಭಗವಂತನಿಗೆ ದಾಸಿಯಾಗಿ, ಅವನ ಗುಣಗಳನ್ನು ಧ್ಯಾನಿಸುತ್ತಾ ನಿರಂತರ ಅವನ ಸೇವೆಯನ್ನು ಮಾಡುತ್ತಾಳೆ. ಅಂತಹ ಭಗವಂತನ ಮಹಿಮೆಯನ್ನು ಅಲ್ಪ ಜೀವಿಗಳಾದ ನಾವು ತಿಳಿಯುವುದು ಹೇಗೆ?

ಪದ್ಯ 33:
ಶ್ರೀನಿಕೇತನ ಸಾತ್ವತಾಂಪತಿ ಜ್ಞಾನ ಗಮ್ಯ ಗಯಾಸುರ ಅರ್ದನ ಮೌನಿಕುಲ ಸನ್ಮಾನ್ಯ |
ಮಾನದ ಮಾತುಳ ದ್ವ್ಹಂಸಿ ||
ದೀನಜನ ಮಂದಾರ ಮಧುರಿಪು ಪ್ರಾಣದ ಜಗನ್ನಾಥ ವಿಠಲ |
ತಾನೇ ಗತಿಯೆಂದು ಅನುದಿನದಿ ನಂಬಿದವರ ಪೊರೆವ || 33 ||

ಅರ್ಥ: ಜಗನ್ನಾಥದಾಸರು ಈ ಸಂಧಿಯನ್ನು ಮುಕ್ತಾಯಗೊಳಿಸುತ್ತಾ, ದೀನಬಂಧುವಾದ ಜಗನ್ನಾಥ ವಿಠಲನೇ ನಮಗೆ ಗತಿ. ಅವನನ್ನು ನಂಬಿದವರನ್ನು ಅವನು ಖಂಡಿತವಾಗಿಯೂ ರಕ್ಷಿಸುತ್ತಾನೆ ಎಂದು ಹೇಳುತ್ತಾರೆ.
***

The Panchatanmatra Sandhi (Chapter 7) of the Harikathamritasara is a profound exposition on the omnipresence of the Lord and the infinite nature of His forms. Through these verses, Jagannatha Dasa explains how the Lord permeates every aspect of existence, both in the macrocosm (the universe) and the microcosm (the human body).

Key Themes of the Sandhi
1. Divine Omnipresence (Sarvavyapakatva)
The Lord is not distant; He dwells within every fiber of our being. He pervades the 72,000 nadis (nerves) of the human body and resides within the five elements (earth, water, fire, air, and space) along with their subtle qualities. Everything in creation is His abode.

2. The Multiplicity of Divine Forms
Jagannatha Dasa emphasizes that the Lord operates through countless names and forms, such as Aniruddha, Narasimha, and Pradyumna. Whether it is through the cycle of time (days, months, years) or the regulation of vital breaths, the Lord performs His divine play (Leela) in every moment. He manages the creation, sustenance, and dissolution of the universe simultaneously.

3. The Relationship Between the Creator and the Created
Just as a thread runs through a string of beads, the Lord resides within every living (sentient) and non-living (insentient) thing. He is the Bimba (Original Image) reflected in the pratibimba (the souls). Because of this, He is the ultimate cause and the inner controller of all actions.

4. The Path of True Devotion
The Dasa underscores that merely performing external rituals (like bathing or physical worship) without understanding the truth is insufficient. True devotion involves seeking guidance from a Sadguru to understand the Lord’s omnipresent nature and then meditating upon Him with sincerity, focus, and a heart free of hypocrisy.

5. Protection and Grace
A recurring message is the Lord's protective role. Specifically, meditating on Lord Narasimha is highlighted as a powerful way to dissolve past sins and protect the devotee from fears, diseases, and untimely death. The Lord acts as the ultimate refuge for those who surrender to Him.

Conclusion
In summary, this Sandhi invites the devotee to move beyond seeing the world as mere matter. It teaches us to perceive the divine energy pulsating within every atom of creation. By letting go of the ego and recognizing the Lord as the inner dweller of all, the devotee attains peace, health, and, ultimately, spiritual liberation.

Meaning

Verse 1
bhūsalila śikhi pavana bhūta ākāśadoḷage aidaidu tanmātrā sahita |
oṁdadika paṁcāśat varaṇa vēdya ||
ī śarīradi vyāpisiddu surāsurarige nirantaradali |
sukhāsukhapradanāgi āḍuva dvēṣipara baḍiva ||1||

Meaning: The Lord dwells within the five elements (earth, water, fire, air, and space) along with their subtle qualities (tanmatras). He is known by the 51 letters of the alphabet. Pervading this body, He constantly grants happiness to the gods and sorrow to the demons (those who hate Him), while engaging in His divine play.

Verse 2
praṇava pratipādya trināmadi tanuvinoḷu tristhānaga aniruddhanu |
tripañcaka ēka viṁśati catura viṁśatiganu enisi ||
eppatteraḍu sāvira initu nāḍigaḷoḷu niyāmisuta ina bhastiga |
lōkadoḷu sarvatra beḷaguvanu ||2||

Meaning: Aniruddha, who is glorified by the Omkara and three holy names, resides in three places of the body. Controlling the 72,000 nerves, He shines everywhere in the world like the sun.

Verse 3
jīvaliṅgāniruddha sthūla kaḷēvaragaḷali |
viśvaturagagrīva mūlēśa acyutatraya haṁsa mūrtigaḷa ||
ī vidha catuḥ sthānadali śāntīvarana īreradu rūpadi bhāvisuvudu |
ēka ūna viṁśati mūrti sarvatra ||3||

Meaning: In the living soul, the linga body, and the gross body, one should meditate on the forms of the Lord (like Vishwa, Hamsa, etc.) in four places. Meditate upon these nineteen forms of the Lord everywhere.

Verse 4
kaluṣavillada darpaṇadi pratiphalisi sarva padārthagalu kaṅgoḷisuvandadali |
biṁba jaḍa cētanagaḷoḷagiddū ||
poḷeva bahurūpadali sajjanaroḷage manadarpaṇadi tā |
niścala nirāmaya nirvikāra nirāśrayānanta ||4||

Meaning: Just as all objects are reflected clearly in a spotless mirror, the Lord dwells within all living and non-living things as their Bimba (Original Image). He shines in many forms in the mirrors of the minds of the righteous; He is steady, free from illness, immutable, and infinite.

Verse 5
ī śarīra catuṣṭayagaḷu kōśa dhātuga bhāratipa prāṇēśanu |
ippattoṁdu sāvira dāruṇūrenipa śvāsa rūpaka haṁsa ||
bhāskara bhēśaroḷagiddū avara kaivididu |
ī sarōja bhavāṇḍadoḷu sarvatra tuṁbihanu ||5||

Meaning: The Lord, as the Master of Prana (Vayu), governs the four bodies and their constituent elements. Through the 21,600 breaths (Hamsa mantra) occurring daily, He resides within the Sun and all deities, guiding them and pervading the entire universe (the egg of Brahma).

Verse 6
śiragaḷaidu aideredu bāhugalu eraḍu pādagaḷu |
oṁdu madhya udaradi śōbhipa vākmanōmayanenisi nityadali ||
karaṇa dhātugaḷalli eppatteraḍu sāvira nāḍigaḷali ippa |
aravidūranu bhārata pratipādyanu enisi ||6||

Meaning: With five heads, ten arms, two feet, and a brilliant mid-section, the Lord is known as the master of speech and mind. He dwells in the 72,000 nerves of the body and is the supreme subject of the Mahabharata.

Verse 7
īreradu dēha ūrmi bhūtagalāru adika daśa r̥gvinuta |
lakṣmīramaṇa viṣṇvākhya rūpadi catu ṣaṣṭhi kalādhārakanu tānāgi ||
brahmapurāri mukhyaroḷiddū satata vihāra māḷpanu |
catuṣpāda āhvayadi lōkadoḷu ||7||

Meaning: The Lord of Lakshmi, known as Vishnu, is the support of the 64 arts. Residing within Brahma, Shiva, and others, He constantly performs His divine play in the world in His four-fold forms.

Verse 8
tr̥ṇa modalu brahma anta jīvara tanugaḷa trayagaḷali |
nārāyaṇana sāvira dainūrippattu mēle āru ||
gaṇane māḷpudu budharu rūpava |
ghruṇi sūrya āditya nāmagalu anudinadi japisuvarige īva ārōgya saṁpadava ||8||

Meaning: Wise ones calculate that Lord Narayana has 1,526 forms within the bodies of all beings, from the blade of grass to Brahma. Those who daily chant His names (as Surya/Aditya) are granted health and prosperity.

Verse 9
aidu nūru eppattu nālku adhibhautikadali tiḷivudu |
aideredu śata ēka viṁśati rūpavu ādhyātma ||
bhēdagalu iṁnūru mūvattāda mēle oṁdadika mūrtigaḷu |
ādaradali adhid aivad oḷu cintipudu bhūsuraru ||9||

Meaning: Know that there are 574 forms of the Lord in the adhibhautika (physical) realm, 521 in the adhyatma (spiritual) realm, and 231 in the adhidaiva (divine) realm. Brahmins and the wise should meditate on these with great reverence.

Verse 10
suruci śārvarīkaranu enisi saṁkaruṣaṇa pradyumna |
śaśi bhāskararoḷage aravattadika munnūru rūpadali karesikoṁbanu ||
ahaḥ saṁvatsaranenipanu viśiṣṭa nāmadi aritavarige |
ārōgya bhāgyavanu īva ānandamaya ||10||

Meaning: In forms like Sankarushana and Pradyumna, and residing within the Moon and Sun, the Lord is known by 360 forms. To those who know Him as the Lord of time (the Year), He, the Blissful One, grants the fortune of good health.

Verse 11
ēka paṁcāśat varaṇa gata mākāḷatranu sarvaroḷaga |
avyākr̥ta ākāśānta vyāpisi nigamatatigaḷu vyākaraṇa bhārata ||
mukhādi anēka śāstra purāṇa bhāṣya anīkagaḷa kalpisi |
manō vāṅmayanenisikoṁba ||11||

Meaning: The Lord, who is the master of the 51 letters, pervades everything up to the unmanifest space. He is the author of the Vedas, grammar, the Mahabharata, Puranas, and commentaries; He is the controller of the mind and speech.

Verse 12
bhārabhŕt nāmagana sāvirada ārunūra ippattanālku mūrutigalu |
carācaradi sarvatra tuṁbihavu ||
āru nālku jaḍagaḷali hadināru cētanagaḷali cintise |
tōrikoṁbanu tanna rūpava sakala ṭāvinali ||12||

Meaning: The 1,624 forms of the Lord (Bharabhrut) pervade all moving and non-moving things. Meditate on Him within the six non-living and sixteen living categories, and He will reveal Himself in every place.

Verse 13
misuṇi mēliha maṇiyavoḷ rājisuva brahmādigaḷa manadali |
bisijajāṇḍa adhārakanu adhayenendenisi ||
dviśata nālvatteraḍu rūpadi śaśiyoḷu ippanu |
śaśadoḷage śōbhisuva nālvatteraḍu adika śata rūpadali biḍade ||13||

Meaning: Like a thread passing through beads, the Lord dwells in the minds of Brahma and other deities. He resides in the Moon with 242 forms and dwells perpetually within the Moon's light with 142 forms.

Verse 14
eraḍu sāvirada ēṇṭu rūpavanaritu sarva padārthadali |
śrī varana pūjeya māḍu vāragaḷa bēḍu koṇḍāḍu ||
baride jaladoḷu muḷugi bisiloḷu beraḷanu eṇisidarēnu |
sadguru hiriyara anusarisi idara marmavannu ariyadiha naranu ||14||

Meaning: Knowing His 2,008 forms, worship the Lord of Lakshmi in all objects. What is the use of merely dipping in water (rituals) or counting fingers in the sun? One who does not learn the secret of this from a Sadguru (true teacher) gains nothing.

Verse 15
matte citdēhadoḷage eṁbhattu sāvirada ēḷu nūrada ippattaidu |
narasiṁha rūpadaliddū ||
jīvarige nityadali hagalu iralu bappa apamr̥tyuvige tā mr̥tyuvenisuva |
bhr̥tya vātsala bhayavināśana bhāgya saṁpanna ||15||

Meaning: Furthermore, the Lord resides in the consciousness of the body in 80,725 forms as Narasimha. He acts as the death to the untimely death that threatens souls day and night. He is the lover of His servants, the destroyer of fear, and the embodiment of fortune.

Verse 16
jvaranoḷu ippattēḷu haranoḷage iruvanu ippatteṁṭu rūpadi |
eraḍu sāvirada ēṇṭu nūrippattēḷu adika jvarahara āhvaya ||
narasiṁhana smaraṇamātradi durita rāśigaḷu iradē pōpavu |
taraṇi biṁbava kaṇḍa himadante ||16||

Meaning: In fevers and diseases, the Lord resides in 27 and 28 forms respectively; He is known as the Destroyer of Fever with 2,827 forms. Just as snow melts upon seeing the sun, all piles of sins vanish merely by remembering Lord Narasimha.

Verse 17
māsa pariyāntaravu biḍade nr̥kēsariya śubhanāma maṁtra |
jitāsanadali ēkāgra cittadi niṣkapaṭadinda bēsarade japasalu ||
vr̥jinagaḷa nāśagaisi |
manōrathagaḷa parēśa pāṭhiya māḍi koḍuvanu kaḍege paragatiya ||17||
Meaning: If one chants the auspicious names of Lord Narasimha with a focused mind, in a stable posture, and without hypocrisy or fatigue, He destroys all sins, fulfills all desires, and ultimately grants the soul liberation.

Verse 18
catura mūrtyātmakahariyu triṁśati surūpadi brahmanoḷu |
mārutanoḷu ippattēḷu rūpadoḷu ippa pradyumna ||
sutaroḷu ippattaidu hadineṁṭu atuḷa rūpagaḷa aritu |
vatsara śatagaḷali pūjisutiliru caturātmakana padava ||18||
Meaning: Know the Lord’s forms—30 in Brahma, 27 in Vayu, 25 in Pradyumna, and 18 in the sons—and worship the four-fold Lord with devotion for centuries to attain His supreme abode.

Verse 19
nūru varuṣake divasa mūvattāru sāvira vahavu |
nāḍi śarīradoḷage initu ihavu strīpuṁbhēdadi ||
hariya īradhika eppattu sāvira mūrutigaḷane nenedu |
sarvādhārakanu sarvatra pūjisupu pūrṇanendaridu ||19||
Meaning: There are 36,000 days in a hundred years, and similar is the count of nerves in the body. Meditate on the 70,002 forms of Hari, realizing He is the complete support of all.

Verse 20-21
kālakarmaguṇasvabhāvagala ālayanu tānāgi lakṣmīlōla |
tattadrūpanāmadi karesuta oḷagiddū ||
līleyindali sarvajīvara pālisuvasaṁharipa sr̥ṣṭipa |
mūlakāraṇa prakr̥ti guṇakāryagaḷa manemāḍi ||20||
tilajavartigaḷa anusarisi prajvalisi dīpagaḷu |
ālayada kattaleya bhaṅgisi tadgatārthava tōruvaṁdadi ||
jalaruhēkṣaṇa tannavara manadoḷage |
bhakti jñāna karmake olidu poḷevuta tōruvanu guṇa rūpa kriyegaḷanu ||21||
Meaning: The Lord is the abode of time, karma, and nature. Just as lamps lit in sesame oil dispel darkness, the Lotus-eyed Lord shines in the minds of His devotees, revealing His divine qualities, forms, and actions through their devotion, knowledge, and deeds.

Verse 22
āva dēhava koḍali hari mattāva lōkadoḷu iḍali |
tā mattāva dēśadoḷu iḍali āvāvasthegaḷu barali ||
ī vidhadi jaḍa cētanadoḷu parāvarēśana rūpa guṇagaḷa bhāvisuta |
sujñāna bhakutiya bēḍu koṇḍāḍu ||22||
Meaning: Whatever body, world, or state the Lord places you in, always meditate on the qualities and forms of the Supreme Lord dwelling in both sentient and insentient things. Seek true knowledge and devotion from Him.

Verse 23
oṁdar oḷag oṁdu beradihavu iṁdirēśana rūpagaḷa manabaṁda teradali |
cintisidakē anumānavinitilla ||
siṁdhu rājan oḷu aṁbara ālaya baṁdhisalu |
prati taṁtugaḷoḷu udabiṁdu vyāpisidaṁte irutippanu carācaradi ||23||
Meaning: The Lord’s forms are intertwined within one another. Just as water droplets permeate every fiber of a cloth dipped in the ocean, He pervades all moving and non-moving things.

Verse 24-25
oṁdu rūpadoḷu oṁdu avayavadoḷu oṁdu rōmadoḷu oṁdu dēśadi poṁdi ippavu |
ajāṇḍa anantānanta kōṭigaḷu ||
oṁdu anantānanta rūpagaḷu oṁdē rūpadoḷu ihavu lōkagaḷu oṁdē rūpadi |
sr̥ṣṭi sthiti modalāda vyāpāra ||24-25||
Meaning: Infinite universes exist within a single form or even a single hair of the Lord. He manages creation, sustenance, and destruction simultaneously, as He revealed to Arjuna on the battlefield.

Verse 26-27
śrīramēśana mūrtigaḷu nava nāri kuṁjaradaṁte ēkākāra tōrpavu |
avayavāhvāya avayagaḷalli ||
vārijabhavāṇḍadoḷu lakṣmīnārasiṁhana rūpaguṇagaḷu |
vāridhiy oḷiha teragaḷandad i saṁḍaṇisi ihavu ||26-27||
Meaning: The Lord’s forms appear as one, like the Nari-Kunjara (a complex figure made of many parts). His qualities and forms fill the universe like waves in an ocean.

Verse 28
maṇigaḷ oḷag iha sūtradaṁdadi praṇava pādyanu cētanācētana |
jagattin oḷu anudinadalu āḍuvanu sukhapūrṇa ||
daṇivikey u ivagilla bahu kāruṇika anantānanta jīvara gaṇadoḷu |
ēkāṁśa aṁśa rūpadi niṁtu nēmisuva ||28||
Meaning: Like a thread through beads, the Lord plays daily in this universe. He never tires, and out of compassion, He directs infinite souls through His partial manifestations.

Verse 29-30
jīva jīvara bhēda jaḍa jaḍa jīva jaḍa |
jaḍa jīvarindali śrīvaranu atyaṁta bhinnavilakṣaṇanu ||
āditéyaru tiḷiyadiha guṇa vēdamāṇigaḷu endenipa vāṇi ādigaḷu baḷḷaru |
avaru ariyada guṇaṁgaḷanu vēdha baḷḷanu ||29-30||
Meaning: The Lord is distinct and superior to all living and non-living things. Even the gods and the Vedas cannot fully grasp His infinite greatness; only He knows His own fullness.

Verse 31-32
inta anantānanta guṇagaḷa prāṁtagāṇade mahālakumi |
bhagavaṁtage ābharaṇa āyudha aṁbara ālayagaḷāgi ||
pralaya jaladhiyoḷu uḷḷa nāvēyu holabugāṇade suttuvaṁdadi |
alpa jīvarige aḷavaḍuvadēnu ivana mahimegaḷu ī jagatrayadi ||31-32||
Meaning: Goddess Lakshmi, seeing no end to His infinite qualities, serves as His ornament, weapon, and abode. If even she is amazed, how can tiny souls like us grasp His majesty?

Verse 33
śrīnikētana sātvatāṁpati jñānagamya gayāsura ardana maunikula sanmānya |
mānada mātuḷa dvhaṁsi ||
dīnajana maṁdāra madhuripu prāṇada jagannātha viṭhala |
tānē gatiyendu anudinadi naṁbidavara poreva ||33||
Meaning: Jagannatha Dasa concludes by saying that Jagannatha Vittala, the refuge of the poor and the beloved of the devotees, will protect those who rely on Him as their sole support.
***


harikathAmRutasAra gurugaLa karuNadindApanitu kELuve
parama BagavadBaktaru idanAdaradi kELuvudu||

BUsalila SiKi pavana BUta AkASadoLage aidaidu tanmAtrA sahita
oMdadhika pancASat varaNa vEdya
I SarIradi vyApisiddu surAsurarige nirantaradali
suKAsuKapradanAgi ADuva dvEShipara baDiva||1||

praNava pratipAdya trinAmadi tanuvinoLu tristhAnaga aniruddhanu
tripancaka Eka viMSati catura viMSatiganu enisi
eppatteraDu sAvira initu nADigaLoLu niyAmisuta ina Bastiga
lOkadoLu sarvatra beLaguvanu||2||

jIvalingAniruddha sthUla kaLEvaragaLali
viSvaturagagrIva mUlESa acyutatraya haMsa mUrtigaLa
I vidha catu: sthAnadali SAntIvarana IreraDu rUpadi BAvisuvudu
Eka Una viMSati mUrti sarvatra||3||

kaluShavillada darpaNadi pratiPalisi sarva padArthagaLu kangoLisuvandadali
biMba jaDa cEtanagaLoLagiddu
poLeva bahurUpadali sajjanaroLage manadarpaNadi tA
niScala nirAmaya nirvikAra nirASrayAnanta||4||

I SarIra catuShTayagaLu kOSa dhAtuga BAratipa prANESanu
ippattondu sAvirada ArunUrenipa SvAsa rUpaka haMsa
BAskara BESaroLagiddu avara kaiviDidu
I sarOja BavAnDadoLu sarvatra tuMbihanu||5||

SiragaLaidu aidereDu bAhugaLu eraDu pAdagaLu
ondu madhya udaradi SOBipa vAkmanOmayanenisi nityadali
karaNa dhAtugaLalli eppatteraDu sAvira nADigaLali ippa
aravidUranu BArata pratipAdyanu enisi||6||

IrereDu dEha Urmi BUtagaLAru adhika daSa Rugvinuta
lakShmIramaNa viShNvAKya rUpadi catu ShaShThi kalAdhArakanu tAnAgi
brahmapurAri muKyaroLiddu satata vihAra mALpanu
catuShpAda Ahvayadi lOkadoLu||7||

tRuNa modalu brahma anta jIvara tanugaLa trayagaLali
nArAyaNana sAviradainUrippattu mEle Aru
gaNane mALpudu budharu rUpava
GruNi sUrya Aditya nAmagaLu anudinadi japisuvarige Iva ArOgya saMpadava||8||

aidu nUru eppattu nAlku adhiBautikadali tiLivudu
aidereDu Sata Eka viMSati rUpavu AdhyAtma
BEdagaLu innUru mUvattAda mEle ondadhika mUrtigaLu
Adaradali adhidaivadoLu cintipudu BUsuraru||9||

suruci SArvarIkaranu enisi sankaruShaNa pradyumna
SaSi BAskararoLage aravattadhika munnUru rUpadali karesikoMbanu
ahaH saMvatsaranenipanu viSiShTa nAmadali aritavarige
ArOgya BAgyavanu Iva Anandamaya||10||

Eka pancASat varaNa gata mAkaLatranu sarvaroLaga
avyAkRuta AkASAnta vyApisi nigamatatigaLu vyAkaraNa BArata
muKAdi anEka SAstra purANa BAShya anIkagaLa kalpisi
manO vA~gmayanenisikoMba||11||

BAraBRut nAmakana sAvirada ArunUra ippattanAlku mUrutigaLu
carAcaradi sarvatra tuMbihavu
Aru nAlku jaDagaLali hadinAru cEtanagaLali cintise
tOrikoMbanu tanna rUpava sakala TAvinali||12||

misuNi mEliha maNiyavoL rAjisuva brahmAdigaLa manadali
bisijajAnDa adhArakanu adhEyanendenisi
dviSata nAlvatteraDu rUpadi SaSiyoLu ippanu
SaSadoLage SOBisuva nAlvatteraDu adhika Sata rUpadali biDade||13||

eraDu sAvirada enTu rUpavanaritu sarva padArthadali
SrI varana pUjeya mADu vAragaLa bEDu konDADu
baride jaladoLu muLugi bisiloLu beraLanu eNisidarEnu
sadguru hiriyara anusarisi idara marmavannu ariyadiha naranu||14||

matte citdEhadoLage eMBattu sAvirada ELu nUra ippattaidu
narasiMha rUpadaliddu
jIvarige nityadali hagalu iralu bappa apamRutyuvige tA mRutyuvenisuva
BRutya vAtsala BayavinASana BAgya saMpanna||15||

jvaranoLu ippattELu haranoLage iruvanu ippattenTu rUpadi
eraDu sAvirada enTu nUrippattELu adhika jvarahara Ahvaya
nArasiMhana smaraNemAtradi durita rASigaLu iradE pOpavu
taraNi biMbava kanDa himadaMte||16||

mAsa pariyantaravu biDade nRukEsariya SuBanAma mantra
jitAsanadali EkAgra cittadi niShkapaTadinda bEsarade japisalu
vRujinagaLa nASagaisi
manOrathagaLa parESa pArTiya mADi koDuvanu kaDege paragatiya||17||

catura mUrtyAtmaka hariyu triMSati surUpadi brahmanoLu
mArutanoLu ippattELu rUpadoLu ippa pradyumna
sutaroLu ippattaidu hadinenTu atuLa rUpagaLa aritu
vatsara SatagaLali pUjisutaliru caturAtmakana padava||18||

nUru varuShake divasa mUvattAru sAvira vahavu
nADi SarIradoLage initu ihavu strIpuMBEdadali
hariya Iradhika eppattu sAvira mUrutigaLane nenedu
sarvAdhArakana sarvatra pUjisu pUrNanendaridu||19||

kAlakarmaguNa svaBAvagaLa Alayanu tAnAgi lakShmIlOla
tattadrUpa nAmaDi karesuta oLagiddu
lIleyindali sarvajIvara pAlisuva saMharipa sRuShTipa
mUla kAraNa prakRuti guNa kAryagaLa manemADi||20||

tilajavartigaLa anusarisi prajvalisi dIpagaLu
Alayada kattaleya Bangisi tadgatArthava tOruvandadali
jalaruhEkShaNa tannavara manadoLage
Bakti j~jAna karmake olidu poLevuta tOruvanu guNa rUpa kriyegaLanu||21||

Ava dEhava koDali hari mattAva lOkadoLu iDali
tA mattAva dESadoLu iDali AvAvasthegaLu barali
I vidhadi jaDa cEtanadoLu parAvarESana rUpa guNagaLa BAvisuta
suj~jAna Bakutiya bEDu konDADu||22||

oMdaroLagondu beradihavu indirESana rUpagaLa manabanda teradali
ciMtisidake anumAnavinitilla
siMdhu rAjanoLu aMbara Alaya bandhisalu
prati tantugaLoLu udabindu vyApisidante irutippanu carAcaradi||23||

ondu rUpadoLu ondu avayavadoLu ondu rOmadoLu ondu dESadi pondi ippavu
ajAnDa anantAnanta kOTigaLu
hinde mArkAnDeya kANane ondu rUpadi sRuShTi praLayagaLu
indirESanoLu Enidu accari apramEya sadA||24||

ondu anantAnanta rUpagaLu ondE rUpadoLu ihavu lOkagaLu ondE rUpadi
sRuShTi sthiti modalAda vyApAra
ondE kAlaDi mADi tiLisade sandaNisi konDippa jagadoLu
nanda nandana raNadoLu indra Atmajage tOrisane||25||

SrIramESana mUrtigaLu nava nAri kuMjaradaMte EkAkAra tOrpavu
avayavAhvAya avayagaLalli
bErebEre kaMgoLisuva SarIradoLu nAnA prakAra
vikAraSUnya virATanenisuva padumajAMDadoLu||26||

vArijaBavAnDadoLu lakShmInArasiMhana rUpaguNagaLu
vAridhiyoLiha teragaLandadi sandaNisi ihavu
kAraNAoSAvESa vyAptAvatAra kAryAvyaktavyaktavu
Iraidu viBUti antaryAmi rUpagaLu||27||

maNigaLoLagiha sUtradandadi praNava pAdyanu cEtanAcEtana
jagattinoLu anudinadalu ADuvanu suKapUrNa
daNivikeyu ivagilla bahu kAruNika anantAnanta jIvara gaNadoLu
EkAMSa aMSa rUpadi nintu nEmisuva||28||

jIva jIvara BEda jaDa jaDa jIva jaDa
jaDa jIvarindali SrIvaranu atyanta Binna vilakShaNanu
lakShmI mUvarindali padmajAndadi tA vilakShaNaLu enisutippaLu
sA adhikasama SUnyaLu endaritu Irvaranu Bajisu||29||

AditEyaru tiLiyadiha guNa vEdamAnigaLu endenipa vANi AdigaLu ballaru
avaru ariyada guNangaLanu vEdha ballanu
bommanu ariyada agAdha guNagaLu lakumi ballaLu
SrIdhara obbanu upAsya sadguNapUrNa hariyeMdu||30||

inta anantAnanta guNagaLa prAntagANade mahAlakumi
Bagavantage ABaraNa Ayudha aMbara AlayagaLAgi
svAntadali nelegoLisi parama duranta mahimana dautyakarma
nirantaradi mADutali tadadhInatvayaidihaLu||31||

praLaya jaladhiyoLu uLLa nAveyu holabugANade suttuvandadi
jalaruhEkShaNana amala guNarUpagaLa cintisuta
neleyagANade mahAlakumi cancalavanu aidihaLu
alpa jIvarige aLavaDuvadEnu ivana mahimegaLu I jagatrayadi||32||

SrInikEtana sAtvatAMpati j~jAna gamya gayAsura ardana maunikula sanmAnya
mAnada mAtuLa dvhaMsi
dInajana mandAra madhuripu prANada jagannAtha viThala
tAnE gatiyendu anudinadi naMbidavara poreva||33||
***


No comments:

Post a Comment