ರಾಗ ಭೈರವಿ. ಆದಿ ತಾಳ
ಬ್ರಾಹ್ಮಣನೆಂದರೆ ಬ್ರಹ್ಮನ ತಿಳಿದವನವನೀಗ ಬ್ರಾಹ್ಮಣನೋ||ಪ||
ಬ್ರಹ್ಮ ಭೇದವೆಂದು ಜಗವನ್ನು ಕಂಡವನವನೀಗ ಬ್ರಾಹ್ಮಣನೋ ||ಅ||
ಮೂಗಲ್ಲಿ ವಾಯು ತುಂಬಿ ಎಳೆಯೋವ ಅವನೀಗ ಬ್ರಾಹ್ಮಣನೋ
ನಾಗಸ್ವರನ ಧ್ವನಿ ಕಿವಿಯಲ್ಲಿ ಕೇಳೋವ ಅವನೀಗ ಬ್ರಾಹ್ಮಣನೋ
ಬೇಗನೆ ನೆಲೆನೆಲೆ ಆರನ್ನು ಅಡರೋವ ಅವನೀಗ ಬ್ರಾಹ್ಮಣನೋ
ವೇಗದಿಂದಲಿ ಚಂದ್ರ ಮಂಡಲದಮೃತವನುಂಡವ ಬ್ರಾಹ್ಮಣನೋ ||
ಮುತ್ತಿನಂದದಿ ಮಳೆಹನಿ ಉದುರುವಾಗ ತೊಲಗದವ ಬ್ರಾಹ್ಮಣನೋ
ಮತ್ತೆ ದ್ವಿದಳದ ಸಿಂಹಾಸನದಲ್ಲಿ ಕುಳಿತವ ಬ್ರಾಹ್ಮಣನೋ
ಎತ್ತೆತ್ತ ನೋಡಲು ಸೂಸುಬೆಳದಿಂಗಳು ಕಾಣೋವ ಬ್ರಾಹ್ಮಣನೋ
ಉತ್ತಮ ಸಹಸ್ರ ಕಮಲ ಗರಿಕೆಯಲ್ಲಿ ಸೇರೋವ ಬ್ರಾಹ್ಮಣನೋ ||
ಥಳಥಳಿಸುವ ಬ್ರಹ್ಮರಂಧ್ರವೆ ಸುಖವೆಂದು ಮಲಗುವ ಬ್ರಾಹ್ಮಣನೋ
ಬಲು ರವಿ ಶತಕೋಟಿ ಶಿಂಶುಮಾರದಲ್ಲಿ ಸೇರೋವ ಬ್ರಾಹ್ಮಣನೋ
ಕಲಿಯುಗದಲಿ ಹರಿ ನಾಮದ ಅಮೃತವನುಂಡವ ಬ್ರಾಹ್ಮಣನೋ
ಸುಲಭದಿ ಪುರಂದರವಿಠಲ ರಾಯನ ಸೇರೋವ ಬ್ರಾಹ್ಮಣನೋ ||
***

pallavi
brAhmaNanendare brahmana tiLidavanavanIga brAhmaNanO
anupallavi
brahma bhEdavendu jagavannu kaNDavanavanIga brAhmaNanO
caraNam 1
mUgalli vAyu tumbi eLeyova avanIga brAhmaNanO
nAgasvarana dhvani kiviyalli kELOva avanIga brAhmaNanO
bEgane nelenele Arannu aDarOva avanIga brAhmaNanO
vEgadindali candra maNDaladamrtavanuNDava brAhmaNanO
caraNam 2
muttinandadi maLehani uduruvAga tolagadava brAhmaNanO
matte dvidaLada simhAsanadalli kuLitava brAhmaNanO
ettetta nODalu sUsubaudingaLu kANova brAhmaNanO
uttama sahasra kamala garigeyalli sErOva brAhmaNanO
caraNam 3
thaLathaLisuva brahmarandharave sukhavendu malaguva brAhmaNanO
balu ravi shatakOTi shimshumAradalli sErOva brAhmaNanO
kaliyugadali hari nAmada amrtavanuNDava brAhmaNanO
sulabhadi purandara viTTala rAyana sErOva brAhmaNanO
***
No comments:
Post a Comment