Friday, 6 December 2019

ಬೇಡವೋ ಬ್ರಹ್ಮದ್ರೋಹ ಬೇಡವೋ purandara vittala

ರಾಗ ಶಂಕರಾಭರಣ. ಅಟ ತಾಳ

ಬೇಡವೋ ಬ್ರಹ್ಮದ್ರೋಹ ಬೇಡವೋ ||ಪ||

ಹೊತ್ತಿಹೆ ನರಜನ್ಮವನ್ನು ,ಪಾದ
ಸುತ್ತಿ ಕೊಂಡಿಹುದಲ್ಲೊ ನೀನು ಆಹಾ
ಚಿತ್ತದೊಳಗೆ ನೋಡು ಉತ್ತಮ ವಿಪ್ರರ
ವೃತ್ತಿಯ ಕಳೆದು ಉನ್ಮತ್ತನಾಗಲು ಬೇಡ

ಸೂಸುವ ನದಿಯಲ್ಲಿ ಬಿದ್ದು ಮುಂದೆ
ಈಸಲಾರದೆ ಮುಳುಗೆದ್ದು ಆಹಾ
ಈಸೋ ಕಾಯನೆ ಬಿಟ್ಟು ಬೀಸೋ ಕಲ್ಲನೆ ಕಟ್ಟಿ
ಈಸುವ ತೆರದಿ ಈ ಭೂಸುರರಾ ದ್ರವ್ಯ

ಇನ್ನೆಷ್ಟು ಪೇಳಲಿ ಸಾಕ್ಷಿ ಬ್ರಾಹ್ಮ-
ರನ್ನವ ತೆಗೆವನ ಶಿಕ್ಷಿ ಆಹಾ
ಪನ್ನಗಶಯನ ಪುರಂದರ ವಿಠಲನು
ಬೆನ್ನ ಬಿಡದೆ ಬ್ರಾಹ್ಮರನ್ನು ಕಾದಿರುವನು
***

pallavi

bEDavO brahma drOha bEDavO

caraNam 1

hottihe narajanmavannu pAda sutti koNDihudallo nInu AhA
cittadoLage nODu uttama viprara vrttiya kaLedu unmattanAgalu bEDa

caraNam 2

sUsuva nadiyalli biddu munde IsalArade muLugeddu AhA
IsO kAyana biTTu bIsO kallane kaTTi Isuva teradi I bhUsurarA dravya

caraNam 3

inneSTu pELali sAkSi bhrAhmarannava tegevana shikSi AhA
pannaga shayana purandara viTTalanu benna biDade brAhmarannu kAdiruvanu
***

No comments:

Post a Comment