ಪುರಂದರದಾಸರು
ಏಕೆ ಮೈ ಮರೆದೆ ನೀನು ಜೀವನವೇ - |ಏಕೆ ಮೈಮರೆದೆ ನೀನು ಪ
ಏಕೆ ಮೈಮರೆದೆ ನೀ - ಲೋಕಾರಾಧ್ಯನ ಪಾದ|ಬೇಕೆಂದು ಭಜಿಸು ಕಾಣೋ - ಜೀವನವೇ ಅ.ಪ.
ಮದ್ದಾನೆಗಳೆಂಟು ಸೊಕ್ಕಿನಿಂ ಬರುವಾಗ |ಎದ್ದು ಕುಳ್ಳಿರಬಾರದೆ - ಜೀವನವೇ ||ಅಧ್ಯಾತ್ಮಕಾ ಹರಿನಾಮವ ಶ್ರುತಿಮಾಡಿ |ಒದ್ದು ಬಿಸಾಡು ಕಣೊ - ಜೀವನವೇ 1
ಕಂದರ್ಪನೆಂಬವ ಕಾದುತ ಬರುವಾಗ |ನಿಂದಿಸುತಿರಬಾರದೆ - ಜೀವನವೇ ||ಒಂದೇ ಮನಸು ಎಂಬ ವಜ್ರಾಯುಧವ ಪಿಡಿದು |ಕೊಂದು ಬೀಸಾಡು ಕಾಣೊ - ಜೀವನವೇ 2
ವಿಷಯದಿ ಸುಖಕಾಣೆ ಪಶುಜನರೊಳು ದೇಹ |ಹಸನುಗಳೆಯಲು ಬೇಡವೋ - ಜೀವನವೇ||ಬಿಸಜಾಕ್ಷ ಪುರಂದರವಿಠಲನೊಲಿಯೆ ಸುಖ -|ರಸದಿ ಲೋಲಾಡು ಕಾಣೋ - ಜೀವನವೇ 3
**********

No comments:
Post a Comment