ಪುರಂದರದಾಸರು
ಮನಸಿಟ್ಟು ಭ್ರಮಿಸುವರೇನೆ ಘನ - |ಗುಣವಂತನೇನವ ಜಾಣೆ ? ಪ
ಅನುದಿನ ಗೊಲ್ಲಪಳ್ಳಿಗೆ ಕಳ್ಳನೆನಿಸಿದ |ದನಗಾಹಿ ನಿನಗೇನ ಮರುಳು ಮಾಡಿದನೆ ? ಅ.ಪ
ಜಲವಾಸಿ ಮುಖವೊಳಸೆಳೆವ - ಇವ |ನೆಲವ ಕೆದರಿ ಕಂಬದಿ ಬಾಯ್ ತೆಗೆವ ||ಇಳೆಯನಳೆದ ಕೊರಳಗೊಯ್ಕ ವನವಾಸಿಯ |ಕೊಳಲಪಿಡಿದ ಕುರುಬಲವನಳಿದಾತಗೆ 1
ಅಂದು ಮಧುರೆಯಲಿ ಪುಟ್ಟಿದನ - ಆ |ನಂದಗೋಪ - ಯಶೋದೆ ಕೋಮಲನ ||ಕಂದನಾಗಿ ಮೊಲೆಯುಂಡು ಪೂತನಿಯನು |ಕೊಂದು ಕಂಸರಪುರ ತಂದೆಗಿತ್ತವಗೆ2
ಬತ್ತಲಿರುವ ಶ್ರೀನಿರ್ವಾಣಿ - ತೇಜಿ - |ಹತ್ತಿ ಪಿಡಿದ ಖಡ್ಗಪಾಣಿ ||ಮತ್ತರನೆಲ್ಲರ ಮರ್ದಿಸಿ ಬಲವಂತ |ಪಾರ್ಥಗೊಲಿದ ಶ್ರೀ ಪುರಂದರವಿಠಲಗೆ 3

No comments:
Post a Comment