Friday, 6 December 2019

ಮನಸು ನಿನ್ನ ಮೇಲೆ ಬಹಳ ಎನಗನುಕೂಲವಾಗೋದು ಹೇಳ purandara vittala

ಪುರಂದರದಾಸರು
ರಾಗ ಮಧುಮಾಧವಿ. ಆಟ ತಾಳ 

ಮನಸು ನಿನ್ನ ಮೇಲೆ ಬಹಳ
ಎನಗನುಕೂಲವಾಗೋದು ಹೇಳ ||ಪ ||

ಮನಸಿಜನಾಟದಿ ಕೂಡುವೆನೆಂದರೆ
ಮನುಜರೆಲ್ಲರು ಕಾಯುವರೆನ್ನ ||ಅ ||

ನೆರೆಹೊರೆ ಮನೆಯವರೆಲ್ಲ, ಎನ್ನ
ನೆರಳ ಕಂಡರೆ ಸೇರರಲ್ಲ
ಸರಿಸಖಿಯರೆಲ್ಲ ಸುಮ್ಮನೆ ದೂರ್ವರು
ಬರಿ ಮಾತನಾಡಲು ಸಮಯ ಸಿಗದಲ್ಲ ||

ಗಂಡನೆಂಬವನು ಉದ್ದಂಡ, ಎನ್ನ
ಕಂಡರೆ ಕೋಪ ಪ್ರಚಂಡ
ಭಂಡುಗೇಡ್ಯತ್ತಿಗೆ ದಂಡಿಸುವಳು ಕೇಳೆ
ಕಂಡರಿಬ್ಬರನ್ನು ಖಂಡಿಸುವನು ಪ್ರಿಯ ||

ಚದುರ ಪುರಂದರವಿಠಲ, ನಾಳೆ
ಮದುವೆ ನಮ್ಮನೇಲಿ ಗದ್ದಲ
ಅದರ ಸಂದಣಿಯಲಿ ಯಾವ್ಯಾವ ಪರಿಯಲಿ
ಮುದದಿಂದ ಕೂಡುವೆ ಮದನತಂತ್ರದಲ್ಲಿ ||
***

pallavi

manasu ninna mEle bahaLa enaganukUlavAgOdu hELA

anupallavi

manasijanADadi kUDuvenendare manujarellaru kAyuvarenna

caraNam 1

nerehore maneyavarella enna neraLa kaNDare sEraralla
sari sakhiyarella summane dUrvaru pari mAtanADalu samaru sigadalla

caraNam 2

gaNDanembavanu uddaNDa enna kaNDare kOpa pracaNDa
bhaNDugEDyattige daNDisuvaLu kELe kaNDaribbarannu priya

caraNam 3

cadura purandara viTTala nELe maduve nammaneli gaddala
adara sandaNiyali yAvyAva pariyali muddinda kUDuve madana tantradalli
***

ಮನಸು ನಿನ್ನ ಮೇಲೆ ಬಹಳ ಕಾಲ |ಅನುಕೂಲಿಸದೊ ಗೋಪಾಲ ಪ

ನಿನ ಕೂಡೆ ಈಗ ಕೂಡುವೆನೆಂದರೆ ಮನೆ-|ಜನರೆಲ್ಲರು ಕೂಡಲೀಸರೊ ಕೃಷ್ಣ ಅ.ಪ

ಗಂಡನೆಂಬವನು ಉದ್ದಂಡ-ಎನ್ನ |ಕಂಡರೆ ಸೇರನುಭಾವಪ್ರಚಂಡ ||ಭಂಡೆ ಅತ್ತೆಯು ಲಂಡೆಅತ್ತಿಗೆಕೇಳೊ |ಕಂಡರಿಬ್ಬರನು ದಂಡಿಸುವರೊ ರಂಗ 1

ನೆರೆಹೊರೆಯವರೆನ್ನನೆಲ್ಲ-ಮೈಯ |ನೆರಳ ಕಂಡರೆ ಸೇರರಲ್ಲ ||ಸರಿಸಖಿಯರು ಎಲ್ಲ ಸುಮ್ಮನಿರುವರಲ್ಲ |ಮರೆಮಾತನಾಡಲು ವೇಳೆ ಕೂಡದೊ ರಂಗ 2

ಮದುವೆ ಮಾಡುವರೊ ಮನೆಯೊಳು-ನಾಳೆ |ಅದರ ಸಂದಣಿಯ ಹೊಂಚಿನೊಳು ||ಮುದದಿಂದ ಕೂಡುವೆನಾವ ಪರಿಯೊಳು |ಮದನತಂತ್ರದಿಂದ ಪುರಂದರವಿಠಲ3
*********

No comments:

Post a Comment