Friday, 6 December 2019

ಮರೆಯದಿರು ಶ್ರೀ ಹರಿಯನು purandara vittala

ಪುರಂದರದಾಸರು
ರಾಗ ಉದಯರಾಗ ಝಂಪೆ ತಾಳ 

ಮರೆಯದಿರು ಶ್ರೀಹರಿಯ ||ಪ||
ಮರೆಯದಿರು ಶ್ರೀಹರಿಯ ಮರಣಾತುರದಿ ಮಗನ
ಕರೆದವಗೆ ಸಾಲೋಕ್ಯವಿತ್ತ ನಾರಾಯಣನ
ಸ್ಮರಣೆಯನು ಮಾಡುವರ ಚರಣಸೇವಕರಿಗೆ
ನೆರೆ ಸಾಯುಜ್ಯಪದವೀವನಯ್ಯ ಅಯ್ಯ ||

ದೇವಕಿಯ ಬಂಧವನ ಪರಿಹರಿಸಿದವನ ಪೂ-
ತನಿಯ ಜೀವವ ಮಡುಹಿದವನ, ಮಾವನ ಕೊಂದವನ
ಪಾವನಿ ತರಂಗಿಣಿಯ ಪದನಖದಿ ಪಡೆದವನ ಗೋವರ್ಧನೋದ್ಧಾರನ
ದಾವಾನಲವ ಪಿಡಿದು ನುಂಗಿದನ ಲೀಲೆಯಿಂ
ಗೋವತ್ಸ ರೂಪನಾಗಿ ಸನಕಾದಿ
ದೇವಮುನಿ ಮುಖರಾರಾಧಿಪನ ಚರಣರಾಜೀವವಂ ಭಜಿಸು ಕಂಡ್ಯ ಮನವೆ ||

ಕಂಜಸಂಭವಪಿತನ ಕರುಣಾಪಯೋನಿಧಿಯ
ಕುಂಜರನ ನುಡಿ ಕೇಳಿ ಒದಗಿ ರಣದೊಳ್ ಧ-
ನಂಜಯನ ಜೀವವಂ ಕೃಪೆಯಿಂದ ಕಾಯ್ದವನ ಆಂಜನೇಯನಾಳ್ದನ
ರಂಜಿಸುವ ಕೌಸ್ತುಭ ಭೂಷಣನ
ನಂಜಿನೊಡೆಯನ ಮೇಲೆ ಮಲಗಿ ತಮದೋಳ್ ಪ-
ರಂಜ್ಯೋತಿಮಯನಾಗಿ ಬೆಳಗುವನ ಚರಣಕಂಜವಂ ಭಜಿಸು ಕಂಡ್ಯ ಮನವೆ ||

ವಾರಿಧಿಯೊಳಾಡ್ದವನ ವರಗಿರಿಯ ತಾಳ್ದವನ
ಧಾರಿಣಿಯ ತಂದವನ ದೈತ್ಯನಂ ಕೊಂದವನ
ಮೂರಡಿಯನಳೆದವನ ಮರಗೊಡಲಿಯ ಸೆಳೆದವನ ವಾರಿಧಿಯ ಬಂಧಿಸಿದನ
ದ್ವಾರಕೆಯನಾಳ್ದವನ ಪುರಮೂರು ಜಯಿಸಿದನ
ಚಾರು ಹಯವೇರಿದನ ಸರಯುತೀರದ ರಾಮ
ಪುರಂದರವಿಠಲನ ಚರಣವಂ ಭಜಿಸು ಕಂಡ್ಯ ಮನವೆ ||
***


pallavi

mareyadiru hariya

anupallavi

mareyadiru shrIhariya maraNAturadi magana karedavage sAlOkyavitta nArAyaNana smaraNeyanu mADuvara caraNa sEvakarige nere sAyujya padavIvanayya ayya

caraNam 1

dEvakiya bandhavana pariharisidavana pUtaniya jIvava maDuhidavana mAvana
kondavana pAvani tarangiNiya padanakhadi paDedavana gOvardhanOddhAraNa
dAvAnalava piDidu nungidana lIleyim gOvatsa rUpanAgi sanakAdi
dEvamuni mukharArAdhitana caraNa rAjIvavam bhajsu kaNDya manave

caraNam 2

kanja sambhava pitana karuNApayOnidhiya kunjarana nuDi kELi odagi
raNadoL dhananjayana jIvavam krpeyinda kAidavana AnjanEyanALdana
ranjisuva kaustubha bhUSaNana nanjinoDeyana mEle malagi tamadoL
paramjyOtimayanAgi beLaguvana caraNakanjava kaNDya manave

caraNam 3

vAridhiyoLADdavana varagiriya tALdavana dhAriNiya tandavana daityanam
kondavanamUraDiyanaLedavana marakoDali seLedavana vAridhiya bandhisidana
dvArakeyanALdavana puramUru jayisidana cAru hayavEridana sarayu
tIrada rAma purandara viTTalana caraNavam bhajisu kaNDya manave
***

ಮರೆಯದಿರು ಶ್ರೀ ಹರಿಯನು ಪ.

ಮರೆಯದಿರು ಶ್ರೀ ಹರಿಯ ಮರಣಾತುರದಿ ಮಗನಕರೆದವಗೆ ಸಾಯುಜ್ಯವಿತ್ತ ನಾರಾಯಣನಸ್ಮರಣೆಯನು ಮಾಡುವರಚರಣ ಸೇವಕರಿಂಗೆಪರಮಪದವೀವ ಹರಿಯಅಪದೇವಕಿಯ ಬಂಧುವನು ಪರಿದವನ ಪೂತನಿಯಜೀವರಸವೀಂಟಿದನ ಮಾವನನು ಮಡುಹಿದನಪಾವನ ತರಂಗಿಣಿಯ ಪದನಖದಿ ಪಡೆದವನಗೋವರ್ಧನೋದ್ಧಾರನ ||ದಾವಾನಲನ ಪಿಡಿದು ನುಂಗಿದನ ಲೀಲೆಯಲಿಗೋವತ್ಸ ಗೋಪಾಲ ರೂಪವನು ತಾಳ್ದವನದೇವಮುನಿ ಮುಖ್ಯ ಸುರರಾರಾಧಿಸುವನ ಶ್ರೀ ಪಾದವನುಭಜಿಸು ಮನವೆ 1

ಕಂಜಸಂಭವಪಿತನ ಕರುಣಾಪಯೋನಿಧಿಯಕುಂಜರನ ನುಡಿಕೇಳಿ ಒದಗಿದನ ರಣದೊಳು ಧ-ನಂಜಯನ ಜೀವವಂ ಕೃಪೆಯಿಂದ ಕಾಯ್ದವನಆಂಜನೇಯನ ನಾಳ್ದನ ||ರಂಜಿಸುವ ಕೌಸ್ತುಭವಿಭೂಷಣನ ಜಲಧಿಯಲಿನಂಜಿನೊಡೆಯನ ಮೇಲೆ ಮಲಗಿದನ ತಮದೊಳಗೆ ಪ -ರಂಜ್ಯೋತಿಮಯನಾಗಿ ಬೆಳಗುವನಶ್ರೀ ಚರಣಕಂಜವಂ ಭಜಿಸು ಮನವೆ 2

ವಾರಿಧಿಯೊಳಾಡಿದನ ವರಗಿರಿಯ ತಾಳಿದನಧಾರಿಣಿಯ ತಂದವನ ದೈತ್ಯನನು ಕೊಂದವನಮೂರಡಿಯಲಳೆದವನ ಮೊನೆಗೊಡಲಿ ಪಿಡಿದವನ ನೀರಧಿಯಬಂಧಿಸಿದನ||ದ್ವಾರಕೆಯನಾಳ್ದವನ ತ್ರಿಪುರಗಳ ಜಗುಳ್ದವನಚಾರುಹಯವೇರಿದನ ಸಕಲ ಸುಜನರ ಪೊರೆವಧೀರ ಪುರಂದರವಿಠಲನ ಚರಣಕಮಲವನುನಂಬಿ ನೀ ಭಜಿಸು ಮನವೇ 3
********

No comments:

Post a Comment