Tuesday, 3 December 2019

ಋಣವೆಂಬ ಸೂತಕವು ಬಹು ಬಾಧೆ ಬಡಿಸುತಿದೆ purandara vittala RUNAVEMBA SOOTAKAVU BAHU BAADHE BADISUTIDE

ರಾಗ ಪುನ್ನಾಗವರಾಳಿ    ತಾಳ ಖಂಡಛಾಪು 
Audio by Vidwan Sumukh Moudgalya


RESTART MOBILE IF AUDIO IS NOT PLAYING  

or just scroll down for other devaranama/ CLICK-> HOME

ಋಣವೆಂಬ ಸೂತಕವು ಬಹು ಬಾಧೆ ಪಡಿಸುತಿದೆ ॥ಪ॥
ಗುಣನಿಧಿಯೆ ನೀನೆನ್ನ ಋಣವ ಪರಿಹರಿಸೋ  ॥ಅ.ಪ॥

ಕೊಟ್ಟವರು ಬಂದೆನ್ನ ನಿಷ್ಠುರಂಗಳನಾಡಿ
ಕೆಟ್ಟ ಬೈಗಳ ಬೈದು ಮನದಣಿಯಲು
ದಿಟ್ಟತನವನು ಬಿಟ್ಟು ಕಳೆಗುಂದಿದೆನಯ್ಯ
ಸೃಷ್ಟಿಗೊಡೆಯನೆ ಎನ್ನ ಋಣವ ಪರಿಹರಿಸೋ ॥೧॥

ಅವನ ಒಡವೆಯ ತಂದು ದಾನ ಧರ್ಮವ ಮಾಡೆ
ಅವಗಲ್ಲದೆ ಪುಣ್ಯ ಇವಗ್ಯಾವುದು
ಅವನ ಒಡವೆಗಳಿಂದ ತೀರ್ಥ ಯಾತ್ರೆಯ ಮಾಳ್ಪ
ಇವನ ಜೀವನ ಬಾಡಿಗೆತ್ತಿನಂದದಲಿ ॥೨॥

ಆಳಿದೊಡೆಯನ ಮಾತು ಕೇಳಿ ನಡೆಯಲು ಬಹುದು
ಊಳಿಗವ ಮಾಡಿ ಮನದಣಿಯಬಹುದು
ಕಾಳಗದಿ ಪೊಕ್ಕು ಕಡಿದಾಡಿ ಜಯಿಸಲುಬಹುದು
ಪೇಳಲಳವಲ್ಲ ಋಣದವಗೊಂದು ಸೊಲ್ಲ ॥೩॥

ಹೆತ್ತ ಸೂತಕ ಹತ್ತು ದಿನಗಳಿಗೆ ಪರಿಹಾರ
ಮೃತ್ಯು ಸೂತಕವು ಹನ್ನೊಂದು ದಿನಕೆ
ಮತ್ತೆ ಋಣ ಸೂತಕವು ಜನ್ಮಜನ್ಮಾಂತರಕೆ
ಎತ್ತ ಹೋದರು ಬಿಡದೆ ಬೆನ್ಹತ್ತಿ ಬಹುದು ॥೪॥

ಬಂಧುಬಳಗದ ಮುಂದೆ ಬಹುಮಾನವು ಹೋಗಿ
ಅಂದವಳಿದೆನೊ ಈ ವಿಧ ಋಣದೊಳು
ಇಂದಿರಾರಮಣ ಶ್ರೀಪುರಂದರವಿಠಲನೆ 
ಇಂದೆನ್ನ ಋಣವ ಪರಿಹರಿಸಯ್ಯ ದೊರೆಯೆ  ॥೫॥
***

Ṛṇavemba sūtakavu bahu bādhe paḍisutide |
Guṇanidhiye nīnenna ṛṇava pariharisō ||

Koṭṭavaru bandenna niṣṭhurangaḷanāḍi |
Keṭṭa baigaḷa baidu manadaṇiyalu |
Diṭṭatanavanu biṭṭu kaḷegundidenayya |
Sṛṣṭigoḍayane enna ṛṇava pariharisō ||

Avana oḍaveya tandu dāna dharmava māḍe |
Avagallade puṇya ivagyāvudu |
Avana oḍavegaḷinda tīrtha yātreya māḷpa |
Ivana jīvana bāḍigettinandadali ||

Āḷidoḍeyana mātu kēḷi naḍeyalu bahudu |
Ūḷigava māḍi manadaṇiyabahudu |
Kāḷagadi pokku kaḍidāḍi jayisalabahudu |
Pēḷalaḷavalla ṛṇadavagondu solla ||

Hetta sūtakavu hattu dinagaḷige parihāra |
Mṛtyu sūtakavu hannondu dinake |
Matte ṛṇasūtakavu janmajanmāntarake |
Etta hōdaru biḍade benhatti bahudu ||

Bandhubhaḷagada munde bahumānavu hōgi |
Andavaḷideno ī vidha ṛṇadoḷu |
Indirāramaṇa śrīpurandaraviṭhalane |
Indenna ṛṇava pariharisayya doṛeye ||
***

Pronunciation Guide
Retroflex Sounds (ḍ, ḷ, ṇ, ṣ, ṭ): Curl the tip of your tongue back against the roof of your mouth and pronounce these sounds firmly. They sound deeper and "harder" than standard English 'd', 'l', 'n', 's', or 't'.

Aspirated Consonants (dh, bh, gh, kh, ph): Pronounce these consonants with a slight, audible puff of air immediately following them. For example, 'ph' sounds more like the 'ph' in "uphill" rather than the 'f' sound in "phone."

Vowel Length: Letters marked with a macron (ā, ī, ū, ē, ō) indicate long vowels. Hold these sounds for roughly twice the duration of their short counterparts (a, i, u, e, o).

The 'Ś' Sound: Pronounce 'ś' (as in Śrī) like the "sh" in the English word "shoe."

Rhythmic Flow: Devotional songs are guided by rhythm. Maintain a steady beat, and slightly elongate the final syllables of each line to match the musical meter, which helps convey the devotional mood.
***

Summary (Kannada)
ಈ ಕೀರ್ತನೆಯಲ್ಲಿ ಪುರಂದರದಾಸರು ಸಾಲವೆಂಬ "ಸೂತಕ" (ಅಶುಭ) ದಿಂದ ಉಂಟಾಗುವ ಮಾನಸಿಕ ಯಾತನೆಯನ್ನು ವರ್ಣಿಸಿದ್ದಾರೆ. ಸಾಲಗಾರರ ನಿಂದನೆ, ಸಮಾಜದಲ್ಲಿನ ಅವಮಾನ ಮತ್ತು ಸಾಲ ತೀರಿಸಲಾರದ ಅಸಹಾಯಕತೆಯನ್ನು ವ್ಯಕ್ತಪಡಿಸಿ, ಕೇವಲ ಶ್ರೀ ಪುರಂದರ ವಿಠಲನ ಕರುಣೆಯಿಂದ ಮಾತ್ರ ಈ ಜನ್ಮಜನ್ಮಾಂತರದ ಸಾಲದ ಬಾಧೆಯಿಂದ ಮುಕ್ತಿ ಪಡೆಯಲು ಸಾಧ್ಯ ಎಂದು ದಾಸರು ಪ್ರಾರ್ಥಿಸಿದ್ದಾರೆ.

Padyada Artha (Kannada)
ಪಲ್ಲವಿ:
ಋಣವೆಂಬ ಸೂತಕವು ಬಹು ಬಾಧೆ ಪಡಿಸುತಿದೆ | ಗುಣನಿಧಿಯೆ ನೀನೆನ್ನ ಋಣವ ಪರಿಹರಿಸೋ ||
ಅರ್ಥ: ಸಾಲವೆಂಬ ಅಶುಭವು ನನ್ನನ್ನು ಬಹಳವಾಗಿ ಕಾಡುತ್ತಿದೆ. ಗುಣನಿಧಿಯಾದ ದೇವನೇ, ನೀನೇ ನನ್ನ ಈ ಸಾಲದ ಬಾಧೆಯನ್ನು ಪರಿಹರಿಸು.

ಚರಣ 1:
ಕೊಟ್ಟವರು ಬಂದೆನ್ನ ನಿಷ್ಠುರಂಗಳನಾಡಿ | ಕೆಟ್ಟ ಬೈಗಳ ಬೈದು ಮನದಣಿಯಲು | ದಿಟ್ಟತನವನು ಬಿಟ್ಟು ಕಳೆಗುಂದಿದೆನಯ್ಯ | ಸೃಷ್ಟಿಗೊಡೆಯನೆ ಎನ್ನ ಋಣವ ಪರಿಹರಿಸೋ ||
ಅರ್ಥ: ಸಾಲ ಕೊಟ್ಟವರು ಬಂದು ಕಠಿಣ ಮಾತುಗಳನ್ನು ಆಡಿ, ಬೈದು ತೃಪ್ತಿ ಪಡುತ್ತಿದ್ದಾರೆ. ಇದರಿಂದ ನನ್ನ ಆತ್ಮವಿಶ್ವಾಸ ಕುಂದಿದೆ, ಓ ಸೃಷ್ಟಿಕರ್ತನೇ, ಸಾಲದಿಂದ ನನ್ನನ್ನು ಪಾರು ಮಾಡು.

ಚರಣ 2:
ಅವನ ಒಡವೆಯ ತಂದು ದಾನ ಧರ್ಮವ ಮಾಡೆ | ಅವಗಲ್ಲದೆ ಪುಣ್ಯ ಇವಗ್ಯಾವುದು | ಅವನ ಒಡವೆಗಳಿಂದ ತೀರ್ಥ ಯಾತ್ರೆಯ ಮಾಳ್ಪ | ಇವನ ಜೀವನ ಬಾಡಿಗೆತ್ತಿನಂದದಲಿ ||
ಅರ್ಥ: ಇನ್ನೊಬ್ಬರ ಹಣವನ್ನು ತಂದು ದಾನ-ಧರ್ಮ ಮಾಡುವುದು, ತೀರ್ಥಯಾತ್ರೆ ಮಾಡುವುದು ಎಂತಹ ಪುಣ್ಯ? ಅದು ಬಾಡಿಗೆ ಎತ್ತಿನ ಬದುಕಿನಂತೆ (ತನ್ನದಲ್ಲದ ಆಸ್ತಿಯ ಮೇಲೆ ಮೆರೆಯುವುದು).

ಚರಣ 3:
ಆಳಿದೊಡೆಯನ ಮಾತು ಕೇಳಿ ನಡೆಯಲು ಬಹುದು | ಊಳಿಗವ ಮಾಡಿ ಮನದಣಿಯಬಹುದು | ಕಾಳಗದಿ ಪೊಕ್ಕು ಕಡಿದಾಡಿ ಜಯಿಸಲುಬಹುದು | ಪೇಳಲಳವಲ್ಲ ಋಣದವಗೊಂದು ಸೊಲ್ಲ ||
ಅರ್ಥ: ಯಜಮಾನನ ಮಾತು ಕೇಳಬಹುದು, ಸೇವೆ ಮಾಡಬಹುದು, ಯುದ್ಧದಲ್ಲಿ ಗೆಲ್ಲಬಹುದು. ಆದರೆ, ಸಾಲಗಾರನ ಎದುರು ಮಾತನಾಡಲು ಸಾಧ್ಯವಿಲ್ಲ (ಅಷ್ಟು ಅಸಹಾಯಕತೆ).

ಚರಣ 4:
ಹೆತ್ತ ಸೂತಕ ಹತ್ತು ದಿನಗಳಿಗೆ ಪರಿಹಾರ | ಮೃತ್ಯು ಸೂತಕವು ಹನ್ನೊಂದು ದಿನಕೆ | ಮತ್ತೆ ಋಣ ಸೂತಕವು ಜನ್ಮಜನ್ಮಾಂತರಕೆ | ಎತ್ತ ಹೋದರು ಬಿಡದೆ ಬೆನ್ಹತ್ತಿ ಬಹುದು ||
ಅರ್ಥ: ಹೆರಿಗೆಯ ಸೂತಕ 10 ದಿನ, ಸಾವಿನ ಸೂತಕ 11 ದಿನಕ್ಕೆ ಮುಗಿಯುತ್ತದೆ. ಆದರೆ, ಸಾಲವೆಂಬ ಸೂತಕ ಜನ್ಮಜನ್ಮಾಂತರಕ್ಕೂ ಬಿಡದಂತೆ ಬೆನ್ನತ್ತುತ್ತದೆ.

ಚರಣ 5:
ಬಂಧುಬಳಗದ ಮುಂದೆ ಬಹುಮಾನವು ಹೋಗಿ | ಅಂದವಳಿದೆನೊ ಈ ವಿಧ ಋಣದೊಳು | ಇಂದಿರಾರಮಣ ಶ್ರೀಪುರಂದರವಿಠಲನೆ | ಇಂದೆನ್ನ ಋಣವ ಪರಿಹರಿಸಯ್ಯ ದೊರೆಯೆ ||
ಅರ್ಥ: ಈ ಸಾಲದಿಂದಾಗಿ ಬಂಧುಗಳ ಮುಂದೆ ಗೌರವವನ್ನು ಕಳೆದುಕೊಂಡಿದ್ದೇನೆ. ಶ್ರೀ ಪುರಂದರ ವಿಠಲನೇ, ಇಂದು ನನ್ನ ಈ ಸಾಲದ ಬಾಧೆಯನ್ನು ನಿವಾರಿಸು.
***

Summary (English)
In this song, Purandara Dasaru describes the suffering caused by the 'stain' of debt. He laments how creditors insult and abuse him, leading to a loss of dignity and self-confidence. He observes that performing charity or pilgrimage with borrowed money is futile. He emphasizes that while other forms of ritual impurity ('sutaka') last only a few days, the impurity of debt follows one across births. He prays to Sri Purandara Vittala to relieve him of this burden.

Meaning (English)
Pallavi:
Ṛṇavemba sūtakavu bahu bādhe paḍisutide | Guṇanidhiye nīnenna ṛṇava pariharisō
Meaning: The impurity of debt is causing great suffering. O ocean of virtues, please resolve my debt.

Stanza 1:
Koṭṭavaru bandenna niṣṭhurangaḷanāḍi...
Meaning: Creditors come and speak harsh words; their abuse leaves me dejected. O Lord of creation, please relieve me of this debt.

Stanza 2:
Avana oḍaveya tandu dāna dharmava māḍe...
Meaning: What merit is there in doing charity with another's money? This life is like that of a rented ox (working for others' gain).

Stanza 3:
Āḷidoḍeyana mātu kēḷi naḍeyalu bahudu...
Meaning: One can serve a master or win a war, but one cannot even answer a creditor; the helplessness is indescribable.

Stanza 4:
Hetta sūṭaka hattu dinagaḷige...
Meaning: Birth and death-related impurities last a few days, but the debt-stain pursues one across many births.

Stanza 5:
Bandhubhaḷagada munde bahumānavu hōgi...
Meaning: I have lost my honor before my relatives. O Purandara Vittala, please resolve this debt today.
***


pallavi

ruNavemba sutakavu bahu bAdhe paDisutide

anupallavi

guNanidhiye nInenna ruNava pariharisO

caraNam 1

koTTavaru bandenna niSTurangaLanADi keTTa baigaLa baidu manadaNiyalu
diTTadanavanu biTTu kaLe gundidenayya shrSTikoDEyane enna ruNava pariharisO

caraNam 2

avana oDeveya tandu tAna dharmava mADe avanigallade puNya ivagyAvadu
avana oDavegaLinda tIrtta yAtreya mALpa ivana jIvana pADigettinandadali

caraNam 3

AlidoDeyana mAtu kELi naDeyalu bahudu Uligava mADi mana daNiya bahudu
kALagadi pokku kaDidADi jayisalu bahudu beLalavalla ruNadavagondu solla

caraNam 4

hetta sutaka hittu dinagaLige parihAra mrtyu sutakavu hannondu dinake
matte ruNa sutakavu janmantarake etta hOdaru biDade benhatti bahudu

caraNam 5

bandu baLagada munde bahumAnavu hOgi andavaLideno I vidha ruNadoLu
indirA ramaNa shrI purandara viTTalane indenna ruNava pariharisayya doreye
***


ರಾಗ ಮುಖಾರಿ ಅಟತಾಳ

ಋಣವೆಂಬ ಸೂತಕವು ಬಹು ಬಾಧೆ ಪಡಿಸುತಿದೆ
ಗುಣನಿಧಿಯೆ ನೀನೆನ್ನ ಋಣವ ಪರಿಹರಿಸೋ

ಕೊಟ್ಟವರು ಬಂದೆನ್ನ ನಿಷ್ಠುರಗಳನಾಡಿ
ಕೆಟ್ಟ ಬೈಗಳ ಬೈದು ಮನದಣಿಯಲು
ದಿಟ್ಟತನವನು ಬಿಟ್ಟು ಕಳೆಗುಂದಿದೆನಯ್ಯ
ಸೃಷ್ಟಿಗೊಡೆಯನೆ ಎನ್ನ ಋಣವ ಪರಿಹರಿಸೋ

ಅವನ ಒಡೆವೆಯ ತಂದು ದಾನ ಧರ್ಮವ ಮಾಡೆ
ಅವಗಲ್ಲದೆ ಪುಣ್ಯ ಇವಗ್ಯಾವದು
ಅವನ ಒಡವೆಗಳಿಂದ ತೀರ್ಥ ಯಾತ್ರೆಯ ಮಾಳ್ಪ
ಇವನ ಜೀವನ ಪಾಡಿಗೆತ್ತಿನಂದದಲಿ

ಆಳಿದೊಡೆಯನ ಮಾತು ಕೇಳಿ ನಡೆಯಲುಬಹುದು
ಊಳಿಗವ ಮಾಡಿ ಮನದಣಿಯಬಹುದು
ಕಾಳಗದಿ ಪೊಕ್ಕು ಕಡಿದಾಡಿ ಜೈಸಲುಬಹುದು
ಪೇಳಲಳವಲ್ಲ ಋಣದವಗೊಂದು ಸೊಲ್ಲ

ಹೆತ್ತ ಸೂತಕ ಹತ್ತು ದಿನಗಳಿಗೆ ಪರಿಹಾರ
ಮೃತ್ಯು ಸೂತಕವು ಹನ್ನೊಂದು ದಿನಕೆ
ಮತ್ತೆ ಋಣ ಸುತಕವು ಜನ್ಮಜನ್ಮಾಂತರಕೆ
ಎತ್ತ ಹೋದರು ಬಿಡದೆ ಬೆನ್ಹತ್ತಿ ಬಹುದು

ಬಂಧುಬಳಗದ ಮುಂದೆ ಬಹುಮಾನವು ಹೋಗಿ
ಅಂದವಳಿದೆನೊ ಈ ವಿಧ ಋಣದೊಳು
ಇಂದಿರಾರಮಣನೆ ಶ್ರೀಪುರಂದರವಿಠಲನೆ
ಇಂದೆನ್ನ ಋಣವ ಪರಿಹರಿಸಯ್ಯ ದೊರೆಯೆ
*********

ಋಣವೆಂಬ ಸೂತಕವು ಬಹು ಬಾಧೆ ಬಡಿಸುತಿದೆ |
ಗುಣನಿಧಿಯೆ ನೀ ಎನ್ನ ಕಡಹಾಯಿಸಯ್ಯ 
ಪಒಡಲಿನಾಸಗೆ ಪರರ ಕಡೆಯಿಂದ ಧನವನ್ನು |
ತಡೆಯದಲೆ ತಂದು ಸಂತೋಷ ಪಡುವೆ ||
ಕೊಡುವ ವೇಳೆಗೆಅವರಬಿರುನುಡಿಗಳನು ಕೇಳ್ವ |
ಕಡು ಪಾಪವನ್ನು ನೀ ಕಡೆಹಾಯಿಸಯ್ಯ 1

ಕೊಟ್ಟ ದೊರೆಗಳು ಬಂದು ನಿಷ್ಠುರದ ಮಾತಾಡಿ |
ಎಷ್ಟು ಬೈಯ್ವರೊ ತಮ್ಮ ಮನದಣಿಯಲು ||
ದಿಟ್ಟತನವಿಲ್ಲದಲೆ ಕಳೆಯಗುಂದಿದೆನಯ್ಯ |
ಸೃಷ್ಟಿಗೊಡೆಯನೆ ಎನ್ನ ಕಷ್ಟ ಪರಿಹರಿಸೊ 2

ಆಳಿದೊಡೆಯನ ಮಾತಕೇಳಿನಡೆಯಲು ಬಹುದು |
ಉಳಿಗವ ಮಾಡಿ ಮನದಣಿಯ ಬಹುದು ||
ಕಾಳೆಗವ ಪೊಕ್ಕು ಕಡಿದಾಡಿ ಜಯಿಸಲು ಬಹುದು |
ಪೇಳಲಳವಲ್ಲ ಋಣದವಗೊಂದು ಸೊಲ್ಲ 3

ಹರಿವ ಹಾವನು ಹಿಡಿದು ತಲೆಗೆ ಸುತ್ತಲು ಬಹುದು |
ಮುರಿವ ಮಾಳಿಗೆಯ ಕೈಯೊಳು ನಿಲಿಸ ಬಹುದು ||
ಉರಿವ ಉರಿಯೊಳು ಹೊಕ್ಕು 
ಹೊರ ಹೊರಟು ಬರಬಹುದು |
(ಬೆರೆದು) ಸೇರಲು ಬಹುದು ವೈರಿಗಳ ಮನೆಯ 4

ಹೆತ್ತಸೂತಕಹತ್ತುದಿನಕೆ ಪರಿಹಾರವು |
ಮೃತ್ಯು ಸೂತಕವು ಹನ್ನೆರಡು ದಿನವು ||
ಮತ್ತೆ ಋಣಸೂತಕವು ಜನ್ಮಜನ್ಮಾಂತರದಿ |
ಹತ್ತಿಕೊಂಡಿಹುದು ಎತ್ತಲು ಹೋಗಗೊಡದೆ 5

ಅವರದ್ರವ್ಯವ ದಾನ-ಧರ್ಮವನು ಮಾಡಿದರೆ |
ಅವರಿಗಲ್ಲದೆ ಪುಣ್ಯ ಇವರಿಗುಂಟೆ ||
ಅವರದ್ರವ್ಯದಿ ತೀರ್ಥ-ಯಾತ್ರೆಯನು ಮಾಡಿದರೆ |
ಅವರಮನೆಬಾಡಿಗೆಯ ಎತ್ತಿನಂದದಲಿ6

ಬಂಧುಗಳ ಮುಂದೆನ್ನ ಬಹುಮಾನಗಳು ಹೋಗಿ |
ಕಂದಿ ಕುಂದಿದೆನಯ್ಯ ಕರುಣಾನಿಧೆ ||
ಇಂದಿರಾರಮಣ ಶ್ರೀ ಪುರಂದರವಿಠಲನೆ |
ಇಂದೆನ್ನ ಋಣದಿಂದ ಕಡೆ ಹಾಯಿಸಯ್ಯ 
another version

ರಾಗ: ಕಾಂಬೋದಿ           ತಾಳ: ಅಟ್ಟ

ಋಣವೆಂಬ ಪಾತಕವು ಬಹು ಬಾಧೆ ಪಡಿಸುತಿದೆ || ಪ ||
ಗುಣನಿಧಿಯೆ ನೀನೆನ್ನ ಋಣವ ಪರಿಹರಿಸೊ || ಅ.ಪ ||

ಒಡಲಿನಾಸೆಗೆ ಪರರ ಒಡವೆಗಳನೆ ತಂತು
ಬಿಡದೆ ವೆಚ್ಚವ ಮಾಡಿ ತೋಷಪಡುವೆ
ಕೊಡುವ ವೇಳೆಗವರ ಕೆಡುನುಡಿಗಳನು ನುಡಿವೆ
ಕಡು ಮಹಾಪಾತಕವ ಪರಿಹರಿಸೊ ಹರಿಯೆ || ೧ ||

ಕೊಟ್ಟವರು ಬಂದೆನ್ನ ನಿಷ್ಠೂರಗಳನಾಡಿ
ಕೆಟ್ಟ ಬೈಗಳ ಬೈದು ಮನದಣಿಯಲು
ದಿಟ್ಟತನವನು ಬಿಟ್ಟು ಕಳೆಗುಂದಿದೆನಯ್ಯ
ಸೃಷ್ಟಿಗೊಡೆಯನೆ ಎನ್ನ ಋಣವ ಪರಿಹರಿಸೊ || ೨ ||

ಅಳಿದೊಡೆಯನ ಮಾತು ಕೇಳಿ ನಡೆಯಲಿಬಹುದು
ಊಳಿಗವ ಮಾಡಿ ಮನ ದಣಿಯಬಹುದು
ಕಾಳಗವ ಪೊಕ್ಕು ಕಡಿದಾಡಿ ಜಯಿಸಲಿಬಹುದು
ಪೇಳಲವಲ್ಲ ಋಣದವಗೊಂದು ಸೊಲ್ಲ || ೩ ||

ಹರಿವ ಹಾವನು ತೆಗೆದು ಶಿರಕೆ ಸುತ್ತಲುಬಹುದು
ಉರಿವ ಉರಿಯೊಳು ಪೊಕ್ಕು ಕುಣಿಯಬಹುದು
ಮುರಿವ ಮಾಳಿಗೆಗೆ ಕೈಯೊಡ್ಡಿ ನಿಲ್ಲಿಸಬಹುದು
ಧರೆಯೊಳಗೆ ಋಣದವನ ಜಯಿಸಲಳವಲ್ಲ || ೪ ||

ಹೆತ್ತ ಸೂತಕ ಹತ್ತುದಿನ ಪರಿಯಂತ
ಮೃತ್ಯು ಸೂತಕವು ಹನ್ನೊಂದು ದಿವಸ
ಮತ್ತೆ ಋಣಸೂತಕವು ಜನ್ಮಜನ್ಮಾಂತರದಿ
ಎತ್ತ ಪೋದರು ಬಿಡದೆ ಬೆನ್ನಟ್ಟಬಹುದು || ೫ ||

ಅವನ ಒಡೆವೆಗಳಿಂದ ದಾನ ಧರ್ಮವ ಮಾಡೆ
ಅವನಿಗಲ್ಲದೆ ಪುಣ್ಯ ಇವನಿಗುಂಟೆ?
ಅವನ ದ್ರವ್ಯಗಳಿಂದ ತೀರ್ಥಯಾತ್ರೆಯ ಮಾಡೆ
ಇವನ ಜೀವನವು ಬಾಡಿಗೆ ಎತ್ತಿನಂತೆ || ೬ ||

ಬಂಧು ಜನಗಳ ಮುಂದೆ ಬಹುಮಾನವು ಹೋಗಿ
ಅಂದವಳಿದೆನು ನಾನು ನೊಂದು ಋಣದಿ
ಇಂದಿರೆಯ ಅರಸ ಶ್ರೀಪುರಂದರ ವಿಠಲನೆ
ಇಂದೆನ್ನ ಋಣವ ಪರಿಹರಿಸಯ್ಯ ದೊರೆಯೆ || ೭ ||
*********

No comments:

Post a Comment