Audio by Mrs. Nandini Sripad
ರಾಮ ದೇವರ ಸುಳಾದಿ
ಧ್ರುವತಾಳ
ರಾಮ ರಘುಕುಲ ಸಾರ್ವಭೌಮ ಪೂರಣಕಾಮ
ಜೀಮೂತಶಾಮ ಶ್ರೀಮೂಲರಾಮ
ಕೋಮಲ ಶರೀರ ಸೀತಾ ಮುಖಾಂಬುಜ ಭ್ರಮರ
ಪ್ರೇಮಸಾಗರ ಭಕ್ತಜನ ಮನೋಹರ
ಸಾಮಜಾತಿಹರ ಸಾಮಗಾನಾದರ ನಿ
ಸ್ಸೀಮ ಗುಣಗಂಭೀರ ಏಕವೀರ
ಸ್ವಾಮಿ ಮಠದರಸ ಮುನಿಸ್ತೋಮ ಮಾನಸಹಂಸ
ನೀ ಮನ್ನಿಸು ಪ್ರಸನ್ನವೆಂಕಟಾದ್ರೀಶ ರಘುರಾಮ ||1||
ಮಠ್ಯತಾಳ
ಪಿಂತೆ ಸಮೀರಜನ ಸೇವೆಗೆ ಮೆಚ್ಚ
ತ್ಯಂತ ಪ್ರಸನ್ನನಾಗ್ಯವನ ಶುಭಕರ
ಸಂತತಿಗಭಯವನಿತ್ತಪೆನೆಂದೀಶ
ನಿಂತಿಹೆ ಪ್ರಸನ್ನವೆಂಕಟಪತಿರಾಮ
ಕಂತುಜನಕ ನಿತ್ಯಾನಂದನೆ ನಿ
ನ್ನಂತವರಿಯೆ ನಿಗಮಾಗಮಕಳವೆ ||2||
ತ್ರಿಪುಟತಾಳ
ನಿರುತ ವೈಕುಂಠ ಮಂದಿರವಿದ್ದು
ಪರಣ ಕುಟೀರವನಾಶ್ರಯಿಸುವ ಘನತೆಯೆತ್ತ
ವರಪೀತಾಂಬರ ದಾಮವನು ಬಿಟ್ಟು ವಲ್ಕಲ
ಧರಿಸಿ ಕಾನನದಿ ಸಂಚರಿಪೋದೆತ್ತ
ನರಲೀಲೆಗಿದು ಶ್ಲಾಘ್ಯವೆಂದು ತೋರಿದೆ ಜಗ
ದೆರೆಯ ಪ್ರಸನ್ನವೆಂಕಟಾದ್ರಿ ರಘುರಾಮ ||3||
ಅಟ್ಟತಾಳ
ಹರವರದಲಿ ಬಲು ಮತ್ತಾದ ರಜನೀ
ಚರವರ ಲಂಕೆಯಲಿ ಬಲಿದು ಗರ್ವದಿ
ಸುರವರರನುರೆ ಬಾಧಿಸಲವರನು
ಪೊರೆವರು ದಾರಯ್ಯ ನಿನ್ನಿಂದ
ಸ್ಥಿರವರದಾಯಕ ಪ್ರಸನ್ವೆಂಕಟ
ಗಿರಿವರನಿಲಯ ಕೌಸಲ್ಯೆಯ ಕಂದ ||4||
ಆದಿತಾಳ
ಅಕಳಂಕ ಅಕುತೋತಂಕ ಅಕಳಂಕ
ಮಕುಟ ಕುಂಡಲ ಕೌಸ್ತುಭ ಕೇಯೂರ ವಲ
ಯಾಂಕಿತ ಕೋದಂಡ ಕಾರ್ಮುಕಪಾಣಿ
ಅಕಳಂಕ ಸುಖತೀರ್ಥವಂದಿತ ಪಾ
ದಕಮಲ ವಿಧಿನುತ ಮಖಪಾಲಕ ಪ್ರಸನ್ನ
ವೆಂಕಟಾಧಿಪ ಅಕಳಂಕ ||5||
ಜತೆ
ಅಂದು ನರಹರಿಯತಿಗೆ ಅಂದದಲ್ಲೊಲಿದಿಲ್ಲಿ
ಬಂದು ನೀನಿಂತೆ ನಿಜರಮಣಿಯೊಡನೆ
ಎಂದೆಂದು ಸತ್ಯಾನಭಿವ ತೀರ್ಥ ಗುರು ಹೃದಯ
ಮಂದಿರನೆ ಪ್ರಸನ್ನವೆಂಕಟವರದ ರಾಮ
***********
ರಾಮ ರಘುಕುಲ ಸಾರ್ವಭೌಮ ಪೂರಣಕಾಮಜೀಮೂತಶಾಮ ಶ್ರೀಮೂಲರಾಮಕೋಮಲ ಶರೀರ ಸೀತಾ ಮುಖಾಂಬುಜಭ್ರಮರಪ್ರೇಮಸಾಗರ ಭಕ್ತಜನ ಮನೋಹರಸಾಮಜಾತಿಹರ ಸಾಮಗಾನಾದರ ನಿಸ್ಸೀಮ ಗುಣಗಂಭೀರ ಏಕವೀರಸ್ವಾಮಿ ಮಠದರಸ ಮುನಿಸ್ತೋಮ ಮಾನಸಹಂಸನೀ ಮನ್ನಿಸು ಪ್ರಸನ್ನವೆಂಕಟಾದ್ರೀಶ ರಘುರಾಮ 1
ಮಠ್ಯತಾಳ
ಪಿಂತೆ ಸಮೀರಜನ ಸೇವೆಗೆ ಮೆಚ್ಚತ್ಯಂತ ಪ್ರಸನ್ನನಾಗ್ಯವನ ಶುಭಕರಸಂತತಿಗಭಯವನಿತ್ತಪೆನೆಂದೀಶನಿಂತಿಹೆ ಪ್ರಸನ್ನವೆಂಕಟಪತಿರಾಮಕಂತುಜನಕನಿತ್ಯಾನಂದನೆ ನಿನ್ನಂತವರಿಯೆ ನಿಗಮಾಗಮಕಳವೆ 2
ತ್ರಿಪುಟತಾಳ
ನಿರುತ ವೈಕುಂಠ ಮಂದಿರವಿದ್ದುಪರಣ ಕುಟೀರವನಾಶ್ರಯಿಸುವ ಘನತೆಯೆತ್ತವರಪೀತಾಂಬರ ದಾಮವನು ಬಿಟ್ಟುವಲ್ಕಲಧರಿಸಿ ಕಾನನದಿ ಸಂಚರಿಪೋದೆತ್ತನರಲೀಲೆಗಿದು ಶ್ಲಾಘ್ಯವೆಂದು ತೋರಿದೆ ಜಗದೆರೆಯ ಪ್ರಸನ್ನವೆಂಕಟಾದ್ರಿ ರಘುರಾಮ 3
ಅಟ್ಟತಾಳ
ಹರವರದಲಿ ಬಲು ಮತ್ತಾದ ರಜನೀಚರವರ ಲಂಕೆಯಲಿ ಬಲಿದು ಗರ್ವದಿಸುರವರರನುರೆ ಬಾಧಿಸಲವರನುಪೊರೆವರು ದಾರಯ್ಯ ನಿನ್ನಿಂದಸ್ಥಿರವರದಾಯಕ ಪ್ರಸನ್ವೆಂಕಟಗಿರಿವರನಿಲಯ ಕೌಸಲ್ಯೆಯ ಕಂದ 4
ಆದಿತಾಳ
ಅಕಳಂಕ ಅಕುತೋತಂಕ ಅಕಳಂಕಮಕುಟಕುಂಡಲಕೌಸ್ತುಭಕೇಯೂರ ವಲಯಾಂಕಿತಕೋದಂಡಕಾರ್ಮುಕಪಾಣಿಅಕಳಂಕ ಸುಖತೀರ್ಥವಂದಿತ ಪಾದಕಮಲ ವಿಧಿನುತ ಮಖಪಾಲಕ ಪ್ರಸನ್ನವೆಂಕಟಾಧಿಪ ಅಕಳಂಕ 5
ಜತೆ
ಅಂದು ನರಹರಿಯತಿಗೆ ಅಂದದಲ್ಲೊಲಿದಿಲ್ಲಿಬಂದು ನೀನಿಂತೆ ನಿಜರಮಣಿಯೊಡನೆಎಂದೆಂದು ಸತ್ಯಾನಭಿವ ತೀರ್ಥಗುರುಹೃದಯಮಂದಿರನೆ ಪ್ರಸನ್ನವೆಂಕಟವರದ ರಾಮ
ಪ್ರಸನ್ನವೆಂಕಟದಾಸರು ರಾಮ ದೇವರ ಸುಳಾದಿ

*************
No comments:
Post a Comment