Wednesday, 11 December 2019

ಲೇಸು ಲೇಸಾಯಿತೆನ್ನ ಜನುಮ ನೋಡಿ ankita mahipati

ಭೀಮಪಲಾಸ್ ರಾಗ ತೀನ್ ತಾಳ

ಲೇಸು ಲೇಸಾಯಿತೆನ್ನ ಜನುಮ ನೋಡಿ
ವಾಸುದೇವನೆ ಬಂದ ಕೈಗೂಡಿ ||ಧ್ರುವ||

ಎನ್ನ ಮಾನಾಭಿಮಾನ ಆದ ಹರಿಯೆ
ಇನ್ನು ಇಂಥ ಪುಣ್ಯಕ ನೋಡಿ ಸರಿಯೆ
ಧನ್ಯಗೈಸಿದುತ್ತೀರ್ಣಾಗಲರಿಯೆ
ಇನ್ನೊಬ್ಬರಿಗೇನು ಮುಚ್ಚುಮರಿಯೆ ||೧||

ಕೋಟಿ ಜನ್ಮದಲಿ ಮಾಡಿದ ಸುಪುಣ್ಯ
ನಾಟಿ ಬಂತೆನ್ನೊಳಗಸು ತಾರ್ಕಣ್ಯ
ನೀಟದೋರಿತು ಘನ ಸುಚೈತನ್ಯ
ನೋಟ ನೆಲೆಗೊಂಡಾಯಿತು ಧನ್ಯ ||೨||

ತಾನೆ ತಾನಾದೆನ್ನೊಳು ಬಂದು ನೋಡಿ
ಭಾನುಕೋಟಿ ಪ್ರಕಾಶ ದಯಮಾಡಿ
ದೀನ ಮಹಿಪತಿಗೆ ಸ್ವಸುಖ ನೀಡಿ
ಮನೋಹರ ಮಾಡಿದ ಮನಗೂಡಿ ||೩||
****

ಲೇಸು ಲೇಸಾಯಿತೆನ್ನ ಜನುಮ ನೋಡಿ ವಾಸುದೇವನೆ ಬಂದು ಕೈಗೂಡಿ pa  


ಎನ್ನ ಮಾನಾಭಿಮಾನ ಆದ ಹರಿಯೆ ಇನ್ನು ಇಂಥ ಪುಣ್ಯಕ ನೋಡಿ ಸರಿಯೆ ಧನ್ಯಗೈಸಿದುತ್ತೀರ್ಣಾಗಲರಿಯೆ ಇನ್ನೊಬ್ಬರಿಗೇನು ಮುಚ್ಚುಮರಿಯೆ 1 

ಕೋಟಿ ಜನ್ಮದಲಿ ಮಾಡಿದ ಸುಪುಣ್ಯ ನಾಟಿ ಬಂತೆನ್ನೊಳಗಸು ತಾರ್ಕಣ್ಯ ನೀಟದೋರಿತು ಘನ ಸುಚೈತನ್ಯ ನೋಡ ನೆಲೆಗೊಂಡಾಯಿತು ಧನ್ಯ 2 

ತಾನೆ ತಾನಾದೆನ್ನೊಳು ಬಂದು ನೋಡಿ ಭಾನುಕೋಟಿಪ್ರಕಾಶ ದಯಮಾಡಿ ದೀನ ಮಹಿಪತಿಗೆ ಸ್ವಸುಖ ನೀಡಿ ಮನೋಹರ ಮಾಡಿದ ಮನಗೂಡಿ3

****

No comments:

Post a Comment