Saturday, 4 December 2021

ಅಸುರ ಬಾಧಿಸುತಿರಲು ಋಷಿಗಳು ಸ್ತುತಿ ಮಾಡೆ ankita jagannatha vittala ASURA BAADHISUTIRALU RUSHIGALU STUTI MAADE



ಜಗನ್ನಾಥದಾಸರು
.ಅಸುರ ಬಾಧಿಸುತಿರಲು ಋಷಿಗಳು ಸ್ತುತಿಮಾಡೆ 
ದಶರಥನ ಗರ್ಭದಲಿ ಜನಿಸಿ ಬಂದೆ ||೧||

ಶಿಶುವಾಗಿ ಕೌಸಲೆಗೆ ಬಾಲಲೀಲೆಯ ತೋರ್ದು 
ಕುಶಲದಿಂ ನಾಲ್ವರ ಕೂಡೆ ಬೆಳೆದೆ ||೨||

ಅಸುರರನೆ ಬಡಿದಟ್ಟಿ ಋಷಿಯ ಯಾಗವ ಕಾಯ್ದು 
ವಸುಧೆಯೊಳು ಶಿಲೆಯನ್ನು ಸತಿಯ ಮಾಡಿ ||೩||

ಮಿಥಿಲಪಟ್ಟಣಕೈದಿ ಮೃಡನ ಧನುವನೆ ಮುರಿದು 
ಶಶಿಮುಖಿ ಜಾನಕಿಯ ಕರವ ಪಿಡಿದು ||೪||

ಪಥದೊಳಗೆ ಬರುತ ಭಾರ್ಗವರೊಡನೆ ಹೋರಾಡಿ 
ದಶರಥಗೆ ಏಕೀಭಾವವನೆ ತೋರಿ ||೫||

ಪರಮಹರುಷದಲಿ ಸಾಕೇತನಗರಿಗೆ ಬಂದು 
ಕಿರಿಯಮಾತೆಯ ಕಠಿಣನುಡಿ ಕೇಳಿ ||೬||

ಚಿತ್ರಕೂಟಕೆ ಬಂದು ಕೃತ್ಯವೆಲ್ಲವ ನಡೆಸಿ 
ಭ್ರಾತೃ ಭರತನಿಗೆ ಪಾದುಕೆಯಸಿತ್ತು ||೭||

ವನದೊಳಗೆ ಸಂಚರಿಸಿ ಘನಕಾರ್ಯಗಳ ಮಾಡಿ 
ಹನುಮನ ಕಳುಹಿ ಮುದ್ರಿಕೆಯ ಕೊಡಲು ||೮||

ಮಿತ್ರೆ ಜಾನಕಿಗರುಹಿ ರತ್ನಕೊಂಡು ಬರಲು 
ಅತ್ಯಂತ ಹರುಷದಲಿ ಶರಧಿಕಟ್ಟಿ ||೯||

ದುಷ್ಟ ರಾಕ್ಷಸಕುಲವ ಕುಟ್ಟಿ ಬೇರನೆ ಸವರಿ 
ಸೃಷ್ಟಿಸುತೆ ಜಾನಕಿಯ ಅಗ್ನಿ ಹೊಗಿಸಿ ||೧೦||

ಪಟ್ಟಣಕೆ ಬಂದು ಭರತನಿಗೆ ಪೇಳೆ 
ಅಷ್ಟಗಂಗೆ ಉದಕವನೆ ತಂದು ||೧೧||

ಅಷ್ಟೆ ಋಷಿಗಳು ಎಲ್ಲ ಕೂಡಿಕೊಂಡು 
ಪಟ್ಟಾಭಿಷೇಕವನು ಮಾಡುತಿರಲಂದು ||೧೨||

ಸೃಷ್ಟಿಯೊಳು ಜಗನ್ನಾಥವಿಠಲನಿಗೆ 
ಪುಷ್ಪ ವೃಷ್ಟಿಗಳನ್ನು ಕರೆದರಾಗ ||೧೩||
***

Asura badhisutiralu rushigalu stutimade
dasharathana garbhadali janisi bande ||1||

Shishuvagi kausalege balalileya tordu 
kushaladim nalvara kude belede ||2||

Asurarane badidatti rushiya yagava kaydu 
vasudheyolu shileyannu satiya madi ||3||

Mithilapattanakaidi mrudana dhanuvane muridu 
shashimukhi janakiya karava pididu ||4||

Pathadolage baruta bhargavarodane horadi 
dasharathage ekibhavavane tori ||5||

Paramaharushadali saketanagarige bandu 
kiriyamateya kathinanudi keli ||6||

Chitrakutake bandu krutyavellava nadesi 
bhratru bharatanige padukeyasittu ||7||

Vanadolage sancharisi ghanakaryagala madi 
hanumana kaluhi mudrikeya kodalu ||8||

Mitre janakigaruhi ratnakondu baralu 
atyanta harushadali sharadhikatti ||9||

Dusta rakshasakulava kutti berane savari 
srushtisute janakiya agni hogisi ||10||

Pattanake bandu bharatanige pele 
astagange udakavane tandu ||11||

Aste rushigalu ella kudikondu 
pattabhishekavanu madutiralandu ||12||

Srushtiyolu jagannathavittalanige 
pushpa vrustigalannu karedaraga ||13||

***

ಅಸುರ ಬಾಧಿಸುತಿರಲು ಋಷಿಗಳು ಸ್ತುತಿ ಮಾಡೆ
ದಶರಥನ ಗರ್ಭದಲಿ ಜನಿಸಿ ಬಂದೆ 1

ಶಿಶುವಾಗಿ ಕೌಸಲೆಗೆ ಬಾಲಲೀಲೆಯ ತೋರ್ದು
ಕುಶಲದಿಂ ನಾಲ್ವರ ಕೂಡೆ ಬೆಳೆದೆ 2

ಅಸುರರನೆ ಬಡಿದಟ್ಟಿ ಋಷಿಯ ಯಾಗವ ಕಾಯ್ದು
ವಸುಧೆಯೊಳು ಶಿಲೆಯನ್ನು ಸತಿಯ ಮಾಡಿ 3

ಮಿಥಿಲ ಪಟ್ಟಣಕೈದಿ ಮೃಡನ ಧನುವನೆ ಮುರಿದು
ಕರವ ಪಿಡಿದು 4

ಪಥದೊಳಗೆ ಬರುತ ಭಾರ್ಗವರೊಡನೆ ಹೋರಾಡಿ
ದಶರಥಗೆ ಏಕೀಭಾವವನೆ ತೋರಿ 5

ಪರಮ ಹರುಷದಲಿ ಸಾಕೇತನಗರಿಗೆ ಬಂದು
ಕಿರಿಯ ಮಾತೆಯ ಕಠಿಣ ನುಡಿ ಕೇಳಿ 6

ಚಿತ್ರಕೂಟಕೆ ಬಂದು ಕೃತ್ಯವೆಲ್ಲವ ನಡೆಸಿ
ಭ್ರಾತೃ ಭರತನಿಗೆ ಪಾದುಕೆಯನಿತ್ತು 7

ವನದೊಳಗೆ ಸಂಚರಿಸಿ ಘನ ಕಾರ್ಯಗಳ ಮಾಡಿ
ಹನುಮನ ಕಳುಹಿ ಮುದ್ರಿಕೆಯ ಕೊಡಲು 8

ಮಿತ್ರೆ ಜಾನಕಿಗರುಹಿ ರತ್ನ ಕೊಂಡು ಬರಲು
ಶರಧಿ ಕಟ್ಟಿ 9

ದುಷ್ಟ ರಾಕ್ಷಸ ಕುಲವ ಕುಟ್ಟಿ ಬೇರನೆ ಸವರಿ
ಸೃಷ್ಟಿಸುತೆ ಜಾನಕಿಯ ಅಗ್ನಿ ಹೊಗಿಸಿ 10

ಪಟ್ಟಣಕೆ ಬಂದು ಭರತನಿಗೆ ಪೇಳೆ
ಅಷ್ಟಗಂಗೆ ಉದಕವನೆ ತಂದು 11

ಅಷ್ಟಋಷಿಗಳು ಎಲ್ಲ ಕೂಡಿ ಕೊಂಡು
ಪಟ್ಟಾಭಿಷೇಕವನು ಮಾಡುತಿರಲಂದು 12

ಸೃಷ್ಟಿಯೊಳು ಜಗನ್ನಾಥವಿಠಲನಿಗೆ ಪುಷ್ಪ
ವೃಷ್ಟಿಗಳನ್ನು ಕರೆದರಾಗ13
*********

No comments:

Post a Comment