Friday, 17 December 2021

ಸೋಮಶಿವ ಶರ್ವ ಭವ ಶ್ರೀಕಂಠ ankita jagannatha vittala SOMA SHIVA SHARVA BHAVA SHREEKANTA












ಶ್ರೀ ಜಗನ್ನಾಥದಾಸರ ಕೃತಿ 

ಸೋಮ ಶಿವ ಶರ್ವ ಭವ ಶ್ರೀಕಂಠ ನಿನ್ನ ಪದ
ತಾಮರಸಯುಗ್ಮಗಳಿಗಾನಮಿಸುವೆ ॥ ಪ ॥

ಮೃತ್ಯುಂಜಯ ಮೃಗಾಂಗ ಕೃತ್ತಿವಾಸ ಕೃಪಾಳು ।
ವಿತ್ತಪತಿಸಖ ವಿನಾಯಕನ ಜನಕ ॥
ಭೃತ್ಯವರ್ಗಕೆ ಬಹ ಅಪಮೃತ್ಯು ಪರಿಹರಿಸಿ ಸಂ - ।
ಪತ್ತು ಪಾಲಿಪುದು ನಿವೃತ್ತಿ ಸಂಗಮವಾಸ ॥ 1 ॥

ಗೋಪತಿ ಧ್ವಜ ಘೋರ ಪಾಪ ಸಂಹರಣ ಹರಿ - ।
ತೋಪಲೋಪಮ ಕಂಠ ಚಾಪಪಾಣೆ ॥
ಶ್ರೀಪತಿಯ ಶ್ರೀನಾಭಿ ಕೂಪಸಂಭವತನಯ ।
ನೀ ಪಾಲಿಸೆಮ್ಮನು ವಿರೂಪಾಕ್ಷ ಗುರುವೇ ॥ 2 ॥

ಭಸಿತ ಭೂಷಿತ ಡಮರು ತ್ರಿಸುಳಗೈಯನೆ ಶಂಭು ।
ಕಿಸಲಯೋಪಮ ರವಿಶಶಿಭೂಷಣ ॥
ಅಸುರರಿಪು ಸಿರಿ ಜಗನ್ನಾಥವಿಠಲನ ಪದ ।
ಬಿಸಜ ಧ್ಯಾನವನೀಯೊ ಹಸನಾಗಿ ಕಾಯೋ ॥ 3 ॥
***

 ರಾಗ ಕಲ್ಯಾಣಿ        ಖಂಡಛಾಪುತಾಳ (raga, taala may differ in audio)

Soma shiva sharvabhava |shiti kantha ninna pada |tamarasa yugmagali |gaanamisuve|| pa ||

Kaama hara kailaasa |hema giriya vaasa |Raama naamava bhajipa |Ume arasa shambho || a pa ||

Gopatidhwaja ghora |paapa samharana hari| topalopama kantha| chapa paani ||
Sri patiya sri naabhi |koopa sambhava tanaya |nee paalisemmanu viroopaksha guruve ||1 ||

Mrutyunjaya mruganka | krutti vaasa krupalu | vittapati sakha vina | yakara janaka ||
Bhrutyavargake baaha | apamrutyu kaledu sam | pattu paalisuvudu | nivrutti sangamapa ||2||

Bhasita bhushita damaru | tisula gaiyyane shambho | kisalayopamanavira | shashi bhushana ||
Asuraari sri jaga |nnatha vitthalana pada | bisaja dhyaanava neeyo | hasanaagi kaayo ||3||
*** 

 ರಾಗ ಕಲ್ಯಾಣಿ        ಖಂಡಛಾಪುತಾಳ 

ಸೋಮ ಶಿವ ಶರ್ವ ಭವ ಶ್ರೀಕಂಠ ನಿನ್ನ ಪದ
ತಾಮರಸಯುಗ್ಮಗಳಿಗಾನಮಿಸುವೆ ॥ ಪ ॥

ಮೃತ್ಯುಂಜಯ ಮೃಗಾಂಗ ಕೃತ್ತಿವಾಸ ಕೃಪಾಳು ।
ವಿತ್ತಪತಿಸಖ ವಿನಾಯಕನ ಜನಕ ॥
ಭೃತ್ಯವರ್ಗಕೆ ಬಹ ಅಪಮೃತ್ಯು ಪರಿಹರಿಸಿ ಸಂ - ।
ಪತ್ತು ಪಾಲಿಪುದು ನಿವೃತ್ತಿ ಸಂಗಮವಾಸ ॥ 1 ॥

ಗೋಪತಿ ಧ್ವಜ ಘೋರ ಪಾಪ ಸಂಹರಣ ಹರಿ - ।
ತೋಪಲೋಪಮ ಕಂಠ ಚಾಪಪಾಣೆ ॥
ಶ್ರೀಪತಿಯ ಶ್ರೀನಾಭಿ ಕೂಪಸಂಭವತನಯ ।
ನೀ ಪಾಲಿಸೆಮ್ಮನು ವಿರೂಪಾಕ್ಷ ಗುರುವೇ ॥ 2 ॥

ಭಸಿತ ಭೂಷಿತ ಡಮರು ತ್ರಿಸುಳಗೈಯನೆ ಶಂಭು ।
ಕಿಸಲಯೋಪಮ ರವಿಶಶಿಭೂಷಣ ॥
ಅಸುರರಿಪು ಸಿರಿ ಜಗನ್ನಾಥವಿಠಲನ ಪದ ।
ಬಿಸಜ ಧ್ಯಾನವನೀಯೊ ಹಸನಾಗಿ ಕಾಯೋ ॥ 3 ॥
****


No comments:

Post a Comment