Saturday, 28 December 2019

ಗುರುರಾಜರೆ ಎನ್ನ ಪರಿಪಾಲಿಸುವುದು ಬಿಟ್ಟು ankita indiresha GURURAJARE ENNA PARIPAALISUVUDU BITTU


ಗುರುರಾಜರೆ ಎನ್ನ ಪರಿಪಾಲಿಸುವುದು ಬಿಟ್ಟು
ವರ ಮಂತ್ರಾಲಯದೊಳು ಇರುವುದುಚಿತವೇನೊ ಪ

ಬಡವ ಭಕ್ತ ಕಷ್ಟಕಲೊಳಿರಿಸಿ 
ತುಂಗಾದಡದಿ ನಿಂತೆನ್ನ ಕೈಪಿಡಿಯದೆ ಪೋಗುವರೇನೊ 1

ಕಡು ಸೇವಕನೊಳಿಂಥ ಕಡುಕೋಪವ್ಯಾತಕೆ
ನಡೆ ನುಡಿ ಎನ್ನ ತಪ್ಪು ಪಿಡಿದು ಪೋಗುವರೇನೊ 2

ಎಂದಿಗಾದರು ನಿನ್ನ ಪೊಂದಿದವನಲ್ಲೋ
ಮುಂದೇನುಗತಿ ಪೇಳೊ ಇಂದಿರೇಶನ ಪ್ರಿಯ 3
*********

No comments:

Post a Comment