Wednesday, 29 December 2021

ಏನ ಪೇಳಲಿ ತಂಗಿ ತಿಮ್ಮಯ್ಯನ ಏನು ಹೇಳಲಿ ತಂಗಿ purandara vittala ENA PELALI TANGI TIMMAYYANA



raaga Madhyamavati Eka Tala
chaitra suresh rao and gayathri tumkur venkatesh 2018


raaga Madhyamavati Eka Tala
GAYATHRI TUMKUR VENKATESH 2012  


CLCK ->  HOME

just scroll down for other devaranama 
 
ಏನ ಪೇಳಲಿ ತಂಗಿ ತಿಮ್ಮಯ್ಯನಪಾದವನು ಕಂಡೆ
ಕನಸುಕಂಡೆನ ಮನದಲಿ ಕಳವಳಗೊ೦ಡೆನೆ||ಪ||

ಪೋನ್ನದ ಕಡಗನಿಟ್ಟು ತಿಮ್ಮಯ್ಯತಾ
ಪೋಲ್ವ ನಾಮವಇಟ್ಟು ಅ೦ದುಗೆಘಲುಗೆನ್ನುತ
ಎನ ಮುಂದೆ ಬಂದು ನಿಂತಿದ್ದನಲ್ಲೇ II೧II

ಮಕರಕು೦ಡಲವನಿಟ್ಟು ತಿಮ್ಮಯ್ಯ ತಾ
ಕಸ್ತೂರಿತಿಲಕವನಿಟ್ಟು ಗೆಜ್ಜೆ ಘಲುಗೆನುತ
ಸ್ವಾಮಿ ತಾ ಬಂದು ನಿಂತಿದ್ದನಲ್ಲೇ II೨II

ಮುತ್ತಿನ ಪಲ್ಲಕ್ಕಿ ಯತಿಗಳು
ಹೊತ್ತು ನಿಂತಿದ್ದರಲ್ಲೇ ಛತ್ರಚಾಮರದಿಂದ
ರಂಗಯ್ಯನ ಸೇವೆಯ ಮಾಡುವರೇ II೩ II

ತಾಮರ ಕಮಲದಲಿ ಕೃಷ್ಣಯ್ಯ ತಾ
ಬಂದು ನಿಂತಿದನಲ್ಲೇ ವಾಯು ಬೋಮ್ಮದಿಗಳು
ರಂಗಯ್ಯನ ಸೇವೆಯ ಮಾಡುವರೇ II೪II

ನವರತ್ನ ಕೆತ್ತಿಸಿದ ಸ್ವಾಮಿ ಎನ್ನ
ಹೃದಯಮ೦ಟಪದಲ್ಲಿ ಸವಾ೯ಭರಣ ದಿಂದ
ಪುರಂದರವಿಠಲನ ಕೂಡಿದೇನೆ II೫II
***

this is often sung in Raga Pantuvarali or Raga Purvi Kalyani, giving it a haunting, soulful, and deeply meditative quality.

Ēna pēḷali taṅgi timmayyana pādavanu kaṇḍe
Kanasukaṇḍena manadali kaḷavaḷagoṇḍene || Pallavi ||

Ponnada kaḍaganiṭṭu timmayya tā
Pōlva nāmava iṭṭu anduge ghalugennuta
Ena munde bandu nintiddanallē || 1 ||

Makarakuṇḍalavaniṭṭu timmayya tā
Kastūritilakavaniṭṭu gejje ghalugennuta
Swāmi tā bandu nintiddanallē || 2 ||

Muttina pallakki yatigaḷu
Hottu nintiddarallē chatrachāmaradinda
Raṅgayyana sēveya māḍuvarē || 3 ||

Tāmara kamaladali kr̥ṣṇayya tā
Bandu nintiddanallē vāyu bommadigaḷu
Raṅgayyana sēveya māḍuvarē || 4 ||

Navaratna kettisida swāmi enna
Hr̥dayamaṇṭapadalli sarvābharaṇadinda
Purandaraviṭhalana kūḍidēne || 5 ||
***

Pronunciation & Vocabulary Tips
Taṅgi: "Sister." The poet is addressing a companion, sharing the wonder of his dream.

Kaḷavaḷagoṇḍene: "I was overwhelmed/agitated with emotion." Pronounce the 'ḷ' as a retroflex.

Ponnada Kaḍaga: "Golden bracelets." Pronounce the 'P' and 'nn' clearly.

Ghalugennuta: An onomatopoeic word for the tinkling sound of bells (Anduge/Gejje).

Yatigaḷu: Sages or ascetics.

Vāyu Bommadigaḷu: Refers to Vayu and Brahma (Bomma), indicating that even the highest gods serve Him.
***


ಶ್ರೀ ಪುರಂದರದಾಸರ ಈ ಅದ್ಭುತ ಕೃತಿಯು 'ಸ್ವಪ್ನ ಲಬ್ಧ' ಅಥವಾ ಕನಸಿನಲ್ಲಿ ಭಗವಂತನ ದರ್ಶನ ಪಡೆದ ಅನುಭವವನ್ನು ವರ್ಣಿಸುತ್ತದೆ. ಭಕ್ತನೊಬ್ಬ ತನ್ನ ಆಪ್ತರಿಗೆ (ತಂಗಿಗೆ) ತನಗಾದ ದಿವ್ಯ ದರ್ಶನದ ಪುಳಕವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದಾನೆ.

ಸಾರಾಂಶ (Summary)
ಈ ಹಾಡಿನಲ್ಲಿ ದಾಸರು ತಮಗೆ ಬಿದ್ದ ಅದ್ಭುತ ಕನಸನ್ನು ವಿವರಿಸುತ್ತಿದ್ದಾರೆ. ತಿರುಪತಿಯ ತಿಮ್ಮಪ್ಪ ಅಥವಾ ಪುರಂದರವಿಠಲನು ಸರ್ವಾಲಂಕಾರ ಭೂಷಿತನಾಗಿ, ಗೆಜ್ಜೆಗಳ ನಾದದೊಂದಿಗೆ ಬಂದು ದರ್ಶನ ನೀಡಿದ ವೈಭವ ಇಲ್ಲಿದೆ. ಕೇವಲ ದರ್ಶನ ಮಾತ್ರವಲ್ಲದೆ, ದೇವತೆಗಳು ಮತ್ತು ಯತಿಗಳು ಆತನಿಗೆ ಸೇವೆ ಮಾಡುತ್ತಿರುವುದನ್ನು ಕಂಡು, ಅಂತಿಮವಾಗಿ ಆ ಪರಮಾತ್ಮನು ತನ್ನ ಹೃದಯ ಮಂಟಪದಲ್ಲೇ ನೆಲೆಸಿದ್ದಾನೆಂಬ ಆತ್ಮಾನುಭೂತಿಯನ್ನು ದಾಸರು ಇಲ್ಲಿ ವ್ಯಕ್ತಪಡಿಸಿದ್ದಾರೆ.

ಪದಗಳ ಅರ್ಥ 
ಪಲ್ಲವಿ

ಏನ ಹೇಳಲಿ ತಂಗಿ ತಿಮ್ಮಯ್ಯನಪಾದವನು ಕಂಡೆ |
ಕನಸುಕಂಡೆನ ಮನದಲಿ ಕಳವಳಗೊ೦ಡೆನೆ ||

ಅರ್ಥ: "ಎಲೈ ತಂಗಿಯೇ, ನಾನು ಆ ತಿಮ್ಮಪ್ಪನ ಪಾದಗಳನ್ನು ಕಂಡ ಆ ದಿವ್ಯ ಅನುಭವವನ್ನು ಏನೆಂದು ವರ್ಣಿಸಲಿ! ಕನಸಿನಲ್ಲಿ ಆತನ ದರ್ಶನ ಪಡೆದ ಕ್ಷಣ ನನ್ನ ಮನಸ್ಸು ಭಕ್ತಿ ಮತ್ತು ಆನಂದದ ಆವೇಶದಿಂದ ಕಳವಳಗೊಂಡಿತು (ಪರವಶವಾಯಿತು)."

ಚರಣ 1

ಪೊನ್ನದ ಕಡಗನಿಟ್ಟು ತಿಮ್ಮಯ್ಯ ತಾ |
ಪೋಲ್ವ ನಾಮವಇಟ್ಟು ಅ೦ದುಗೆ ಘಲುಗೆನ್ನುತ |
ಎನ ಮುಂದೆ ಬಂದು ನಿಂತಿದ್ದನಲ್ಲೇ ||

ಅರ್ಥ: ಚಿನ್ನದ ಕಡಗಗಳನ್ನು ಧರಿಸಿ, ಹಣೆಯ ಮೇಲೆ ಸುಂದರವಾದ ನಾಮವನ್ನು ತಳೆದು, ಕಾಲಿನ ಅಂದುಗೆಗಳು 'ಘಲು ಘಲು' ಎಂದು ಶಬ್ದ ಮಾಡುತ್ತಿರಲು ಆ ತಿಮ್ಮಪ್ಪನು ಸಾಕ್ಷಾತ್ ನನ್ನೆದುರೇ ಬಂದು ನಿಂತಿದ್ದನಲ್ಲಾ!

ಚರಣ 2

ಮಕರಕು೦ಡಲವನಿಟ್ಟು ತಿಮ್ಮಯ್ಯ ತಾ |
ಕಸ್ತೂರಿತಿಲಕವನಿಟ್ಟು ಗೆಜ್ಜೆ ಘಲುಗೆನುತ |
ಸ್ವಾಮಿ ತಾ ಬಂದು ನಿಂತಿದ್ದನಲ್ಲೇ ||

ಅರ್ಥ: ಕಿವಿಗಳಲ್ಲಿ ಮಕರ ಕುಂಡಲಗಳು ಹೊಳೆಯುತ್ತಿರಲು, ಹಣೆಯಲ್ಲಿ ಕಸ್ತೂರಿ ತಿಲಕದ ಘಮದೊಂದಿಗೆ, ಕಾಲ ಗೆಜ್ಜೆಗಳು ನಾದ ಮಾಡುತ್ತಿರಲು ಆ ಸ್ವಾಮಿಯು ಸುಂದರವಾಗಿ ಬಂದು ನನ್ನೆದುರು ನಿಂತನು.

ಚರಣ 3

ಮುತ್ತಿನ ಪಲ್ಲಕ್ಕಿ ಯತಿಗಳು |
ಹೊತ್ತು ನಿಂತಿದ್ದರಲ್ಲೇ ಛತ್ರಚಾಮರದಿಂದ |
ರಂಗಯ್ಯನ ಸೇವೆಯ ಮಾಡುವರೇ ||

ಅರ್ಥ: ಅಲ್ಲಿ ದೊಡ್ಡ ದೊಡ್ಡ ಯತಿಗಳು ಮುತ್ತಿನ ಪಲ್ಲಕ್ಕಿಯನ್ನು ಹೊತ್ತು ನಿಂತಿದ್ದಾರೆ. ಛತ್ರಿ ಮತ್ತು ಚಾಮರಗಳನ್ನು ಬೀಸುತ್ತಾ ಎಲ್ಲರೂ ಆ ರಂಗಯ್ಯನಿಗೆ ಅತ್ಯಂತ ಭಕ್ತಿಯಿಂದ ಸೇವೆಯನ್ನು ಮಾಡುತ್ತಿದ್ದಾರೆ.

ಚರಣ 4

ತಾಮರ ಕಮಲದಲಿ ಕೃಷ್ಣಯ್ಯ ತಾ |
ಬಂದು ನಿಂತಿದನಲ್ಲೇ ವಾಯು ಬೊಮ್ಮಾದಿಗಳು |
ರಂಗಯ್ಯನ ಸೇವೆಯ ಮಾಡುವರೇ ||

ಅರ್ಥ: ಕಮಲದ ಹೂವಿನ ಮೇಲೆ ಆ ಕೃಷ್ಣಯ್ಯನು ಬಂದು ನಿಂತಿದ್ದಾನೆ. ವಾಯುದೇವರು, ಬ್ರಹ್ಮದೇವ ಮೊದಲಾದ ಸಕಲ ದೇವತೆಗಳೂ ಆ ರಂಗಯ್ಯನ ಸೇವೆಯಲ್ಲಿ ನಿರತರಾಗಿದ್ದಾರೆ.

ಚರಣ 5

ನವರತ್ನ ಕೆತ್ತಿಸಿದ ಸ್ವಾಮಿ ಎನ್ನ |
ಹೃದಯಮ೦ಟಪದಲ್ಲಿ ಸರ್ವಾಭರಣ ದಿಂದ |
ಪುರಂದರವಿಠಲನ ಕೂಡಿದೇನೆ ||

ಅರ್ಥ: ನವರತ್ನಗಳಿಂದ ಅಲಂಕೃತನಾದ ಆ ಸ್ವಾಮಿಯು ಈಗ ಎಲ್ಲೋ ಹೊರಗಿಲ್ಲ; ಆತನು ಸರ್ವಾಭರಣ ಭೂಷಿತನಾಗಿ ನನ್ನದೇ 'ಹೃದಯ ಮಂಟಪ'ದಲ್ಲಿ ಬಂದು ನೆಲೆಸಿದ್ದಾನೆ. ಹೀಗೆ ನಾನು ನನ್ನ ಆರಾಧ್ಯ ದೈವ ಪುರಂದರವಿಠಲನನ್ನು ಅಂತರಂಗದಲ್ಲಿಯೇ ಸೇರಿದ್ದೇನೆ.
***

This famous composition by Sri Purandara Dasa is a beautiful example of a "Dream Vision" (Swapna Labdha). It describes a profound spiritual experience where the devotee sees the Lord in a dream, so vivid and detailed that it feels more real than the waking world.

Summary
The song is a joyful narration by the devotee to a close confidante (addressed as "Sister"). It details the magnificent appearance of Lord Timmaiah (Venkateshwara) as he appears in a dream. The poet describes the sounds of the Lord's anklets, his radiant ornaments, and the celestial hierarchy—Sages (Yatis), Wind God (Vayu), and Creator (Brahma)—all serving him. The poem concludes with a shift from an external vision to an internal realization: the Lord is now seated in the "mantapa of the heart."

Meaning 
Pallavi

Ena helali tangi Timmayyanapadavanu kande |
Kanasukandena manadali kalavalagon dene ||

Meaning: "O sister, how can I even describe it? I have seen the holy feet of Lord Timmaiah! I saw him in a dream, and my heart is overwhelmed with a mix of agitation and divine ecstasy from that vision."

Verse 1

Ponnada kadaganittu Timmayya ta |
Polva namavaittu anduge ghalugennuta |
Ena munde bandu nintiddanalle ||

Meaning: "Lord Timmaiah came and stood right in front of me! He was wearing golden bracelets (Kadaga) on his arms and a beautiful, matching Tilaka (Nama) on his forehead. As he moved, his silver anklets (Anduge) made a rhythmic 'ghalu-ghalu' sound."

Verse 2

Makarakundalavanittu Timmayya ta |
Kasturitilakavanittu gejje ghalugenuta |
Swami ta bandu nintiddanalle ||

Meaning: "He wore earrings shaped like mythical sea creatures (Makara Kundala) that shimmered as he stood there. With a fragrant musk mark (Kasturi Tilaka) on his brow and the small bells (Gejje) on his feet tinkling, the Master himself came to stand before me."

Verse 3

Muttina pallakki yatigalu |
Hottu nintiddaralle chatrachamaradinda |
Rangayyana seveya maduvare ||

Meaning: "I saw great Sages (Yatis) carrying a palanquin adorned with pearls. They stood there serving Lord Rangayya (Krishna/Vishnu), fanning him with the ceremonial whisk (Chamara) and holding the royal umbrella (Chatra) over him."

Verse 4

Tamara kamaladali Krishnayya ta |
Bandu nintidunalle Vayu Bommadigalu |
Rangayyana seveya maduvare ||

Meaning: "Lord Krishnayya stood majestically upon a red lotus flower. Even the powerful Wind God (Vayu) and the Creator (Brahma) were there, completely absorbed in the service of Lord Rangayya."

Verse 5

Navaratna kettisida swami enna |
Hridayamantapadalli sarvabharana dinda |
Purandara Vitthalana kudidene ||

Meaning: "The Lord, encrusted with the nine precious gems (Navaratna) and adorned with every possible ornament, has now entered the temple-pavilion (Mantapa) of my own heart. In this way, I have finally united with my Lord, Purandara Vitthala."
***


pallavi

kanasu kaNDene manadalle kaLavaLa koNDene

anupallavi

Enu heLasi tangi timmayyana pAdavanu kaNDe

caraNam 1

ponnada kaDaganiTTu timmaya tA pOlva nAmava iTTU
anduge ghalukennuta ena munde bandu nindiddanalle

caraNam 2

makara kuNDalavaniTTu timmaya tA kastUri tilakaniTTu
gejje ghulukenuta svAmi tA bandu ninda nindiddanalle

caraNam 3

muttina pallakki yatigaLu hottu nindiddaralle
chatra cAmaradinda rangayya utsava mUrutiya

caraNam 4

tAmara kamaladali krSNayya tA bandu nindiddanalle
vAyu bommAdigaLu rangayyana sEveya mADuvare

caraNam 5

navaratna kettisida svAmi enna hrdaya maNTapadalli
sarvAbharaNadinda purandara viTTalana kUDidEne
***

ಕನಸುಕಂಡೆನೆ ಮನದಲ್ಲಿ ಕಳವಳಗೊಂಡೆನೆ
ಏನು ಹೇಳಲಿ ತಂಗಿ ತಿಮ್ಮಯ್ಯನ ಪಾದವನು ಕಂಡೆ || ಪಲ್ಲವಿ ||

ಪೊನ್ನದ ಕಡಗನಿಟ್ಟು ತಿಮ್ಮಯ್ಯ ತಾ
ಪೋಲ್ವ ನಾಮವ ಇಟ್ಟು ಅಂದುಗೆ ಘಲುಗೆನ್ನುತ
ಎನ ಮುಂದೆ ಬಂದು ನಿಂತಿದ್ದನಲ್ಲೆ || ೧ ||

ಮಕರಕುಂಡಲವನಿಟ್ಟು ತಿಮ್ಮಯ್ಯ ತಾ
ಕಸ್ತೂರಿ ತಿಲಕವನಿಟ್ಟು ಗೆಜ್ಜೆ ಘಲುಗೆನುತ
ಸ್ವಾಮಿ ತಾ ಬಂದು ನಿಂತಿದ್ದನಲ್ಲೆ || ೨ ||

ಮುತ್ತಿನ ಪಲ್ಲಕ್ಕಿ ಯತಿಗಳು
ಹೊತ್ತು ನಿಂತಿದ್ದರಲ್ಲೆ ಛತ್ರ ಚಾಮರದಿಂದ
ರಂಗಯ್ಯನ ಉತ್ಸವ ಮೂರುತಿಯ || ೩ ||

ತಾಮರ ಕಮಲದಲಿ ಕೃಷ್ಣಯ್ಯ ತಾ
ಬಂದು ನಿಂತಿದ್ದನಲ್ಲೆ ವಾಯು ಬೊಮ್ಮಾದಿಗಳು
ರಂಗಯ್ಯನ ಸೇವೆಯ ಮಾಡುವರೆ || ೪ ||

ನವರತ್ನ ಕೆತ್ತಿಸಿದ ಸ್ವಾಮಿ ಎನ್ನ
ಹೃದಯಮಂಟಪದಲ್ಲಿ ಸರ್ವಾಭರಣದಿಂದ

ಪುರಂದರವಿಠಲನ ಕೂಡಿದೇನೆ || ೫ ||
*******

ರಾಗ ದ್ವಿಜಾನಂತಿ/ಅಟ್ಟ ತಾಳ

ಕನಸುಕಂಡೆನೆ ಮನದಲ್ಲಿ ಕಳವಳಗೊಂಡೆನೆ
ಏನು ಹೇಳಲಿ ತಂಗಿ ತಿಮ್ಮಯ್ಯನ ಪಾದವನು ಕಂಡೆ || ಪಲ್ಲವಿ ||

ಪೊನ್ನದ ಕಡಗನಿಟ್ಟು ತಿಮ್ಮಯ್ಯ ತಾ
ಪೋಲ್ವ ನಾಮವ ಇಟ್ಟು ಅಂದುಗೆ ಘಲುಗೆನ್ನುತ
ಎನ ಮುಂದೆ ಬಂದು ನಿಂತಿದ್ದನಲ್ಲೆ || ೧ ||

ಮಕರಕುಂಡಲವನಿಟ್ಟು ತಿಮ್ಮಯ್ಯ ತಾ
ಕಸ್ತೂರಿ ತಿಲಕವನಿಟ್ಟು ಗೆಜ್ಜೆ ಘಲುಗೆನುತ
ಸ್ವಾಮಿ ತಾ ಬಂದು ನಿಂತಿದ್ದನಲ್ಲೆ || ೨ ||

ಮುತ್ತಿನ ಪಲ್ಲಕ್ಕಿ ಯತಿಗಳು
ಹೊತ್ತು ನಿಂತಿದ್ದರಲ್ಲೆ ಛತ್ರ ಚಾಮರದಿಂದ
ರಂಗಯ್ಯನ ಉತ್ಸವ ಮೂರುತಿಯ || ೩ ||

ತಾಮರ ಕಮಲದಲಿ ಕೃಷ್ಣಯ್ಯ ತಾ
ಬಂದು ನಿಂತಿದ್ದನಲ್ಲೆ ವಾಯು ಬೊಮ್ಮಾದಿಗಳು
ರಂಗಯ್ಯನ ಸೇವೆಯ ಮಾಡುವರೆ || ೪ ||

ನವರತ್ನ ಕೆತ್ತಿಸಿದ ಸ್ವಾಮಿ ಎನ್ನ
ಹೃದಯಮಂಟಪದಲ್ಲಿ ಸರ್ವಾಭರಣದಿಂದ
ಪುರಂದರವಿಠಲನ ಕೂಡಿದೇನೆ || ೫ ||

ಪೊನ್ನದ - ಹೊನ್ನಿನ, ಬಂಗಾರದ.
ಪೋಲ್ವ - ಪೊಳೆವ, ಹೊಳೆಯುವ.
ಬೊಮ್ಮಾದಿಗಳು - ಬ್ರಹ್ಮನೇ ಮೊದಲಾದ ದೇವತೆಗಳು.

[ಪುರಂದರ ಸಾಹಿತ್ಯ ದರ್ಶನ - ಭಾಗ ೧]

***

Kanasukandene manadalli kalavalagondene
Enu helali tangi timmayyana padavanu kande || pallavi ||

Ponnada kadaganittu timmayya ta
Polva namava ittu anduge Galugennuta
Ena munde bandu nintiddanalle || 1 ||

Makarakundalavanittu timmayya ta
Kasturi tilakavanittu gejje Galugenuta
Svami ta bandu nintiddanalle || 2 ||

Muttina pallakki yatigalu
Hottu nintiddaralle Catra camaradinda
Rangayyana utsava murutiya || 3 ||

Tamara kamaladali krushnayya ta
Bandu nintiddanalle vayu bommadigalu
Rangayyana seveya maduvare || 4 ||

Navaratna kettisida svami enna
Hrudayamantapadalli sarvabaranadinda
Purandaravithalana kudidene || 5 ||
***


No comments:

Post a Comment