by ಪ್ರಸನ್ನವೆಂಕಟದಾಸರು
ರಾಗ - : ತಾಳ -
ಚಿಣ್ಣರೊಡನಾಡನಡೆದ ಮುದ್ದುರಂಗ ಮುದ್ದು ಕೃಷ್ಣ ll ಪ ll
ಇಟ್ಟು ಹಣೆಯೊಳು ಉಗುರು ನಾಮವ ಗೋವ
ಗಟ್ಟಿಗೆಯನು ಕರದೊಳು ಪಿಡಿದು
ಪುಟ್ಟ ಕಂಬಳಿ ಹೊದ್ದು ಪದಕೆ ಪಾದುಕೆ
ಮೆಟ್ಟಿ ಅಣ್ಣ ಬಲರಾಮ ನಡೆಯೆಂದು ll 1 ll
ಆಡಲೊಲ್ಲೆನೆಂಬ ಮಕ್ಕಳ ಮನ್ನಿಸಿ
ಕೂಡಿಕೊಂಡು ಅಣ್ಣ ತಮ್ಮನೆಂದು
ಹಾಡುತ ಕುಣಿದು ಚಪ್ಪಾಳೆ ಹೊಯಿದಾಡುತ
ಓಡ್ಯಾಡಿ ಅಮ್ಮನ ಮಾತ ಕೇಳದೆ ಕೃಷ್ಣ ll 2 ll
ಚಿನ್ನಿ ಪೊಂಬಗರ್ಚೆಂಡು ಗುಮ್ಮ ಗುಸುಕು ಹಬ್ಬೆ
ಅಣ್ಣೆಕಲ್ಲು ಹಲ್ಲೆ ಗಜುಗ ಗೋಲಿ
ಕಣ್ಣುಮುಚ್ಚಾಲೆ ಮರನೇರಾಟ ನೀರಾಟ
ಸಣ್ಣರೊಳಾಡಿ ಸೋಲಿಪೆನೆಂಬ ತವಕದಿ ll 3 ll
ರಾಜಿಪ ರಾಜಬೀದಿಲಿ ನಿಂದು ನೋಡುವ
ರಾಜಮುಖಿಯರೊಳು ಸೆಣಸ್ಯಾಡುತ
ರಾಜಕುಲಾಗ್ರಣಿ ಸರ್ವಭೂಷಣದಿ ವಿ
ರಾಜಿತನಾಗಿ ಗೋಳಿಡುತ ಮುರಾರಿ ll 4 ll
ಜಗವ ಪುಟ್ಟಿಸಿ ನಲಿದಾಡುವಾಟವು ತ
ನಗೆ ಸಾಲದೆಂದು ಆವಹಳ್ಳಿಲಿ
ಬಗೆ ಬಗೆ ಲೀಲೆಯ ತೋರಿ ಗೋಗಾವರ್ಗೆ
ಸುಗತಿನೀವೇನೆಂದು ಪ್ರಸನ್ವೆಂಕಟ ಕೃಷ್ಣ ll 5 ll***
ಚಿಣ್ಣರೊಡನಾಡನಡೆದ ಮುದ್ದುರಂಗ ಮುದ್ದು ಕೃಷ್ಣ ಪ.
ಇಟ್ಟು ಹಣೆಯೊಳು ಉಗುರು ನಾಮವ ಗೋವಗಟ್ಟಿಗೆಯನು ಕರದೊಳು ಪಿಡಿದುಪುಟ್ಟ ಕಂಬಳಿ ಹೊದ್ದು ಪದಕೆ ಪಾದುಕೆಮೆಟ್ಟಿ ಅಣ್ಣ ಬಲರಾಮ ನಡೆಯೆಂದು 1
ಆಡಲೊಲ್ಲೆನೆಂಬ ಮಕ್ಕಳ ಮನ್ನಿಸಿಕೂಡಿಕೊಂಡು ಅಣ್ಣ ತಮ್ಮನೆಂದುಹಾಡುತ ಕುಣಿದು ಚಪ್ಪಾಳೆ ಹೊಯಿದಾಡುತಓಡ್ಯಾಡಿ ಅಮ್ಮನ ಮಾತ ಕೇಳದೆ ಕೃಷ್ಣ 2
ಚಿಣ್ಣಿ ಪೊಂಬಗರ್ಚೆಂಡು ಗುಮ್ಮ ಗುಸಕು ಹಬ್ಬೆಅಣ್ಣೆಕಲ್ಲು ಹÀಲ್ಲೆ ಗಜಗ ಗೋಲಿಕಣ್ಣುಮುಚ್ಚಾಲೆ ಮರನೇರಾಟ ನೀರಾಟಸಣ್ಣರೊಳಾಡಿ ಸೋಲಿಪೆನೆಂಬ ತವಕದಿ 3
ರಾಜಿಪ ರಾಜಬೀದಿಲಿನಿಂದುನೋಡುವರಾಜಮುಖಿಯರೊಳು ಸೆಣಸ್ಯಾಡುತರಾಜಕುಲಾಗ್ರಣಿ ಸರ್ವಭೂಷಣದಿ ವಿರಾಜಿತನಾಗಿ ಗೋಳಿಡುತ ಮುರಾರಿ 4
ಜಗವ ಪುಟ್ಟಿಸಿ ನಲಿದಾಡುವಾಟವು ತನಗೆ ಸಾಲದೆಂದು ಆವಹಳ್ಳಿಲಿಬಗೆ ಬಗೆ ಲೀಲೆಯ ತೋರಿ ಗೋಗಾವರ್ಗೆಸುಗತಿನೀವೆನೆಂದು ಪ್ರಸನ್ವೆಂಕಟ ಕೃಷ್ಣ 5
*******

No comments:
Post a Comment