Monday, 11 November 2019

ಕರುಣಾಕರ ನಿನ್ನ ಕರವೊಡ್ಡಿ ಬೇಡುವೆ ankita govinda

by ಗೋವಿಂದದಾಸ
ಕರುಣಾಕರ ನಿನ್ನ | ಕರವೊಡ್ಡಿ ಬೇಡುವೆ ||ಕರುಣಿಸು ವರವನ್ನು | ಖರ ಸಂಹಾರ 1

ಕರಿರಾಜನು ನಿನ್ನ | ಕರಗುತ ಭಜಿಸಲು ||ಖಗವಾಹನನಾಗಿ | ಕರುಣದೀ ಪೊರೆದೆ 2

ಕಡುದಾರಿದ್ರನು | ಕಷ್ಟದಿ ಸ್ಮರಿಸಲು ||ಕರುಣದಿ ಸುಧಾಮಗೆ | ಕರೆದಿತ್ತೆ ವರವ 3

ಕಾಲನ ದೂತರು | ಕಾಡುವ ವೇಳ್ಯದಿ ||ಕಂದನ ಕರೆಯೆಗೋ | ವಿಂದನೆ ಪೊರದೇ 4
*******

No comments:

Post a Comment