Friday, 31 December 2021

felicitation by haridasa sampada

haridasa sampada March 20, 2026


instagram post April 5, 2026






click--> INVITATION by Haridasa Sampada 25th year celebraions

speech draft

shree ಗುರುಭ್ಯೋ ನಮಃ  harihi om
 ಶ್ರೀ ಮಾಧವ ತೀರ್ಥ ಮಠದ ಪೀಠಾಧಿಪತಿ ಗಳಾಗಿರುವ ಶ್ರೀ ವಿದ್ಯಾವಲ್ಲಭ ಮಾಧವತೀರ್ಥ ಶ್ರೀಪಾದಂಗಳವರ ಪಾದ ಕಮಲಕ್ಕೆ ಭಕ್ತಿಪೂರ್ವಕ ನಮನ ಸಲ್ಲಿಸುತ್ತಾ, ಮತ್ತು ವೇದಿಕೆಯ ಮೇಲೆ  ಆಸೀನರಾಗಿರುವ ಸಮಸ್ತ  ಹರಿದಾಸ ಧ್ರುವತಾರೆಗಳಿಗೆ  ನನ್ನ  ವಂದನೆ ಅರ್ಪಿಸುತ್ತಾ.   ಎರಡು ಮಾತುಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ.

ಮೋಕ್ಷ  ಪಡೆಯಲು ಇರುವ ನವ ವಿಧ ಭಕ್ತಿಗಳಲ್ಲಿ ಒಂದು ಕೀರ್ತನ ಮುಖಾಂತರ. ಹಾಗಾಗಿ ಈ ಕಾರಣದಿಂದ ಹರಿದಾಸ ಸಾಹಿತ್ಯದ ಉಗಮ ಆಗಿರಬೇಕು.  

ಕನ್ನಡ ಸಾಹಿತ್ಯಕ್ಕೆ ದಾಖಲೆಗಳ ಪ್ರಕಾರ ಸುಮಾರು ೨೫೦೦ ಸಾವಿರ ವರ್ಷಗಳ ಇತಿಹಾಸ ಇದೆ. ಹಾಗೆಯೇ ಹರಿದಾಸ ಸಾಹಿತ್ಯಕ್ಕೆ ೭೦೦ ವರ್ಷಗಳ ಇತಿಹಾಸ ಇದೆ. 
ಹರಿದಾಸ ಸಾಹಿತ್ಯದಲ್ಲಿ  ಎಲ್ಲರೂ ನೆನಪಿಸಿಕೊಳ್ಳಬೇಕಾದ ಕೆಲವು ಮಹಾನ್ ವ್ಯಕ್ತಿಗಳನ್ನು ನಾವು ಸ್ಮರಿಸಬೇಕು. ದಾಖಲೆಗಳ ಪ್ರಕಾರ ಅಂಕಿತ ಬದ್ಧ ದೇವರನಾಮಗಳ ಮೇರು ಕರ್ತೃ ಶ್ರೀ ನರಹರಿ ತೀರ್ಥರು. ಮಧ್ವಾಚಾರ್ಯರ ಪ್ರಥಮ ಶಿಷ್ಯರು.  ೧೩೨೪ ರಿಂದ  ೧೩೩೩ ರ ವರೆಗೆ ಇವರು  ಮಧ್ವ  ಮಠದ ಪೀಠವನ್ನು ಅಲಂಕರಿಸಿದ್ದರು. ಇವರ ವೃಂದಾವನ ಹಂಪಿಯಲ್ಲಿ ಇದೆ.

ನಂತರ ಬಂದವರು ಶ್ರೀ ಶ್ರೀಪಾದರಾಜರು.  ಶ್ರೀಪಾದರಾಜರು ಹರಿದಾಸ ಸಾಹಿತ್ಯವನ್ನು ಉಚ್ಛ್ರಾಯ ಸ್ಥಿತಿಗೆ ಕೊಂಡೊಯದಂಥ ಮಹಾನ್ ಯತಿಗಳು.  ೯೮ ವರ್ಷ ಬದುಕಿ ೧೫೦೪ ರಲ್ಲಿ  ವೃಂದಾವನಸ್ಥರಾದರು. ಇವರೂ ಕೂಡ ಮಧ್ವ ಮಠದ ಪೀಠಾಧಿಪತಿ ಆಗಿದ್ದವರು.  

ಇವರ ಮಾರ್ಗದಶನದಲ್ಲಿ    ವ್ಯಾಸರಾಜರು, ಪುರಂದರದಾಸರು,    ವಾದಿರಾಜರು, ಮುಂತಾದವರು ಹರಿದಾಸ ಸಾಹಿತ್ಯವನ್ನು ಅತ್ಯಂತ ಎತ್ತರಕ್ಕೆ ಕೊಂಡೊಯ್ದರು.  

ಕನಕದಾಸರು ಕೂಡ ಇವರ ಕಾಲದವರು.

ನಂತರ ೧೮ನೆಯ ದಶಕದಲ್ಲಿ  ಪ್ರಸನ್ನವೆಂಕಟ  ದಾಸರು, ವಿಜಯದಾಸರು ಮತ್ತು ಜಗನ್ನಾಥ ದಾಸರು ತಮ್ಮ ವಿಭಿನ್ನ ಶೈಲಿಯಲ್ಲಿ ದೇವರನಾಮಗಳನ್ನು ರಚಿಸಿ   ಮತ್ತೂ ಉತ್ತುಂಗ ಸ್ಥಿತಿಗೆ ಕೊಂಡೊಯ್ದರು.

೩೦೦ ರಿಂದ  ೫೦೦ ಕ್ಕೂ ಹೆಚ್ಚು ವರ್ಷಗಳ ನಂತರವೂ ಹರಿದಾಸ ಸಾಹಿತ್ಯ ನಮ್ಮೆಲ್ಲರ ಮನೆ ಮಾತಾಗಿದೆ. 

ಇಂದು ಕನ್ನಡಿಗರು, ದಕ್ಷಿಣ ಭಾರತದವರು  ಮತ್ತು ಹರಿದಾಸ ಭಕ್ತರು ಕೆಲಸದ ನಿಮಿತ್ತ  ವಿಶ್ವದ ಎಲ್ಲ ಕಡೆ ವಾಸವಾಗಿದ್ದಾರೆ.   

ಇಂದಿನ ಅಂತರ್ಜಾಲದ ಯುಗದಲ್ಲಿ ಅವರೆಲ್ಲರಿಗೂ ಹಾಗೂ ಮುಂದೆ ಬರುವ   ಪೀಳಿಗೆಗಳಿಗೆ ಶಾಶ್ವತವಾಗಿ ಲಭ್ಯವಾಗಲೆಂಬ ಉದ್ದೇಶದಿಂದ ನಾನು    raocollectionssongs.blogspot.com ಎಂಬ ಬ್ಲಾಗ್ ಮೂಲಕ ದೇವರನಾಮಗಳನ್ನು ಸಂಗ್ರಹಿಸಿ ಪ್ರಕಟಿಸಿದ್ದೇನೆ. 

ದಿನ ಕಳೆದಂತೆ  ವಿಶ್ವದ ಮೂಲೆ ಮೂಲೆಗಳಿಂದ ವೀಕ್ಷಣೆ ಹೆಚ್ಚುತ್ತಿರುವುದು ನನ್ನ ಉದ್ದೇಶ ಸಫಲವಾಗುತ್ತಿದೆ ಎಂಬ ತೃಪ್ತಿ ನೀಡಿದೆ. 

 ಹಾಗಾಯೇ ಹರಿದಾಸರ ಮತ್ತು  ಯತಿಗಳ  ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಿ    ‘madhwayati.blogspot.com’ ಮೂಲಕ   200ಕ್ಕೂ ಹೆಚ್ಚು ಹರಿದಾಸರ ಜೀವನ ಚರಿತ್ರೆ ಮತ್ತು ಆರಾಧನಾ ಕಾಲಗಳ ಮಾಹಿತಿಯನ್ನು ಸಂರಕ್ಷಿಸಿ ಇಟ್ಟಿದ್ದೇನೆ.  

ಇಂದು ಇಲ್ಲಿ ಸನ್ಮಾನಿತರಾಗುತ್ತಿರುವ ಇತರ ಗಣ್ಯರು ಗಾಯನ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಅಪ್ರತಿಮ ಪ್ರತಿಭೆಯ ಮೂಲಕ ಜನರ ಮನಸ್ಸಿನಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದಾರೆ.  ಇಂಗ್ಲಿಷಿನಲ್ಲಿ ‘Odd man’ ಎಂಬ ಮಾತಿದೆ; ಸಾಧಕರ ಈ ಸಮೂಹದಲ್ಲಿ ನಾನು ಸ್ವಲ್ಪ ಭಿನ್ನವಾಗಿ ಕಂಡರೂ, ನನ್ನ ಸೇವೆ ಯನ್ನು ಪರಿಗಣಿಸಿ ಎಲೆ ಮರೆಯ ಕಾಯಂತಿದ್ದ  ನನ್ನನ್ನು ಎಲೆ ಸರಿಸಿ ಕಾಯಿ ಹುಡುಕಿ  ಇವ  ‘Odd man’ ಅಲ್ಲ ‘Useful man’  ಅಂತ  ಗೌರವಿಸಿದ ‘ಹರಿದಾಸ ಸಂಪದ’ ಟ್ರಸ್ಟ್ ನ  ಎಲ್ಲಾ ಪದಾಧಿಕಾರಿಗಳಿಗೆ ನನ್ನ ಹೃತ್ಪೂರ್ವಕ ವಂದನೆಗಳು.

ಹರಿದಾಸ ಸಂಪದ ಟ್ರಸ್ಟ್ , ತನ್ನ ವಜ್ರ ಮಹೋತ್ಸವ ಹಾಗೂ ಶತಮಾನೋತ್ಸವ ಕೂಡ ನಡೆಸಿ ಚಿರಂಜೀವಿಯಾಗಿ ಉಳಿದು ಜನರ ಸೇವೆ ಸಲ್ಲಿಸಲಿ ಎಂದು ಹಾರೈಸುತ್ತೇನೆ, 

ಈ ಅವಕಾಶಕ್ಕಾಗಿ ವಂದಿಸುತ್ತಾ ನನ್ನ ಮಾತುಗಳನ್ನು ಮುಗಿಸುತ್ತೇನೆ. ಧನ್ಯವಾದಗಳು.

ಜೈ ಶ್ರೀರಾಮ್ 
ಹರೇ ಶ್ರೀನಿವಾಸ 
***

ಒಂದು ವಿಷಯ. ಹೇಗೂ ಈಗ chat GPT, Meta, Gemini ಬಂದಿದೆ. ಎನ್ ಕೇಳಿದ್ರೂ ನಿಮಗೆ ಹುಡುಕಿ ದೇವರನಾಮದ ಸಾಹಿತ್ಯ ಕೊಡುತ್ತೆ. ಆದ್ರೆ ನೆನಪಿರಲಿ. ಈ AI ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇದೆಯಲ್ಲ ಅದು ಹುಡುಕಿ ನೋಡೋದು ಕೂಡ ಇಂಟರ್ನೆಟ  ನಲ್ಲಿ ಯಾರಾದರೂ ಹಾಕಿದ್ದರೆ ಮಾತ್ರ. ಹಾಗಾಗಿ ಅದು ಕೂಡ ನಾನು ಸಂಗ್ರಹಿಸಿರುವುದನ್ನೇ ನೋಡಿ ನಿಮಗೆ ಕೊಡುತ್ತೆ.   

ಈಗ ಫ್ರೀ ಇದೆ. ನಂತರ ಪ್ರತಿ ತಿಂಗಳೂ ಹಣ ವಸೂಲಿ ಮಾಡುತ್ತಾರೆ.  ನನ್ನ ಬ್ಲಾಗ್ ಸುಲಭವಾಗಿ ಎಲ್ಲರಿಗೂ ಉಪಯೋಗ ಆಗುವಂತೆ ಇದೆ. ಬಿಲ್ ಕುಲ್ ಫ್ರೀ. ಮತ್ತು ಜಾಹೀರಾತು ಮುಕ್ತ ಇದೆ. ನೀವೆಲ್ಲ ಸದುಪಯೋಗ ಪಡೆದುಕೊಳ್ಳಿ ಅಂತ ಕೇಳಿಕೊಳ್ಳುತ್ತೇನೆ.
***

ತಮ್ಮ ಮಾತಿನ ಚಾತುರ್ಯ ದಿಂದ ಜನ ಮನ ಗೆದ್ದ  ಹರಿದಾಸ ಸಾಹಿತ್ಯದ ದಿಗ್ಗಜರಾದ ವಿದ್ಯಾ ವಾಚಸ್ಪತಿ  ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಅವರು, ಸುಶ್ರಾವ್ಯ ಕಂಠದ ಮುಖಾಂತರ ಜನಮನ ಗೆದ್ದಂತಹ ಸಂಗೀತ ಸಾಮ್ರಾಜ್ಯದ ದಿಗ್ಗಜರು ಅನೇಕ ಗಣ್ಯ ವ್ಯಕ್ತಿಗಳು ಇಲ್ಲಿದ್ದಾರೆ. 
 ಪುರಂದರದಾಸರ   ಪಿಳ್ಳಂಗೋವಿಯ ಚೆಲ್ವ ಕೃಷ್ಣನ ಎಲ್ಲಿ ನೋಡಿದಿರಿ ಹಾಡು ಕೇಳಿದ ತಕ್ಷಣ ಕಣ್ಣ ಮುಂದೆ ಬರುವರು ಡಾಕ್ಟರ್ ವಿದ್ಯಾಭೂಷಣ, ೫೦ ವರ್ಷದ ಹಿಂದೆಯೇ ವಾದಿರಾಜರ  ಒಂದು ಬಾರಿ ಸ್ಮರಣೆ ಸಾಲದೇ ಹಾಡಿನ ಮುಖಾಂತರ ಪ್ರಖ್ಯಾತರಾಗಿದ್ದ  ಪಂಡಿತ ವೆಂಕಟೇಶ್ ರವರು, ಕನಕದಾಸರ  ಏಸು ಕಾಯಂಗಳ ಕಳೆದು ಎಂಬತ್ನಾಲ್ಕು ಲಕ್ಷ ಜೀವರಾಶಿಯನ್ನು ದಾಟಿ ಬಂದ ಈ ಶರೀರ  ಮುಖಾಂತರ ನಮ್ಮೆಲ್ಲರ ಮನ ಗೆದ್ದ ಶ್ರೀ ಪುತ್ತೂರು ನರಸಿಂಹ ನಾಯಕ್ ರವರು, ವಿಜಯದಾಸರ ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು ಮನ್ನಿಸುವರೊ  ಮಹರಾಯ ಹೇಳುತ್ತಾ ಜನರ ಮನ ಗೆದ್ದ ಶ್ರೀ ರಾಯಚೂರು  ಶೇಷಗಿರಿದಾಸ್ ರವರು, ಹಾಗೇನೇ ಗೋಪಾಲದಾಸರ ವಾರಿಜಲಯಪತೆ ವಾರಿಜನಾಭನೆ ವಾರಿಜಭವಪಿತ ವಾರಿಜನೇತ್ರನೆ ದೇವರನಾಮ ಅತ್ಯಂತ ಜನಪ್ರಿಯ ಗೊಳಿಸಿದಂತಹ  ಶ್ರೀ  ಮೈಸೂರು ರಾಮಚಂದ್ರಾಚಾರ್  ಅವರಂತಹ ಮಹಾನ್ ಸಾಧಕರ ಜೊತೆಯಲ್ಲಿ ನಾನು ಸನ್ಮಾನ ಸ್ವೀಕರಿಸುತ್ತಿರುವುದು ನನ್ನ ಪಾಲಿನ ಮಹತ್ತರದ ಸೌಭಾಗ್ಯ. 

ಇವರ ಹಾಡುಗಳನ್ನು  ಕೇಳಿದ ನಂತರ ನಮ್ಮೆಲ್ಲರ  ಕಿವಿಗಳಲ್ಲಿ ಆ ನಾದದ ಗುಂಗು ಸದಾ ಕಾಲ ಮನೆಮಾಡಿರುತ್ತದೆ.
***


received March 28, 2026 




Prerana shared in WA group👇👇








Chaitra shared in WA group👇👇

chai friends



















































***
ಶ್ರೀ ಸುರೇಶ್ ಹುಲಿಕುಂಟೆ ರಾವ್ ಅವರ ಪರಿಚಯ

ನಮ್ಮ ಸಾಂಸ್ಕೃತಿಕ ನಗರಿ ಮೈಸೂರಿನ ಹೆಮ್ಮೆಯ ಪುತ್ರರಾದ ಶ್ರೀ ಸುರೇಶ್ ಹುಲಿಕುಂಟಿ ರಾವ್ ಅವರನ್ನು ಪರಿಚಯಿಸುವುದು ನಮಗೆ ಹೆಮ್ಮೆಯ ವಿಷಯ. ಮೂಲತಃ ಮೈಸೂರಿನವರಾದ ಇವರು, 2007 ರಿಂದ ಮೈಸೂರಿನಲ್ಲಿಯೇ ಕಾಯಂ ನಿವಾಸಿಯಾಗಿದ್ದಾರೆ.  

ಸುರೇಶ್ ಅವರ ಜೀವನವು ವೃತ್ತಿಪರ ದಕ್ಷತೆ ಮತ್ತು ಅಧ್ಯಾತ್ಮದ ಅನ್ವೇಷಣೆಯ ಒಂದು ಅಪೂರ್ವ ಸಂಗಮವಾಗಿದೆ. ಇವರು ಪರಮ ಪೂಜ್ಯ ಉತ್ತರಾದಿ ಮಠದ ಪೀಠಾಧಿಪತಿಗಳಾಗಿದ್ದ ಶ್ರೀ ಸತ್ಯವೀರ ತೀರ್ಥರು, ಶ್ರೀ ಸತ್ಯಧೀರ ತೀರ್ಥರು ಹಾಗೂ ಜ್ಞಾನನಿಧಿಗಳಾದ ಶ್ರೀ ಸತ್ಯಧ್ಯಾನ ತೀರ್ಥರ ಪರಂಪರೆಯ ಕೊರಳಹಳ್ಳಿ ಕುಟುಂಬದ ಕುಡಿಗಳು ಎಂಬುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. 

ವಾಣಿಜ್ಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ C.A.I.I.B ಪದವಿ ಪಡೆದ ಇವರು, ಕಾರ್ಪೊರೇಷನ್ ಬ್ಯಾಂಕ್‌ನಲ್ಲಿ ಸುಮಾರು ಮೂವತ್ತು ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ, 2007ರಲ್ಲಿ ಸೀನಿಯರ್ ಮ್ಯಾನೇಜರ್ ಆಗಿದ್ದಾಗ ಸ್ವಯಂ ನಿವೃತ್ತಿ ಪಡೆದರು.

ಭಾರತದಲ್ಲಿ 2017ರ ಸುಮಾರಿಗೆ ಸ್ಮಾರ್ಟ್‌ಫೋನ್‌ಗಳ ಬಳಕೆ ಕ್ರಾಂತಿಕಾರಕವಾಗಿ ಹೆಚ್ಚಾದಾಗ, ಆಧುನಿಕ ತಂತ್ರಜ್ಞಾನದ ಮೂಲಕ ನಮ್ಮ ಸನಾತನ ಧರ್ಮದ ವಿಚಾರಧಾರೆಗಳನ್ನು ಮತ್ತು ಅಂಕಿತಬದ್ಧ ದೇವರನಾಮಗಳನ್ನು ಡಿಜಿಟಲ್ ಮಾಧ್ಯಮದಲ್ಲಿ ಅಳವಡಿಸಿ, ಜಗತ್ತಿನ ಯಾವುದೇ ಮೂಲೆಯಲ್ಲಿರುವ ಹಿಂದೂ ಬಾಂಧವರಿಗೂ ಅವು ಸುಲಭವಾಗಿ ಲಭ್ಯವಾಗುವಂತೆ ಮಾಡಬೇಕೆಂಬ ಅವರ ಸಂಕಲ್ಪದ ಫಲವಾಗಿಯೇ ಈ ಮೂರು ಬ್ಲಾಗ್‌ಗಳು ಜನ್ಮತಾಳಿದವು.

ಅವರ ‘raocollectionssongs.blogspot.com DEVARANAMA’ ಎಂಬ ತಾಣವು ಇಂದು ಹರಿದಾಸ ಸಾಹಿತ್ಯದ ಒಂದು ಬೃಹತ್ ಡಿಜಿಟಲ್ ಭಂಡಾರವಾಗಿದೆ. ಇದರಲ್ಲಿ ಸುಮಾರು 13,000 ಅಂಕಿತ ಬದ್ಧ ದೇವರನಾಮಗಳು ಹಾಗೂ 500ಕ್ಕೂ ಹೆಚ್ಚು ಸುಳಾದಿಗಳು ಸೇರಿದಂತೆ 4,000ಕ್ಕೂ ಅಧಿಕ ಆಡಿಯೋಗಳಿವೆ. ದಿನನಿತ್ಯ 3,000ಕ್ಕೂ ಅಧಿಕ ಹಾಗೂ ವಾರಾಂತ್ಯದಲ್ಲಿ ಸುಮಾರು 5,000ಕ್ಕೂ ಹೆಚ್ಚು ಸಂಗೀತಾಭಿಮಾನಿಗಳು ಈ ತಾಣದ ಪ್ರಯೋಜನ ಪಡೆಯುತ್ತಿರುವುದು ಇವರ ನಿರಂತರ ‘ಜ್ಞಾನ ದಾಸೋಹ’ಕ್ಕೆ ಸಾಕ್ಷಿಯಾಗಿದೆ.

ಇದರ ಜೊತೆಗೆ ‘madhwayati.blogspot.com’ ಮೂಲಕ 800ಕ್ಕೂ ಹೆಚ್ಚು ಮಧ್ವ ಯತಿಗಳ ಹಾಗೂ 200ಕ್ಕೂ ಹೆಚ್ಚು ಹರಿದಾಸರ ಜೀವನ ಚರಿತ್ರೆ ಮತ್ತು ಆರಾಧನಾ ಕಾಲಗಳ ಮಾಹಿತಿಯನ್ನು ಸಂರಕ್ಷಿಸಿದ್ದಾರೆ. 

ಇನ್ನು ‘raocollections.blogspot.com SANATANA CUSTOMS’ ಬ್ಲಾಗ್ ಮೂಲಕ ಸನಾತನ ಧರ್ಮದ ಹಬ್ಬ-ಹರಿದಿನಗಳ ಬಗ್ಗೆ ದೀರ್ಘ ಮಾಹಿತಿ ಹಾಗೂ ಹಿಂದೂ ಧರ್ಮದ ಆಚರಣೆ ವಿಧಾನ,  ಆಚಾರ-ವಿಚಾರಗಳನ್ನು ಜನಸಾಮಾನ್ಯರಿಗೆ ತಲುಪಿಸುತ್ತಿದ್ದಾರೆ. 

ಪತ್ನಿ  ಶ್ರೀಮತಿ ಗಾಯತ್ರಿ ಅವರ ಸತತ   ಬೆಂಬಲದೊಂದಿಗೆ ಸುರೇಶ್ ಅವರು ಈ ಸೇವೆಯನ್ನು ಮುಂದುವರಿಸುತ್ತಿದ್ದಾರೆ. ಇವರಿಗೆ ಇಬ್ಬರು ಪುತ್ರಿಯರು ಮತ್ತು ನಾಲ್ಕು ಮೊಮ್ಮಕ್ಕಳು. ಇವರ  ಪುತ್ರಿಯರು    ಅಮೆರಿಕದಲ್ಲಿ ಅನೇಕ  ಕಾರ್ಯಕ್ರಮಗಳಲ್ಲಿ ವಿಶೇಷ ಆಸಕ್ತಿ ವಹಿಸಿ, ಸ್ನೇಹಿತರಿಗೆಲ್ಲ ದೇವರನಾಮಗಳನ್ನು ಕಲಿಸಿ ದೇವರ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 

ಹರಿದಾಸ ಸಾಹಿತ್ಯದ ಈ ಅಮೃತವು ಮುಂದಿನ ಪೀಳಿಗೆಗಳ ಪ್ರತಿಯೊಬ್ಬ ಭಕ್ತನಿಗೂ ಅವರ ಬೆರಳ ತುದಿಯಲ್ಲಿ ಸದಾ ಲಭ್ಯವಿರುವಂತೆ ಹಾಗೂ ಚೈತನ್ಯದಾಯಕವಾಗಿರುವಂತೆ ಇವರು ಖಚಿತಪಡಿಸಿದ್ದಾರೆ.

**


It is a matter of great pride for us to introduce Shri Suresh Hulikunti Rao, from our cultural capital, Mysuru. A native of Mysuru, he has been a permanent resident of the city since 2007.

His life is a rare confluence of professional excellence and spiritual pursuit. We take immense pride in the fact that he is a scion of the Koralahalli family, a lineage blessed by the tradition of the pontiffs of the Paramapujya Uttaradi Matha—specifically Shri Satyaveera Tirtha, Shri Satyadhira Tirtha, and the treasure of knowledge, Shri Satyadhyana Tirtha.

Holding a Master’s degree in Commerce and the professional C.A.I.I.B. qualification in Banking, he served Corporation Bank for nearly thirty years. In 2007, while serving as a Senior Manager, he chose voluntary retirement at the age of 49.

Around 2017, when the use of smartphones revolutionized India, he resolved to use modern technology to adapt the ideologies of our Sanatana Dharma and the Ankitabaddha (signature-signed) Haridasa devotional songs into digital media. His vision was to make these easily accessible to Sanatana Community in any corner of the world. This resolve gave birth to three significant blogs.

His website, raocollectionssongs.blogspot.com DEVARANAMA has today become a massive digital repository of Haridasa literature. It houses approximately 13,000 signed devotional songs and over 500 Suladis, including more than 4,000 audio tracks. The fact that over 3,000 music enthusiasts daily—and more than 5,000 on weekends—utilize this site is a testament to his continuous 'Jnana Dasoha' (service of knowledge).

Additionally, through  ‘madhwayati.blogspot.com’ , he has preserved the biographies and Aradhana (death anniversary) details of over 700 Madhva saints and more than 200 Haridasas. Furthermore, via the raocollections.blogspot.com SANATANA CUSTOMS blog, he provides in-depth information about Sanatana Dharma festivals, rituals, and traditional practices to the common man.

Shri Suresh continues this service with the steadfast support of his wife, Smt. Gayathri. They have two daughters and four grandchildren. His daughters take a special interest in programs in the United States, teaching devotional songs and Bhagavad Gita verses to friends there and participating in devotional activities.

He has ensured that this nectar of Haridasa literature remains perpetually available and invigorating at the fingertips of every devotee of the future generations.
***



ಶ್ರವಣಂ ಕೀರ್ತನಂ ವಿಷ್ಣೋಃ ಸ್ಮರಣಂ ಪಾದಸೇವನಮ್ |
ಅರ್ಚನಂ ವಂದನಂ ದಾಸ್ಯಂ ಸಖ್ಯಮಾತ್ಮನಿವೇದನಮ್ ||

ಮೋಕ್ಷ ಪಡೆಯಲು ನವವಿಧ ಭಕ್ತಿ ಗಳಾದ 
ಶ್ರವಣ (Hearing)
ಕೀರ್ತನ (Chanting):
ಸ್ಮರಣ (Remembering):
ಪಾದಸೇವನ (Serving the feet):
ಅರ್ಚನ (Worshiping):
ವಂದನ (Praying/Bowing):
ದಾಸ್ಯ (Servitude):
ಸಖ್ಯ (Friendship):
ಆತ್ಮನಿವೇದನ (Self-surrender):

ಮತ್ತು ‘raocollections.blogspot.com SANATANA CUSTOMS’ ಬ್ಲಾಗ್ ಮೂಲಕ ಸನಾತನ ಧರ್ಮದ ಹಬ್ಬ-ಹರಿದಿನಗಳ ಬಗ್ಗೆ ದೀರ್ಘ ಮಾಹಿತಿ ಹಾಗೂ ಹಿಂದೂ ಧರ್ಮದ ಆಚರಣೆ ವಿಧಾನ,  ಆಚಾರ-ವಿಚಾರಗಳ ಸಂಗ್ರಹ.

sripadarajaru 1404 - 1502

vyaasarajru ೧೪೪೭ - ೧೫೩೯
purandara dasa 1484 - 1564
vadirajaru 1484 -1600


kanaka dasa 1509 - 1606

Vijaya dasaru 1682 - 1755
Prasannavenkata dasaru 1680 - 1752
Jagannatha dasaru 1728 - 1809

Helavanakatte Giriyamma  appx 1750
Harapanahalli Bheemavva 1823 - 1903
Ambabai 1902 -1943

Muddumohana Vittalaru 1830 - 1898 doddaballapur

Tandemuddumohana Vittalru Subbaraya dasa 1865 - 1940 dev.durga
Prasanna shreenivasaru 1905 - 1995
Gurugovinda Vittala dasaru 1894 - 1983



No comments:

Post a Comment