ಅಸೂರಿ ರಾಮಸ್ವಾಮಿ ಅಯ್ಯಂಗಾರ್ ankita ramadasa
ತಾತ್ವಿಕ ಕೃತಿಗಳು ಅಂಥಾ ಕರುಣನೇ ನಮ್ಮ ರಂಗ ಅನಂತ ಶರಣನೇ ಪ
ಎಂಥ ಕರುಣ ನಮ್ಮ ರಂಗ ಅಂತರಾತ್ಮ ಪಾಂಡುರಂಗ ಚಿಂತೆಗಳನು ದಹಿಪ ರಂಗ ಅಂತರಾ ಅಭ್ಯಂತರಂಗ ಅ.ಪ
ಮೂಡಲಾದ್ರಿಯ ವೆಂಕಟೇಶ ಆಡಬಂದನೇ ನಾಡಿನೊಳಗೆ ಮೂಡಿ ನಿಂದನೇ ಗಾಡಿಕಾರ ರಂಗಧಾಮ ಕೇಡುಗಳನು ಬಡಿವನಾಮ ವಾಡಿಗೆಗಳಂತಿರುವ ಭಕ್ತ ಕೋಟಿಗೇ ವರವೀವ ಪ್ರೇಮ1
ಹರನ ರೂಪವತಾಳಿ ನಿಂದ ಹರಿಮಾಧವ ಒರಳಿನೊಳು ಮೆರೆಯುತಿರುವವ ಹರಿಯುಹರನು ಬೇರೆಯಲ್ಲ | ನರರನೋಡಿ ನೋಡಿ ಸೊಲ್ಲ ಬರಿದೆಭ್ರಾಂತಿ ಲೇಸದಲ್ಲ ಅರುಹುವನೆಂಬುವ ಗೊಲ್ಲ 2
ಯುಕ್ತಿಯವರನ್ಯರಿಲ್ಲ ವಿ ರಕ್ತನಾಗಿ ಗುಣವದಿಲ್ಲ ಭಕ್ತಗೊಲಿವ ಹರಿಯುಬಲ್ಲ ಯುಕ್ತಿ ಇದಕೆ ಬೇರೆ ಇಲ್ಲ 3
ತನಯನೋರ್ವನನೆ ಪಡೆಯಲೆಳಸಿವನಜನಾಭನ ಕರುಣದಿಂದ ತನಯನುದಯಿಸಲು ಧನಿಕ ಕೈಂಕರ್ಯವನು ಗೈದು ಧನವ ಗಣನೆಗೈಯಲದು ಮನದಿ ಮರುಗಿ ಕೆಳಕ್ಕೈತಂದ| ವನಿತೆಯಿತ್ತ ಪೊಂಗಲ ಸವಿದ4
ಕಾಮಜನಕನೇ ನಮ್ಮರಂಗ | ಕೋಮಲಾಂಗನೇ ಕರುಣಾಪಾಂಗ ಭೀಮವಿಕ್ರಮನೇ ಭೂಮಿಜಾತೆಯ ರಸಭರಿತ ರಾಮದಾಸವಿನುತಲೀಲ ವಾಸುದೇವನ ಹೋಲುವರಂಗ5
***
No comments:
Post a Comment