Friday, 6 August 2021

ಇನ್ನುಪೇಕ್ಷೆಯ ಮಾಡೆ ಎನ್ನ ಕಾಯುವರಿಲ್ಲ ankita vijayaramachandra vittala

 ..

Kruti by ವಿಜಯರಾಮಚಂದ್ರ ವಿಠಲ ದಾಸರು mysore kattemane 


ಇನ್ನುಪೇಕ್ಷೆಯ ಮಾಡೆ ಎನ್ನ ಕಾಯುವರಿಲ್ಲ

ಮನ್ನಿಸಿ ಸಲಹೊ ದಯದಿ ಪ


ಪನ್ನಗಾದ್ರಿನಿಲಯ ಆಪನ್ನ ಪರಿಪಾಲ

ಶ್ರೀನಿವಾಸ ಅಖಿಳಾಮರೇಶ | ಶ್ರೀಶಾ ಅ.ಪ


ಕ್ರೂರತರ ಸಂಸಾರ ದಾವಾಗ್ನಿ ಮೇರೆಯಿಲ್ಲದೆ ಸುಟ್ಟು

ಘೋರ ದುಃಖ ಬಿಡಿಸುತಿಹುದೊ

ವಾರಿಜಾಕ್ಷ ನಿನ್ನ ನಾಮಾಮೃತವೆಂಬ ಮಳೆಗರೆದು

ಹರಸಿ ಪೊರೆಯಯ್ಯ | ಜೀಯ 1


ಸತಿಸುತರ ಹಿತಕಾಗಿ ಅತಿ ನೀಚವೃತ್ತಿಲಿ ನಡೆದು

ಪತಿತ ನಾನಾದೆನಯ್ಯ

ಪತಿತಪಾವನ ನಿನ್ನ ಕಥೆಗಳನು ನುಡಿಸಿ ಸ-

ದ್ಗತಿಯ ಪಾಲಿಸಯ್ಯ | ಪ್ರೀಯ 2


ಆರು ಮಂದಿಗಳೆಂಬ ವೈರಿಗಳೆನ್ನನು ಸೇರಿ

ಗಾರು ಮಾಡುತಲಿಹರೊ

ಮೀರಿದವರ ಬಡಿವ ಕಂಸಾರಿ ಮುರವೈರಿ

ಸೇರಿದೆ ಪರಿಹರಿಸೊ ಕಷ್ಟ | ನಿನ್ನಿಷ್ಟ 3


ವಿಷಯದಾಸೆಗಳೆಂಬ ಪಶುಪತಿ ಘುಡುಘುಡಿಸಿ

ವ್ಯಸನದಿಂ ಕೊಲ್ಲುತಿಹುದೋÀ

ಶ್ವಸನ ಅಂತರ್ಯಾಮಿ ನಿಶಾಚರ ವೈರಿ

ವಶಮಾಡಿ ಎನ್ನ ಪೊರೆಯೊ | ಕಾಯೊ 4


ಅತಿತ್ತ ಪೋಗದಲೆ ಹಿತವಾದ ಚಿಂತೆಯೊಳು

ರತನಾಗಿ ಖತಿಗೊಳ್ಳುತಿಹೆನೊ

ಚ್ಯುತದೂರ ಅಚ್ಯುತಾನಂದ ಗುಣಪೂರ್ಣ ನಿನ್ನ

ಸ್ಮøತಿಯಿತ್ತು ಪಾಲಿಸೊ | ಸಲಿಸೊ 5


ಒಂದು ಕ್ಷಣವಾದರು ಕುಂದು ಮಾಳ್ಪಾಲೋಚನೆ

ಯಿಂದ ಮನ ಹಿಂದಾಗದೊ

ಆನಂದ ಮುನಿವಂದ್ಯ ದ್ವಂದ್ವತಪ ಪಾದದಿ ಮನ

ಹೊಂದುವಂದದಿ ಮಾಡೊ | ಎನ್ನ ಕೂಡೊ 6


ಬಹುವಿಧದ ಐಹಿಕ ಸುಖ ಬಯಸಿ ಲೋಕದ

ವಿಹಿತಗಳೆಲ್ಲ ಮರೆದೆ

ಅಹಿ ತಲ್ಪ ವಿಜಯರಾಮಚಂದ್ರವಿಠಲ

ಪಾಹಿ ಸತತಯೆನ್ನ | ಮುನ್ನ 7

***


No comments:

Post a Comment